Friday, December 28, 2012

ನಿರೀಕ್ಷೆ-ನಿರಾಸೆಗಳ ನಡುವೆ

ಜೀವನವೆಂಬ ಆಗಸದಲ್ಲಿ ಆಶಾಕಿರಣ ವರ್ತಮಾನದ ಸೂರ್ಯನೂ , ಭವಿಷ್ಯದ ಚಂದ್ರನಿಂದಲೂ ಮೂಡದೇ ಕಗ್ಗತಲು ಮೂಡಿದಾಗ ನಿರೀಕ್ಷೆಗಳೆಂಬ ನಕ್ಷತ್ರಗಳೇ ಮಿನುಮಿನುಗಿ ಮನಸ್ಸು ಸೋಲೊಪ್ಪದಂತೆ ಹುರಿದುಂಬಿಸುತ್ತಾ ಇರುತ್ತವೆ. ಆದರೆ ಆ ನಿರೀಕ್ಷೆಗಳೂ ನುಚ್ಚುನೂರಾದಾಗ ಮತ್ತದೇ ಮಾತು ತೋಚದ , ನೋವಲ್ಲಿ ಮುಳುಗಿದ ಮೌನ. ಸೂಪರ್ ಸ್ಟಾರ್ ರಜನಿಯ ಅತಿ ನಿರೀಕ್ಷಿತ ಚಿತ್ರ ಬಾಬಾ ನೆಲಕಚ್ಚುತ್ತದೆ. ಹಿಂದಿನೆರಡು ಮ್ಯಾಚಲ್ಲಿ ಮೂರು ಮೂರು ವಿಕೆಟ್ ಕಿತ್ತ ಬೌಲರ್ ಈ ಮ್ಯಾಚಲ್ಲಿ ಪೂರ್ಣ ವಿಫಲನಾಗುತ್ತಾನೆ. ಆಫೀಸಲ್ಲಿ ಕೆಲಸ ಮಾಡಿದ್ದು ಸಾಕಾಗಿಲ್ಲ ಅಂತ ಮನೆಯಲ್ಲೂ ಆಫೀಸ್ ಕೆಲಸ ಮಾಡ್ತಿದ್ದ ಯುವಕನಿಗೆ ಸಿಗದ ಭಡ್ತಿ ಕೆಲಸವೇ ಮಾಡದ(?) ಇನ್ಯಾರಿಗೋ ಸಿಗುತ್ತೆ. ಸೋನು ನಿಗಮ್ ತರ ಹಾಡು ಕಲಿಬೇಕು ಅಂತ ಹೋದ ಹುಡುಗನಿಗೆ ನಿನ್ನ ಧ್ವನಿಯೇ ಸರಿ ಇಲ್ಲ ಹೋಗಾಚೆ ಎಂಬ ನಿರಾಕರಣೆ ಗುರುವಿಂದ ಸಿಗುತ್ತೆ. ಕವನ ಸಂಕಲನ ಮಾಡ್ಬೇಕು ಅಂತ ಆಸೆ ಇದ್ದ ಹುಡುಗಿಗೆ ವಿಮರ್ಶಕರ ವಿಮರ್ಶೆ ಇಂದ ಕವನ ಬರ್ಯೋದನ್ನೇ ಬಿಡ್ಬೇಕು ಅನ್ನೋ ಅಶ್ಟು ನಿರಾಸೆ ಮೂಡುತ್ತೆ.. ಹೀಗೆ ನಮ್ಮ ನಿಜಜೀವನದಲ್ಲಿ ನಮ್ಮ ವೃತ್ತಿ, ಪ್ರವೃತ್ತಿಗಳಲ್ಲಿನ ನಿರೀಕ್ಷೆಗಳು ಈಡೇರದೆ ಇದ್ದಾಗ ನಮಗಾಗೋ ನಿರಾಸೆ ಇದ್ಯಲ್ಲ.. ಅದನ್ನೆಲ್ಲಾ ಹಾಗೇ ಕಟ್ಟಿಡ್ತಾ ಹೋದ್ರೆ ಅದೇ ಒಂದು ದೊಡ್ಡ ಹೊರೆಯಾಗಿ ಜೀವನದಲ್ಲಿ ಒಂದು ಹೆಜ್ಜೆಯೂ ಮುಂದೆ ಹೋಗೋಕಾಗಲ್ಲ್ಲ. ನಿರೀಕ್ಷೆಗಳು ಈಡೇರದೇ ನಿರಾಸೆ ಮೂಡಿದರೆ ಅದು ಜೀವನದ ಸೋಲಲ್ಲ. ಆದರೆ ಈ ನಿರೀಕ್ಷೆ- ನಿರಾಸೆಗಳ ಮಧ್ಯೆ ನಾವೇ ಕಳೆದುಹೋಗುತ್ತಿದೀವಲ್ಲ, ಅದೇ ವಿಪರ್ಯಾಸ.

ಜೀವನದಲ್ಲಿ ಆಸೆಗಳಿರೋದು ತಪ್ಪಲ್ಲ. ಜೀವನ ಅಂದ ಮೇಲೆ ಗುರಿಯಿರಲೇ ಬೇಕು. ಆದರೆ ದೂರದ ಗುರಿಯೊಂದಕ್ಕೆ ವರ್ತಮಾನದ ಖುಷಿಯನ್ನು, ಜವಾಬ್ದಾರಿಗಳನ್ನು ಬಲಿಕೊಡಬೇಕಾ ? ಯಾವತ್ತೂ ಗೆಲುವಾಗಿರೋನಿಗೆ ಒಂದು ದಿನದ ಸೋಲು ದೊಡ್ಡದೆನಿಸಲ್ಲ.ಆದರೆ ದಾರಿಯಲ್ಲಿ ಸಿಗೋ ಸಣ್ಣಪುಟ್ಟ ಗೆಲುವುಗಳನ್ನೆಲ್ಲಾ ಕಡೆಗಣಿಸುತ್ತಾ ದೂರದ, ಕಾಣದ ಗುರಿಯೇ ಗೆಲುವು ಅಂತ ಅತ್ತ ಸಾಗೋನಿಗೆ, ಆ ಗುರಿ ತಾನಂದುಕೊಂಡಷ್ಟು ಸುಂದರವಾಗಿಲ್ಲ ಅಂತ ಅರಿವಾದೊಡನೆಯೇ ನಿರಾಸೆ ಮೂಡುತ್ತೆ. ಆಫೀಸಲ್ಲಿ ಕೆಲಸ ಇದೆ, ಸರಿ. ಅದನ್ನು ಮನೆಗೆ ಬಂದೂ ಮಾಡ್ತೀರ. ಅದು ಆಫೀಸಿನ ಬಗ್ಗೆ ನಿಮ್ಮ ಜವಾಬ್ದಾರಿಯಿರಬಹುದು. ಆದರೆ ಮನೆಯಲ್ಲಿ ನಿಮ್ಮ ಸಮಯ ಕಾಯ್ತಾ ಇರೋ ಮಕ್ಕಳು. ಪತ್ನಿ, ವೃದ್ದ ತಂದೆ /ತಾಯಿ .. ಇವರೂ ಜವಾಬ್ದಾರಿಯೇ ಅಲ್ಲವೇ? ಒಂದು ವರ್ಷ ಇವರನ್ನೆಲ್ಲಾ ಕಡೆಗಣಿಸಿ ದುಡಿದೂ ಬಡ್ತಿ ಸಿಕ್ಕಿಲ್ಲವೆಂದು ನಿರಾಸೆ ಅನುಭವಿಸೋ ಬದಲು , ಕೆಲಸದ ಜೊತೆಗೆ ಪ್ರತಿದಿನವೂ ಇವರಿಗೆ ಸಮಯ ಕೊಟ್ಟಿದ್ದರೆ ಅವರ ಪಾಲಿನ ಆಸೆಗಳಾದರೂ ನೆರವೇರ್ತಿದ್ದವಲ್ಲವೇ?

ಒಂಟಿತನದಲ್ಲಿ ನಿರಾಸೆಯ ನೋವು ಹೆಚ್ಚಾಗೇ ಕಾಡುತ್ತೆ. ನಮ್ಮ ಗುರಿ ಒಂದೇ ದೊಡ್ಡದು ಅಂತ ಯಾರಿಗೂ ಸಹಾಯ ಮಾಡದೇ, ಯಾರೊಂದಿಗೂ ಬೆರೆಯದೇ ಮುಗುಮ್ಮಾಗಿ ಇದ್ದರೆ ಒಂದಲ್ಲ ಒಂದು ದಿನ ಒಂಟಿತನ ಕಾಡೋದು ಗ್ಯಾರಂಟಿ. ಕಷ್ಟಗಳು, ನೋವು ಹಂಚಿದರೆ ಕಮ್ಮಿ ಆಗುತ್ತಂತೆ. ಹಂಚಿಕೊಳ್ಳೋಕೆ ಸ್ನೇಹಿತರು ಇಲ್ದಿದ್ರೆ ಎಂತಾ ಗೆಲುವೂ ಅಷ್ಟು ಖುಷಿ ಕೊಡೊಲ್ಲ. ನೂರು ಬಾರಿ ಕಳಿಸಿದ ಮೇಲೆ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟ ಆಗಿರುತ್ತೆ. ತೊಂಬತ್ತೊಂಬತ್ತು ಬಾರಿ ವಿಫಲ ಆದ ನೋವು ಮರೆಸಿ, ಮತ್ತೆ ಹೊಸ ಸ್ಪೂರ್ತಿ ತರೋಕೆ ಈ ಒಂದು ಗೆಲುವು ಸಾಕು. ಆದರೆ ಇದನ್ನು ಹಂಚಿಕೊಳ್ಳೋಕೆ ಗೆಳೆಯರಿಲ್ದೇ ಇದ್ರೆ, ಗೆಲುವಲ್ಲೂ ಜೊತೆಯಿಲ್ಲದ ಭಾವ ನೂರನೇ ಸೋಲಂತೆಯೇ ಕಾಡುತ್ತೆ. ಇದಕ್ಕೆ ತದ್ವಿರುದ್ದ ಅನ್ನೋ ತರ ಜೊತೆಗೆ ಒಂದಿಷ್ಟು ಜನ ಗೆಳೆಯರು ಅಂತ ಇದ್ದಾಗ ಎಂತಾ ನೋವೂ ಅವರ ಸಾಂಗತ್ಯದಲ್ಲಿ ಮರೆತು ಹೋಗುತ್ತೆ. ಭಾರತ ತಂಡ ಮುಖ್ಯ ಮ್ಯಾಚೊಂದ್ರಲ್ಲಿ ಸೋತರೂ, ಗೆಳೆಯರ ಜೊತೆಗೆ ನೋಡ್ತಿರೋವಾಗ ಆ ಸೋಲಿನ ನಿರಾಸೆ, ಅವರಿವರ ಬೈಗುಳ ಕಾಮೆಂಟುಗಳ ಮಧ್ಯೆ ಮರೆತು ಹೋಗತ್ತೆ. ಇಷ್ಟಪಟ್ಟು ಹೋದ ಚಲನಚಿತ್ರ ತೀರಾ ಕೆಟ್ಟದಾಗಿದ್ದರೂ ಗೆಳೆಯರ ಸಾಮಿಪ್ಯ ಇದ್ದಾಗ ಅದು ನಿರಾಸೆಯಾಗಿ ಬದಲಾಗದೇ ಪೂರಾ ಸಿನಿಮಾ ಮತ್ತೊಂದು ಹಾಸ್ಯದ ಸಮಯ ಆಗುತ್ತೆ. ಹಾಗಾಗಿ ಎಷ್ಟೇ ಬಿಸಿಯಾಗಿದ್ದರೂ ನಮ್ಮದೇ ಅಂತ ಒಂದು ಗೆಳೆಯರ ಬಳಗ ಅಂತ ಇಟ್ಟುಕೊಂಡು ಅದಕ್ಕೇ ಅಂತ ಸ್ವಲ್ಪ ಸಮಯ ವಿನಿಯೋಗಿಸದೇ ಇದ್ದರೇ, ಈ ನಿರಾಸೆಗಳ ಮಳೆಕಾಲಕ್ಕೆ, ಸೋಲುಗಳ ನರಳಿಸುವ ಚಳಿಗಾಲಕ್ಕೆ ಯಾವ ಔಷಧಿಯೂ ಇಲ್ಲ.

ಎಷ್ಟೋ ಸಲ ನಾವು ನಮ್ಮ ಅತಿಯಾದ ಆತ್ಮವಿಶ್ವಾಸದಿಂದ ಸಾಧ್ಯವಾಗದ ನಿರೀಕ್ಷೆಗಳನ್ನು ಇಟ್ಟುಕೊಂಡು ಕೊನೆಯಲ್ಲಿ ನಿರಾಸೆ ಅನುಭವಿಸುತ್ತೇವೆ. ಒಂದು ಲೇಖನ ಬರೆದು ಅದಕ್ಕೆ ಯಾರಾದರೂ ಒಬ್ಬರು ಶಹಭಾಷ್ ಎಂದಾಕ್ಷಣ ಯುವಕನೊಬ್ಬ ತನ್ನ ಮುಂದಿನ ಲೇಖನಗಳೆಲ್ಲಾ ಪತ್ರಿಕೆಯಲ್ಲಿ ಪ್ರಕಟ ಆಗೋಕೆ ಯೋಗ್ಯ ಅಂದುಕೊಳ್ಳೋಕೆ ಶುರು ಮಾಡ್ತಾನೆ. ಆ ನಿಟ್ಟಿನಲ್ಲಿ ಅವನು ದಿನೇ ದಿನೇ ಬೆಳೆದರೆ ಅದು ತಪ್ಪಲ್ಲ. ಆದರೆ ಅಂತಾ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಆಗ್ಲಿಲ್ಲ ಅಂತ ಬರೆಯೋದನ್ನೇ ನಿಲ್ಲಿಸ್ತೀನಿ ಅಂದುಕೊಂಡರೆ ಅದು ಖಂಡಿತಾ ತಪ್ಪು. ಇದೇ ತರ ಗುರು ಒಬ್ಬ ಸಂಗೀತ ಕಲಿಸೋಕೆ ನಿರಾಕರಿಸಿದ ಅಂತ ಬೇರೆ ಗುರುವಿನ ಬಳಿ ಕೇಳೋ ಬದಲು ನಾನು ಸಂಗೀತ ಹಾಡೋದೇ ಇಲ್ಲ ಅಂತ ಜೀವಮಾನದ ನಿರ್ಧಾರ ತಗೊಳ್ಳೋದು ಖಂಡಿತಾ ತಪ್ಪು. ಯಾವುದೇ ನಿರೀಕ್ಷೆಗಳು ತಪ್ಪಲ್ಲ, ಆದರೆ ಅದರ ಬಗ್ಗೆ ಪ್ರಯತ್ನ ಮಾಡದೇ ನಿರಾಸೆಗಳೇ ನನ್ನ ಜೀವನದ ಸರ್ವಸ್ವ ಅಂತ ನಿರ್ಧರಿಸೋದು ತಪ್ಪು.

ಆಗೋದೆಲ್ಲಾ ಒಳ್ಳೇದಕ್ಕೆ. ಕಲಿಯೋ ಮನಸ್ಥಿತಿ ಇದ್ದರೆ ಪ್ರತೀ ಸೋಲಲ್ಲೂ ಒಂದೊಂದು ಪಾಠ ಇರುತ್ತೆ. ನಿರೀಕ್ಷೆ-ನಿರಾಸೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿರಾಸೆ ಯಾಕಾಯ್ತು ಅಂತ ಅದರಿಂದ ಪಾಠ ಕಲಿಯೋವರೆಗೂ ಅದರ ಇನ್ನೊಂದು ಮುಖವಾದ ಗೆಲುವನ್ನು ಕಾಣೋಕೆ ಸಾಧ್ಯನೇ ಇಲ್ಲ. ೧೦೦೦ ಸಲ ವಿಫಲನಾದ ನಿರಾಸೆಯಿದ್ದರೂ ಗುರಿ ಮರೆಯದೇ ಪ್ರಯತ್ನಿಸಿದ್ದರಿಂದಲೇ ಥಾಮಸ್ ಅಲ್ವಾ ಎಡಿಸನ್ ರಿಂದ ಬಲ್ಬ್ ಕಂಡುಹಿಡಿಯೋಕೆ ಆಗಿದ್ದು. ಮುಗಿಲೆತ್ತರದ ನಿರೀಕ್ಷೆಗಳಿರಲಿ. ಅದಕ್ಕೆ ತಕ್ಕ ಪ್ರಯತ್ನಗಳೂ ಇರಲಿ. ಆದರೆ ವರ್ತಮಾನದ ಮನೆಮಂದಿಯನ್ನು, ಕೈಹಿಡಿಯೋ ಗೆಳೆಯರನ್ನು ಮರೆಯದೇ ನಡೆದರೆ ಪ್ರತಿದಿನವೂ ನೋವು, ನಿರಾಸೆಗಳಿಲ್ಲದ ಗೆಲುವೇ. ಯಶವೆಂಬುದು ದಡದಲ್ಲಲ್ಲ, ದಾರಿಯಲ್ಲಿ ಎಂಬ ಮಾತೇ ಇದೆಯಲ್ಲವೇ ?

Monday, December 3, 2012

ಕುಮಾರಪರ್ವತ ಚಾರಣ -೧


ಮಸ್ತ್ ಮಲ್ಲಳ್ಳಿ ಜಲಪಾತ, ನೆನಪಿಡಬೇಕಾದಂತ ನಡೆತ, ಮಂಜು ಮುಚ್ಚಿದ ಬೆಟ್ಟದ ಸಂಜೆಯ ಆರೋಹಣ, ಮೈಕೊರೆಯೋ ಚಳಿಯಲ್ಲಿ ಸ್ವೆಟರಿಲ್ಲದ ರಾತ್ರಿ, ಬೆಂಕಿ- ಟೆಂಟು- ಸ್ಲೀಪಿಂಗ್ ಬ್ಯಾಗುಗಳ ಬೆಚ್ಚನೆಯ ಅಪ್ಪುಗೆ, ದಿನಾ ನೋಡುತ್ತಿದ್ದರೂ ವಿಶೇಷ ಅನಿಸಿದ ಸೂರ್ಯ,  ಮುಂಜಾನೆಯೇ ಮುಖ ಸುಡೋ ಬಿಸಿಲಲ್ಲಿ ಮತ್ತೆ ಸಂಜೆಯವರೆಗೆ ಅವರೋಹಣ, ಮಧ್ಯ ಮಧ್ಯೆ ಸಾರ್ಥಕತೆ ನೀಡಿದ ಪರಿಸರ ಪ್ರೇಮ.. ಕುಮಾರಪರ್ವತ.. ನಿನ್ನ ಸಖತ್ ಮಸ್ತ್ ನೆನಪುಗಳಿಗೊಂದು ಸಲಾಂ..

ಕುಮಾರಪರ್ವತಕ್ಕೆ ದಕ್ಷಿಣ ಕನ್ನಡದ ಕುಕ್ಕೆ ಕಡೆಯಿಂದ ಅಥವಾ ಕೊಡಗಿನ ಸೋಮವಾರಪೇಟೆಯ ಕಡೆಯಿಂದ ಹತ್ತಬಹುದು .ನಾವು ಈ ಸಲ ಹತ್ತಿದ್ದು ಸೋಮವಾರಪೇಟೆಯ ಕಡೆಯಿಂದ.

ಬೆಂಗಳೂರಿಂದ ಸೋಮವಾರಪೇಟೆಗೆ ೬ ಘಂಟೆ ಪಯಣ. ರಾತ್ರೆ ೧೧ ಘಂಟೆಗೆ ಬೆಂಗಳೂರಿಂದ ಕೆ.ಎಸ್ಸಾರ್‍ಟಿಸಿ ಬಸ್ ಹತ್ತಿದ ನಾವು ಸೋಮವಾರಪೇಟೆ ತಲುಪಿದ್ದು ಮಾರನೇ ದಿನ ಬೆಳಗ್ಗೆ ೪:೩೦ ಹೊತ್ತಿಗೆ.ಚುಮು ಚುಮು ಚಳಿ. ಬೆಚ್ಚಗಿರೋ ಬೆಂಗಳೂರಿಗರ ಪಾಲಿಗೆ ಅದು ಭಯಂಕರ ಚಳಿಯೇ. ನನ್ನ ಗೆಳೆಯರು ಸ್ವೆಟರು, ಜರ್ಕೀನು, ಟೋಪಿ ಅಂತ ಫುಲ್ ಪ್ಯಾಕ್ ಆಗಿದ್ರು. ಸ್ವೆಟರ್ ತರದೇ ಚಳಿ ನಾಡು ಕೊಡಗಿಗೆ ಬಂದ ನಾನು ಒಂತರಾ ವಿಚಿತ್ರ ಪ್ರಾಣಿ ಅವರ ಪಾಲಿಗೆ !. ಆದರೆ ನಮ್ಮೂರು ಸಾಗರದ ಚಳಿಗಾಲದ ಚಳಿಗೆ ಹೊಂದಿಕೊಂಡಿದ್ದ ನನಗೆ ಅದು ಅಂತಾ ಭಯಂಕರ ಚಳಿ ಅನಿಸಿರಲಿಲ್ಲ.
೨ ವಾರದ ಹಿಂದೆ ನಾನು ಕೊಡಗಿಗೆ ಬಂದಾಗಲೂ ಹೆಚ್ಚಿನ ಚಳಿ ಇರಲಿಲ್ಲ. ೨ ದಿನದ ಟ್ರೆಕಿಂಗ್ ಆದ ಕಾರಣ ಹೊರೋ ಸ್ಲೀಪಿಂಗ್ ಬ್ಯಾಗು,ಬಟ್ಟೆ, ಟೆಂಟು, ಆಹಾರದ ಜೊತೆಗೆ ಜರ್ಕೀನು ಸುಮ್ಮನೇ ಭಾರ ಅಂತ ನನ್ನ ಲೆಕ್ಕಾಚಾರ !!



ಬೆಳಿಗ್ಗೆ ಆಗ್ತಿದ್ದ ಹಾಗೆ ನೈಸರ್ಗಿಕ ಕರೆಗಳ ನೆನಪಾಗೋದು ಸಹಜ! ಹಾಗಾಗಿ ಅಲ್ಲೇ ಬಸ್ಟಾಂಡಲ್ಲಿದ್ದ ಸುಲಭ್ ಹುಡುಕಾಯ್ತು :-) ಹಾಗೇ ಎಲ್ಲ ರೆಡಿ ಆಗಿ ಅಲ್ಲೇ ಇದ್ದ ಕ್ಯಾಂಟೀನೊಂದ್ರಲ್ಲಿ ತಿಂಡಿ ಮುಗಿಸೋ ಹೊತ್ತಿಗೆ ಬೆಳಿಗ್ಗೆ ೬:೪೫. ಸೋಮವಾರಪೇಟೆಯಿಂದ ಬೀದಳ್ಳಿ ಎಂಬಲ್ಲಿಗೆ ಹೋಗಬೇಕು. ಅಲ್ಲಿಂದ ಟ್ರೆಕ್ಕಿಂಗ್ ಪ್ರಾರಂಭ. ಅಲ್ಲಿಗೆ ಹೋಗೋ ಮೊದಲ ಬಸ್ ಇದ್ದಿದ್ದು ಬೆಳಿಗ್ಗೆ ೭:೧೫ ಕ್ಕೆ. ಅದನ್ನ ಬಿಟ್ರೆ ಮುಂದಿನ ಬಸ್ಸ್ ಇರೋದು ಸಂಜೆಯೇ ಅಂತೆ !. ನಾವು ಬ್ಯಾಗು, ಸ್ಲೀಪಿಂಗ್ ಬ್ಯಾಗನ್ನೇನೋ ತಗಂಡಿದ್ವಿ. ಆದ್ರೆ ಅವೆರಡನ್ನೂ ಸೇರಿಸಿ ಒಂದೇ ಕಡೆ ಬಿಗಿದು ಹೊರಲು ಸುಲಭ ಆಗೋ ತರ ಕಟ್ಟಕ್ಕೆ ಸೊಣಬಿ ದಾರ(ಸೆಣಬಿನ ದಾರ/ಗೋಣಿ ದಾರ) ತಗೊಂಡಿರಲಿಲ್ಲ. ಅದನ್ನೂ ಸೋಮವಾರಪೇಟೆಯಲ್ಲೇ ತಗಂಡು ಬಸ್ಸಿಗೆ ಹತ್ತಿದ್ವಿ.

ಸೋಮವಾರಪೇಟೆಯಿಂದ ಬೀದಳ್ಳಿಗೆ ೨೫-ಕಿಮೀ. ಬಸ್ಚಾರ್ಜು ೨೫ ರೂ. ಮುದ್ದಾದ ಪ್ರಕೃತಿಯ ನಡುವೆ ಹಾವಂತೆ ಸಾಗೋ ದಾರಿಯಲ್ಲಿ, ವಾಹನಗಳಿಲ್ಲದ ರಸ್ತೆಯಲ್ಲಿ, ಮುಂಜಾನೆ ಮಂಜಲ್ಲಿ , ಮನಮೋಹಕ ದೃಶ್ಯಗಳನ್ನ ಕಟ್ಟಿಕೊಡ್ತಾ ಸಾಗ್ತಾ ಇದ್ದ ಬಸ್ಸಿನ ೧ ಘಂಟೆಯ ಪಯಣ ಒಂದು ಮನೋಹರ ಅನುಭವ.ಬೀದಳ್ಳಿಗಿಂತ ೩ ಕಿಮೀ ಮೊದಲು(ಅಂದರೆ ಬೀದಳ್ಳಿಯ ಹಿಂದಿನ ಸ್ಟಾಪ್) ಸಿಗೋದು ಮಲ್ಲಳ್ಳಿ ಜಲಪಾತ. ರಸ್ತೆಯಿಂದ ೩-ಕಿ.ಮೀ ಇಳಿದು ನಡೆದರೆ ಮಲ್ಲಳ್ಳಿ ಜಲಪಾತ ಸಿಗುತ್ತದೆ.

