ಸ್ವಲ್ಪ ಹೊತ್ತಿಗೇ ಬಿಟ್ಟು ಬಿಡುವುದು
ಯಾಮಿನೀಪತಿಯ ಮರೆ, ಗ್ರಹಣ
ಎಂದು ಬಿಡುವುದೋ ಭೂಮಿಭಾರರ
ನೊಣದಂತಹ ಅದೆ ಕೊಳೆ ಭ್ರಮಣ
ಬಿಟ್ಟೆವೆಂದರೂ ಬಿಡದ ಲಾಲಸೆ
ಅವನ ಕಾಲೆಳಿ, ಅಲ್ಲಿ ಬಡಿ
ಹೊಡೆದು ಕೊಚ್ಚುವ, ತಿನ್ನೊ ಭಾವವು
ನಮಗೆ ಮುಚ್ಚಿಹೀ ಪರದೆ ಎತ್ತಣ
ಬಡವನೊಬ್ಬನು ಬೆಳೆದನೆಂದರೆ
ಎಂತ ಮೋಸ,ಹುಡುಕೆಲ್ಲ ದೋಷ
ಕಣ್ಣ ನೀರನೂ ಬತ್ತಿ ರೋಷಕೆ
ಅವನು ಕನಸಲೂ ಇಲ್ಲಿ ಬಾರ
ಚಿತ್ತಚಾಂಚಲ್ಯ ರೋಹಿಣಿಯೇ ?
ಅವಳ ಪತಿಗೀಗ ಮರೆಯ ಸ್ಥಿತಿ
ಹಲವು ಮಿಥ್ಯಗಳು ಮೋಡದಂತೆ
ಸತ್ಯವ ಕಣ್ಣಿಗೆ ತೋರದಂತೆ
ಸೊಬಗ ಚಂದಿರಗೆ ಗ್ರಹಣ
ಎಂದೀ ಭ್ರಮೆಗಳ ಹರಣ ?
No comments:
Post a Comment