ಸಮಯ ಸವೆದರೂ
ಮಂಜಾಗದೆ ಅದು
ಮುಂಜಾವಿನ ಸವಿ ರವಿಯಂತೆ
ಮರಳಿ ಮಳೆಯಾಗಿ
ನೆನಪ ನೀರನ್ನು
ಹನಿದು ತೋಯಿಸದ ಹನಿಯಂತೆ|೧|
ಇರದ ಶಕ್ತಿ, ಹೊಸ ಸ್ಪೂರ್ತಿ
ಹುಡುಕಿ ಹೊರಗೆಲ್ಲೊ ನೀತಿ
ಸಿಗದೆ ಈ ಹತ್ತಿಯದೇ ದಾರ
ಮರ್ಯಾದೆಗೆ ನೂಲೊಂದು ವಸ್ತ್ರ |೨|
ಅರ್ಥದ ಬೆಲೆಯನು ಅರ್ಥೈಸದ ಅದು
ಹುಡುಕಿ ಹಳೆ ಬಯಲು, ಮಳೆ, ಕೆಸರು
ಮೊಳೆ ಮುರಿದ ಬುಗುರಿ, ಒಡೆದ ಗೋಲಿ
-ಗಳೆ ಒಳ್ಳೆಯದೆನ್ನುತ ಬರಸೆಳೆದು|೩|
ಜೀವ ಸಾಗರದಿ ತೊಡೆಯ ದಡ ಬಿಟ್ಟು
ಥೈಲಿಯ ಆಸೆಗೆ, ತಡೆಯದ ಹಸಿವಿಗೆ
ಕಾಲಗಾಳಿಯಲಿ ದಿಸೆ ಕಳೆದ ನಾವೆ
ನೆನಪ ಸೂಚಿಯಲಿ ದಿಕ್ಕನು ಕಾಣುತ
ಸಾಗಿದೆ ಕಾಣದ ತೀರದೆಡೆ|೪|
No comments:
Post a Comment