ಹೀಗೆ ಬಸ್ಟಾಪಿಂದ ಇಳಿದು ಸ್ವಲ್ಪ ಮುಂದೆ ನಡೆದರೆ ಅಲ್ಲೊಂದು  ಚೆಕ್ ಪೋಸ್ಟ್. ಪ್ರವೇಶ ಶುಲ್ಕ ತಲಾ ೫ ರೂ. ವಾಹನಗಳಿಗೆ ೧೦೦ ರೂ.  ಅಲ್ಲೇ ಮನೆಯಲ್ಲಿ ಮಾಡಿದ ಮಧು ಮತ್ತು ಮಧ್ಯ( homemade honey and wine) ಸಿಗತ್ತೆ ಅಂತ ಬೋರ್ಡೂ ಇತ್ತು! ದೇವ್ರೆ, ಜನ ಇಲ್ಲಿಗೆ ಬರೋದು ಪ್ರಕೃತಿಯನ್ನ ಸವಿಯಕ್ಕಾ ಅತ್ವಾ ಇನ್ನೊಂದಿಷ್ಟು ಹಾಳು ಮಾಡಕ್ಕಾ ಅಂತ ಡೌಟ್ ಬಂತು :-( ( ಇಲ್ಲಿ ನಕ್ಸಲೈಟ್ಸ್ ಇದಾರೆ, ಅವ್ರಿಗೆ ಪ್ರವಾಸಿಗ್ರು ಈ ತರ ಪ್ರಕೃತೀನ ಹಾಳು ಮಾಡೋದು ಸುತರಾಂ ಇಷ್ಟ ಇಲ್ಲ ಅಂತ ಆಮೇಲೆ ಒಬ್ರು ಹೇಳಿದ ಮಾತು ಇಲ್ಲೂ ಪ್ರಸ್ತುತ ಅನ್ಸುತ್ತೆ. ಸೋಮವಾರ ಪೇಟೆ ಬಸ್ಟಾಂಡಲ್ಲೇ OSRO,People Front Of India ದ ಗೋಡೆ ಪತ್ರಗಳನ್ನೂ ನೋಡಿದ್ವಿ !.. ಇದ್ರ ಬಗ್ಗೇನೆ ಊಹಾಪೋಹದ, ವಾದವಿವಾದದ ಲೋಕದಲ್ಲಿ ಮುಳುಗೋ ಮೊದ್ಲು ಮತ್ತೆ ವಾಸ್ತವಕ್ಕೆ, ಚಾರಣದ ಸುಮಧುರ ನೆನಪಿನಂಗಳಕ್ಕೆ.. ) 

ಮಲ್ಲಳ್ಳಿ ಜಲಪಾತದ ಸ್ವಲ್ಪ ಹತ್ತಿರದವರೆಗೂ ವಾಹನಗಳು ಹೋಗುತ್ತದೆ. ಆದರೆ ನಮ್ಮದು ನಟರಾಜ  ಸರ್ವೀಸ್ :-). ಲೀಚಸ್(ಉಂಬುಳ/ಇಂಬಳ) ಇರುತ್ತೆ ಕಣ್ರೋ ಹಾಗಾಗಿ ಟೈಟ್ ಜೀನ್ಸ ಪ್ಯಾಂಟ್ ಹಾಕ್ಕೊಂಡು ಬನ್ನಿ ಅಂದಿದ್ದ ಪ್ರೆಂಡೊಬ್ಬ. ಹಾಗಾಗಿ ಉಂಬುಳ ಅಂದ್ರೇನು ಅಂತ ನೋಡದೇ ಹೋದ್ರೂ ಕಾಲಿಗೆ ಏನೋ ಕಚ್ಚಿದಂಗೆ ಆಗ್ತಿದೆ ತಡೀರೋ ಅಂತ ಮಧ್ಯೆ ಮಧ್ಯೆ ನಿಂತು ನೋಡ್ತಿದ್ರು ಕೆಲೋ ಗೆಳೆಯರು. ಕೊನೆಗೆ ಉಂಬುಳ ನೀರಿದ್ದಲ್ಲಿ ಇಲ್ಲಾ ಒದ್ದೆ ಮಣ್ಣಲ್ಲಿ, ಮಳೆಗಾಲದಲ್ಲಿ ಮಾತ್ರ ಇರುತ್ತೆ. ಇಂತಾ ಒಣ ದಾರೀಲಿ, ಚಳಿಗಾಲದಲ್ಲಿ ಇರೋಲ್ಲ ಅಂತ ಸಮಾಧಾನ ಮಾಡ್ಬೇಕಾಯ್ತು. ಬರೀ ಟಾರು ರಸ್ತೆಯನ್ನೇ ನೋಡಿದ್ದ ಕೆಲವರಿಗೆ ಊರಿನ ಮಣ್ಣು ರಸ್ತೆ ಇಳೀಬೇಕಾದ್ರೆ ಎಲ್ಲಿ ಜಾರುತ್ತೋ ಅನ್ನೋ ಭಯ. ಹೊಸದಾಗಿ ಸೀರೆ ಉಟ್ಟವ್ರು ಎಲ್ಲಿ ಕಾಲಿಗೆ ಸಿಗುತ್ತೋ ಅಂತ ನಡ್ಯೋ ಹಾಗೆ ಮೆಲ್ಲಗೆ ಹೆಜ್ಜೆ ಹಾಕ್ತಿದ್ರು. ಅವ್ರಿಗೂ ಏನೂ ಆಗಲ್ಲ ಅಂತ ಧೈರ್ಯ ತುಂಬ್ತಾ ಇಳಿತಾ ಬಂದ್ವಿ ಆ ದಾರೀಲಿ. ವಾಹನಗಳು ಹೋಗೋ ಜಾಗದಿಂದ ಸ್ವಲ್ಪ ಮುಂದೆ ಬಂದರೆ ಜಲಪಾತಕ್ಕೆ ಇಳಿಯೋ ಮೆಟ್ಟಿಲುಗಳು ಸಿಗುತ್ತೆ. ಜಲಪಾತಕ್ಕೆ ಇಳಿಯೋ ಅರ್ಧ ದಾರಿಯ ತನಕ ಈಗ ಮೆಟ್ಟಿಲುಗಳು ಆಗಿವೆ. ಹಾಗಾಗಿ ಸ್ವಲ್ಪ ಮಳೆ ಇದ್ರೂ ಇಲ್ಲಿ ಬರಲು ತೊಂದ್ರೆ ಇಲ್ಲ. ಮೆಟ್ಟಿಲು ಮುಗ್ದಾದ ಮೇಲೆ ಮರಗಳ ಮಧ್ಯದ, ಹುಲ್ಲುಗಾವಲ ಮಧ್ಯದ ಕಾಡದಾರಿ.ದೂರದಲ್ಲಿ ಕಾಣೋ ಜಲಪಾತದ ದೃಶ್ಯ ಬೇಗ ಇಳಿಯುವಂತೆ ಪ್ರೇರೇಪಿಸಿದ್ರೆ ಕಾಲು ಜಾರಿದ್ರೆ ಗೋವಿಂದ ಅನ್ನೋ ಭಾವ ನಿಧಾನಿಸತ್ತೆ.
Mallalli Falls

ಇಲ್ಲಿರೋ ಜಲಪಾತದಲ್ಲಿ ಮೊಸಳೆಗಳಿವೆ, ಇಳಿದು ಈಜಕ್ಕೆ ಹೋಗಿ ಹಿಂದಿನ ತಿಂಗಳಷ್ಟೇ ಹುಣಸೂರಿನ ಪೋಲೀಸ್ ಒಬ್ರು, ಹಿಂದಿನ ವರ್ಷ ಸಾಗರ ಕಡೆಯ ಅಶ್ವಥ್ ಹೆಗಡೆ ಅನ್ನುವವರೊಬ್ರು  ಟೆಕ್ಕಿ ಸತ್ತಿದ್ದಾರೆ ಅಂತ ಚೆಕ್ ಪೋಸ್ಟಲ್ಲಿ ಎಚ್ಚರಿಸಿದ್ರು. ಸುಮ್ನೆ ನೋಡ್ಕಂಡು ಬರ್ತೀವಿ ಅಂತ ಹುಷಾರಾಗೇ ಕೆಳಗಿಳಿದ್ವಿ. ಜಲಪಾತದ ನೀರ ಹನಿಗಳು ಅದರಿಂದ ಸುಮಾರು ೧೦೦ ಅಡಿ ದೂರದವರೆಗೂ ಸಿಡಿತಾ ಇತ್ತು. ಹಾಗಾಗಿ ಹತ್ತತ್ರ ಹೋಗ್ತಿದ್ದ ಹಾಗೇ ಅಲ್ಲಿ ಮಂಜಲ್ಲಿ ನಿಂತಂತ ಅನುಭವ.  ಜಲಪಾತದಲ್ಲಿ ಒಳ್ಳೇ ನೀರಿತ್ತು. ಹಂತ ಹಂತವಾಗಿ ಧುಮುಕೋ ಜಲಪಾತದಲ್ಲಿ ಕೆಲೋ ಕಡೆ ನೀರು ಬಿದ್ದ ರಭಸಕ್ಕೆ  ಆಳದ ಗುಂಡಿಗಳಾಗಿರೋದು ಸುಳ್ಳೇನಲ್ಲ. ಮೊದ್ಲೇ ಎಚ್ಚರಿಕೆ ಸಿಕ್ಕಿದ್ರಿಂದ ನಾವು ಜಲಪಾತದ ಕೆಳಗೇ ಹೋಗಿ ತಲೆ ಕೊಡ್ತೀವಿ , ಎಷ್ಟು ಆಳ ಇದ್ರೂ ಈಜೇ ಬಿಡ್ತೀವಿ ಅಂತ ಸಾಹಸ ಮಾಡಕ್ಕೆ ಹೋಗ್ಲಿಲ್ಲ. ಅಲ್ಲೇ ಶುರುವಿನಲ್ಲಿ ನೀರು ಕಡಿಮೆ ಇದ್ದ, ನೆಲ ಕಾಣ್ತಾ ಇದ್ದ ಕಡೆ ಇಳಿದು ಸ್ವಲ್ಪ ಹೊತ್ತು ಆಡಿ, ಸ್ನಾನ ಮಾಡಿದ್ವಿ. ಅಲ್ಲೊಂದಿಷ್ಟು ಫೋಟೋ ಸೆಷನ್ನು ಜೊತೆಗೆ ಎರಡ್ನೇ ಇನ್ನಿಂಗ್ಸು ತಿಂಡಿ. 


ನಾವು ಹೋದಲ್ಲಿ ಯಾವದೇ ಪ್ಲಾಸ್ಟಿಕ್ ಕವರ್ ಬಿಸಾಕ್ಬಾದ್ರು ಅಂತ ಮುಂಚೇನೆ ಮಾತಾಡಿದ್ವಿ. ಅದನ್ನೇ ಅಲ್ಲಿ ಮತ್ತೊಂದ್ಸಲ ನೆನಪಿಸಿ ಅಲ್ಲಿ ಯಾವುದೇ ಕವರ್ ಎಸಿಯದೇ ಮತ್ತೊಂದು ಬ್ಯಾಗಲ್ಲೇ ತುಂಬ್ಕೊಂಡು ಮೇಲೆ ಹತ್ತೋಕೆ ಶುರು ಮಾಡಿದ್ವಿ. ಎಂಟೂವರೆಗೆ ಮಲ್ಲಳ್ಳಿಗೆ ಮುಟ್ಟಿದ ನಾವು ಜಲಪಾತಕ್ಕೆ ಇಳ್ಯೋ ಹೊತ್ತಿಗೆ ೯:೩೦. ವಾಪಾಸ್ ಹತ್ತೋ ಹೊತ್ತಿಗೆ ಸುಮಾರು ೧೧:೩೦. 


ವೈನ್ ಬಾಟ್ಲು ಹಿಡ್ದು ಹೀರ್ತಾ ಪ್ರಕೃತಿಯನ್ನು ಆನಂದಿಸಲು ಹೊರಟಿದ್ದ(?) ಟ್ರೆಕರ್ಸ್ ಸಿಕ್ಕಿದ್ರು! ಜಲಪಾತದ ನೀರು ಸಿಡಿಯೋ ಜಾಗದಿಂದ ಸ್ವಲ್ಪ ದೂರ ಬರ್ತಿದ್ದ ಹಾಗೆಯೇ . ಹೆಂಗಿದೆ ಜಲಪಾತ ಅಂದ್ರು.
ಸಖತ್ತಾಗಿದೆ ಆದ್ರೆ ಸ್ವಲ್ಪ ಅಪಾಯ ಇದೆ. ಹೀಗೀಗೆ ಜನ ಸತ್ತಿದ್ದಾರೆ. ಸಾಹಸ ಮಾಡಕ್ಕೆ ಹೋಗ್ಬೇಡಿ ಅಂತ ಹೇಳಿ ಮುಂದೆ ಬಂದ್ವಿ. ದಾರೀಲಿ ಆ ಜಾಗನಾ ಕಾಯ್ತೀನಿ ಅಂತ ಅಲ್ಲಿ ಸತ್ತ ಜನರ ಕತೆ ಹೇಳಿದ ವೇಣು ಅನ್ನೋರೊಬ್ರು ಸಿಕ್ಕಿದ್ರು.ಅಶ್ವಥ್ ಹೆಗ್ಡೆ ಅವ್ರ ಕತೆ ಹೇಳಿದ್ದೂ ಇವ್ರೆ. ಅವ್ರು ಹೇಳಿದ ಕತೆ ಪ್ರಕಾರ ಸಂಪೆ ಷಷ್ಟಿ ದಿನ ೩೦-೪೦ ಸಿಸ್ರಿ ಬದಿಯ ಹವ್ಯಕರು ಅಲ್ಲಿಗೆ ಟ್ರೆಕ್ಕಿಂಗ್ ಬಂದಿದ್ರಂತೆ. ಪ್ರತೀ ವರ್ಷ ಅವರು ಹೀಗೇ ಅಲ್ಲಿಗೆ ಬರ್ತಾರಂತೆ. ಈ ಜಲಪಾತಕ್ಕೆ ಸುಮಾರಷ್ಟು ಜನ ದಿನಾ ಬರೋದು ಹೌದಾದ್ರೂ ಷಷ್ಟಿ ಹಬ್ಬಕ್ಕೂ ಮಲ್ಲಳ್ಳಿ ಜಲಪಾತಕ್ಕೂ ಯಾವ ಸೀಮೆ ಸಂಬಂಧ ಅಂತ ನಂಗೆಂತೂ ಅರ್ಥ ಆಗ್ಲಿಲ್ಲ. ಅವ್ರು ಯಾರೂ ಅಂತ ಆ ವೇಣಣ್ಣನೇ ಹೇಳೋವರ್ಗೂ, ಸಿರ್ಸೀಲಿರೋ ಸಾವಿರಾರು ಜನ್ರಲ್ಲಿ ಅಲ್ಲಿಗೆ ಬಂದವರ್ಯಾರಾದ್ರೂ ಇದನ್ನ ಓದೋವರ್ಗೂ ಇದೊಂದು ನಿಗೂಢ ರಹಸ್ಯವೇ ಸರಿ !!

*********
ಇವತ್ತು ಬೆಳಿಗ್ಗೆ ಅಷ್ಟೆ ಅಲ್ಲಿಂದ ಬಂದಿದ್ದು. ಆಮೇಲೆ ಆಫೀಸಿಗೂ ಹೋಗಿದ್ರಿಂದ ಈಗ ಮಾತಾಡ್ತಿರೋ ಕಾಲುಗಳ ಜೊತೆ, ಎಳೀತಿರೋ ಕಣ್ಣುಗಳು.. ಹಾಗಾಗಿ ಮುಂದೆ ಬರ್ಯೋಕೆ ಇನ್ನೊಮ್ಮೆ ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಶುಭದಿನ :-)
Way to Kumara Parvata Trecking

***********************************************


ಈ ಲೇಖನ "ಈ ಕನಸು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ :-)
http://www.ekanasu.com/2013/01/blog-post_21.html

Monday, November 12, 2012

ದೀಪಾವಳಿಯ ಹಾರ್ದಿಕ ಶುಭಾಶಯಗಳು




ಹೆಚ್ಚೊ ಹರುಷದ ದ್ಯೋತಕವು
ಹಚ್ಚೊ ಹಲದೀಪ
ಬತ್ತಿಯಲಿ ಸುಡಲಿ
ದ್ವೇಷ, ಕೋಪ
ಸುಖ,ಶಾಂತಿ ಪಸರಿಸಲಿ
ಹೂ ಕುಂಡ, ಚಕ್ರಗಳು
ಪಟಾಕಿಗಳು ಮರೆಸಿ
ನೋವು, ಮರುಕ


ಕಟ್ಟ ಬನ್ನಿರಣ್ಣ,
ಆಗಸ ಹೂವ ಬುಟ್ಟಿಯನ್ನ
ಹಬ್ಬ ಬಂದಿಹುದು, ಸದ್ದೆ ಇಲ್ಲದೆ
ಎದ್ದು ಬನ್ನಿರಣ್ಣ,
ದೀಪವ ಹಚ್ಚ ಬನ್ನಿರಣ್ಣ
ತೋರಣ ಕಟ್ಟ ಬನ್ನಿರಣ್ಣ |೧|

ಗೋಗಳು ಕಾದಿವೆ ಪೂಜೆಯ ದಿನಕೆ
ಬಲೀಂದ್ರ ಬರಲೇ ಎಂದಿಹನು
ನರಕಾಸುರನನು ರಾಮ ಕೊಂದಿಹ

ಹಬ್ಬ ಬಂದಿಹುದು ಬಾಗಿಲಿಗೆ
ಎದ್ದು ಬನ್ನಿರಣ್ಣ, ತೋರಣ ಕಟ್ಟ ಬನ್ನಿರಣ್ಣ|೨|

ಏರಿದರೆಷ್ಟು ರೇಟು ಪಟಾಕಿ
ಕೊಂಡೇ ಕೊಳ್ಳುವ ಬಿಡದೆ ಗಿರಾಕಿ
ವಿಷ್ಣು ಚಕ್ರವೋ, ಹನುಮ ಬಾಲವೋ
ಸುರುಸುರು ಬತ್ತಿಯ ಸರಮಾಲೆ,
ಹೊಸ ಬಟ್ಟೆಯ ಗರಿ ಆರುವ ಮೊದಲೇ
ಆನಂದಿಸು ಬೆಳಕಿನ ಲೀಲೆ
ಆಗಸದಲ್ಲೇ ರಂಗವಲ್ಲಿಯ
ಬಿಡಿಸೋ ರಾಕೆಟ್ ಸುಡು ಮೊದಲೇ |೩



ಹಚ್ಚೋ ಪ್ರತೀದೀಪವೂ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ, ಹರ್ಷೋಲ್ಲಾಸ, ಆಯುಷ್ಯ, ಆರೋಗ್ಯವನ್ನು ತರಲಿ.
ಈ ದೀಪಾವಳಿಯು ಎಲ್ಲರ ನೋವು, ದುಃಖಗಳನ್ನು ಮರೆಸಿ ಹೊಸ ಜೀವನೋಲ್ಲಾಸವನ್ನು ತರಲೆಂಬ ಹಾರೈಕೆ

Wednesday, November 7, 2012

ನೂರ್ನಳ್ಳೀಲಿ ಅವ-೩

ಹಿಂದಿನ ಭಾಗ: ನೂರ್ನಳ್ಳೀಲಿ ಅವ-೨
(ಇಲ್ಲಿಯವರೆಗೆ.. ನೂರ್ನಳ್ಳಿಗೆ ಸಂಜೆ ಬಸ್ಸಿಗೆ ಒಬ್ಬ ಹೊಸಬ(ಅವ) ಬಂದಿದಾನೆ. ಅವ ಬಂದ ಅಂಗಡಿಯಲ್ಲಿ ಕೂತು ಮಾತನಾಡಿದ ರಾತ್ರಿಯಿಂದ ಅಂಗಡಿ ಜಾಫರ್ ಸಾಬರು ನಾಪತ್ತೆಯಾಗಿದ್ದಾರೆ. ಸಂಜೆಯಾದರೂ ಅವ ಊರಲ್ಲೆಲ್ಲೂ ಪತ್ತೆ ಇಲ್ಲ.. ಹಾಗಾಗಿ ಬಂದ ಅವ ಯಾರು ಅನ್ನೋ ವಿಷಯದ ಸುತ್ತ ಹಲವಾರು ಗಾಳಿ ಸುದ್ದಿಗಳು ರೆಕ್ಕೆ ಪುಕ್ಕಗಳೊಂದಿಗೆ ಹಬ್ತಾ ಇದೆ.. ಹೀಗಿರುವಾಗ ಮತ್ತೆ ಸಂಜೆ ಆಗ್ತಾ ಇದೆ. )

ಮೂಡಣದಲ್ಲಿ ಮುಖ ತೋರಿದ ಸೂರ್ಯ ಪಡವಣದ ನೂರ್ನಳ್ಳಿ ಬೆಟ್ಟದ ಮರೆಗೆ ಸಾಗ್ತಾ ಇದ್ದಾನೆ. ಹಗಲಿಡೀ ದುಡಿದು ತಮ್ಮ ಎತ್ತುಗಳೊಂದಿಗೆ ವಾಪಾಸಾಗ್ತಾ ಇರೋ ರೈತರ ನೆರಳುಗಳು ಮುಳುಗುತ್ತಿರುವ ಸೂರ್ಯನೊಂದಿಗೆ ದೊಡ್ಡದಾಗುತ್ತಾ ಅವರ ಹೆಚ್ಚುತ್ತಿರೋ ಸಾಲ, ಕಷ್ಟಗಳಂತೆ ಹಿಂಬಾಲಿಸ್ತಾ ಇವೆ . ಬೆಟ್ಟದಲ್ಲಿ ಕೌಳಿಕಾಯಿ, ಪರಂಗಿ ಹಣ್ಣು,ಈಚಲು ಹಣ್ಣು ತಿನ್ನಲೋ,  ಸಗಣಿ ಆರಿಸಲೋ, ಎಮ್ಮೆ ಹುಡುಕಲೋ ಹೋಗಿದ್ದ ಹುಡುಗರು ಕೆಳಗಿಳಿತಾ ಇದ್ದಾರೆ. ಕೆಲವರು ತೋಟದಲ್ಲಿ ಕೊಯ್ದ ಹಸಿ ಹುಲ್ಲನ್ನ ಸೈಕಲ್ಲಿಗೆ ಒತ್ತಿ ಕಟ್ಟಿ, ಭಾರ ತಾಳಲಾರದೆ ಬಳುಕುತ್ತಾ ಇರೋ ಅದನ್ನೇರಿ ಮನೆ ಕಡೆ ಸಾಗ್ತಾ ಇದ್ದಾರೆ. ನೀರ್ನಳ್ಳಿ , ನೂರ್ನಳ್ಳಿ ಮಧ್ಯೆ ಹರಿಯೋ ಬಾವಿಹೊಳೆ ಪ್ರಶಾಂತವಾಗಿ ಹರಿತಾ ಇದೆ.. ಅದ್ರಲ್ಲೇ ಗಾಳ ಹಾಕಿದ ಕೆಲವರು ಸಿಕ್ಕಿದ ಮೀನುಗಳನ್ನೆಲ್ಲಾ ಚೀಲಕ್ಕೆ ತುಂಬಿ ಮನೆ ಕಡೆ ಹೊರಡಕ್ಕೆ ತಯಾರಾಗ್ತಾ ಇದಾರೆ. ಅಂತದ್ರಲ್ಲಿ ಎಲ್ಲೋ ಜೋರಾಗಿ ಪ್ರಾಣಿಯೊಂದು ಕೂಗಿದಂತೆ, ಏನೋ ಆಸ್ಪೋಟಿಸಿದಂತೆ ಮಿಶ್ರ ಸದ್ದು! ಅದು ಏನು ಅಂತ ತಿಳಿಯದ ಹುಡುಗರೂ ಎದ್ನೋ ಬಿದ್ನೋ ಅಂತ ಮನೆ ಕಡೆ ಓಡತೊಡಗಿದರು. ಅದೇನು ಅಂತ ಸ್ವಲ್ಪ ಸುಳಿವು ಸಿಕ್ಕಿದ ತೋಟದಲ್ಲಿದ್ದ  ಹಿರಿಯರು, ಎತ್ತುಗಳೊಂದಿಗೆ ವಾಪಾಸಾಗ್ತಿದ್ದ ರೈತರೂ ಮನೆಯತ್ತ ಓಡತೊಡಗಿದರು. ಸೈಕಲ್ ಸವಾರರು ಸಾಧ್ಯವಾದಷ್ಟೂ ಜೋರಾಗಿ ಪೆಡಲ್ ತುಳಿದರು. ಆಮೇಲೆ ಸ್ವಲ್ಪ ಸಮಯದಲ್ಲಿ ಬಂದೂಕಿನಿಂದ ಮೂರ್ನಾಲ್ಕು ಬಾರಿ ಗುಂಡು ಸಿಡಿಸಿದ ಶಬ್ದ. ಆಮೇಲೆ ನಿಶ್ಯಬ್ದ..

