ದೂರದಲ್ಲಿ ಮಿನುಗುತಾರೆ ತಿಳಿ ಬೆಳಗು
ನೋಡಿ ನಿನ್ನ ಅಸೆಯೆಲ್ಲ ಮೊಳೆತಿಹುದು
ಬದುಕ ದಾರಿ ಮತ್ತೆ ನೂರನೇ ತಿರುವಿನಲಿ
ರೆಂಬೆಯದೋ ಇದೋ ಎಂಬೋ ಭ್ರಮೆಯಲ್ಲಿ|
ಕಾಣದ ಹಾದಿ ಹಿಡಿದಿಹ ಮನುಜ
ಮರಳುವನೆ ಗೂಡಿಗೆ?
ಗೊತ್ತುಗುರಿಯಿಲ್ಲ ಹೊತ್ತು ಸಾಗಿಹನು
ಆಸೆಯ ಮೂಟೆ ಬೆನ್ನಿಗೆ|
ನೋಡಿ ಬಾನಲ್ಲಿ ಮರಳಿ ನಿರೀಕ್ಷೆ
ನಿನ್ನದೇ ತರದಲಿ
ಮಿಣುಕಿ ಮಿಣುಕಿ ದಿನ ಇಹ ತೋರೋ
ಬಾನೆಂಬ ಪಟದಲಿ|
ಮರಳದೇ ಕಳೆದರೂ ಸಾಕ್ಷಿ
ನೀನೆ ಬವಣೆಗೆ,
ಬೆಂದು ಗೆದ್ದ, ಉಸಿರಾಡುತಿದ್ದ
ಮನದಾಳದ ಗೆಳೆಯಗೆ|
ಇನ್ನೆಂದು ಬರೆವೆನು ಅರಿಯೆನು ನಾನು
ಬೇಡವೇ ಬೇಸರ
ಮರಳಿ ಚಿಗುರುವುದು ಕಡಿದ ವೃಕ್ಷವು
ಕರುಣಿಯೋ ನೇಸರ|
ಪದ ಲಾಲಿತ್ಯದ ಕವನ ಪ್ರಯೋಗ! ಪ್ರಾಸಬದ್ಧ.
ReplyDeleteಮನುಜನ ಸಾರ್ವಭೌಮತ್ವ ,ಅತ್ತು ದುರುಳ ಅಸ್ತಿತ್ವವನ್ನು ಸರಿಯಾಗಿ ಝಾಡಿಸಿದ್ದೀರ.
ಒಳ್ಳೆಯದು ಮರು ಚಿಗುರಲಿ ಎಂಬ ನಿಮ್ಮ ಅಶಯವೂ ಪ್ರಶಂಸನೀಯ...
ನನ್ನ ಬ್ಲಾಗಿಗೂ ಸ್ವಾಗತ.
ನಿಮ್ಮೀ ಮೆಚ್ಚುಗೆಯ ಮಾತಿಗೆ ಪ್ರತಿಕ್ರಿಯಿಸಿದ್ದೇನೆ ಅಂದುಕೊಂಡಿದ್ದೆ.. ಸಂಪರ್ಕದೋಷದಿಂದ ಸಾಧ್ಯವಾಗಿರಲಿಲ್ಲ ಎಂದುಕೊಳ್ಳುತ್ತೇನೆ. ಮತ್ತೊಮ್ಮೆ ಧನ್ಯವಾದಗಳು :-)
Deleteಪ್ರಕೃತಿಯ ಬಗ್ಗೆ ಕಾಳಜಿ ಹೊ೦ದಿರುವ ಕವನ ಚೆನ್ನಾಗಿದೆ ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeleteಧನ್ಯವಾದಗಳು ಪ್ರಭಾಮಣಿ ಅವರೇ. . ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಿದ್ದೇನೆ.. ಧನ್ಯವಾದಗಳು ಬದರಿ ಅವರೇ :-)
ReplyDeleteಆಸೆ ಆತಿಯಾಗಿ ಮೂಟೆ ಭಾರ!
ReplyDeleteಕುಸಿದು ಕೂತು...ಭಾರ ಹೊರಲಾರದೆ ಕಷ್ಟ...ಗುರಿ ಅಸ್ಪಷ್ಟ!
ಕಡಿಮೆಗೊಳಿಸಲು ಮನಸ್ಸು ಮಾಡದೆ,ಗುರಿಯೆಡೆ ಸಾಗುವ ಪ್ರಯತ್ನ..ಮನುಷ್ಯನ ಸಹಜಗುಣ!
ದಿನ ಮತ್ತೆ ಮತ್ತೆ ಬರುವ ಸೂರ್ಯ ಹೊಸ ಭರವಸೆ ತರಿಸುವನು...ಬೇಸರ ನೀಗುವನು ಎಂಬ ಆಶಯ...
ಹಸಿರಿಂದುಸಿರು....ಹೀಗೇ ಅನೇಕಾನೇಕ ಸತ್ವಯುತ ವಿಚಾರಗಳು ನಿಮ್ಮ ಈ ಕವನದಲ್ಲಿದೆ...ಇಷ್ಟವಾಯಿತು... :-)
ಮೆಚ್ಚುಗೆಗೆ ತುಂಬಾ ಧನ್ಯವಾದಗಳು ವಿನೋದರೇ.. ಸ್ವಲ್ಪ ಹಳೆಯ ಕವನವೇ ಇದು . ಇಲ್ಲಿಯವರೆಗೂ ಹುಡುಕಿ ಬಂದು ಪ್ರತಿಕ್ರಿಯಿಸಿದ್ದಕ್ಕೆ ಆಭಾರಿ ನಾನು ..
Delete