ಹಗಲಲೂ ಕತ್ತಲು ಸೂರ್ಯ ಮುಚ್ಚಿ
ಹೊಗೆಯುಗುಳೊ ಬೀಡಿ, ಸಾರಾಯಿ ಬಾಯಿ
ಓದೋ ಕಂಗಳು ಹುಡುಕುತ್ತ ಕೊಳಕು
ಮೂಲೆ ಕ್ಯಾಂಟೀನಲ್ಲಿ ಅಪ್ಪನ ಸಾಲಕ್ಕೆ |೧|
ಕೆತ್ತದ ಗಡ್ಡ ಜೇನುಗೂಡು ಬುದ್ಧಿ
ಬಳಸದೇ ಹಳಸಿ ಸೆಳೆದು ನೊಣ
ಆ ಪಾದ ಸೇರಿ ಸತಿ, ಮಾರಿ ಮನೆ
ಇದ್ದೊಬ್ಬ ಮಗನೂ ಜೀತದಾಳು|೨|
ತುಟಿ ಒಣಗಿ ಕಾಯುತಿದೆ ವಿಷ
ಅರಿತೂ ತಡೆಯದೇ ಸೆಳೆತ ಅತ್ತ
ಎಂದೋ ಬತ್ತಿವೆ ಶಾಪ, ಕಣ್ಣೀರು
ಮೊದಲ ಗುಟುಕಲೇ ಸತ್ತಿಹನು ಮುಗ್ದ|೩|
ನಿನ್ನ ಆಲಿಂಗನ ಮೊದಲ ಗುಟುಕು
ಕಹಿಯಲ್ಲಿ ಮರೆಯಲು ಬಾಳ ನೋವ
ನೆಪವೇ ಅಂಟಾಗಿ ಜೀವಜಡೆ ಸಿಕ್ಕಾಗಿ
ಜೀವ ಕಾದಿದೆ ಇಂದು ತುಳಸಿ ಗುಟುಕು|೪|
ಎಲ್ಲಿಲ್ಲ ಸೋಲು? ಅರಿ ಮರೆಯ ಗೆಲುವು
ಇಷ್ಟವಾದರೂ ಬೇಡ ಜೀವ ತೀರ್ಥ
ಪುಗಸಟ್ಟೆ ಕೊಟ್ಟರೂ ಕೊಲ್ಲು ಆ ಕೊರಮನ
ಮತ್ತೆ ಮೂಡಲಿ ಆ ಆರೋಗ್ಯ ಸೂರ್ಯ
ಕಾವ್ಯ ರಸಸ್ವಾಧ ಇಲ್ಲುಂಟು ಗೌರವಾನ್ವಿತರೆ.ಚೆಂದದ ಕಾವ್ಯ ಪ್ರತಿಮೆಯನ್ನು ಕೆತ್ತ ಬಲ್ಲಿರಿ.ಅದೇ ರೀತಿ ಅದಕ್ಕೆ ತಕ್ಕಂತ ಪದ ಶೃಂಗಾರವನ್ನು ಮಾಡಬಲ್ಲೀರಿ.ಚೆನ್ನಾಗಿದೆ ಲಯ ಹರಿದು ಬಂದ ಹಾದಿ.
ReplyDeleteಧನ್ಯವಾದಗಳು ರವಿ ಮೂರ್ನಾಡರೇ :-)
ReplyDelete