***

ನೂರ್ನಳ್ಳಿ ಗುಡ್ಡದಲ್ಲಿ ಕಬ್ಬಿಣದ ಅಂಶ ಜಾಸ್ತಿ ಇದ್ಯಂತೆ. ಹಾಗಾಗಿ ಆ ಗುಡ್ಡ ಕಡಿದು ಗಣಿಗಾರಿಕೆ ಮಾಡ್ತಾರಂತೆ,ಅನ್ನೋ ಸುದ್ದಿ ಸುಮಾರಷ್ಟು ದಿನದಿಂದ ಊರಲ್ಲೆಲ್ಲಾ ಹರಡ್ತಾ ಇತ್ತು. ಅದಕ್ಕೆ ಸರಿಯಾಗಿ ನೀರ್ನಳ್ಳಿ ಕಡೆ ಇಂದ ಬಂದ ಬೆಳಿಗ್ಗೆ ಬಂದ ಎರಡು ಜೆ.ಸಿಬಿಗಳು ನೂರ್ನಳ್ಳಿ ದಾಟಿ ಆ ಗುಡ್ಡದ ಮತ್ತೊಂದು ತಪ್ಪಲಲ್ಲಿ ಟಿಕಾಣಿ ಹೂಡಿದ್ವು. ರೈತರು ಬೆಳೆದ ಭತ್ತ ಒಕ್ಕಲು ಮಾಡೋ ದಿನವೇ ಹೊಂಚಿ ಮಳೆ ಸುರಿಸೋ ವರುಣನಂತೆ, ಊರವರೆಲ್ಲಾ ಜಾತ್ರೆಗೆ ಹೋಗಲಿ ಅಂತ ದರೋಡೆ ಮಾಡೋಕೆ ಹೊಂಚು ಹಾಕ್ತಾ ಇರೋ ಕಳ್ಳರಂತೆ ಆ ಜೇ.ಸಿ.ಬಿ ಗಳು ಹೊಂಚು ಹಾಕಿ ನೂರ್ನಳ್ಳಿ ಗುಡ್ಡದ ಒಡಲು ಬಗೆಯಲು ಹೊಂಚು ಹಾಕ್ತಾ ಕೂತಿದ್ವು.  ಗುಡ್ಡ ಅಗೆಯೋರು ಅದೆಂತದೋ ಡೈನಮೇಟ್ ಅಂತ ಬಾಂಬ್ ಹಾಕಿ ಗುಡ್ಡ ಗುಡ್ಡನೇ ಉರುಳಿಸ್ತಾರಂತೆ, ಆಮೇಲೆ ಜೇಸೀಬಿ ಹಾಕಿ ಮಣ್ಣನ್ನೆಲ್ಲಾ ಬಗೆದು ತೆಗಿತಾರಂತೆ. ಕೆಲವೇ ತಿಂಗಳಲ್ಲಿ ಅಲ್ಲೊಂದು ಗುಡ್ಡ ಇತ್ತು ಅಂತನೂ ಗೊತ್ತಾಗದ ರೀತಿ ಮಾಡಿ ಹಾಕ್ತಾರಂತೆ ಅನ್ನೋ ಸುದ್ದಿಗಳು ಊರಲ್ಲೆಲ್ಲಾ ಹರಡೋಕೆ ಶುರು ಆಗಿದ್ದವು. ಹಾಗಾಗಿ ಇವತ್ತು ಸಂಜೆ ಕೇಳಿದ ಮೊದಲ ಶಬ್ದ ಡೈನಮೇಟ್ ಸಿಡಿತದ್ದಾ ಅಂತ ಕೆಲವರಿಗೆ ಅನಿಸ್ತು. ಡೈನಮೇಟ್ ಏನಾದ್ರೂ ಸಿಡಿದರೆ ಬಂಡೆಗಳೆಲ್ಲಾ ಉರುಳಿ ಗುಡ್ಡದ ಕೆಳಗಿದ್ದವರ ಮೇಲೆ ಬೀಳತ್ತೆ. ಹಾಗಾಗಿ ಯಾವ ಬಂಡೆ ತಲೆ ಮೇಲೆ ಬೀಳತ್ತಪ್ಪ್ಪ ಅನ್ನೋ ಭಯದಲ್ಲಿ ಕೆಲವರು ಓಡಿದ್ದರು. ಡೈನಮೇಟ್ ಅನ್ನೋ ಹೆಸರನ್ನೇ ಕೇಳದ ಸ್ವಲ್ಪ ಹಿರಿತಲೆಗಳಿಗೆ  ಆ ಎರಡನೇ ಶಬ್ದ.. ಅದು ಅವರ ಜೀವನದಲ್ಲಿ ಮರೆಯಲಾಗದ ಶಬ್ದ!!. ಹಾಗಾಗಿ ಅವರೂ ಭಯಬಿದ್ದು ಮನೆ ಸೇರಿದ್ದರು. .

ಅವತ್ತು ಸಂಜೆ ಏಳೂವರೆ ಆದ್ರೂ ಊರ ಗಣೇಶನ ಗುಡಿ ಕಡೆ ಜನ ಸುಳೀತಿರ್ಲಿಲ್ಲ . ಅದ್ರ ಎದುರಿಗಿನ ಅರಳಿಮರದ ಕಟ್ಟೆಯೂ ದೈನಂದಿನ ಹರಟೆ ಕೇಳದೆ ಬೋರೋ ಬೋರು ಎನ್ನುತ್ತಿತ್ತು.ಎಲ್ಲಾ ಸಂಜೆಯ ಘಟನೆಯ ಪರಿಣಾಮ. ಎಲ್ಲೋ ಅಲ್ಲೋ ಇಲ್ಲೋ ನಾಯಿ ಬೊಗಳುತ್ತಿದ್ದ ಶಬ್ದ, ಸಂಜೆ ಬಸ್ಸಿಗೆ ಬಂದವರು ಮನೆಗೆ ತೆರಳುತ್ತಿದ್ದ ದೃಶ್ಯ ಬಿಟ್ಟರೆ, ಬೀದಿಯೆಲ್ಲಾ ಬಿಕೋ ಎನ್ನುತ್ತಿತ್ತು. ಸದಾ ಲವಲವಿಕೆಯಿಂದಿರುತ್ತಿದ್ದ ನೂರ್ನಳ್ಳಿಲಿ ಈಗ ಪ್ರೇತ ಕಳೆ. ಏಳೂ ಮುಕ್ಕಾಲಾದರೂ ಯಾರೂ ಜನ ಬರದೇ ಇದ್ದಿದ್ದನ್ನ ನೋಡಿದ ಗಣೇಶ ದೇವಸ್ಥಾನದ ವೃದ್ದ ಅರ್ಚಕರು ಪ್ರತಿದಿನದ ಎಂಟೂಕಾಲಿನ ಬದಲು ಎಂಟುಘಂಟೆಗೇ ಮಂಗಳಾರತಿ ಮಾಡಿ ಅಲ್ಲೇ ಹತ್ತಿರದಲ್ಲಿರೊ ತಮ್ಮ ಮನೆಗೆ ಹೋಗಲು ನಿರ್ಧರಿಸಿದರು. ಹೇ ಸಂಕಟಮೋಚನ, ಈ ಊರೊಳಗೆ ಯಾರೋ ಹೊಸ್ಬ ಬಂದಿದಾನಂತೆ, ಅವನು ಬಂದಾಗಿನಿಂದ ಏನೇನೋ ಅನಿರೀಕ್ಷಿತ ಘಟನೆಗಳು ನಡಿತಾ ಇದೆ. ಏನೂ ಅಪಶಕುನಗಳು ಕಾಣಿಸ್ದೇ ಇದ್ರೂ ಮನಸಲ್ಲಿ ಯಾಕೋ ಒಂತರ ಹಿಂಸೆ. ಈ ನೂರ್ನಳ್ಳೀನ ನೀನೆ ಕಾಪಾಡಪ್ಪ ಅಂತ ಮನಸಲ್ಲೇ ಬೇಡಿದರು. ಅವರ ಕೋರಿಕೆಗೆ ದೇವರು ತಥಾಸ್ತು ಅಂದನೋ ಎಂಬಂತೆ ದೇವಸ್ತಾನದ ಘಂಟೆ ಮೊಳಗಿತು. ಅರ್ಚಕರು ನಿಧಾನವಾಗಿ ಆ ಕಡೆ ತಿರುಗಿ ನೋಡಿದರೆ ಯಾರೋ ಹೊಸಬರು ನಿತ್ತಿದ್ದರು. ಭಟ್ಟರೇ, ಅರ್ಚನೆ ಮಾಡ್ಬೇಕಿತ್ತು ಅಂದ. ಸರಿ ಅಂದ ಭಟ್ಟರು ಹೆಸ್ರು, ಗೋತ್ರ, ನಕ್ಷತ್ರ ಕೇಳಿದರು. ಆ ಹೊಸಬ ಒಂದು ಹೆಂಗಸಿನ ಮತ್ತೊಂದು ಗಂಡಸಿನ ಹೆಸರಲ್ಲಿ ಅರ್ಚನೆ ಮಾಡಲು ತಿಳಿಸಿ ಗೋತ್ರ, ನಕ್ಷತ್ರಗಳನ್ನ ತಿಳಿಸಿದ. ಆ ವೃದ್ಧ ಅರ್ಚಕರಿಗೆ ಆ ವಯಸ್ಸಿನಲ್ಲೂ ಈ ಹೆಸರುಗಳನ್ನು ಎಲ್ಲೋ ಕೇಳಿದ್ದೇನೆ ಅಂತ ಅನ್ನಿಸೋಕೆ ಶುರು ಆಯ್ತು. ಅರ್ಚನೆ ಆದ್ಮೇಲೆ ಯಾರಪ್ಪಾ ನೀನು, ನೂರ್ನಳ್ಳಿಗೆ ಯಾವಾಗ ಬಂದೆ , ಹೊಸಬನ ತರ ಕಾಣ್ತೀಯ, ಯಾರ ಮನೇಲಿ ಇದೀಯ ಅಂತ ಕೇಳಿದರು. ಮೊನ್ನೆ ಸಂಜೆ ಬಂದೆ ಭಟ್ರೆ, ಈಗ ಅರ್ಚನೆ ಮಾಡ್ಸಿದ್ದು ಯಾರ ಹೆಸ್ರು ಅಂತ ಗೊತ್ತಾಗಿಲ್ವಾ ಅಂತ ಮುಗುಳ್ನಕ್ಕ ಹೊಸಬ. ಈ ಹೊಸಬ ಮೊನ್ನೆ ರಾತ್ರಿ ಊರಿಗೆ ಬಂದ ಹೊಸಬನೇ ಅಂತ ತಿಳಿದು ಭಟ್ರಿಗೂ ಕುತೂಹಲ, ಭಯಗಳು ಒಟ್ಟಿಗೇ ಮೂಡಿದವು. ಆದ್ರೂ ಪ್ರಶ್ನೆ ಕೇಳಿದ ಶೈಲಿ, ಮುಖಚರ್ಯೆ ಎಲ್ಲೋ ನೋಡಿದೀನಿ ಅನ್ಸಿ, ಇಲ್ಲಪ್ಪ, ಹೇಳು ಅಂದ್ರು. ಅದು ನನ್ನ ಅಪ್ಪ-ಅಮ್ಮ ಅಂದ ಅವ..

*****

ಮಾರ್ನೇ ದಿನ ಬೆಳಗಾಯ್ತು. ಎಂದಿನಂತೆ ಶಾಲೆಗೆ ಹೋಗೋ ಹುಡುಗರು ಗಣೇಶನ ಗುಡಿಗೆ ಹೋಗಿ ನಮಸ್ಕಾರ ಮಾಡಿ ಹೋಗಲು ಹೋದರು. ಆದರೆ ಅವತ್ತು ಎಂಟೂವರೆ ಆದರೂ ದೇವಸ್ಥಾನಕ್ಕೆ ಬೀಗ!!. ಬೇಗನೇ ಪೂಜೆ ಮಾಡಿ ಎಲ್ಲಾದರೂ ಹೋದರೆ ಅಂತ ಅನ್ನೋಣವಂದರೆ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಹಳೇ ಹೂಗಳು ಹಾಗೇ ಬಿದ್ದಿದ್ದವು. ಭಟ್ಟರಿಗೆ ಹುಷಾರಿಲ್ಲವೇನೋ, ಪಾಪ ನೋಡಿಕೊಳ್ಳಲೂ ಯಾರೂ ಇಲ್ಲ. ಏನೇ ಆಗ್ಲಿ ಅವರ ಮನೆಗೆ ಹೋಗಿ ನೋಡೇ ಬಿಡೋಣ. ಪಾಪ, ಹುಷಾರಿಲ್ದಿದ್ರೆ ಒಮ್ಮೆ ಮಾತಾಡ್ಸಿ ಶಾಲೆಗೆ ಹೋಗೋಣ ಅಂತ ಅಲ್ಲೇ ಪಕ್ಕದಲ್ಲಿದ್ದ ಅವರ ಮನೆ ಕಡೆ ಹೋದರು ಶಾಲೆ ಹುಡುಗರು. ಸಣ್ಣ ಮಕ್ಕಳೆಂದರೆ ಭಟ್ಟರಿಗೆ ಪ್ರೀತಿ. ಯಾರಾದರೂ ಅವರ ಮನೆಗೆ ಹೋದರೆ ಕಲ್ಲು ಸಕ್ಕರೇನೋ, ನೈವೇದ್ಯಕ್ಕೆ ಅಂತ ತಂದಿದ್ದ ಬಾಳೆ ಹಣ್ಣನ್ನೋ, ಉತ್ತುತ್ತೆಯನ್ನೋ ಕೊಟ್ಟು, ಎದುರಿನ ಪೇರಲೆ ಗಿಡದಿಂದ ಬೇಕಾದಷ್ಟು ಹಣ್ಣು ಕೊಯ್ಕಂಡು ತಿನ್ನಿ ಅಂತ ಹೇಳಿ ಕಳುಹಿಸ್ತಿದ್ರು. ಅದೂ ಈ ಮಕ್ಕಳು ಅವ್ರ ಮನೆಗೆ ಹೋಗಲು ಒಂದು ಕಾರಣ ಆಗಿರ್ಬೋದು!
ಈ ಹುಡುಗರು ಹೋಗಿ ನೋಡಿದರೆ ಭಟ್ಟರೆ ಮನೆಗೆ ಬೀಗ!!

ಭಟ್ಟರು ಇದ್ದಕ್ಕಿದ್ದಂಗೆ ಬೀಗ ಹಾಕಿ ಎಲ್ಲಿ  ಹೋದರು ಅಂತ ಆ ಮಕ್ಕಳಿಗೆ ತಿಳಿಲಿಲ್ಲ. ಅವತ್ತು ಶಾಲೆಯಲ್ಲೆಲ್ಲಾ ಅದೇ ಸುದ್ದಿ. ಅವತ್ತು ಸಂಜೆಯ ಹೊತ್ತಿಗೆ ಊರಲ್ಲೆಲ್ಲಾ ಭಟ್ಟರ ಮನೆ ಬೀಗದ ಸುದ್ದಿಯೇ ಹರಿತಿತ್ತು. ಇವತ್ತು ಗಣೇಶನ ಗುಡಿ ಬಾಗಿಲು ತೆಗಿಯದೇ ಇದ್ದರೂ ಎದುರಿನ ಅರಳಿಮರದ ಕಟ್ಟೇಲಿ ಕೆಲ ಜನ ಸೇರಿದ್ರು. ಊರಿಗೆ ಬಂದ ಹೊಸಬನ ಬಗ್ಗೆ, ಕಾಣೆಯಾದ, ಆಗ್ತಾ ಇರೋ ಜನರ ಬಗ್ಗೆ, ಊರಲ್ಲಿ ನಡೀತಿರೋ ಅನಿರೀಕ್ಷಿತ ಘಟನೆಗಳ ಬಗ್ಗೆನೇ ಚರ್ಚೆ. ನೀರ್ನಳ್ಳಿ ಗುಡ್ಡನ ನಿರ್ನಾಮ ಮಾಡಕ್ಕೆ ಪೇಟೆ ಸಾಹುಕಾರ ಒಬ್ಬ ಕಾಂಟ್ರಾಕ್ಟ ತಗೊಂಡಿದಾನಂತೆ. ಅವ್ನಿಗೆ ಗುಡ್ಡ ಒಡ್ಯೋಕೆ ತಡೆಯಾಗಿರೋ ನೂರ್ನಳ್ಳಿ ಜನರ ಮೇಲೆ ಭಾರೀ ಸಿಟ್ಟಂತೆ. ಹಂಗಾಗಿ ಅವ್ನೇ ಯಾರನ್ನೋ ಕಳ್ಸಿದಾನಂತೆ ಅಂದ್ರು ಒಬ್ರು.ಆ ಅವ್ನು ನೀರ್ನಳ್ಳಿಗೆ ಬಂದ ಹೊಸ್ಬನೇ ಇರ್ಬೇಕು. ಅವ್ನು ಬಂದಾಗಿಂದ ದಿನಾ ಊರಿನ ಪ್ರಭಾವಿ ಜನ್ರನ್ನ ಒಬ್ಬೊಬ್ರಾಗಿ ಬಲಿ ತಗೋತಿದಾನೆ ಅಂದ ಮತ್ತೊಬ್ಬ.ಬೆಂಗಳೂರಲ್ಲಿ ಬಾಂಬಿಟ್ಟು ತಲೆಮೆರಿಸಿಕೊಂಡಿರೋ ಭಯೋತ್ಪಾದಕ ಇವ್ನೇ ಇರ್ಬೇಕು ಅಂದ್ರು ಮತ್ತೊಬ್ರು. ಏ ನೂರ್ನಳ್ಳಿಗೆ ಬಂದ ಹೊಸ್ಬ ಒಳ್ಳೆಯವ್ನ ತರ ಕಾಣ್ತಿದ್ದ. ಅವ್ನು ನೂರ್ನಳ್ಳಿ ಜನ್ರನ್ನ ಕೊಲ್ಲೋ ತರ ಇದ್ದಿದ್ರೆ ಅವತ್ತು ಬಸ್ಸಲ್ಲೇ ಬಾಂಬ್ ಹಾಕಿಡ್ತಿದ್ದ. ಅವ್ನ ಕೆಲ್ಸ ಅಲ್ಲ ಇದು ಅನ್ಸತ್ತೆ ಅಂದ್ರು ಮತ್ತೊಬ್ರು. ಎಲ್ಲಾ ಕೆಟ್ಟೋರು ಒಳ್ಳೆಯವ್ರ ತರನೇ ಇರ್ತಾರೆ , ಗೋಮುಖ ವ್ಯಾಘ್ರರು ಅಂದ್ರು ಮತ್ತೊಬ್ಬ ಹಿರಿಯರು.  ಏ ಅಲ್ಲಲ್ಲ,  ಅವ್ನು ಅವಧೂತ. ಅವ್ನಿಗೆ ಭೂತ, ವರ್ತಮಾನ, ಭವಿಷ್ಯಗಳೆಲ್ಲಾ ಗೊತ್ತು. ಅವ್ನು ಇಂತ ಕೆಲ್ಸ ಮಾಡ್ತಿರ ಸಾಧ್ಯತೇನೇ ಇಲ್ಲ ಅಂದ್ರು ಒಬ್ರು.  ಹೀಗೇ ಊಹಾಪೋಹಾಗಳಿಗೆ ರೆಕ್ಕೆ ಪುಕ್ಕಗಳು ಸೇರಿ ಅವನ ಬಗ್ಗೆ ಹಿಂದಿನ ದಿನಕ್ಕಿಂತಲೂ ಹೆಚ್ಚಿನ ಗಾಳಿ ಸುದ್ದಿಗಳು ಹಬ್ಬಿದವು .. ಏನಾದರಾಗಲಿ ಆ ಹೊಸಬನನ್ನು ಆದಷ್ಟು ಬೇಗ ಮತ್ತೆ ಭೇಟಿ ಮಾಡಬೇಕು, ಅವ್ನು ಯಾರು , ಎಲ್ಲಿಂದ ಬಂದ, ನಮ್ಮೂರಲ್ಲಾಗ್ತಿರೋ ಘಟನೆಗಳಿಗೂ ಅವ್ನಿಗೂ ಏನಾದ್ರೂ ಸಂಬಂಧ ಇದ್ಯಾ ಅತ್ವಾ ಎರಡೂ ಕಾಕತಾಳೀಯನಾ, ಊರಲ್ಲಿರೋ ಜನರೆಲ್ಲಾ ಯಾಕೆ ಕಾಣೆ ಆಗ್ತಿದಾರೆ ಅಂತ ಕೇಳ್ಲೇಬೇಕು ಅಂತ ಮನಸ್ಸಲ್ಲೇ ಅಂದ್ಕೊಂಡ್ರು ಮೇಷ್ಟ್ರು. .
(ಮುಂದುವರಿಯುತ್ತದೆ..)

Saturday, November 3, 2012

ನೀರ ಮಾರಿ ನೀಲಮ

ಸಾವಿರಾರು ಜನರ ನಿದ್ರೆ/ಬದುಕು ನುಂಗಿದ ನೀಲಮನ ಕುರಿತೊಂದು ಪದ್ಯ..
ನೀರಲೇ ಜೀವನ, ನೀರಲೇ ಸಾವಿದು
ಬೀಸಿ ಬಂದ ಮೃತ್ಯು ನೀನು ನೀಲಮ
ಕಾಲನ ಕರೆಯಿದು, ಉಳಿಯದು ಜೀವವು
ಏರಿ ಬಂದ ಸಾವು ನೀನು ನೀಲಮ |೧

ರಚ್ಚೆ ಹಿಡಿದ ಮಗುವಿನಳುವೆ
ಬಿಡದೆ ಸುರಿವ ಮಳೆಯು
ತಂದು ರಸ್ತೆ ಮೇಲೆಲ್ಲಾ
ಮೋರಿ ಗಬ್ಬು ಕೊಳೆಯು |೨

ಕೆರೆಯಲ್ಲಿಹ ಬಡಾವಣೆ, ಹಾಹಾಕಾರ
ನುಂಗಿ ನಕ್ಕವರಿಂದಳು ಧಾರಾಕಾರ
ಫಸಲು ಭೂಮಿ ಸೈಟು ಎಂದ ನೀರಿಂಗುವ ಜಾಗವ
ಆಪೋಶನಕ್ಕೆಂದೆ ನೀಲಮನ ಅವತಾರ |೩

ಕಾಡೆಲ್ಲವ ಕಡಿದ ಮನೆಗೆ
ಮರಮುಟ್ಟುವ ಸುಟ್ಟು ಮಾರು
ಜಗವೆಲ್ಲವು ನಿಂದೆ ಎಂದು
ಬಿಡುವಿಲ್ಲದೆ ಸೊಕ್ಕಿ ಹಾರು
ತಿರುಗುತಿರುವ ಕಾಲ ಚಕ್ರ
ಬಂದಿಹಳು ನೀಲಮ,
ಬುದ್ದಿ ಕಲಿಸೆ ಮಾನವ |೪

ಧರೆಯ ಶೋಕ ನೋಡಲಾರ ,ಬೆಂಕಿಯುಗುಳಿ ಗಗನ
ಸಿಡಿಲು, ಗುಡುಗು ಸಾಲದೆಂದು ಇವಳ ತಂದ ಪವನ
ಇನ್ನಾದರು ಬುದ್ದಿ ಕಲಿ, ಇಲ್ಲ ಪ್ರಾಣ ಹರಣ
ಕಾಯುತಿಹಳು ಕೊಲ್ಲಲೆಂದು ನೀರ ಮಾರಿ ನೀಲಮ |೫

Wednesday, October 31, 2012

ಮಳೆಯಲಿ, ಚಳಿಯಲಿ



ಬೆಂಗ್ಳೂರಲ್ಲಿ ಮತ್ತೆ ಮಳೆ. ಅದ್ರಲ್ಲೇನು ವಿಶೇಷ ಅಂದ್ರಾ ? ಇಲ್ಲಿ ಯಾವಾಗ ಮಳೆ ಇರತ್ತೆ ಯಾವಾಗ ಬಿಸ್ಲಿರುತ್ತೆ ಅನ್ನೋದು ಓಸಿ ಲಾಟ್ರಿ ಹೊಡ್ಯತ್ತೆ ಅಂದಷ್ಟೇ ಗ್ಯಾರಂಟಿ ಅಂತೀರಾ? ಹೌದು ಬಿಡಿ. ಆದ್ರೂ  ಈ ಸಲ , ಈ ಮಳೆ ಏನೋ ವಿಶೇಷ ಅಂತ ಅನ್ಸಿದ್ದೆಂತೂ ಹೌದು. ಮಳೆ ದಿನ, ಬೆಳಗಿನ ಚಳೀಲಿ ಬಚ್ಚಲು ಮನೇಲಿ ಬೆಚ್ಚ ಬೆಚ್ಚಗಿನ ನೀರು ಮೈಮೇಲೆ ಬೀಳ್ತಾ ಇದ್ರೆ ಊರಿನ ಹಂಡೆಯ, ಹೊಡಸಲಿನ, ಮುಂಜಾನೆ ಮಳೆಯ ಅದೆಷ್ಟೋ ನೆನಪುಗಳ ಮೆರವಣಿಗೆ. ಅಂತದ್ದೇ ಕೆಲ ನೆನಪುಗಳನ್ನು ಇಲ್ಲಿ ಹೆಕ್ಕಿಡೋ ಪ್ರಯತ್ನದಲ್ಲಿದ್ದೇನೆ...

ಮಳೆಗಾಲ, ಚಳಿ ಅಂದ್ರೆ ಮೊದ್ಲು ನೆನ್ಪಾಗೋದು ನಮ್ಕಡೆಯ ಕಂಬಳಿ-ಚಳಿ ಅನ್ನೋ ಮಾತುಗಳು. ನಮ್ಕಡೆಗೆ ನಿನ್ನೆ ೨ ಕಂಬಳಿ ಚಳಿ ಇದ್ದೋ, ನಿಂಬದಿಗೆ ಎಷ್ಟು ಅನ್ನೋ ಮಾತು ಈಗ್ಲೂ ನಮ್ಮ ಬದಿಯ ಹಳೆ ಕಾಲದವರ ಮನೆಗಳಲ್ಲಿ ಮಾಮೂಲು. ಮಳೆಗಾಲದ ಆ ದಿನಗಳಲ್ಲಿ ಬೇಗ ಎದ್ದು ಶಾಲೆಗೆ ರೆಡಿ ಆಗೋದು ಅಂದ್ರೆ ಅದೊಂತರ ಹಿಂಸೆ. ಹಾಗಾಗಿ ಶನಿವಾರ ಬಂತದ್ರೆ , ಯಾಕಪ್ಪಾ ಅನುಸ್ತಿತ್ತು ಕೆಲ ಸಲ. ಆದ್ರೆ ಅಮ್ಮ ನಂಕಿಂತನೂ ಮುಂಚೆನೇ ಎದ್ದು ಬಚ್ಚಲು ಒಲೆಗೆ ಬೆಂಕಿ ಹಾಕ್ತಿದ್ರಿಂದ ಹಂಡೇಲಿ ಬಿಸಿ ಬಿಸಿ ನೀರು ರೆಡಿ. ಈಗೆಲ್ಲಾ ಗೀಸರು, ಸೋಲಾರು ಬಂದು ಹಂಡೆ ಅಂದ್ರೆ ಏನು ಅಂತ ಸುಮಾರು ಪೇಟೆ ಹುಡ್ಗರು ಕೇಳೋ ಹಾಗಾಗಿದೆ ಬಿಡಿ , ಆದ್ರೆ ನಂಕಡೆ ಆಗ ಹಾಗಿರ್ಲಿಲ್ಲ, ಈಗ್ಲೂ ಹಂಡೆಗಳ ಜಮಾನ ಮುಗಿದಿಲ್ಲ... ಎಲ್ಲೋ ಹೋದ್ವಿ, ಮತ್ತೆ ಫ್ಲಾಷ್ ಬ್ಯಾಕಿಗೆ.. ಸರಿ, ಸ್ನಾನ ಮಾಡಿ, ಪೂಜೆ ಮಾಡಿ, ಬಿಸಿ ಬಿಸಿ ತಿಂಡಿ ನುಂಗಿ(ತಿಂತ ಕೂತ್ರೆ ಶಾಲೆಗೆ ಲೇಟಾಗತ್ತಲ ಮತ್ತೆ :-) ) ಶಾಲೆ ಕಡೆ ದಾಪುಗಾಲು ಹಾಕ್ತಿದ್ವಿ. ಕೆಲೋರು ದಪ್ಪ ದಪ್ಪ ಸ್ವೆಟರು ಹಾಕ್ಕಂಡು ಬರೋರು. ಆದ್ರೆ ನನ್ನಂತ ಕೆಲೋರಿಗೆ ಸ್ವೆಟರು ಹಾಕೋದು ಜ್ವರ ಬಂದಾಗ, ಹುಷಾರಿಲ್ದಿದ್ದಾಗ ಮಾತ್ರ ಅಂತ ಭಾವ !! ಹಾಗಾಗಿ ಮಳೆಗೊಂದು ಛತ್ರಿ ಹಿಡಿದು , ಚಳಿಗೆ ನಿಮಿರಿ ನಿಂತಿರ್ತಿದ್ದ ಕೈ ರೋಮಗಳನ್ನ ಒಬ್ರಿಗೊಬ್ರು ತೋರಿಸ್ಕೊಂಡು ನಗಾಡ್ತಾ ಶಾಲೆಗೆ ಹೋಗ್ತಿದ್ವಿ. ಶನಿವಾರ ಶಾಲೇಲಿ ಮೊದಲೆರ್ಡು ಪೀರಿಯಡ್ ಪೀಟಿ ಇರ್ತಿತ್ತು.ಮಳೆಗಾಲದಲ್ಲಿ ಆ ಪೀರಿಯಡ್ ಬದ್ಲು ಬೇರೆ ಇರ್ತಿತ್ತು. ಚಳಿಗಾಲದಲ್ಲಿ ಅದೇ ನಮ್ಮ ಮೆಚ್ಚಿನ ಪೀರಿಯಡ್ ಆಗ್ತಿತ್ತು. ವ್ಯಾಯಾಮ ಮಾಡ್ತಾ ಆಗಾಗ ಇಣುಕ್ತಿದ್ದ ಸೂರ್ಯನ ಮುಂಜಾನೆ ಬಿಸ್ಲಿಗೆ ಮೈ ಕಾಯಿಸ್ಕೊಳೋ ಆ ಸುಖ ಇದ್ಯಲ್ಲ.. ಅದನ್ನ ಅನುಭವಿಸಿಯೇ ತಿಳಿಯಬೇಕು..

ಮಳೆಗಾಲ, ಚಳಿಗಾಲ ಅಂದಾಗ ಕಾಡೋ ಇನ್ನೊಂದು ಮಧುರ ನೆನಪು ನಮ್ಮಜ್ಜಿ ಮನೆ ಹೊಡಸಲಿನದು. ಜೋಗದ ಗುಂಡಿ.. (ಈಗಿನ ಜೋಗ ಫಾಲ್ಸು !!) ಕೇಳಿರಬೇಕಲ್ವಾ ಅದ್ರತ್ರ ನನ್ನಜ್ಜಿ ಮನೆ.
ಹೊಡಸಲು ಅಂದ್ರೆ ಅಲ್ಲಿ ಮಳೆಗಾಲದಲ್ಲಿ ಏಲಕ್ಕಿ, ಕಾಫಿ, ಲವಂಗ ಇತ್ಯಾದಿ ಬೆಂಕಿ ಶಾಖಕ್ಕೆ ಒಣಗಿಸೋಕೆ ಅಂತ ಮಾಡಿರ್ತಿದ್ದ ಜಾಗ. ಹೊಡಸಲಿನ ಮೇಲ್ಗಡೆ ಲವಂಗ ಇತ್ಯಾದಿ ಒಣ ಹಾಕಿದ್ರೆ ಕೆಳಕ್ಕೆ ಬೆಂಕಿ ಉರೀತಾ ಇರತ್ತೆ. ಹಾಗಾಗಿ ಮನೇಲಿರೋ ಮಕ್ಕಳಲ್ದೇ, ಬೆಕ್ಕು, ನಾಯಿಗಳಿಗೂ ಹೊಡಸಲು ಚಳಿ ಕಾಯಿಸೋ ಮೆಚ್ಚಿನ ಜಾಗ. ಅಲ್ಲಿ ಘೋರ ಮಳೆಗಾಲದಲ್ಲೇ ಏನಾರು ಕಾರ್ಯಕ್ರಮ ಇರ್ತಿತ್ತು. ಪ್ರತೀ ಸಲವೂ ಬಸ್ಸಿಳಿದು ಬಸ್ಟಾಂಡಿಂದ ೨ ಕಿ.ಮೀ ದೂರದ ಅವರ ಮನೆಗೆ ಹೋಗೋ ಹೊತ್ತಿಗೆ ಅದೇಗೆ ಛತ್ರಿ ಹಿಡಿದು ನಡದ್ರೂ ಅರ್ಧ ಪ್ಯಾಂಟಾದ್ರೂ ನೆಂದಿರ್ತಿತ್ತು.. ಅಡ್ಡಮಳೆಗೆ ಶಾಪ ಹಾಕ್ತಾ , ಕಾಲಿಗೆ ಹತ್ತುತ್ತಿದ್ದ ಉಂಬುಳಗಳನ್ನು ಕೀಳ್ತಾ ಮನೆಗೆ ಸಾಗ್ತಿದ್ವಿ. ತೀರಾ ನಿಧಾನ ನಡೆದಷ್ಟೂ ಉಂಬ್ಳ ಹತ್ತದು ಜಾಸ್ತಿ. ಹಂಗಂತ ತೀರಾ ಬೇಗ ನಡ್ಯಕ್ಕಾಗಲ್ಲ..ಆ ಮಣ್ಣು ರಸ್ತೆ ಎಲ್ಲಿ ಜಾರತ್ತೋ ಅನ್ನೋ ಭಯ..ಅಂತೂ ಮನೆ ಮುಟ್ಟಿ ಕಾಲಿಗೆ ಹತ್ತಿ, ನಾ ನಿನ್ನ ಬಿಡಲಾರೆ ಅಂತಿದ್ದ ಉಂಬುಳಗಳ್ನ ಸುಣ್ಣ-ಹೊಗೆಸೊಪ್ಪಿನ ನೀರಿನ ದ್ರಾವಣ ಮುಟ್ಸಿ ತೆಗದು ದೂರ ಬಿಸಾಕ್ತಿದ್ವಿ. ಕೆಲ ಉಂಬುಳ ದ್ವೇಷಿಗಳು ಅದ್ನ ಹೊಡಸಲಿನ ಬೆಂಕಿಗೆ ಹಾಕ್ತಿದ್ರು !!.. ಹಂಡೆಯ ಕುದಿ ಕುದಿ ನೀರಲ್ಲಿ ಕೈಕಾಲು ತೊಳಿವಾಗ ಮಳೇಲಿ ಮೈ ತೋಯಿಸ್ಕಂಡಾಗಿನ ಚಳಿ ಮರ್ತೇ ಹೋಗ್ತಿತ್ತು.. ಬಟ್ಟೆ ಬದಲಾಯಿಸಿದ ನಂತರ ಹೊಡಸಲೆದ್ರೇ ನಮ್ಮ ಹಾಜರಿ. ಬಿಸಿ ಬಿಸಿ ಕಾಫಿಯೋ, ಚಾವೋ ಸ್ವಲ್ಪ ಹೊತ್ತಿಗೆ ಅಲ್ಲೇ ಬರೋದು. ಮಳೆ-ಚಳಿಗಾಲದಲ್ಲಿ ಹೊಡಸಲಲ್ಲಿ ಚಳಿ ಕಾಯಿಸ್ತಾ ಇರ್ವಾಗ ಬಿಸಿ ಬಿಸಿ ಕಾಫಿ-ಚಾ ಒಳಗೆ ಇಳಿತಾ ಇದ್ರೆ..ಆ ಸುಖ ಅನುಭವಿಸಿಯೇ ತಿಳಿಯಬೇಕು..  

ಆಮೇಲಿಂದು ಹೈಸ್ಕೂಲ್ ಸೈಕಲ್ ನೆನ್ಪುಗಳು.. ಹೈಸ್ಕೂಲಿಗೆ ಬಂದ ಮೇಲೆ ಸೈಕಲ್ ಬಂತು. ಐದು ಕಿ,ಮೀ ದೂರ ಸೈಕಲ್ ಹೊಡ್ದು ಹೋಗೋದು ಖುಷೀನೆ. ಆದ್ರೆ ಮಳೆಗಾಲ ಬಂದಾಗ ಅದು ಬೇರೆ ಕಥೆ. ರೈನ್ ಕೋಟು ಹಾಕಿದ್ರೆ ಸೈಕಲ್ ತುಳ್ಯೋಕೆ ಸುಲ್ಬ. ಆದ್ರೆ ಎಷ್ಟೇ ದುಬಾರಿ ರೈನ್ ಕೋಟ್ ತಂದ್ರೂ ಅದ್ರ ಪ್ಯಾಂಟು ೧೫-೨೦ ದಿನಕ್ಕೆ ತೂತಾಗಿ ಒಳಗೆಲ್ಲಾ ನೀರು ಬರ್ತಿತ್ತು. ಹಾಗಾಗಿ ರೈನ್ ಕೋಟಿನ ಪ್ಯಾಂಟು ಹಾಕಿದ್ರೂ ಒಳಗಿರೋ ಪ್ಯಾಂಟೆಲ್ಲಾ ಹೈಸ್ಕೂಲು ಮುಟ್ಟೋವರ್ಗೆ ಒದ್ದೆ!!. ಹೈಸ್ಕೂಲಿಂದ ಮನೆಗೆ ಬರ್ತಾನೂ ಇದೆ ಕತೆ. ಆದ್ರೆ ಮನೆಗೆ ಬಂದ ತಕ್ಷಣನೇ ಆ ಹಸಿ ಪ್ಯಾಂಟು ತೆಗ್ದು ಬೇರೆ  ಬಟ್ಟೆ ಹಾಕ್ಬೋದಿತ್ತು. ಆದ್ರೆ ಹೈಸ್ಕೂಲಲ್ಲಿ ಹಂಗಲ್ವಲ್ಲ... ಆ ಹಸಿ ಪ್ಯಾಂಟು ನಂ ದೇಹದ ಬಿಸಿಗೆ ಆರೋವರ್ಗೆ ಕಾಯೋದನ್ನ ಬಿಟ್ಟು ಬೇರೆ ಏನ್ಮಾಡೋಕೂ ಆಗಲ್ಲ.  ಇನ್ನು ರೈನ್ ಕೋಟಿನ ಸಹವಾಸವೇ ಬೇಡ ಛತ್ರಿ ಹಿಡ್ಕೊಂಡು ಹೋಗನ ಅಂದ್ರೆ ಒಂದು ಕೈಯಲ್ಲಿ ಛತ್ರಿ ಹಿಡ್ದು ಸೈಕಲ್ಲು ಬ್ಯಾಲೆನ್ಸ್ ಮಾಡೋದು ಸ್ವಲ್ಪ ಕಷ್ಟನೇ..ಕ್ರಮೇಣ ಅಭ್ಯಾಸ ಆಗಿ ಹಳ್ಳೀಲೂ ಪೇಟೇಲೂ ಹಿಂಗೆ ಒಂಟಿ ಕೈ ಬ್ಯಾಲೆನ್ಸಲ್ಲೇ ಸೈಕಲ್ ಹೊಡಿತಿದ್ವಿ.ಆದ್ರೆ ಒಮ್ಮೊಮ್ಮೆ ಬೀಸ್ತಿದ ಅಡ್ಡ ಮಳೆ ಅಲ್ದೇ ಛತ್ರಿ ಜೊತೆ ಸೈಕಲ್ಲನ್ನೂ ತಳ್ಳೋ ಅಷ್ಟು ಜೋರಾಗಿ ಬೀಸ್ತಿದ್ದ ಗಾಳಿ ಮುಂದೆ ನಮ್ಮ ಪ್ರಯತ್ನಗಳೆಲ್ಲಾ ವ್ಯರ್ಥ ಆಗಿ ಮತ್ತೆ ಒಂದರ್ಧ ಪ್ಯಾಂಟಾದ್ರೂ ನೆಂದಿರ್ತಿತ್ತು. ಚಳಿಗಾಲದ ಶನಿವಾರಗಳು ಮತ್ತೆ ಮುಂಜಾನೆ ಕ್ಲಾಸು. ಮತ್ತದೇ ಸೈಕಲ್ಲು. ಮೈ ಕೊರೆಯೋ ಚಳಿಗೆ ಸೈಕಲ್ ತುಳಿತಾ ಹೈಸ್ಕೂಲ್ ಮುಟ್ಟೋ ಹೊತ್ಗೆ ಕೈ ಮೇಲಿನ ಎಲ್ಲಾ ರೋಮಗಳೂ ಎದ್ದು ನಿಂತಿರ್ತಿದ್ವು !! :-)

ಕಾಲೇಜಿಂದು ಮತ್ತೊಂದು ತರ ಕತೆ. ನಮ್ಮ ಕಾಲೇಜು ದಿನಾ ಬೆಳಗ್ಗೆ ಏಳೂವರೆಗೆ ಶುರುವಾಗ್ತಿತ್ತು ! ಅಂದ್ರೆ ಪ್ರತೀದಿನ ಒಂತರಾ ಶನಿವಾರ. ಹಂಗಾಗಿ ಚಳಿಗಾಲ , ಮಳೆಗಾಲಗಳಲ್ದೇ ಇದ್ರೂ ಮುಂಜಾನೆ ಚಳಿಯ ರುಚಿ ದಿನಾ ಸಿಗ್ತಿತ್ತು ನಂಗೆ. ಚಳಿಗಾಲದ ಮುಂಜಾನೆ ಚಳಿಗೆ  ಸೈಕಲ್ ತುಳ್ಯದು ಇರ್ಲಿ ಹ್ಯಾಂಡ್ ಗ್ಲವ್ಸು ಹಾಕಿ ಗಾಡಿ ಓಡ್ಸಬೇಕಂದ್ರೂ ಕೈನಡುಗ್ತಿತ್ತು.ಸಾಗರದ ಕಾಲೇಜು ಮುಗ್ದು ಶಿವಮೊಗ್ಗ ಕಾಲೇಜಿಗೆ ಬಂದ ಮೇಲೆ ಈ ಚಳಿಯ ದಿನಗಳು ಸ್ವಲ್ಪ ಕಡ್ಮೆ ಆದ್ವು ಅನುಸ್ತು. ಅಲ್ಲೂ ನಮ್ಮ ಕಾಲೇಜು ಬೆಳಿಗ್ಗೆ ಏಳೂವರೆಗೆ ಶುರು ಆಗ್ತಿತ್ತು. ಇಲ್ಲಿ ತೀರಾ ಮಳೆ, ಚಳಿಯ ದಿನಗಳಲ್ಲಿ ಕೈ ರೋಮ ಸ್ವಲ್ಪ ನಿಮಿರಿರ್ಬಹ್ದು ಅನ್ನೋದು ಬಿಟ್ರೆ ಹೆಚ್ಚೇನೂ ಚಳಿ-ಮಳೆ ಕಾಡಿಲ್ಲ. ಬೆಂಗಳೂರಿಗೆ ಬಂದ ಮೇಲಂತೂ ಬಿಡಿ.. ಚಳಿ ಅನ್ನೋದೆ ಮರೆತು ಹೋದಂಗಾಗಿತ್ತು. ಬಂದ ಆರು ತಿಂಗಳಲ್ಲಿ  ಒಂದು ದಿನವೂ ಸ್ವೆಟರ್ ಹಾಕಿಲ್ಲ. ಇರೋ ಸ್ವೆಟರನ್ನೂ ಊರಲ್ಲಿಟ್ಟಿದೀನಿ !!    ಅಂತದ್ರಲ್ಲಿ ಇವತ್ತು ಬೆಳಬೆಳಿಗ್ಗೆ ಯಾಕೋ ಚಳಿ ಅನುಸ್ತು. ನಿನ್ನೆ ಚನ್ನಾಗಿ ಮಳೆ ಹೊಡಿದ ಪ್ರಭಾವ ಇರ್ಬೋದೇನು. ಬೆಂಗ್ಳೂರಷ್ಟೇ ಅಲ್ದೇ ತುಮ್ಕೂರು, ಮಂಡ್ಯ ಈ ಬದಿಗೆಲ್ಲಾ ಮಳೆ ಸುರೀತಿರೋ ಪ್ರಭಾವ ಇರ್ಬೋದು.. ನಿನ್ನೆಯಿಂದ ಮೋಡ ಕಟ್ಟೇ ಇರೋದ್ರ ಪ್ರಭಾವ ಇರ್ಬೋದು..ಅಂತ ಮಳೆ-ಚಳಿ ಮುಂಜಾನೇಲಿ ಎದ್ದು ಗೀಸರಿನ ಬಿಸಿ ನೀರು ಹೊಯ್ಕಳ್ತಾ ಇದ್ದಾಗ  ಹಳೆಯ ಹಂಡೆ, ಹೊಡಸಲು, ಮಳೆಗಾಲದ ನೆನ್ಪುಗಳು ಮರುಕಳಿಸಿದ್ವು.. ಹಾಗೇ ಈರೀತಿ ಪದಗಳಾದ್ಚು. ನಿಮ್ಗೂ ಇದನ್ನ ಓದ್ತಾ ಕೆಲ ಬೆಚ್ಚನೆಯ ನೆನ್ಪುಗಳು ಮರುಕಳಿಸಿರ್ಬೋದು.. ಆ ಬೆಚ್ಚನೆಯ ನೆನಪುಗಳ್ನ ಸವೀತಾ, ಬಿಸಿ ಬಿಸಿ ಕಾಫೀನೋ, ಟೀನೋ ಹೀರ್ತಾ, ಚಳೀಗೆ ಪಕೋಡಾನೋ ಬಜೀನೋ ಸವೀತಾ ಹಾಗಾಗಿರಿ. ಶುಭದಿನ :-)

Friday, October 19, 2012

ನೂರ್ನಳ್ಳೀಲಿ ಅವ-೨

ಹಿಂದಿನ ಭಾಗ: ನೂರ್ನಳ್ಳೀಲಿ ಅವ-1

.. ಸೀಟು ಬಿಡ್ಬೇಕಲ್ಲಾ ಅನ್ನೋ ಸಂಕಟದಿಂದ ಇವ ಅವನನ್ನು ತಟ್ಟಿ ಕೇಳ್ದ. ಯಾವೂರಿಗೆ ಹೋಗ್ತೀದೀರಿ ನೀವು ಅಂತ. ಇತ್ಲಗೆ ತಿರುಗಿ ನೂರ್ನಳ್ಳಿ ಅಂದ.ಆ ಹಿರಿಯರನ್ನ ನೋಡಿದವ್ನೇ ಅವ, ಓ . ಮೇಷ್ಟ್ರೇ, ನಿಂತೇ ಇದೀರಲ್ಲಾ.. ಕೂತ್ಕಳಿ ಅಂತ ತನ್ನ ಸೀಟು ಬಿಟ್ಕೊಟ್ಟ!! ಅವ ಯಾರು? ಡ್ರೈವರನ್ನೂ ಸೇರ್ಸಿ ಆ ಬಸ್ಸಲ್ಲಿರೋ ಹೆಚ್ಚಿನ ಜನ ಆ ಮೇಷ್ಟ್ರ ಶಿಷ್ಯರೇ ಆಗಿದ್ರೂ ಯಾರೂ ಸೀಟು ಬಿಟ್ಟು ಕೊಡ್ದಿರೋವಾಗ ಅವ ಯಾಕೆ ಸೀಟು ಬಿಟ್ ಕೊಟ್ಟ ಅನ್ನೋ ಎಲ್ಲರ ಕುತೂಹಲ ಹೊತ್ತ ಬಸ್ಸು ಗುಂಡಿ ರಸ್ತೇಲಿ ಕುಲುಕಾಡ್ತಾ ಸಾಗ್ತಾ ಇತ್ತು.

ಬಸ್ಸು ಮೂರ್ನಳ್ಳಿ ಮುಟ್ಟೋ ಹೊತ್ಗೆ ಸೂರ್ಯನೂ ಮನೆ ಸೇರ್ತಾ ಇದ್ದ. ದೂರದಲ್ಲಿ ಹರಿತಾ ಇದ್ದ ಬಾವಿಹೊಳೆ ಮುಳುಗ್ತಿದ್ದ ಸೂರ್ಯನ ಕಾಂತಿಗೆ ಕೆಂಪಾಗಿತ್ತು.ಚಾ ಕುಡ್ಯಕ್ಕೆ ಅಂತ ಇಳ್ದ ಡ್ರೈವರಣ್ಣ ಇನ್ನೂ ಬಂದಿರ್ಲಿಲ್ಲ. ಎಲ್ರಂಗೆ ಬಸ್ಸಿಂದ ಇಳ್ದ ಆ ಹೊಸ್ಬ ಸೂರ್ಯಾಸ್ತ ನೋಡ್ತಾ ಇದ್ದ ಪರಿಯಲ್ಲೇ ಏನೋ ಹೊಸ ತರ ಇತ್ತು . ಏನಪ್ಪಾ ಯಾವತ್ತು ಸೂರ್ಯಾಸ್ತ ನೋಡಿಲ್ವೇ, ಪಟ್ಣಾದಿಂದ ಬಂದಾಂಗೆ ಕಾಣ್ತೀಯ ಅಂದ್ರು ಒಬ್ರು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅಂತಾರಲ ಮರಿಯಣ್ಣ, ಎಲ್ಲಿ ಎಷ್ಟೇ ಸಂದಾಕಿದ್ರೂ ನಮ್ಮೂರಿನ ಸೌಂದರ್ಯ ನೋಡ್ದಂಗೆ ಆತದಾ ಅಂತ ನಕ್ಕ ಅವ. ಆ ಮರಿಯಣ್ಣಂಗೂ ಒಮ್ಮೆ ಗಾಬ್ರಿ ಆತು. ಯಾರಪ ಇವ, ನನ್ನ ಹೆಸ್ರನ್ನ ಇಷ್ಟು ಗೌರವದಿಂದ ಕರ್ಯೋನು ಅಂತ ಆಶ್ಚರ್ಯ ಪಟ್ಟ ಸಣ್ಣ ಮಕ್ಳಿಂದಲೂ ಏ ಮರ್ಯ ಅಂತ್ಲೇ ಕರ್ಸಕಂಡು ಆಭ್ಯಾಸ ಆಗಿದ್ದ ಜವಾನ ಮರ್ಯ. ಯಾರ್ ಸ್ವಾಮಿ ನೀವು ಅಂದ ಮರ್ಯ ಮರ್ಯಾದೆಯಿಂದ ಅಭ್ಯಾಸಬಲದಿಂದ. ಅಯ್ಯೋ ಮರಿಯಣ್ಣ, ನೀವು ನಂಗೆ ಸ್ವಾಮಿ ಅನ್ನೋದೇ? ಅಷ್ಟೆಲ್ಲಾ ದೊಡ್ಡ ಮನ್ಷ ಆಗಿಲ್ಲ ನಾನು. ನಾನ್ಯಾರಂತಾ ನಿಮ್ಗೆ ಗೊತ್ತಾಗಿಲ್ವಾ ಅಂದ? ಇಲ್ಲ ಸ್ವಾಮಿ ಅಂದ. ಮತ್ತೆ ಅದೇ, ನನ್ನ ಸ್ವಾಮಿ ಅಂತ ಕರೀಬೇಡಿ.. ನನ್ರೆಸ್ರು... ಅಂತ ಏನೋ ಹೇಳೋಕೆ ಹೋದವನು ಅಲ್ಲೇ ತಡೆದ. ಇನ್ನೊಂದು ಎರಡು ದಿನದಲ್ಲಿ ನಿಮಗೇ ನೆನ್ಪಾಗತ್ತೆ ಬಿಡಿ ಅಂತ ನಗ್ತಾ ಬಸ್ಸಿನ ಕಡೆ ಹೆಜ್ಜೆ ಹಾಕ್ದ . ಅವ ಯಾರು ಅನ್ನೋ ಕುತೂಹಲ ಮರ್ಯಣ್ಣಂಗೆ ಇರ್ಬೇಕಾದ್ರೆ ಬಸ್ಸಿನ ಹಾರ್ನಿನ ಸದ್ದು ಕೇಳಿ ಮರ್ಯಣ್ಣನೂ ಬಸ್ಸಿನ ಕಡೆ ಓಡಿದ.

ಗುಂಡಿ ಸ್ವಲ್ಪ ಕಮ್ಮಿ ಆಗಿದ್ರಿಂದನೋ, ಡ್ರೈವರು ಚಾ ಏರ್ಸಿದ್ರಿಂದನೋ ಗಾಡಿಗೆ ಸ್ವಲ್ಪ ವೇಗ ಸಿಕ್ಕಿತ್ತು. ನೀರ್ನಳ್ಳಿ ದಾಟಿ ದೂರದಲ್ಲಿ ನೂರ್ನಳ್ಳಿ ಗುಡ್ಡ ಕಾಣ್ತಾ ಇತ್ತು. ದಿನಾ ಲೇಟಾಗೋ ಬಸ್ಸು ಇವತ್ತು ಕರೆಕ್ಟ್ ಟೈಮಿಗೆ ಹೋಗ್ತಾ ಇರೋದಕ್ಕೆ ಮೇಷ್ಟ್ರು, ಮರಿಯಣ್ಣನಿಂದ ಹಿಡ್ದು ಎಲ್ಲಾ ಖುಷಿ ಆಗಿದ್ರು.  ಹೋಗ್ತಾ ಇರೋ ಬಸ್ಸು ಇದ್ದಕ್ಕಿದ್ದಂಗೆ ಬ್ರೇಕು ಹಾಕ್ತು. ಬ್ರೇಕು ಹಾಕಿದ ರಭಸಕ್ಕೆ ಕಂಬಿ ಹಿಡಕೊಳ್ದೇ ಹರಟೆ ಹೊಡೀತಾ ನಿತ್ತಿದ್ದ ಕಾಲೇಜು ಹುಡ್ಗ ಹುಡ್ಗೀರೆಲ್ಲಾ  ಒಬ್ಬರ ಮೇಲೊಬ್ರು ಅವ್ನ ಮೇಲೇ ಬಿದ್ರು. ಕೆಲವರಿಗೆ ಒಳಗೊಳಗೇ ಖುಷಿ!! ಅವ್ರನ್ನ ನೋಡಿ ಕೂತಿದ್ದ ಕೆಲವರಿಗೆ ತಾವೂ ನಿಲ್ಲಬಾರದಿತ್ತ ಅನ್ನೋ ಸಂಕಟ!!! ಕೆಳಗೆ ಬಿದ್ದಿದ್ದ ಹುಡುಗ ಅವ ಏನ್ ಬಸಣ್ಣ, ಸಡನ್ನಾಗಿ ಬ್ರೇಕ್ ಹಾಕೋದು ಈಗ್ಲೂ ಕಮ್ಮಿ ಮಾಡಿಲ್ವಾ ನೀನು ಅಂದ. ಇವ್ನ ಮೇಲೆ ಬಿದ್ದ ಎಲ್ರಿಗೂ, ಬಸ್ಸಲ್ಲಿದ್ದ ಉಳ್ದವ್ರಿಗೂ ಅವ್ನಿಗೆ ಡ್ರೈವರ್ ಹೆಸ್ರು ಹೆಂಗೆ ಗೊತ್ತಾಯ್ತು ಅನ್ನೋ ಆಶ್ಚರ್ಯ. ತೋ , ಬೆಕ್ಕು ಅನ್ನೋಕೆ ಹೋಗಿದ್ದ ಡ್ರೈವರನೂ ಆಶ್ಚರ್ಯದಿಂದ ಒಂದು ಕ್ಷಣ ಸುಮ್ನಾದ.ಪುಣ್ಯ, ಇವ್ನಿಂದ ಒಂದು ಶಾಪ ಕಮ್ಮಿ ಆಯ್ತು ಅನ್ನೋ ಸಂತೋಷದಲ್ಲೇ ಡ್ರೈವರ್ ಕೇಳ್ದ. ಯಾರಪ್ಪಾ ನೀನು? ನಾನು, ಈ ಮೇಷ್ಟು ಎಲ್ಲಾ ಹೆಂಗೆ ಗೊತ್ತು ನಿಂಗೆ? ನಿನ್ನ ಮುಖ ನೋಡಿದ ನೆನ್ಪೇ ಇಲ್ವಲ ಅಂದ. ಎಲ್ಲಾ ಒಂದೇ ದಿನ ಕೇಳ್ತೀಯ ಬಸಣ್ಣ. ನಿಮ್ಮನೇಗೇ ಬರ್ತೀನಿ ತಗ ಒಂದಿನ. ನಿಮ್ಮಮ್ಮ ತಿಮ್ಮವ್ವ ಹೆಂಗವ್ಳೇ ಅಂದ ಅವ. ಡ್ರೈವರ್ ಒಂದು ಕ್ಷಣ ಇವ್ನ ಮುಖನೇ ಒಂತರಾ ನೋಡಿ, ಗಾಡಿ ಮುಂದೆ ಓಡ್ಸಿದ. ಡ್ರೈವರು ಯಾಕೆ ಹಾಗೆ ಮಾಡಿದ ಅಂತ ಇವ್ನಿಗೆ ಅರ್ಥ ಆಗ್ಲಿಲ್ಲ. ಬಸ್ಸಲ್ಲಿದ್ದೋರೆಲ್ಲಾ ಇವ್ನೇ ನೋಡ್ತಿದ್ರಿಂದ ಮತ್ತೇನಾದ್ರೂ ಮಾತಾಡಿದ್ರೆ ನೂರು ಪ್ರಶ್ನೆಗೆ ಉತ್ರ ಹೇಳ್ಬೇಕು ಅಂತ ಸುಮ್ನಾದ ಅವ.
    
ಅಂತೂ ನೂರ್ನಳ್ಳಿ ಬಂತು. ಕತ್ಲಾಗ್ತಾ ಬಂದಿತ್ತು. ಎಲ್ಲಾ ಮನೆ ಸೇರೋ ಗಡಿಬಿಡಿಲಿದ್ದಿದ್ರಿಂದ ಯಾರೂ ಹೊಸಬನ ಸುದ್ದಿಗೆ ಹೋಗಲಿಲ್ಲ. ನಮ್ಮೂರಿಗೆ ಬಂದಿದಾನಲ, ಹೆಂಗಿದ್ರೂ ಇವತ್ತು ಇದ್ದೇ ಇರ್ತಾನೆ ಯಾರ ಮನೆಲಾದ್ರೂ. ನಾಳೆ ನೋಡ್ಕಂಡ್ರಾಯ್ತು ಅಂತ ಸುಮ್ನಾದ್ರು. ಮೇಷ್ಟಿಗೆ ಮನ್ಸು ತಡೀದೆ ಕೇಳಿದ್ರು. ಯಾರ ಮನೇಗೆ ಹೋಗ್ತಿದೀಯಪ್ಪ ನೂರ್ನಳ್ಳೀಲಿ ಅಂತ. ನಿಮ್ಮನೇಗೆ ಮೇಷ್ಟ್ರೇ ಅಂತ ನಕ್ಕ ಅವ. ಮೇಷ್ಟ್ರಿಗೂ ನಗು ಬಂತು. ಇರೋ ಸ್ವಲ್ಪ ಹಲ್ಲು ತೋರುಸ್ತಾ ಅವ್ರೂ ನಕ್ರು. ಒಳ್ಳೇ ಹಾಸ್ಯ ಮಾಡ್ತೀಯ ನೀನು. ಯಾರ ಮನೆಗೆ ಅಂತ ನೀನೇನೂ ಹೇಳೋ ಹಂಗೆ ಕಾಣಲ್ಲ. ಇರ್ಲಿ ಬಿಡು. ನೀನು ಹೇಳ್ದಿದ್ರೂ ನಾಳೆ ಗೊತ್ತಾಗತ್ತೆ. ನಮ್ಮನೇಗೆ ಯಾವಾಗ ಬೇಕಿದ್ರೂ ಬರ್ಬೋದು ನೀನು. ಹೆಂಗಿದ್ರೂ ಮನೆ ಖಾಲಿ ಹೊಡಿತಿದೆ ಅಂತ ವಿಷಾದದ ನಗೆ ನಕ್ರು ಮೇಷ್ಟು. ಅವ್ನಿಗೂ ಏನು ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ. ಸರಿ, ನೀವು ಹೊರ್ಡಿ ಮೇಷ್ಟೆ, ನಾ ನಿಧಾನ ಬರ್ತೀನಿ ಅಂತ ಕಳ್ಸಿದ ಅವ್ರನ್ನ ಮುಂದೆ.

ಕೊನೇ ಬಸ್ಸೂ ಬಂದು ತಿರುಗಿಸ್ಕಂಡು ವಾಪಾಸ್ ಹೊರಟಿದ್ದನ್ನ ಕಂಡು ಜಾಫರ್ ಸಾಹೇಬ್ರು ಅಂಗ್ಡಿ ಬಾಗ್ಲು ಹಾಕಕ್ಕೆ ಹೊಂಟ್ರು. ಅಷ್ಟರಲ್ಲಿ ಅವ ಕೈಸೆ ಹೋ ಜಾಫರ್ ಭಾಯ್ ಅಂತ ಅಂಗಡಿ ಎದ್ರಿನ ಕಟ್ಟೆ ಮೇಲೆ ಬಂದು ಕೂತ . ತಮ್ಮ ಕಡೆ ಮಾತಾಡವ ಯಾರಪ ಇವ್ನು ಅಂತ ಜಾಫರ್ ಸಾಬ್ರಿಗೂ ಆಶ್ಚರ್ಯ ಆಗಿ ಅವ್ರು ಅಂಗ್ಡಿ ಬಾಗ್ಲು ಹಾಕೋದನ್ನ ಬಿಟ್ಟು ಇವ್ನ ಜೊತೆ ಮಾತಾಡ್ತಾ ಕೂತ್ರು.

ಸುಮಾರು ಹೊತ್ತಿನ ಮೇಲೆ ಜಾಫರ್ ಸಾಬ್ರ ಎಮ್ಮೇಟಿ ಸ್ಟಾರ್‍ಟ್ ಆಗಿ ಎತ್ಲಗೋ ಹೋದ ಸದ್ದು ಕೇಳಿತು...
*********

ಮಾರ್ನೇ ದಿನ ಬೆಳಗಾಯ್ತು.  ಶಾಲೆಗೆ ಹೋಗೋ ಮಕ್ಳದ್ದೆಲ್ಲಾ ಅದೇ ಸುದ್ದಿ. ಬಸ್ಟಾಂಡಿನ ಪಕ್ಕದಲ್ಲಿರೋ ಜಾಫರ್ ಸಾಬ್ರ ಅಂಗ್ಡಿ ಬೀಗ ಹಾಕಿದೆ ಅಂತ !! ಮೊದಲ್ನೇ ಬಸ್ಸಿಗೆ ಪೇಟೆಯಿಂದ ಊರಿಗೆ ಬಂದವ್ರು ಊರಲ್ಲೆಲ್ಲಾ ಆ ಸುದ್ದಿ ಹಬ್ಸಿದ್ರು.  ಇದ್ದಕ್ಕಿದ್ದಂಗೆ ಜಾಫರ್ ಸಾಬ್ರು ಅಂಗ್ಡಿಗೆ ಬೀಗ ಹಾಕಿ ಎತ್ಲಗೆ ಹೋದ್ರು ಅಂತ ಯಾರಿಗೂ ಗೊತಾಗ್ಲಿಲ್ಲ. ನಿನ್ನೆ ಕೂಡ ಯಾರತ್ರನೂ ಅವ್ರು ಎಲ್ಲಿಗೂ ಹೋಗ ಸುದ್ದಿ ಹೇಳಿರ್ಲಿಲ್ಲ. ಕೇಳೋನ ಅಂದ್ರೆ ಅವ್ರ ಸಂಬಂಧಿಕರು ಯಾರೂ ನೂರ್ನಳ್ಳೀಲಿ ಇರ್ಲಿಲ್ಲ. ಈಗ ಎಂತ ಕತೆ ಅಂತ ಎಲ್ಲ ತಲೆ ಕೆಡಸ್ಕಂಡ್ರು.. ಅಷ್ಟರಲ್ಲಿ ನಿನ್ನೆ ಸಂಜೆ ಬಸ್ಸಿಗೆ ಬಂದ ಹೊಸಬನ ಜೊತೆಗೆ ಜಾಫರ್ ಸಾಬ್ರು ಮಾತಾಡ್ತಾ ಕೂತಿದ್ರು ಅಂದ ಒಬ್ಬ. ಹೌದು ನಿನ್ನೆ ಪಟ್ಣದಿಂದ ಯಾರೋ ಒಬ್ಬ ಬಂದಿದ್ದ. ಅವ, ಯಾರು, ಯಾಕೆ ಬಂದ ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ನಮ್ಮೆಲ್ರಾ ಹೆಸ್ರು ಅವಂಗೆ ಗೊತ್ತು ಅಂದ ಇನ್ನೊಬ್ಬ. ಅವ ತ್ರಿಕಾಲ ಜ್ಞಾನಿನ ಎಂತಾ ಕತೆ ಹಂಗಾರೆ, ಮುಖ ನೋಡ್ತಿದ್ದಂಗೆ ಹೆಸ್ರು ಹೇಳ್ತಿದ್ದ ಅಂದ ಇನ್ನೊಬ್ಬ!!.ನಮ್ಮೂರು ಹಾಳ್ಮಾಡೋಕೆ ಯಾರ್ ಬಂದ್ರಪಾ, ಕಾಪಾಡೋ ಶಿವ್ನೆ ಅಂದ ಮತ್ತೊಬ್ಬ.. ಏ ಹೌದೌದು. ಅವ ಬಸ್ಸಲ್ಲಿ ನಮ್ಮೂರಿಗೆ ಬರ್ತಿರೋವಾಗ್ಲೇ ಯಾವತ್ತೂ ಬರ್ದಿರೋ ಬೆಕ್ಕು ಅಡ್ಡ ಬಂತು ಬಸ್ಸಿಗೆ. ಯಾವಾಗ್ಲೂ ಕಿಟಕಿಯಿಂದ ಹೊರಗೆ ನೋಡ್ತಾ ಏನೋ ಮಸಲತ್ತು ಮಾಡ್ತಾ ಇದ್ದ ಅಂದ ಮತ್ತೊಬ್ಬ..  ಏ ಸುಮ್ನಿರ್ರೊ, ತ್ರಿಕಾಲ ಜ್ಞಾನಿ ಅಂತೆ, ಮತ್ತೊಂದಂತೆ, ನಿನ್ನೇನೆ ಅವ ಯಾರು, ಎತ್ತ ಅಂತ ವಿಚಾರ್ಸಿದ್ರೆ ಆಗ್ತಿತ್ತು. ಅದು ಬಿಟ್ಟು ಈಗ ತಲೆ ಕೆಡಸ್ಕಂಡ್ರೆ ಏನು ಬಂತು? ಕೊಳ್ಳೆ ಹೊಡದ್ಮೇಲೆ ದೊಡ್ಡಿ ಬಾಗ್ಲು ಹಾಕ್ದಂಗೆ..ಅವ ಯಾವ ಭಯೋತ್ಪಾದಕನೋ ಯಾರಿಗೆ ಗೊತ್ತು ಅಂದ ಇನ್ನೊಬ್ಬ. ಮೊನ್ನೆ ಬೆಂಗ್ಳೂರಲ್ಲಿ ಬಾಂಬ್ ಹಾಕಿದವ ತಪ್ಪಿಸಿಕೊಂಡಿದಾನಂತೆ. ಅವ್ನೇನಾ ಇವ ಅಂದ ಮತ್ತೊಬ್ಬ !!.

 ಹೀಗೆ ಸುದ್ದಿಗಳು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡುತ್ತಾ... ಊರಿಗೆ ಬೆಂಗ್ಳೂರಿಂದ ಭಯೋತ್ಪಾದಕ ಬಂದಿದಾನಂತೆ. ಅವ ಊರಲ್ಲಿರೋ ಪ್ರತಿಯೊಬ್ರ ಮನೇಲಿ ಎಷ್ಟು ಅಡ್ಕೆ ಮರ ಇದೆ, ಎಷ್ಟು ಕೇಜಿ, ಎಷ್ಟು ಗ್ರಾಂ ಚಿನ್ನ ಇದೆ, ಹೆಣ್ಮಕ್ಳನ್ನ ಯಾಯಾ ಊರಿಗೆ ಕೊಟ್ಟಿದಾರೆ ಅನ್ನೋ ಲೆವೆಲ್ ಗೆ ಮಾಹಿತಿ ಕಲೆ ಹಾಕಿದಾನಂತೆ. .. ಬತ್ರಿದ್ದಂಗೆ ಅಂಗ್ಡಿ ಜಾಫರ್ ಸಾಬ್ರನ್ನ ಬಲಿ ತಗಂಡಿದಾನಂತೆ.. ಊರಿಗೆ ಊರ್ನೇ ಸರ್ವನಾಶ ಮಾಡೇ ಮುಂದೆ ಹೋಗದಂತೆ.ಅವ್ನು ಬಾಂಬು ತರೋಕೆ ನಿನ್ನೇನೆ ಜಾಫರ್ ಸಾಬ್ರ ಎಮ್ಮೇಟೀಲಿ ಎಲ್ಲಿಗೋ ಹೋಗಿದಾನಂತೆ  .ಎಂಬಿತ್ಯಾದಿ ಸುದ್ದಿಗಳು ಸಂಜೆವರ್ಗೆ ಊರಲ್ಲೆಲ್ಲಾ ಹಬ್ಬಿತ್ತು. , ಅದ್ಕೆ  ಸರಿಯಾಗಿ ಅವ್ನೂ ಊರಲ್ಲೆಲ್ಲಾ ಕಂಡಿರ್ಲಿಲ್ಲ.. ಆ ಗಾಳಿ ಸುದ್ದಿಗಳಿಂದ ಅವ್ನು ಯಾರು, ಊರಿಗೆ ಯಾಕೆ ಬಂದ, ಬಂದವ್ನು ರಾತ್ರೆ ಎಲ್ಲಿ ಹೋದ, ಈಗ ಎಲ್ಲಿದಾನೆ ಎನ್ನೋ ಕುತೂಹಲ,ಭಯ ಎಲ್ಲಾ ಕಡೆ ಆವರಿಸಿತ್ತು..

**************
(ಮುಂದುವರಿಯುತ್ತದೆ)
ಮುಂದಿನ ಭಾಗ: ನೂರ್ನಳ್ಳೀಲಿ ಅವ-೩

Wednesday, October 17, 2012

ನೂರ್ನಳ್ಳೀಲಿ ಅವ -1


ಮುಂಚೆ ಎಲ್ಲ ಬರಿ, ಬರಿ ಬರಿತಿದ್ದೋನು ಈಗ್ಯಾಕೋ ಬರ್ಯೋದೇ ಕಮ್ಮಿ ಆಗ್ಬಿಟ್ಟಿದೆ! ಓದೋದೂ ಕಮ್ಮಿ ಆಗ್ಬಿಟ್ಟಿದೆ!!.
ಕಾರಣ ? ಹುಡ್ಕಿದರೆ ನೂರು ಸಿಗ್ಬೋದೇನೋ.. ಆದರೆ ಬರೀದಿರೋಕೆ ನೂರು ಕಾರಣ ಹುಡ್ಕೋಬದ್ಲು ಬರೀಬೇಕು ಅನ್ನೋ ಒಂದೇ ಉತ್ಸಾಹ ಮೇಲಲ್ವೇ ? ಹಂಗಾಗೇ ಸುಮಾರು ದಿನದಿಂದ ಮನ್ಸಲ್ಲಿ ಅರ್ಧಬಂರ್ದ ಮೂಡಿದ್ದ ಕತೆಗೊಂದು ಆಕಾರ ಕೊಡೋ ಪ್ರಯತ್ನ ಇದು..

ಹೀಗೇ ಬಸ್ಸಲ್ಲಿ ಕಿಟಕಿ ಪಕ್ಕಕ್ಕೆ ಕೂತಿದ್ದ ಅವ. ಬೀಸ್ತಾ ಇದ್ದ ಗಾಳಿ ಅವನ ಗಡ್ಡ ನೇವರಿಸ್ತಾ ಇತ್ತು. ಆ ಗಡ್ಡ ಅವ್ನು ಸಂಪ್ರದಾಯಕ್ಕನುಸಾರ ಉಳಿಸಿದ್ದಾ ಅತ್ವಾ ಫ್ಯಾಷನ್ನಿಗಾಗಿ ಬೆಳೆಸಿದ್ದಾ ಅಲ್ಲಿದ್ದವ್ರಿಗೆ ಯಾರಿಗೂ ಗೊತ್ತಿರ್ಲಿಲ್ಲ. ಕುಂಕುಮ, ನಾಮ, ವಿಭೂತಿ, ಟೋಪಿ, ಕೊರಳಲ್ಲಿ ಕ್ರಾಸು, ತಾಯಿತ ಈ ತರದ್ಯಾವ್ದೂ ಕಾಣಿಸ್ದೇ ಇದ್ದಿದ್ರಿಂದ ಅವ್ನ್ಯಾರು ಅಂತ ಊಹಿಸೋದೂ ಸ್ವಲ್ಪ ಕಷ್ಟವೇ ಆಗಿತ್ತು. ಜುಬ್ಬಾ ಹಾಕಿದ್ರೂ ಯಾವ ಸೆಂಟೂ ಇರ್ಲಿಲ್ಲ. ಬುದ್ದಿಜೀವಿನಾ ಅನ್ನೋಕೆ ಜೋಳಿಗೆ ಇರ್ಲಿಲ್ಲ. ಮುಖ ಗಂಟುಹಾಕಿದಂಗೆ ಇತ್ತು. ಡೈವರ್ ಹಿಂದಿನ ಸೀಟಲ್ಲಿ ಕೂತಿದ್ದ ಅವ ಯಾವಾಗ್ಲೋ ಕಿಟಕಿ ಹೊರಗೆ ಏನೋ ಹುಡುಕೋ ತರ ನೋಡ್ತಿರ್ತಿದ್ದ.. ಹಂಗಾಗಿ ಬಸ್ಸಲ್ಲಿರೋ ಯಾರೂ ಅವ್ನ ಮಾತಾಡ್ಸೋ ಉಸಾಬರಿಗೆ ಹೋಗಿರ್ಲಿಲ್ಲ. ನೂರ್ನಳ್ಳಿ ಬಸ್ಸಲ್ಲಿ ದಿನಾ ನೂರಾರು ಜನ ಓಡಾಡ್ತಾರೆ. ಆದ್ರೂ ಈ ವಿಚಿತ್ರ ವೇಷದವ್ನ ಬಗ್ಗೆ ಕೆಲವ್ರಿಗೆ ಕುತೂಹಲ, ಅನುಮಾನ ಬಂದ್ರೂ ಕೇಳೋ ಧೈರ್ಯ ಮಾಡಿರ್ಲಿಲ್ಲ.

ಬಸ್ಸು ಕುಲುಕಾಡ್ತಾ ಸಾಗ್ತಾ ಇತ್ತು. ಸ್ವಲ್ಪ ಹುಷಾರಾಗಿ ಓಡ್ಸಪ್ಪ ಡ್ರೈವರಪ್ಪ ಅಂದ್ರು ಹಿರಿಯರೊಬ್ರು ಈ ಕುಲುಕಾಟ ತಡ್ಯಕಾಗ್ದೆ. ಏನ್ ಮಾಡ್ಲಿ ಅಜ್ಜ ಚಂದ್ರ, ಮಂಗಳ ಗ್ರಾದಲ್ಲೂ ಈ ಪಾಟಿ ಗುಂಡಿ ಇದಾವೋ ಇಲ್ಲೋ ಗೊತ್ತಿಲ್ಲ. ನನ್ ಕರ್ಮ . ಏನ್ ಮಾಡ್ಲಿ ಅಂತ ರಸ್ತೆ ಮಾಡಿದ ಕಾಂಟ್ರಾಕ್ಟರ್ಗೆ, ದುಡ್ಡು ನುಂಗಿದ ಮತ್ತೊಬ್ಬ ದೊಡ್ಮನ್ಷಂಗೆ ಶಾಪ ಹಾಕ್ತಿದ್ದ ಡ್ರೈವರಣ್ಣ. ಬಸ್ಸು ತೀರಾ ತುಂಬಿ ಹೋಗ್ದಿದ್ರೂ ಕೆಲವರು ನಿತ್ತಿದ್ರು. ಡ್ರೈವರಿಗೆ ಪ್ರಶ್ನೆ ಹಾಕಿದ ವಯಸ್ಸಾದವ್ರಿಗೆ ಪಾಪ ಕುಲುಕಾಡೋ ಬಸ್ಸಲ್ಲಿ ನಿಲ್ಲೋದು ಸ್ವಲ್ಪ ಕಷ್ಟ ಆಗ್ತಿತ್ತು. ಆದ್ರೆ ಜಾಗ ಬಿಟ್ಕೊಡಿ ಅಂತ ಕೇಳೋಕೆ ಸ್ವಲ್ಪ ಮುಜುಗರ ಆಯ್ತು. ಕೊನೆಗೆ ಅಲ್ಲೇ ಪಕ್ಕ ಕೂತಿದ್ದ ಈ ವಿಚಿತ್ರ ಆಸಾಮಿ ಮೇಲೆ ಅವ್ರ ದೃಷ್ಟಿ ಬಿತ್ತು.

ಎಲ್ಲಿಗೋಗ್ತಿದೀಯಪ್ಪ ಅಂದ್ರು. ಅವ್ನು ತಿರ್ಗೂ ನೋಡ್ಲಿಲ್ಲ. ಹೊರಗೆ ನೋಡ್ತಿದ್ನಲ ಅದ್ಕೆ ತಾವು ಕರ್ದಿದ್ದು ಅವ್ನಿಗೆ ತಿಳಿಲಿಲ್ವೋ ತಾವು ಕರೀತಿರೋ ಭಾಷೆ ಅವ್ನಿಗೆ ಅರ್ಥ ಆಗ್ತಿಲ್ವಾ ಅನ್ನೋ ಸಂಶಯ ಬಂತು ಹಿರೀರಿಗೆ. ಇವ್ನು ಕೆಪ್ನೇನಪ್ಪ ಅಂತ ಆ ಹೊಸ್ಬನ ಪಕ್ಕ ಕೂತಿದ್ದ ನೂರ್ನಳ್ಳಿಯ ಒಬ್ನಿಗೆ ಕೇಳಿದ್ರು..ಇವ್ನೂ ಆ ವಿಚಿತ್ರ ಆಸಾಮೀನ ಮಾತಾಡ್ಸೋ ಗೋಜಿಗೆ ಹೋಗಿರ್ಲಿಲ್ಲ. ವಯಸ್ಸಾದೋರ ಸಡನ್ನಾದ ಪ್ರಶ್ನೆಯಿಂದ ತನ್ನ ಸೀಟಿಗೆ ಎಲ್ಲಿ ಸಂಚಕಾರ ಬಂತಪ ಅಂದ್ಕೊಂಡ ಇವ.
(ಮುಂದುವರಿಯುತ್ತದೆ..)


ಮುಂದೆ..
೧)ದೂರದ ಬೆಂಗ್ಳೂರಿನಲ್ಲಿ ಯಾರೋ ಬಾಂಬ್ ಹಾಕಿದೋನು ತಪ್ಪಿಸ್ಕಂಡಿದಾನಂತೆ ಅವ್ನು ಇವ್ನೇನಾ ಅಂತ..
.. ನೂರ್ನಳ್ಳೀಲಿ ಅವ: ಭಾಗ -೨

Saturday, September 15, 2012

Engineer's Day ಸ್ಪೆಷಲ್


ಬೆಳಿಗ್ಗೆ ಎದ್ದಾಗ ಗೆಳೆಯ ಗೌತಮನ ಮೆಸೇಜು ನೋಡಿದಾಗಲೇ ನೆನ್ಪಾಗಿದ್ದು ಇವತ್ತು ಇಂಜಿನಿಯರರ ದಿನ ಅಂತ.
ಆಮೇಲೆ ಯಥಾಪ್ರಕಾರ ಫೇಸ್ಬುಕ್ಕಿಗೆ ಬಂದ್ರೆ ಎಲ್ಲಾ ಕಡೆ ವಿಶ್ವೇಶ್ವರಯ್ಯನವರ ಫೋಟೋಗಳೇ ತುಂಬಿದ್ದವು.
Full photos of a great engineer who made all engineers proud and recall colourfull memories on every sept 15.

ಒಂದೂವರೆ ವರ್ಷ.. ಕಾಲೇಜು ಮುಗಿಸಿ.. ಫೈನಲ್ ಸೆಮ್ಮಲ್ಲಿದ್ದಾಗ ಇಂಜಿನಿಯರ್ ದಿನ ಅಂತ ಭಾಗವಹಿಸಿದ ನೆನಪಿಗೆ ಈಗ ೨ ವರ್ಷ. ಹಳೆಯ ನೆನ್ಪುಗಳನ್ನೆಲ್ಲಾ ಮೆಲುಕು ಹಾಕ್ತಾ ಹೋದ್ರೆ ಏನೋ ಒಂಥರಾ ರೋಮಾಂಚನ. ಏನೋ ಕಾಂಪಿಟೇಷನ್ನು ನಡ್ಸಿ, ಭಾಷಣ ಕೇಳಿ ಈ ಸೆಮ್ಮಿಗೆ ಅರ್ಧ ಇಂಜಿನಿಯರ್ ಆದ್ವಿ, ಮುಕ್ಕಾಲು ಆದ್ವಿ. ಆಗೇ ಬಿಟ್ವಿ ಇಂಜಿನಿಯರ್ ಅಂತ ಆಚರಿಸ್ತಾ ಇರೋ ಆ ದಿನಗಳ್ಗೂ ಸ್ವಂತ ಇಂಜಿನಿಯರ್ ಆಗಿ ಕೆಲ್ಸ ಮಾಡ್ತಿರೋ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ ಅನ್ಸುತ್ತೆ.
ಇದ್ದಾಗ ಅದ್ರ ಬೆಲೆ ಗೊತ್ತಿರಲ್ಲ, ಇಲ್ದಿದ್ದಾಗ್ಲೇ ಅದ್ರ ಬೆಲೆ ಗೊತ್ತಾಗೋದು ಅಂತಾರೆ ಅಲ್ವಾ.. ಆ ಬೆಳ್ಕು ಈ ಟ್ಯೂಬ್ಲೈಟುಗಳಿಗೆ ಹೊಳೆಯೋದು ಹಬ್ಬಗಳಿಗೆ, ಇಂಥಾ ದಿನಗಳಿಗೆ ಶುಭಾಶಯ ಹೇಳಕ್ಕೆ ಅಂತ ಮೆಸೇಜ್ ಮಾಡ್ದಾಗ..

ತಿಂಗಳುಗಟ್ಲೆ ಆಗಿರತ್ತೆ. ನಾವೂ ಮೆಸೇಜು ಹಾಕಿರಲ್ಲ, ಅವ್ನೂ ಹಾಕಿರಲ್ಲ. ತೀರಾ ತುರುಸ್ಕಳಕೂ ಪುರುಸೊತ್ತಿಲ್ಲದಷ್ಟು ಬಿಜಿ ಅಂತೇನೂ ಅಲ್ಲ. ಆದ್ರೂ ತಮ್ಮದೇ ಲೋಕದಲ್ಲಿ ಒಂತರಾ ಬಿಸಿ!!. ಅವ್ನು ಹಾಕ್ಲಿ , ಪ್ರತೀ ಸಲ ನಾನ್ಯಾಕೆ ಹಾಕ್ಬೇಕು ಅಂತ ಇವ್ನು, ನಾನ್ಯಾಕೆ ಹಾಕ್ಲಿ ಇವ್ನು ಹೆಂಗಿದ್ರೂ ಹಾಕ್ತಾನಲ್ಲ ಅವಾಗ ರಿಪ್ಲೇ ಮಾಡಿದ್ರಾತು ಅಂತ ಅವ್ನು.. ಇದೇ Ego clash ಗಳಲ್ಲಿ ಎಷ್ಟೋ ಗೆಳೆತನಗಳು ಮುರಿದು ಬಿದ್ದಿರತ್ತೆ. ಇಂಜಿನಿಯರ್ಗಳೂ ಹೊರತಲ್ಲ ಬಿಡಿ ಇದಕ್ಕೆ.. ಅಲ್ಲ, ಅವಶ್ಯಕತೆ ಇದ್ದಾಗ ನೆನಪಾಗಿ, ನೆರವಾಗಿ ಇಲ್ದಿದ್ದಾಗ ನೀನ್ಯಾರೋ ನಾನ್ಯಾರೋ ಅಂತ ಇದ್ದು ಬಿಡೋ adhoc connection ಗಳಾ ಗೆಳೆತನಾ ? ಹೇ,ಹೆಂಗಿದ್ರೂ ಫೇಸ್ಬುಕ್ಕು , ಮೊಬೈಲ್ ನಂಬರ್ ಇದ್ಯಲ್ಲಾ ಕೊನೆವರ್ಗೂ ಕಾಂಟಾಕ್ಟಲ್ಲಿರೋಣ ಅಂತ ಬೀಡ್ಕೋಡಿಗೆ ಸಮಾರಂಭದಲ್ಲಿ ಹೇಳಿರೋ ಮಾತುಗಳು ಅಣಕಿಸಿದಂಗೆ ಆಗತ್ತೆ..ಜಗತ್ತಿರೋದೇ ಕೊಡು ಕೊಳ್ಳೋದ್ರ ಮೇಲೆ ಅಂತ ಯಾರೋ ತತ್ವಜ್ಞಾನಿ ಹೇಳಿದ ಮಾತು ನೆನ್ಪಾಗತ್ತೆ..  

ಹೊಸ ನೀರು ಬಂದಾಗ ಹೆಂಗೆ ಹಳೇ ನೀರು ತೊಳ್ಕಂಡು ಹೋಗತ್ತೋ ಹಂಗೆ, ಆಫೀಸಿನ colleague ಗಳೇ ಹೊಸ ಫ್ರೆಂಡ್ಸ್ ಆಗ್ತಾರೆ. ನೆನಪಾಗದ "ಸ್ವಾರ್ಥಿ"!! ( ಆ ಕಡೆಗೂ ಹಿಂಗೇ ಅನ್ಸಿರಬಹುದು) ಗೆಳೆಯರ ಸ್ಥಾನಾನ ಈ ಹೊಸ ಗೆಳೆಯರು ತುಂಬಿರ್ತಾರೆ. ನೀನು ನನ್ನ ಬೆಸ್ಟ್ ಫ್ರೆಂಡ್ ಕಣೋ, ನಿನ್ನ ಜಾಗ ಯಾರೂ ತುಂಬಕ್ಕೆ ಆಗಲ್ಲ ಅಂತ ಎಷ್ಟೇ ಹೇಳಿದ್ರೂ ದೂರದ ಜೊತೆಗೆ ನೆನ್ಪುಗಳು ಮಾಸೋಕೆ ಶುರುವಾದ್ರೆ, ಆ ಜಾಗಕ್ಕಲ್ದಿದ್ರೂ ಹೊಸ ಜಾಗ ಮಾಡಿ ಹೊಸಬ್ರು ಬಂದು ಕೂರ್ತಾರೆ.


ನಿಜ, ೪ ವರ್ಷ ಜೊತೆಗೆ ಓದಿದ ಮಾತ್ರಕ್ಕೆ ಜೀವಮಾನ ಇಡೀ ಜೊತೆಗೆ ಇರಕ್ಕೆ ಆಗಲ್ಲ!! ಇದು ಎಲ್ಲಾ ವರ್ಗಕ್ಕೂ ಅನ್ವಯಿಸತ್ತೆ. ನಿನ್ನ ಜೊತೆಗೆ ಒಂದನೇ ಕ್ಲಾಸು ಓದಿದ ಎಲ್ರೂ ನಿನ್ನ ಜೊತೆಗೇ ಇಂಜಿನಿಯರಿಂಗ್ ಗೆ ಬಂದಿದ್ರಾ? ಎಲ್ರೂ ಕಾಂಟಾಕ್ಟಲ್ಲಿ ಇದಾರಾ ಈಗ್ಲೂ ಅಂತ ಪ್ರಶ್ನೆ ಬರ್ತಿರುತ್ತೆ, ಇಂಜಿನಿಯರ್ ಗೆಳೆಯರ ಅಗಲುವಿಕೆ ನೆನ್ಪಾದಾಗಲ್ಲ.
ಎಲ್ಲಾ ೩ ಈಡೀಯಟ್ಸ ರಾಂಚೋ ತರ ಎಲ್ಲೋ ಮಾಯ ಆದ್ರೂ ಅಂತಲ್ಲ. ಅತ್ವಾ ನಾನೇ ರಾಂಚೋ ಅಂತ್ಲೂ ಅಲ್ಲ.
ಆದ್ರೂ ಹಳೆಯ ಮೆಸೇಜುಗಳು, ವಿಷ್ಗಳು , ಅಪ್ಯಾಯಮಾನತೆ ಅವ್ರಿಂದ ಕಡ್ಮೆ ಆಗಿರುತ್ತೆ. ಎಷ್ಟೋ ಜನರಿಂದ ಮೆಸೇಜುಗಳಿಗೆ ಪದೇ ಪದೇ who is this ರಿಪ್ಲೆ ಬರ್ತಿರುತ್ತೆ. ಯಾರೂ ಗೆಳೆಯರಿಲ್ಲದ, ಬೇಡದ ಸ್ವಾರ್ಥಿ, ಒಂಟಿ ಜೀವ ಅಂತಲ್ಲ. ಆದ್ರೂ ಅರಿವಿಗೇ ಬರದೇ ಮರೆಯಾಗ್ತಿರೋ ಗೆಳೆತನ ಒಂತರಾ ಬೇಜಾರು ಮಾಡತ್ತೆ.. ಪರಿವರ್ತನೆ ಜಗದ ನಿಯಮ !!!

ಯಾಕೆ ಮೈಮೇಲೆ ಬಿದ್ದು ಮಾತಾಡ್ಸೋದು, ಮೇಲ್ ಹಾಕೋದು, ಮೆಸೇಜು ಹಾಕೋದು.. ನಮ್ಮ ನೆನ್ಪಿರದೋರಿಗೆ ಮತ್ಯಾಕೆ ನೆನ್ಪು ಮಾಡಿ ಕಷ್ಟ ಕೊಡೋದು, ನಂ ಪಾಡಿಗೆ ಸುಮ್ನಿದ್ದು ಬಿಡೋಣ ಅಂತ ಅನೇಕ ಸಾರಿ ಅನುಸ್ತಾ ಇರತ್ತೆ.
.
.
.
ಆದ್ರೆ ಆ ಭಾವ ಶಾಶ್ವತ ಅಲ್ಲ. ಸುಮಾರು ವರ್ಷಗಟ್ಲೆ ಆದ್ಮೇಲೆ ಸಿಕ್ಕಿರ ಗೆಳೆಯರನ್ನ ಮಾತಾಡ್ಸಿದಾಗ , ಫೇಸ್ಬುಕ್ಕಲ್ಲಿ ಸಿಕ್ಕಾಗ್ಲೋ, ಸುಮ್ನೇ ಹಿಂಗೇ ಅಂತ ಹಾಕಿರೋ ಮೆಸೇಜಿಗೆ ರಿಪ್ಲೆ ಬಂದಾಗ ಆಗೋ ಖುಷಿ ಇದ್ಯಲ್ಲ.. ಅದು ಹಳೆಯ ಎಲ್ಲಾ ನೆನ್ಪುಗಳನ್ನೂ ತೊಳೆದು ಬಿಡತ್ತೆ. ಎಷ್ಟಕ್ಕೂ ಮನುಷ್ಯ ಸಂಘ ಜೀವಿ, ಭಾವ ಜೀವಿ ಅಲ್ವಾ.. ಯಾವ್ದೋ ಖುಷೀಲಿ ಇನ್ಯಾವ್ದೋ ಬೇಜಾರು ಮರೆಯಾಗತ್ತೆ. ಏನಪ್ಪಾ ನೀನು ಬಿಜಿ ಮನುಷ್ಯ. ಒಂದು ಮೆಸೇಜು ಹಾಕೋ ಅಷ್ಟು ಪುರುಸೊತ್ತು ಇಲ್ವಾ
ಹಾಳಾದವ್ನೆ ಅಂತ ಪರಸ್ಪರ ಬೈದಾಡಿಕೊಂಡಾಗ ಮತ್ತೆ ಮುರುಟಿರೋ ಸ್ನೇಹ ಚಿಗುರುತ್ತೆ.

 ಯಾರೋ ಹೊಸ ಗೆಳೆಯರು ಸಿಕ್ಕಾಗ ಮರೆತೋದ ಗೆಳೆಯರು ಮರೆತೊಗ್ತಾರೆ.. ಈ adhoc ಸಂಪರ್ಕಗಳ ಮಧ್ಯೆ ಕೆಲವು ಪರ್ಮನೆಂಟು ಅನ್ಸೋ ಪೆಪ್ಪರಮೆಂಟಿನಂತೆ ಸ್ನೇಹದ ಸವಿ ಹಂಚಿದ, ಹಂಚುವ ಗೆಳೆಯರೂ ಸಿಕ್ಕಿರ್ತಾರೆ.೫ನೇ ಕ್ಲಾಸಿಂದ ೩ ವರ್ಷ ಜೊತೆಗೆ ಓದಿದ್ರೂ ಇನ್ನೂ ಸಂಪರ್ಕದಲ್ಲಿರೋ ಹಲವು ಗೆಳೆಯರು, ಎಸ್ಸೆಸ್ಸೆಲ್ಸಿ ಗೆಳೆಯರು, ಪಿಯು ಮಿತ್ರರ ಜೊತೆಗೆ ಈ ಇಂಜಿನಿಯರ್ ಮಿತ್ರರೂ ಕಾಲದ ನೆನಪಿನ ಪುಟದಲ್ಲಿ ದಾಖಲಾಗಿದಾರೆ.

ಎಲ್ಲೋ ಒಮ್ಮೊಮ್ಮೆ ಬದಲಾವಣೆ ಗಾಳಿ ಬೀಸಿ ಪುಸ್ತಕದ  ಮುಂದಿನ ಪುಟ ಕಾಣೋ ಬದ್ಲು ಹಿಂದಿನದ್ದೆಲ್ಲಾ ಪಟ ಪಟ ಸದ್ದಿನೊಂದಿಗೆ ತಿರುಗೋಕೆ ಶುರು ಮಾಡಿ ಅಲ್ಲಲ್ಲಿ ನಿಲ್ಲೋ ಪುಟಗಳಿಂದ ಇಣುಕ್ತಾರೆ.. ಬದುಕನ್ನೋ ಪೇಪರ್ ದೋಣಿ ಸಾಗ್ತಾ ಇದೆ. ಮಧ್ಯ ಮಧ್ಯ ಯಾವ್ದೋ ಕಸ, ಕಡ್ಡಿ ಸಿಕ್ಕು ಪಯಣಕ್ಕೆ ಅಲ್ಪ ವಿರಾಮ. ಆ ವೇಳೆ ಅಲ್ಲಿ ಬಂದು ಸೇರೋ ಉಳಿದ ದೋಣಿಗಳೇ ಗೆಳೆಯರು . ಹಂಗಂತಾ ಆ ನಿಲುಗಡೆ ಶಾಶ್ವತ ಅಲ್ಲ. ಸ್ವಲ್ಪ ಕಾಲದ ನಂತರ ಬರೋ ಜೋರು ನೀರಲ್ಲಿ , ಬೀಸೋ ಗಾಳೀಲಿ ಕಡ್ಡಿ ಸರಿದಾಗ ಮತ್ತೆ ನಂನಮ್ಮ ಪಯಣ ನಮ್ಮ ಪಾಡಿಗೆ.. ಈ ಪಯಣದಲ್ಲಿ ಜೊತೆ ಸಿಕ್ಕ ಎಲ್ಲಾ ದೋಣಿಗಳಿಗೂ ಇಂದು ಒಂದು ಕೆಲ್ಸ ಅಂತ ಮಾಡೋಕೆ ಕಾರಣ ಆಗಿರೋ ಎಲ್ಲಾ ಗಾಳಿಗಳಿಗೂ , ನೋವು ಮರೆಸೊ ಸವಿನೆನಪಿನ ಮುಲಾಂಗಳಿಗೂ.. ನನ್ನ ಜೀವ , ಜೀವನ ರೂಪಿಸಿದ, ಕಟ್ಟಿದ, ಬೆಳೆಸುತ್ತಿರುವ ಎಲ್ಲಾ ಇಂಜಿನಿಯರ್ರುಗಳಿಗೂ ಮತ್ತೊಮ್ಮೆ ಸಲಾಂ
ಇಂತಿ,
ನಿಮ್ಮವ
ಪ್ರಶಸ್ತಿ

Thursday, September 13, 2012

ಹಿಂಗೊಂದು ಸಂ....ಶೋಧನೆ

ಉಪ್ಪಿಗಿಂತ ರುಚಿ ಬೇರೆ ಇಲ್ಲ
ಟೆಸ್ಟಿಂಗಿಲ್ಲದ ಜಗತ್ತೆ ಇಲ್ಲ...
ಅಂತ ಗುಂಡಣ್ಣ ಹಾಡ್ತಾ ಇದ್ದ . ಸೂಪರ್ ಮಚ್ಚಾ.. ಮಸಾಲೆಪುರಿಗೆ ಐಸ್ ಕ್ರೀಂ ಸೇರ್ಸಿದಂಗೈತೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಗೊಳ್ ಅಂತ ನಕ್ರು.  ಏ ಸುಮ್ನಿರ್ರಿ ,ಅಷ್ಟೇನೂ ಅದ್ವಾನವಾಗಿಲ್ಲ.  ಮಿಸ್ಟರ್ ರೌಂಡ್ ಅಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ಕಿರ್ಬೇಕು. ಅದ್ಕೇ ಖುಷಿಯಾಗಿ ಹಾಡ್ತಿರಬೇಕು ಅಲ್ವಾ ರೌಂಡ್ ಅಂತ ಸಮಾಧಾನ ಮಾಡಿದ್ಲು ಇಳಾದೇವಿ ಅಲಿಯಾಸ್ ಇಳಾ..

ಹೂಂ ಕಣ್ರೋ. ನನ್ನಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ತು. ಡೆವಲಪರ್ಸ್ ಏನೇ ಮಾಡಿದ್ರೂ ಅದ್ನ ಟೆಸ್ಟರ್ಸ್ ಸೈ
ಅನ್ನದೆ ಅದು ಜೈ ಅನ್ನಲ್ಲ. ಹಂಗಾಗಿ ಅದ್ಕೂ ಈಗೀಗ ಬೆಲೆ ಬರ್ತಿದ್ಯಂತೆ ಅಂದ ಗುಂಡ. ಹೌದಂಬ್ರು ,
ಸಾಪ್ಟವೇರ್ ಟೆಸ್ಟಿಂಗ್ ಜೊತೆ ಡಾಟಾ ಮೈನಿಂಗ್ ಅಂತೇನೂ ಮುಂದಿನ ಸೆಮ್ಮಲ್ಲಿ ಉಟಂತಲಾ ಅದ್ಕೂ ಭರ್ಜರಿ ಬೆಲಿ ಇತ್ತಂಬ್ರು ಅಂದ್ಲು ಸರಿತಾ ಅಲಿಯಾಸ್ ಸರಿ. ಹೌದಾ ಸರಿ ??, ನೀ ಹೇಳಿದ್ದೆಲ್ಲಾ ಸರಿ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ರು.

ನಂಗೆ ಬಳ್ಳಾರಿ ಮೈನಿಂಗ್ ಮಾತ್ರ ಗೊತ್ತುಂಟು. ಇದೆಂತಾ ಡಾಟಾ ಮೈನಿಂಗ್ ಮಾರ್ರೆ ಅಂದ ಮಂಗ್ಳೂರು ಮಂಜ.
ರಾಶಿ ಬಿದ್ದಿರೋ ಮಾಹಿತೀಲಿ ಬೇಕಾಗಿರೋ ಮಾಹಿತೀನ ಕೆದಕಿ ತೆಗ್ಯೋದು , Finding required data out of heap of data ಅಂದ್ಲು ಇಳಾ ತನ್ನತ್ರ ಇರೋ ಮಾಹಿತಿ ಮತ್ತೆ ಇಂಗ್ಲೀಷಿಗೆ ಜಂಭ ಪಡ್ತಾ. ಓ, ತಿಪ್ಪೇಲಿ ಕಸ ಆರಿಸ್ದಂಗಾ ಅಂದ ತಿಪ್ಪೇಶಿ. ಮತ್ತೆ ಗೊಳ್.. ಹೇ, ಹಂಗೆಲ್ಲಾ ಅವ್ಮಾನ ಮಾಡಬಾರ್ದು. ಅದ್ಕೆ ಎಷ್ಟು ಬೆಲೆ ಇದೆ ಗೊತ್ತಾ ಅಂದ ಗುಂಡ.
ಹೂಂ ಆದ್ರೆ ಅದ್ರಲ್ಲಿ ನಡೀತಿರೋ ಹೆಚ್ಚಿನ ಸಂಶೋಧನೆಗಳೆಲ್ಲಾ ಚೈನೀಸ್, ಜಪಾನೀಸ್ ಗಳದ್ದೇ ಅಲ್ವಾ, ನಮ್ದೇನಿದೆ ಅಂದ
ತಿಪ್ಪ. ಓ, ಈ ಮೈನಿಂಗ್ಲೂ ಚೀನಾ ಎತ್ತಿದ ಕೈ ಅಂದ ಮಂಜ.. ಮತ್ತೆ ಗೊಳ್

ಹೂಂ ತಿಪ್ಪ. ಆದ್ರೆ ಈ ಕ್ಷೇತ್ರದ ಸಂಶೋಧನೇಲಿ ನಮ್ಮ ಭಾರತದವ್ರೂ ಇದಾರೆ. ಇದು ಅಥವಾ ನಮ್ಮ ಮುಂದಿನ ಸೆಮ್ ನ ಪ್ರಾಜೆಕ್ಟ್ ಕ್ಷೇತ್ರ ಇಮೇಜ್ ಪ್ರೊಸೆಸಿಂಗ್ ನ ಸಂಶೋಧನೆಗಳಲ್ಲಿ ಚೀನಾ, ಜಪಾನ್ ವಿಜ್ಞಾನಿಗಳ್ನ ಬಿಟ್ರೆ ನಮ್ಮ ಭಾರತದವ್ರೆ ಹೆಚ್ಚಿನವ್ರು ಇರೋದು ಆಂದ ಗುಂಡ. ಆದ್ರೆ ಎಲ್ಲೋ ಅಲ್ಲೊಂದು , ಇಲ್ಲೊಂದು ಅಷ್ಟೆ. ನಮ್ಮ ಭಾರತದ ಶಿಕ್ಷಣ ಕ್ರಮಾನೆ ಬೇರೆ ಅವ್ರಿಂದ ಸಾಲ ತಗೊಂಡಿದ್ದಲ್ವಾ? ಅಮೇರಿಕಾದಲ್ಲೆಲ್ಲಾ ಅವ್ರ ಸ್ವಂತ ಶಿಕ್ಷಣ ಕ್ರಮ ಇದೆ. ಹಂಗಾಗಿ ಅಲ್ಲಿ ಹೆಚ್ಚಿನ ಸಂಶೋಧನೆ ಆಗತ್ತೆ. ನಮ್ಮಲ್ಲೇನಿದೆ. ಉನ್ನತ ಶಿಕ್ಷಣ ಕ್ರಮ ರಷ್ಯಾದ ಕಾಪಿ.. ಹಂಗಾಗಿ ಅವ್ರದ್ದನ್ನ ಉಪಯೋಗಿಸಿ ನಾವು ಏನಾರು ಮಾಡಿದ್ರೆ ಅದು ಸಂಶೋಧನೆ ಆಗತ್ತಾ ಅಂದ ತಿಪ್ಪೇಶಿ..

ವಿಷ್ಯ ಯಾಕೋ ಗಂಭೀರ ಆಗ್ತಿರೋ ಲಕ್ಷಣ ಕಾಣ್ತು. ಇಳಾ ಮಧ್ಯ ಬಂದ್ಲು. ಸಮಾಧಾನ ತಿಪ್ಪ ಅವ್ರೆ, ಸಮಾಧಾನ.
ಭಾರತದ್ದು ರಷ್ಯಾದ ಕಾಪಿ ಅಂದ್ರಲಾ, ಅದೆಂಗೆ ಅಂದ್ಲು. ಹೂಂ ಮತ್ತೆ, ಸ್ವಾತಂತ್ರ್ಯಾ ನಂತರ ಬಂದ ಪ್ರಧಾನಿ ನೆಹ್ರೂ ಅವ್ರ ಮೇಲೆ ಸೋವಿಯತ್ ಒಕ್ಕೂಟದ ಪ್ರಭಾವ ಬಾರಿ ಇತ್ತು ಅದ್ಕೇ, ನಮ್ಮ ಉನ್ನತ ಶಿಕ್ಷಣ ಕ್ರಮ ರಷ್ಯಾದ್ದು ಅಂತ ನಮ್ಮ ಸರ್ರೊಬ್ರು ಹೇಳ್ತಾ ಇದ್ರು. ಅದ್ನೇ ನಾನು ಹೇಳ್ದೆ. ತಪ್ಪೇನಿದೆ ಅಂದ ತಿಪ್ಪ. ಅದ್ಕೇನಿದ್ರೂ ದಾಖಲೆ ಉಂಟಾ ಮಾರ್ರೆ. ನಾನು ಕೇಳಿದಂಗೆ
ಬ್ರಿಟಿಷ್ ರಾಜ್ ವೇಳೆ ಮೆಖಾಲೆ ಶಿಕ್ಷಣ ಪದ್ದತೀನ ನಮ್ಮೇಲೆ ಹೇರಿದ್ರು ಅಂತ ಕೇಳ್ದೆ. ಆದ್ರೆ ನೀ ಹೇಳಿದ್ ವಿಷ್ಯ ನಂಗೆ ಗೊತ್ತಿಲ್ಲ ಮಾರ್ರೆ ಅಂದ ಮಂಜ.ಹೂಂ, ಹೌದು ಹೌದು.ನೀನು ನಮ್ಮ ಭಾರತೀಯರನ್ನ ಅಷ್ಟೆಲ್ಲಾ ಹೀಗಳಿಯೋ ಹಾಗಿಲ್ಲ ಅಂದ್ರು ಎಲ್ಲ.

ಸ್ವಲ್ಪ ಹೊತ್ತು ಎಲ್ಲಾ ಸುಮ್ನಿದ್ರು. ಕೊನೆಗೆ ಗುಂಡನೇ ತಿಪ್ಪನ್ನ ಸಮಾಧಾನ ಮಾಡ್ತ ಹೇಳ್ದ.
ಅಲ್ವೋ ತಿಪ್ಪ, ನಮ್ಮ ಶಿಕ್ಷಣ ಪದ್ದತೀನಲ್ಲಿ ಕೆಲವು ಅಂಶಗಳ್ನ ಬೇರೆ ಕಡೆ ಇಂದ ತಗೊಂಡಿದೀವಿ ಅಂತ್ಲೇ ಇಟ್ಕ.
ಆದ್ರೆ ಅದ್ನ ಉಪಯೋಗಿಸ್ಕಂಡು ನಾವು ಬೆಳೆದ್ರೆ, ಏನೋ ಸಂಶೋಧನೆ ಮಾಡಿದ್ರೆ ಅದು ನಮ್ದು ಆಗತ್ತೋ , ಶಿಕ್ಷಣ ಪದ್ದತೀದು ಆಗತ್ತೋ ಅಂದ. ಹೌದಲ್ವಾ ಮಾರ್ರೆ.ಕ್ರಿಕೆಟ್ ಬ್ಯಾಟ್ ಕಂಡ್ ಹಿಡ್ದಿದ್ದು ಬ್ರಿಟಿಷರು ಅಂದ ಮಾತ್ರಕ್ಕೆ ನಮ್ದೋನಿ ಹೆಲಿಕ್ಯಾಪ್ಟರ್ ಶಾಟ್ ಬ್ರಿಟಿಷರದ್ದು ಆಗತ್ತಾ ಅಂದ ಮಂಗ್ಳೂರು ಮಂಜ. ಎಲ್ಲಾ ಗೊಳ್ ಅಂದ್ರು..

ಪರಿಸ್ಥಿತಿ ಸ್ವಲ್ಪಾನೆ ತಿಳಿ ಆಗ್ತಾ ಬಂತು.ಈಗ ಇಂಟೆಲ್ ಪೆಂಟಿಯಮ್ ಕಂಡು ಹಿಡ್ದೋನು ಭಾರತದವ್ನು. ಹಾಟ್ ಮೇಲ್ ಸಬೀರ್ ಭಾಟಿಯಾಂದು..ಇಂತದ್ರಲ್ಲಿ ಭಾರತದವ್ರು ಸಂಶೋಧನೇಲಿ ಇಲ್ಲ ಅನ್ನೋದು ಸರೀನಾ ತಿಪ್ಪು ಅವ್ರೆ, ನೀವೇ ಹೇಳಿ ಅಂದ್ಲು ಇಳಾ. ಅಲ್ಲಾ, ಹಂಗೆ ನೋಡಿದ್ರೆ,  ಪ್ರಪಂಚದ ಮೊದಲ್ನೇ ವಿಶ್ವವಿದ್ಯಾಲಯ ನಳಂದಾ. ಭಾರತೀಯ ಎಣಿಕೆ ಕ್ರಮ ಇಲ್ದಿದ್ರೆ ಈಗಿನ ಕಂಪ್ಯೂಟರ್ರೇ ಇರ್ತಿರ್ಲಿಲ್ಲ... ಹಿಂಗೇ ಗುಂಡ ಹೇಳ್ತಿರ್ಬೇಕಾದ್ರೆ, ಅದ್ರೆ ಅದನ್ನೆಲ್ಲಾ ಈಗ ನಾವು ಉಪಯೋಗಿಸ್ತಾ ಇದೀವಾ? ಏನೇ ಸಂಶೋಧನೆ ಮಾಡೋದಿದ್ರೂ ಪಾಶ್ಚಾತ್ಯ ಶಿಕ್ಷಣದ ಬುನಾದಿ ಮೇಲೇ ಮಾಡ್ತೀವಿ ತಾನೆ ?
ಎ ಬಿ ಸಿ ಡಿ ಗೊತ್ತಿಲ್ದೇ ಸಂಶೋಧನೆ ಮಾಡಕ್ಕೆ ಆಗತ್ತಾ ಅಂದ ತಿಪ್ಪ.

ಹೂಂ. ತಿಪ್ಪ. ನಿಮ್ ಮಾತು ಸರಿ. ಆದ್ರೆ ಎಲ್ಲದನ್ನೂ ಶೂನ್ಯದಿಂದ ಸೃಷ್ಟಿ ಮಾಡೂಕೆ ಸಾಧ್ಯ ಉಂಟಾ?
ಮಂಜಣ್ಣ ಹೇಳ್ದಂಗೆ ಕ್ರಿಕೆಟ್ ಆಡ್ಬೇಕು ಅಂದ್ರೆ ನೀನೇ ಬ್ಯಾಟನ್ನೂ ತಯಾರು ಮಾಡಿ ಶಾಟ್ ಹೊಡಿ ಹೇಳೂದು ಸರ್ಯಾ?
ಯಾರೋ ಮಾಡಿದ್ದು ಬ್ಯಾಟ್ ತಗಂಡು ಇನ್ಯಾರೋ ಆಡುರ್ತಪ.ಹಂಗಂತ ಹೊಡೆತದ ಶ್ರೇಯ ಬ್ಯಾಟ್ ತಯಾರಿ ಮಾಡಿದವಂಗೆ ಕೊಡುಕೆ ಆತ್ತಾ ? ಅಂದ್ಲು ಸರಿ. ಎಲ್ಲಾ ಸರಿ ಸರಿ ಅಂದ್ರು. ಒಳ್ಳೇ ಭಾಷಣ ಕೇಳಿದಂಗಾಗಿ ಎಲ್ರೂ ಒಂದು ರೌಂಡ್ ಚಪ್ಪಾಳೇನೂ ಹೊಡುದ್ರು.ಅದು ನಿಲ್ತಿದ್ದಂಗೇ ಮತ್ತೆ ನಗು..

ಹೂಂ. ನೀವು ಹೇಳದು ಸರಿ ಸರಿ ಅಂದ ತಿಪ್ಪನೂ.ಮೊದಲ್ನೇ ಸೆಮ್ ಮೆಕಾನಿಕಲ್ ವಿಷ್ಯದಲ್ಲಿ ಶೀತಲೀಕರಣ ( refrigeration) ವಿಷಯನೂ ಇತ್ತಲ್ವಾ ಅಂದ ತಿಪ್ಪ. ಹೂಂ.. ಐಸ್ ಕ್ರೀಂ ನನ್ ಫೇವರಿಟ್ ಅಂದ್ಲು ಸರಿ. ಎಲ್ಲಾ ಗೊಳ್.. ಹೂಂ. ಈಗ್ಲೂ ಶೀತಲೀಕರಣ ಕ್ಷೇತ್ರದಲ್ಲಿನ ಸಿಂಹಪಾಲು ಇರೋದು ರಷ್ಯಾದ್ದೆ. ಹಂಗಾಗಿ ಆ ವಿಷ್ಯದ ಪಾಠ ಮಾಡ್ಬೇಕಿದ್ರೆ ನಮ್ಸಾರು ಉನ್ನತ ಶಿಕ್ಷಣ ಎಲ್ಲಾ ರಷ್ಯಾದ ಕಾಪಿ ಅಂದಿದ್ರು ಅಂತ ನೆನಪಿಸಿಕೊಂಡ ತಿಪ್ಪ. ಹೂಂ. ಸರಿ ಹೋಯ್ತು. ರೆಫ್ರಿಜರೇಟರ್ನ ೧೯೩೫ ರಲ್ಲಿ ಕಂಡು ಹಿಡ್ದಿದ್ದು ಅಮೇರಿಕಾದ ಪ್ರೆಡೆರಿಕ್ ಜೋನ್ಸ್ ಅಂತ ಓದಿದ ನೆನ್ಪುಂಟು ಅಂದ್ಲು ಸರಿ. ಹೂಂ, ಸರಿ ಹೇಳಿದ್ಮೇಲೆ ಸರಿ, ಸರಿ ಅಂದ್ಲು ಇಳಾ. ಮತ್ತೆ ಗೊಳ್.. ಅದೆ ವಿಷ್ಯದಲ್ಲಿ ಇತ್ತಲಪಾ ಉಗಿ ಇಂಜಿನ್. ಅದನ್ನು ಕಂಡು ಹಿಡ್ದಿದ್ದು ರಷ್ಯಾದಲ್ಲಾ ? ಕೈಗಾರಿಕಾ ಕ್ರಾಂತಿ ಶುರು ಆಗಿದ್ದು ಯುರೋಪಲ್ಲಿ. ಕೊನೆಗೆ ಹರಡಿದ್ದು ರಷ್ಯಾಕ್ಕೆ. ಅಂತಾದ್ರಲ್ಲಿ ರಷ್ಯಾದವ್ರ ಪ್ರಭಾವ ಉನ್ನತ ಶಿಕ್ಷಣದ ಮೇಲೆ ಹೆಂಗೆ ಅಂತ ಕೊನೆಗೂ ಅರ್ಥ ಆಗ್ಲಿಲ್ಲ ಅಂದ ತಿಪ್ಪ... ಎಲ್ಲರ ಮುಖ ಭಾವ ಹೂಂ ಅಂತಿತ್ತು. ಆ ಪುಣ್ಯಾತ್ಮ ಏನನ್ನ ಓದಿ ಹೇಳಿದ್ನೋ, ನಂಗೂ ಆ ಮೂಲ ಸಿಕ್ಕಿದ್ರೆ ಗ್ಯಾರಂಟಿ ದಾಖಲೆ ಸಮೇತ ಹೇಳ್ತೀನಿ. ಅಲ್ಲಿವರ್ಗೂ ಏನೂ ಹೇಳಕ್ಕಾಗಲ್ಲ, ಸಾರಿ ಅಂತ ಸಪ್ಪೆಯಾದ ತಿಪ್ಪ.

ಬುನಾದಿ(base) ಬೇಕು ಅನ್ನೋ ಮಾತನ್ನ ಒಪ್ತೀನಿ ತಿಪ್ಪ ಅವ್ರೆ. ನಮ್ಮ ಶಿಕ್ಷಣ ಕ್ರಮದ ಬುನಾದಿ ಬೇರೆದ್ರ ಮೇಲಿದೆ ಅಂದ್ರೆ ಅಥವಾ ಬೇರೆ ಕಡೆ ಚೆನ್ನಾಗಿರೋದನ್ನ ಎರವಲು ಪಡೆದಿದೆ ಅಂತನೇ ಇಟ್ಕಂಡ್ರೂ ಅದ್ರಲ್ಲಿ ತಪ್ಪೇನಿದೆ ಅಲ್ವಾ ? ನಮ್ಮ ಮನೇಲಿ ಸ್ವೀಟ್ ಮಾಡ್ದಾಗ ಪಕ್ಕದ ಮನೇಗೆ ಕೊಟ್ಟು, ಅವರ ಮನೇಲಿ ಸ್ವೀಟ್ ಮಾಡ್ದಾದ ನಾವು ಹೋಗಿ ತಿನ್ನಲ್ವಾ .. ಹಂಗೇ ಇದು ಅಂದ್ಲು ಇಳಾ.. ಎಲ್ಲಾ ಹೋ ಅಂತ ಚಪ್ಪಾಳೆ ತಟ್ಟಿದ್ರು ಈ ಸಲ ಇಳಾಗೆ. ಆದ್ರೆ ಹಂಗಂತ ಬುನಾದಿ ಒಂದೇ ಸಂಶೋಧನೆಗೆ ಕಾರಣ ಅಲ್ಲ ಅನ್ನೋ ಸರಿತಾ ಮಾತನ್ನೂ ನಾನೂ ಒಪ್ತೀನಿ ಎಂದ್ಲು ಇಳಾ.

ಹೂಂ, ಸರಿ. ನೀವೆಲ್ಲಾ ಹೇಳಿದ್ದು ಸರಿ. ನಂಗನಿಸಿದ್ದು ಹೇಳ್ದೆ. ನಿಮ್ಗೇನಾದ್ರೂ ಬೇಜಾರಾದ್ರೆ ಸೋರಿ. ನಂ ಭಾರತದ ಬಗ್ಗೆ ನಂಗೂ ಹೆಮ್ಮೇನೆ. ಆದ್ರೆ ಅವತ್ತು ಆ ಸರ್ ಹೇಳಿದ್ದ ಮಾತು ಇನ್ನೂ ತಲೇಲಿ ಕೊರಿತಾ ಇತ್ತು. ಅದ್ಕೇ ಹೇಳ್ದೆ ಅಂದ ತಿಪ್ಪ. ಹೇ, ಸೋರಿ ಎಲ್ಲಾ ಬ್ಯಾಡ.. ಪ್ರೆಂಡ್ಸ್ ಮಧ್ಯ ಅದೆಲ್ಲಾ ಯಾಕೆ..ಅಂದ್ರು ಎಲ್ಲಾ. . ಹೂಂ ಸರಿ, ಕಾಲೇಜ್ ಬಸ್ಸಿಗೆ ಲೇಟಾಗ್ತಾ ಉಂಟು, ಹೊರಡುವ ಹಂಗಾದ್ರೆ ಅಂದ್ಲು ಸರಿ.

ಹೇ, ಮಾರ್ರೆ ಈಗ್ಲೇ ಹೊಂಟ್ರೆ ಹೆಂಗೆ ? ನಮ್ಮ ಗುಂಡು ಪಾರ್ಟಿ ಮರರ್ತಾ ಅಂದಾ ? ಸರಿ, ಇಳಾ ಮುಖ ಮುಖ ನೋಡ್ಕಂಡ್ರು. ಲೇ, ಮಂಜಾ, ಗುಂಡು ಪಾರ್ಟಿ ಅಲ್ಲೋ. ಗುಂಡನ ಅಣ್ಣಂಗೆ ಕೆಲ್ಸ ಸಿಕ್ಕಿರೋ ಖುಷೀಲಿ, ಗುಂಡ ಕೊಡುಸ್ತಿರೋ ಪಾರ್ಟಿ ಅನ್ನೋ ಅಂದ.. ಎಲ್ಲಾ ಮತ್ತೆ ನಗುತ್ತಾ ಎದ್ದು , ಸರಿ ಸರಿ ಅಂತ ಗುಂಡನ ಪಾರ್ಟಿಗೆ ಹೊರಟ್ರು.


References:
1)http://en.wikipedia.org/wiki/Education_in_India
2)http://mechanical-engineering-industry.europages.co.uk/business-directory-europe/did-05/hc-05840/cc-RUS/Russia/pg-4/Refrigeration-plants-and-equipment-commercial-and-industrial.html
3)http://en.wikipedia.org/wiki/Industrial_Revolution
4)https://www.google.co.in/#hl=en&sclient=psy-ab&q=who%20invented%20refrigerated%20trucks&oq=&gs_l=&pbx=1&bav=on.2,or.r_gc.r_pw.r_cp.r_qf.&fp=deee9bcb02606245&biw=1366&bih=640&pf=p&pdl=300



Tuesday, September 11, 2012

ಯಾವ ನೋವ ಹಿಂದೆ

ಯಾವ ನೋವ ಹಿಂದ್ಯಾವ ಗಾಯವೋ
ತೆರೆಯ ಹಿಂದೆ ಚಿಂತೆ
ಬೆಸೆದ ನಂಟುಗಳ ಬಿರುಕಿನಂಟನು
ಮರೆತ ನೆನಪ ಸಂತೆ |೧|

ದೂರ, ದೂರ ಹಾರೋ ಹಕ್ಕಿ ನಾ
ಹಿಂದೆ ನಿನ್ನೆ ಸೋಲು
ಬಾರಿ, ಬಾರಿ ಕೈಸೋತು ಕುಸಿಯಲು
ಕಾಲ ಗಾಳಿ ಪಾಲು |೨|


ಬರ ಕಂಡಿದೆ ನಗುವಿಂದಿಗೆ
ಬರಿದು ಸ್ಪೂರ್ತಿ ಭಾವವು
ನೀನಿಲ್ಲದೆ ಒಣಗಿ ದೇಹ
ನೀರಿಲ್ಲದ ಬಾವಿಯು|೩|

ರೆಕ್ಕೆ ಹರಿದರೂ, ಪಕ್ಕೆ ಮುರಿದರೂ
ನಿಲ್ಲದಿಂದು ಪಯಣ
ನೆನಪ ಬಿಸಿಗೆ ಮನ ಮೇಣ ಕರಗಿ
ನವ ರೂಪ ತಂತು ಕಾಣ.
ದೂರ ದೂರ ಸಾಗೋ ಹಕ್ಕಿ ನಾ
ಮರೆತು ಹಳೆಯ ನೆನಪು
ಬಾನಿನಲ್ಲಿ ಮೈ ಮರೆತು ನಲಿವೆ ನಾ
ಜೀವ ಸಾಥಿ ದೊರೆತು|೪|

Saturday, August 18, 2012

How much RAM for my PC


You  want to buy a  new PC/Lappy OR you already have a PC/Laptop sometimes you may feel like your system is slow and you want to increase its speed. In these cases some people blindly go for any company which they feel is the best. Some think about what configuration to take and then take the company/product which suits their requirement. If you are in the second category then here are few simple calculations which may help you to decide properly. If you are in the first category, then also you can find it helpful to decide which is best fit for you in that "Best" company :-) :-)

1)How many Bit Operating System(32 or 64)
It is the very important question to ask first.
Lets consider the 32 bit operating system(OS).

It can address upto 2^32 bits(^ means power) . i.e 4GB.
And addressing will take some space. So around 3.5GB memory will be usable in a system with 32 bit operating system.

If u didn't get how it is, here is the calculation..
2^10=1024.
2^32=2^10* 2^10* 2^10* 2^2=1024*1024*1024*4.
 we have 1024bit=1Kilo Byte(KB)
1024 kb=1Mega Byte(MB)
1024Mb=1Giga Byte(GB)
so it is 4GB.

For 62 bit OS:
It can support very huge amount of memory. For the time being we  can think it supports whatever we wish to put :-) :-)

Calculation:
2^64= 2^32 * 2^32. i.e u can think as 4GB * 4GB=16* 2^ 18 RAM  ideally !!!

So next time when you hear about any PC(generally workstations and other high end systems) with 200 GB memory or so.. think that OS as 64 bit OS only :-)

2. Why  more RAM ?
RAM  decides how many applications you can open simultaneously. More RAM you have you can open more applications. 

But RAM doesn't decide how quickly your PC opens(only open not finish running) an application. 
mean to say you already have 4GB RAM in your 32 bit system. adding 4 more GB of RAM won't make your system faster. It simply enables you to open some more applications in parallel.

Speed of opening an application and speed of calculations, processing  is decided by the CPU.More the CPU speed, more quickly you can open an application..

But reverse is true. 
i.e if you have shortage of RAM say only 512 MB of RAM in your system, then inspite of having higher speed CPU your system may run slow when you run memory intensive applications.(Applications which require more memory like  Britanica Encyclopedia, Games etc). 
now lets see how much RAM is ideal for your CPU

3. Processor Speed
a) Single Core Processor
Here calculation is simple. If processor speed is 2.6Ghz it can take upto 2 GB of RAM (RAM with 1.3Ghz RPM). 
1.33 * 2= 2.6 is nearly same as 2.6 Ghz of Processor

So if you have 3.2 Ghz Processor(say AMD Turion) you can add upto 2.5 GB RAM

b)Dual Core Processor
Here processor speed is doubled. 
Say you have dual core processor with 2.3 Ghz. As it has 2 cores(2 CPUs) its processing speed is doubled. i.e its processing speed is 4.6Ghz now. 
So you can add around 3.5GB of RAM . 
(RAM with 1.33Ghz RPM. 1.33*3.5 = 4.655)

c)Quad Core or even more
Here processing speed will be speed of one core multiplied by number of cores. 
Here point to note is maximum RAM used is 4GB if OS is 32 bit(as explained Question 1). 
If it is 64 bit OS means no such limits

d)Some Exceptions : Dependency on number of threads of CPU
Earlier it was one thread per CPU. now there are processor with 2 threads per CPU. 
If it is more than one thread per CPU, then that CPU processing speed is doubled. 


4.Whether you have Graphic Card
 If you want to play certain games, then you need to have atleast 1 GB of Graphic card. It acts as a co- processor. Mean to say it acts as a processor dedicated for displaying graphics. So it also takes up RAM. If you have 1GB graphic card of say 1.33Ghz then it will take up around 1GB RAM having 1.33 Ghz speed. So If you have 2GB Graphic card your system can take 2GB more RAM apart from what your processor takes.. 

There are some other concepts like amount of Cache and others. But lets don't complicate ourselves too much for one session and can take it some other time :-) :-)

Getting confused too much ? 
Don't worry . Lets do some simple calculations so that we can revise whatever we discussed so far and familiarize ourselves with these calculations. .

What is the RAM needed in below cases
(Do the calculation and then see the answer at the bottom to verify)
Case 1) Single core Processor with 2.4 Ghz speed. No Graphic card, 32 Bit OS
Case 2) Dual Core processor with 2.33 Ghz speed. 512 MB built in graphic card with 1.33Ghz, 64 bit OS
Case 3) Dual Core Processor with 2.33 Ghz Speed. 2GB external Graphic card with 1.33 Ghz, 32 bit OS
Case 4) Quad Core Processor with 2.4 Ghz speed. 2 threads per core. 2 GB external Graphic card with 1.33 Ghz, 64 bit OS
Case 5)Dual core Processor with 2.4Ghz. 1 GB Graphic card(with 1.33 GHz) , 32 Bit OS. Have put 4GB RAM with 1.33 RPM.  How much RAM is usable (usable to OS)

Note: Graphic card calculation hold the same irrespective of whether they are internal(embedded) or external ..

Answers: 
1) upto 2 GB of RAM 
2) upto 4 GB.  (3.5 without 512 MB Graphic card)
3) upto 5.5 GB  ( as 2 GB will be taken by Graphics card. Remaining 3.5 GB for 4.66Ghz processing speed. As 1.33 * 3.5 = 4.65)
4)Quad core. So 2.4* 4= 9.6. But 2 threads per CPU. so It is 19.2 Ghz.+ 2.6 by graphic card(2*1.33)
so in Total 21.8 around 22.
So we can add upto 16.5 GB RAM !!! (This is 64 bit OS not 32 Bit OS )
5) Around 2.7 GB usable !!
1GB RAM is taken by graphics card.
We saw in question 1, in 32 bit OS, maximum of 3.5 GB is usable(rest taken by addressing).
So around 2.7 GB will be usable by OS.

Ok guys, with this we are ending this session.
Hope this info and calculations are Useful J J

Friday, August 10, 2012

ಕವಿತೆ

ಬಯಸಿದಾಗ ಬಳಿ ಬಾರದಂತ
ಪ್ರಿಯೆ, ಹಸಿವಿನಂತೆ ಕವಿತೆ
ಬಳಿಗೆ ಬರಲು ಜಗವೆಲ್ಲ ಮರೆತು
ಸವಿಯಲ್ಲೆ ನನ್ನ ಮರೆತೆ


ತಂಪ ಮಳೆಯೀವ ಭಾವ ಮೋಡ
ಮರೆಯಾಗೋ ಓಟ ಹೂಡಿ
ಮುನಿಸು ದಹಿಸಿದ ಮೂಕ ಮನಸು
ಒಣ ಕಾಲ ಮುಗಿಲ ನೋಡಿ

ಕಾಲದಂತೆಯೇ ಎಲ್ಲ ಹಸಿವು
ಮರೆಸೋ ಹಸಿವು ಕವಿತೆ
ಜಾರೋ ಭಾವ ಮೋಡಿ ಮಾಡಿ
ಕರೆತಾರೋ ಗಾಡಿ ಕವಿತೆ

ನೋವ ತಮದಿ ಮನವೆಲ್ಲೊ ಕಳೆದಿರೆ
ನಲಿವ ಬೆಳಕ ಹಣತೆ
ಬಾಳ ನೋವಿಗೆ ಬಿರಿಯೂ ತನುವಿಗೆ
ತಂಪ ನೀರು ಕವಿತೆ
ಮನ ತಣಿವ ಚೆಲುವೆ ಕವಿತೆ

Thursday, July 19, 2012

ಒಂಟಿ ಭಾವ

ಒಂಟಿ ಭಾವ ಜೊತೆಯಾಗಿ ಅಂಟಿ
-ಸಲು ಮುರಿದ ಭಾಳ ಬಂಡಿ
ನಂಬಿದಾ ಮೋಡ ಒಲವ ಬದಲಿತ್ತ
ದ್ರೋಹ ಸಿಡಿಲ ನುಂಗಿ |೧

ಹೃದಯ ಹಿಂಡಿರಲು ಕಾಲ ಗಾಣ
ನಂಬಿಕೆಯು ಕರಗಿ ಎಣ್ಣೆ
ಒಂಟಿ ಭಾವ ಅದ ಹೀರೋ ಬತ್ತಿ
ಬೆಳಕಾಯ್ತು ಸುಟ್ಟು ತನ್ನೆ |೨

ಬೇರಾದ ಜೀವಗಳು ಮರೆಸಿ ಮಾತು
ನರಳುತಿದೆ ಜೀವ ಕಾಂಡ
ಎಲೆಯಾಗಿ ನಿಂತು ಹಲ ಜೀವ ತಂತು

ನೆಲೆಯಾಯ್ತು ಸ್ವರ್ಣ ಭಾವ|೩

Monday, June 25, 2012

ಅಕ್ಷರವಾಗಿಹ ಭಾವಗಳಲ್ಲಿ
ನೋವುಗಳೆಲ್ಲಾ ನಕ್ಕಿಹುದು
ತನ್ನನೆ ನುಂಗಿದ ನಿನ್ನೆಯ ನಡುವೆ
ನಾಳೆ ಆಸೆ ತಲೆ ಎತ್ತಿಹುದು |೧

ಬೊಗಸೆಗೆ ಸಿಗದ ನೆನಪಿನ ಬಿಂದು
ಸಾಗರವಾಗಿ ಉಕ್ಕಿಹುದು
ತನ್ನನೆ ತೇದ ತಂದೆಯ ನೆನಪು
ಕಂಗಳಂಗಳದಿ ಬಿಕ್ಕಿಹುದು |೨

ಮರೆತಿಹ ನಿನ್ನೆಯ ಮರೆಯದ ಕನಸು
ಚುಚ್ಚಿ ಕೊಲ್ಲುವುದು ಅನವರತ
ಕಾದಿಹೆ ನೀನು ಕಷ್ಟದ ವರ್ಷವ
ತಾಳ್ಮೆಯ ಶರಧಿಯ ಬತ್ತಿಸುತ |೩

ಕಾಲದ ಬಿಸಿಲಿಗೆ ಸುಟ್ಟಿಹ ಗಾಯ
ನಿನ್ನ ಅಗಲುವಿಕೆ ಮರೆಯುವುದೆ ?
ಮಾತ ಹಿಂದಿನ ಅವಿತಿಹ ಚಾಟಿ
ಏಟ ಕಾರಣವ ಅರಿತಿರದೆ
ಮರಳೋ ನೆನಪಲೇ, ಅದು ಯಾಕೋ ಯಾತನೆ
ವೇದನೆಯಲ್ಲದ ಭಾವನೆಯು
ಇದು ಮಾಮರ ಮರೆಯದ ಮಾಮಿಡಿಯು
ಮರೆಯಲಾರದಿದ ಮರೆಸುವ ಮುನ್ನ
ಮೆರೆಯೋ ಸಾಧನೆ ಯಾಚನೆಯು

Wednesday, June 13, 2012

ಮಿಂಚ ಸ್ನೇಹ

ಹೊಸ ನೀರು ಬಂದಾಗ ಹಳೇ ನೀರು ಕೊಚ್ಕೊಂಡು ಹೋಗೋ ತರ ಹೊಸ ಗೆಳೆಯರು ಬಂದಾಗ ಹಳಬ್ರು ಮರ್ತೋಗೋದು ತುಂಬಾ ಕಾಮನ್ನು ಅನ್ನೋ ಹಾಗೆ ಆಗ್ತಾ ಇದೆಯಲ್ಲಾ ಈಗ. ಹೈಟೆಕ್ ಜಮಾನಾದಲ್ಲಿ ತುಂಡಾಗೋ ಹೈ ಸ್ಪೀಡ್ ಸಂಬಂಧಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಬೆಸುಗೆಗಳು ಕಾಲದೊಂದಿಗೆ ಸವೆಯದೇ ಹಾಗೇ ಉಳ್ಕಂಡು ತಾವೆಷ್ಟು ಗಟ್ಟಿ ಅನ್ನೋದ್ನ ಸಾರ್ತಾ ಇರುತ್ತೆ. ಅದೇ ತರ ಕೆಲ ನೆನಪುಗಳೂ ಸಹ. ಎಷ್ಟೋ ಸಲ ಬಸ್ಸಲ್ಲಿ, ರೈಲಲ್ಲಿ ಹೋಗಿರ್ತೀವಿ.ಈ ತರ ಒಂದೂವರೆ ಘಂಟೆ ಇಂದ , ಒಂದು ದಿನದ ಪ್ರಯಾಣದಲ್ಲಿ ಜೊತೆಯಾಗೋ ಜನರು ನಿರೀಕ್ಷಿಸದ ಸಮಯದಲ್ಲಿ ಮೂಡೋ ಮಿಂಚಂತೆ ಮಿಂಚಿ ನಮಗೇ ಅರಿವಿಲ್ಲದಂತೆ ಆ ಪ್ರಯಾಣದ ಅವಧಿಗೆ ನಮ್ಮ ಸ್ನೇಹಿತರಾಗಿ ಹಾಗೇ ಮರೆಯಾಗಿ ಬಿಡ್ತಾರೆ.ಆದರೆ ಅವರಲ್ಲಿ ಎಷ್ಟೋ ಜನರ ಮಾತುಗಳು, ನೆನಪುಗಳು ಅವರ ಹೆಸರು ಮರ್ತೋದ್ರೂ ನೆನ್ಪಲ್ಲಿ ಉಳ್ದು ಬಿಡುತ್ತೆ.ಅಂಥದೇ ಕೆಲ ನೆನಪುಗಳ ಸುತ್ತ ಈ ಬರಹ

ನಮ್ಮೂರು ಸಾಗರದಿಂದ ಶಿವಮೊಗ್ಗಕ್ಕೆ ಒಂದೂವರೆ ಘಂಟೆ ದೂರ .ಈಗಿನ ಬೆಂಗಳೂರಿನ ಟ್ರಾಫಿಕ್ಕಿಗೆ ಹೋಲಿಸಿದ್ರೆ ಅದು ತೀರಾ ಹೆಚ್ಚು ಹೊತ್ತಾಗ್ದೇ ಇದ್ರೂ ಆಗ ನಮಗದು ಸ್ವಲ್ಪ ಜಾಸ್ತೀನೆ ಹೊತ್ತು.ಆಗ ಹೈಸ್ಕೂಲು ದಿನಗಳು. ಬಸ್ಸಲ್ಲಿ ಮೈಮರೆತು ನಿದ್ರೆ ಮಾಡಿದ್ರೆ ಪಕ್ಕಕ್ಕಿರೋರು ದುಡ್ಡು, ಬ್ಯಾಗು ಕದ್ಕೊಂಡು ಹೋಗ್ತಾರೆ ಅಂತ ಲೆಕ್ಕ ಇಲ್ಲದ, ರೆಕ್ಕೆ ಪುಕ್ಕ ಇಲ್ಲದ ಗಾಳಿ ಸುದ್ದಿ ಕಿವಿಗೆ ಬಿದ್ದಿದ್ರ ಪರಿಣಾಮನೋ ಏನೋ ನಾವೆಂತೂ ಬಸ್ಸಲ್ಲಿ ಒಬ್ನೇ ಹೋಗ್ತಾ ಪಕ್ಕಕ್ಕೆ ಬಂದು ಕೂರೋ ಅವ್ರುನ್ನ ಮೊದಲು ಗಮನಿಸ್ತಿದ್ದೆ. ಸ್ವಲ್ಪ ದೊಡ್ಡೋರು ಅಂದ್ರೆ ನೀವೆಲ್ಲಿಗೆ ಹೋಗೋವ್ರು ಅಣ್ಣಾ, ಶಿವಮೊಗ್ಗಕ್ಕಾ ಅಂತನೋ ಏನೋ ಮಾತಿಗೆಳ್ಯೋದು.ಕೆಲೋ ಸಲ ಅವ್ರೇ ನೀವೆಲ್ಲಿಗೆ ಹೋಗೋರು ಅಂತ ಮಾತಿಗೆ ಶುರು ಮಾಡೋರು. ತೀರಾ ಬಿಗುಮಾನ ಇಲ್ದೇ ಮಾತಾಡೋರಾದ್ರೆ ಇಬ್ರಿಗೂ ಒಳ್ಳೇ ಟೈಂ ಪಾಸ್

ಒಮ್ಮೆ ಹೀಗೇ ಹೋಗ್ತಿರ್ಬೇಕಾದ್ರೆ ಸಾಗರದ ಎಲ್.ಬಿ ಕಾಲೇಜಲ್ಲಿ ಬಿ.ಎ ಓದ್ತಿದ್ದವ್ರೊಬ್ರು ಸಿಕ್ಕಿದ್ರು. ಅವತ್ತು ಹಿಂಗೇ ಮಾತಾಡ್ತಾ ಅವ್ರು ರೋಮಿಯೋ ಜೂಲಿಯಟ್ ಬಗ್ಗೆ, ಲೈಲಾ ಮಜ್ನು ಬಗ್ಗೆ, ಅವ್ರು ಓದಿದ ಶೇಕ್ಸಪಿಯರಿನ ಟ್ರಾಜಿಡಿ ಮತ್ತು ಕಾಮಿಡಿ ನಾಟಕಗಳ ಬಗ್ಗೆ ಮಾತಾಡಿದ್ರು. ಶೇಕ್ಸಪಿಯರಂದ್ರೆ ಬರೀ ಟ್ರಾಜಿಡಿ ಅಂತ ತಿಳಿದಿದ್ದ ನನಗೆ ಅವರ ಇತರ ಕೃತಿಗಳ ಬಗ್ಗೆ ತಿಳಿದಿದ್ದು ಅವಾಗ್ಲೇ. ಮೆಕಬೆತ್,ಕಿಂಗ್ ಲಿಯರ್, ಒಥೆಲೋ,ಹ್ಯಾಮ್ಲೆಟ್ ಕತೆಗಳ್ನ ಅಂದು ಅವರ ಬಾಯಿಂದ ಕೇಳಿದ್ದು ಇನ್ನೂ ನೆನ್ಪಿದೆ !! ಆಗೆಲ್ಲಾ ಈಗಿನ ತರ ಮೊಬೈಲುಗಳಿರ್ಲಿಲ್ಲ. ಆದರು ಸಂಪರ್ಕದಲ್ಲಿರೋಣ ಅಂತ ಹೇಳಿದ್ರು. ಹೂಂ ಸರಿ ಅಂದಿದ್ದೆ. ಆಮೇಲೆ ಅವ್ರು ಎಲ್ಲೂ ಸಿಗ್ಲಿಲ್ಲ. ಒಮ್ಮೆ ಸಾಗರದಲ್ಲೇ ಎದ್ರಿಗೆ ಸಿಕ್ಕಿದ್ರೂ ಮಾತಾಡ್ಸದೇ ಮುಂದೆ ಹೋದ್ರೂ. ನಂಗೂ ಧೈರ್ಯ ಸಾಕಾಗಿರ್ಲಿಲ್ಲ ಅನ್ಸುತ್ತೆ ಅವ್ರನ್ನ ತಡ್ದು ಮಾತಾಡ್ಸೋಕೆ ಆಗ. ಎಷ್ಟಂದ್ರೂ ಮಿಂಚ ಸ್ನೇಹ ಅಲ್ವೇ ? ಒಮ್ಮೆ ಮೂಡಿ ಮರ್ಯೋದನ್ನ ಎಷ್ಟೂಂತ ನೆನ್ಯೋದು ? ! :-( :-(

ಮತ್ತೊಮ್ಮೆ ನಾನು, ನನ್ನಣ್ಣ ದಿಲ್ಲಿಗೆ ಹೋಗ್ತಾ ಇದ್ವಿ .ಬೆಂಗಳೂರಿಂದ ರೈಲಲ್ಲಿ ೩೩ ಘಂಟೆ ಪ್ರಯಾಣ ದಿಲ್ಲಿಗೆ.ನಾವು ಕಾಲೇಜು ಹುಡುಗ್ರಾದ್ರೂ ಇಷ್ಟೆಲ್ಲಾ ದೂರ ಪ್ರಯಾಣ ಮಾಡಿ ಇಬ್ರಿಗೂ ಗೊತ್ತಿಲ್ಲ !!.ಹಿಂಗೇ ಪ್ರಯಾಣ ಮಾಡ್ತಿದ್ದಾಗ ನಮ್ಮ ಪಕ್ಕಕ್ಕಿದ್ದೋರನ್ನ ಮಾತಾಡ್ಸಿದ್ರೆ ಅವ್ರು ದೆಲ್ಲಿಗೆ ಹೋಗೋರು ಅಂತ ಗೊತ್ತಾಯ್ತು. ಅವ್ರು ದಿಲ್ಲಿಯ ದಂಪತಿಗಳು.ಅನಿಲ್ ಶರ್ಮ ದಂಪತಿಗಳು ಅಂತ ಆಮೇಲೆ ಗೊತ್ತಾಯ್ತು. ಹಿಂಗೇ ಕೆಲ ಘಂಟೇಲೆ ಅದೂ ಇದೂ ಮಾತಾಡ್ತಾ ಸ್ವಲ್ಪ ಪರಿಚಯ ಆಯ್ತು. ಬೆಂಗಳೂರಿನ ತಂಪಿನ ಬಗ್ಗೆ, ದೆಲ್ಲಿಯ ಸೆಕೆಯ ಬಗ್ಗೆ, ಅಲ್ಲಿ ಸುತ್ತಾಡೋ ಜಾಗಗಳ ಬಗ್ಗೆ, ಬೆಂಗಳೂರಲ್ಲಿರೋ ಅವರ ಮಗನ ಕೆಲಸದ ಬಗ್ಗೆ, ದೆಲ್ಲಿಯ ತಮ್ಮ ಕೆಲಸದ ಬಗ್ಗೆ ಎಲ್ಲಾ ಚೆನ್ನಾಗೇ ಮಾತಾಡಿದ್ರು. ಹುಟ್ಟಿದಾಗಿನಿಂದ ತನ್ನ ಹುಟ್ಟೂರು ಬಿಹಾರ ಮತ್ತು ಗಂಡನ ಊರು ದೆಲ್ಲಿ ಬಿಟ್ರೆ ಬೇರ್ಯಾವುದೂ ನೋಡದೇ ಇದ್ದ ಆ ಅಮ್ಮ, ಹೆತ್ತ ಮಗನಿಗೋಸ್ಕರವೇ ಬೆಂಗಳೂರವರೆಗೆ ಬಂದಿದ್ದರು. ಅವರಿಬ್ಬರ ಕಣ್ಣಿಗೆ ನಾನು ಅವರ ಚಿಕ್ಕ ಮಗನಂತೆಯೇ ಕಾಣುತ್ತಿದ್ದೆನಂತೆ !!

ರೈಲಲ್ಲಿ ಬೇರೆ ಅವ್ರು ಕೊಟ್ಟ ತಿಂಡಿ ತಿನ್ಬಾದ್ರು, ಅದ್ರಲ್ಲಿ ಮತ್ತು ಬರೋ ಔಷಧಿ ಹಾಕಿ ನಮ್ಮನ್ನ ದರೋಡೆ ಮಾಡ್ತಾರೆ ಅಂತೆಲ್ಲಾ ಎಚ್ಚರಿಕೆ ರೈಲವ್ರೇ ಕೊಡ್ತಾರೆ. ಆದ್ರೆ ಈ ದಂಪತಿ ಅವತ್ತು ಸಂಜೆ ನಮಗೆ ಅವ್ರು ಮಾಡಿದ್ದ ಚೂಡಾ(ಅವಲಕ್ಕಿ) ಕೊಡಕ್ಕೆ ಬಂದ್ರು !! ಏನ್ಮಾಡೋದು? ಎಷ್ಟು ಬೇಡಾ ಅಂದ್ರೂ ಕೇಳ್ತಾ ಇಲ್ಲ ಅವರು. ತುಂಬಾ ಒತ್ತಾಯ. ಕೊನೆಗೆ ಅವರು ಚೆನ್ನಾಗಿ ಕಲಸಿ ಅದ್ರಲ್ಲೇ ಸ್ವಲ್ಪ ಭಾಗ ತೆಗ್ದು ನಮ್ಮಿಬ್ರಿಗೆ(ನಾನು ಅಣ್ಣ) ಕೊಟ್ರೂ ತಿನ್ಲಿಲ್ಲ. ಅವ್ರು ತಿಂದು ಅವ್ರಿಗೆ ಏನೂ ಆಗದೇ ಇದ್ದ ಮೇಲೆ ನಮ್ಗೆ ಸ್ವಲ್ಪ ಧೈರ್ಯ ಬಂತು!! ನಾವೂ ಮುಂದಿನ ಸ್ಟೇಷನ್ ಅಲ್ಲಿ ತಗೊಂಡ ವೇಫರ್ಸನ್ನ ಅವ್ರಿಗೆ ನೀಡಿದ್ವಿ. ಅವ್ರೂ ಪ್ರತೀ ಸಲ ಚೂಡಾ ತಿನ್ನೋವಾಗ ನಮ್ಗೆ ಕೊಡೋರು.ಅದೂ ಇದೂ ಹರಟೋದೂ ನಡೀತಾ ಇತ್ತು. ಒಮ್ಮೆ ಅವ್ರು ಯಾವ್ದೋ ಕೀ ಚೈನ್ ತಗೊಂಡ್ರು, ನಾವೂ ತಗೊಂಡ್ವಿ. ನಾನು ದೋ ಕೆ ಪೈಸೆ(ಎರಡರ ದುಡ್ಡು) ಅಂತ ದುಡ್ಡು ಕೊಟ್ಟು ಬಿಟ್ಟೆ. ಅಲ್ಲಿವರ್ಗೂ ಶಾಂತ ಗೌರಿಯಂತಿದ್ದ ಆ ಅಮ್ಮ ಇದ್ದಕ್ಕಿದ್ದಂಗೆ ಸಿಟ್ಟಾದ್ರು. ಆಪಕೇ ಪೈಸಾ ಆಪ್ ಹೀ ರಕಲೋ, ಹಮೇ ಮತ್ ದೋ(ನಿಮ್ಮ ದುಡ್ಡು ನೀವೇ ಇಟ್ಕೊಳಿ, ನಮ್ಗೆ ಕೊಡ್ಬೇಡಿ)  ಅಂತ ಒಂದು ಚೈನಿನ ದುಡ್ಡು ನನ್ನ ಜೇಬಿಗೆ ತುರುಕಕ್ಕೆ ಬಂದ್ರು.. ಕೊನೆಗೆ ನಾನು ನನ್ನಣ್ಣ ತಗಂಡಿದ್ದು ಮತ್ತು ನಾ ತಗಂಡಿದ್ರ ದುಡ್ಡು ಕೊಟ್ಟಿದ್ದಷ್ಟೇ ಅಂತ ಸಮಾಧಾನ ಮಾಡೋದ್ರಲ್ಲಿ ಸಾಕಾಯ್ತು. ಇಂತ ಒಳ್ಳೆ ದಂಪತಿ ಸಿಕ್ಕಿದ್ರಿಂದ ನಮ್ಗೆ ದೆಲ್ಲಿ ಬಂದಿದ್ದೇ ಗೊತ್ತಾಗ್ಲಿಲ್ಲ. ಅಷ್ಟು ಟೈಂ ಪಾಸ್ ಆಗಿತ್ತು. ಬೇರೆ ರಾಜ್ಯವೊಂದರ ಸಂಸ್ಕೃತಿ ಬಗ್ಗೆ ಸುಮಾರು ಅರಿವಾಗಿತ್ತು.  ದೆಲ್ಲಿಗೆ ಹೋದಾಗ ಅವ್ರಿಗೆ ಸಿಗೋಕೆ ಆಗ್ಲಿಲ್ಲ .ಆದ್ರೆ ಅವ್ರ ಮೊಬೈಲ್ ನಂಬರ್ ಈಗ್ಲೂ ಇದೆ:-)

ಮತ್ತೊಂದ್ಸಲ ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಲ್ಲಿ ಬರೋವಾಗ ಸ್ವಲ್ಪ ವಯಸ್ಸಾದವ್ರು ಇಬ್ರು ಎದ್ರಿಗೆ ಕೂತಿದ್ರು. ನಾ ಮಾತಾಡ್ಸೋಕೆ ಮೊದ್ಲೇ ಅವ್ರೇ ಶುರು!! ಏನಪಾ, ಯಾವ್ಕಡೆ, ಏನು ಮಾಡ್ತಾ ಇದೀಯ ಅಂತ. ಅವ್ರಿಗೂ ಟೈಂ ಪಾಸ್ ಆಗ್ಬೇಕಾಗಿತ್ತಲ್ಲ :-) ಕೊನೆಗೆ ಇಬ್ರೂ ತಮ್ಮೂರಿನ ರಿಯಲ್ ಎಸ್ಟೇಟ್ ಬಿಸಿನೆಸ್ ಬಗ್ಗೆ, ಬಡ್ಡಿ ಸಾಲದ ಬಗ್ಗೆ ಮಾತಾಡೋಕೆ ಶುರು ಮಾಡೋರು. ಈ ರಾಜಕೀಯ ಪಕ್ಷಗಳ ಬಗ್ಗೆ ನೀವು ಏನು ಹೇಳ್ತೀರ ಅಂತ ಮಧ್ಯ ಮಧ್ಯ ನನ್ನೂ ಕೇಳೋರು. ನಾನು ಪ್ರತೀ ಸಲ ಓಟು ಹಾಕ್ತೀನಿ ಸಾರ್. ಆ ಸಮಯದಲ್ಲಿ ಇರೋರಲ್ಲಿ ಯೋಗ್ಯ ಅಭ್ಯರ್ಥಿ ಯಾರೋ ಅವ್ರಿಗೆ ಓಟು ಹಾಕ್ತೀನಿ. ಇಂತದ್ದೇ ಪಕ್ಷ ಅಂತೇನೂ ಇಲ್ಲ ಅಂತ ಹೇಳೋದೇ ಸೇಫು ಅನ್ಸಿತ್ತು ಅವಾಗ.. ಸುಮಾರು ಸಲ ರೈಲಲ್ಲಿ , ಬಸ್ಸಲ್ಲಿ ರಾಜಕೀಯದವ್ರನ್ನ ದೇಶದಲ್ಲಿ ಸರಿಯಾಗಿರದೇ ಇರೋದ್ರ ಬಗ್ಗೇನೇ ದೂರೋರ್ವನ್ನ ಕಂಡು, ಅವ್ರ ಮಾತು ಕೇಳಿ ಕೇಳಿ ಬೇಜಾರಾಗಿ ಇವರ ರಿಯಲ್ ಎಸ್ಟೇಟ್ ಮಾತುಕತೇನೆ ಸ್ವಲ್ಪ ವಾಸಿ ಅನ್ಸಿದ್ರಲ್ಲಿ ಆಶ್ಚರ್ಯ ಇಲ್ವೇನೋ !!

ಮತ್ತೊಂದ್ಸಲ ಬರ್ತಾ ಆಜಾದ್ ಅಂತ ಸಿಕ್ಕಿದ್ರು. ಅವ್ರು ಮಾತಾಡಿದ್ದು ಫುಲ್ಲು ವೇದಾಂತದ ಬಗ್ಗೆ. ದೇವರು ಕೊಟ್ಟ ಈ ಜೀವನದಲ್ಲಿ ನಾವು ಎಷ್ಟು ಬೇರೆ ಅವ್ರಿಗೆ ಸಹಾಯ ಮಾಡ್ತೀವಿ ಅನ್ನೋದನ್ನೇ ದೇವ್ರು ನೋಡ್ತಾ ಇರ್ತಾನೆ ಅನ್ನೋದು ಅವ್ರ ಮಾತು. ಇರೋ ಅಷ್ಟು ದಿನ ಬೇರೆ ಅವ್ರಿಗೆ ನೋವು ಕೊಡ್ದೇ ಸಂತೋಷವಾಗಿ ಬಾಳೋದೇ ಜೀವನದ ಸತ್ವ ಅನ್ನೋ ಧಾಟೀಲಿ ನಮ್ಮ ಮಾತು ಸಾಗ್ತಿತ್ತು. ಈ ಬಾರಿ ಕೆ.ಎ.ಎಸ್ ಬರ್ದಿದ್ರಂತೆ ಅವ್ರು. ಬರ್ದು ಪಾಸಾಗೋದು ಕಷ್ಟ ಆದ್ರೆ ಆಯ್ಕೆ ಆದ್ರೆ ಮನೇಲಿರೋದನ್ನ ಉದ್ರಿ ಇಟ್ಟಾದ್ರೂ ನನ್ನ ಕಳಿಸ್ತಾರೆ ಅಲ್ಲಿಗೆ ಅಂದ್ರು. ಅವರ ನಿಷ್ಠೆಗೆ ಭೇಷ್ ಅನ್ಸಿತ್ತು. ಸೂಫಿ ಸಾಹಿತ್ಯದ ಬಗ್ಗೆ, ಗಝಲ್ ಗಳ ಬಗ್ಗೆ, ಸಂವಿಧಾನ ಸುಧಾರಣೆಗಳ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಹುಟ್ಟಿದಬ್ಬಕ್ಕೆ ಕ್ಯಾಂಡಲ್ ಆರ್ಸೋದು ಸರೀನಾ ತಪ್ಪೋ, ಅವತ್ತು ಹೆವೀ ಪಾರ್ಟಿ ಮಾಡೋ ಬದ್ಲು  ಅನಾಥರಿಗೆ ನಮ್ಮ ಹಳೇ ಬಟ್ಟೆ ಕೊಟ್ಟು ಅವತ್ತಿನ ದಿನದ ನೆನಪು ಚೆನ್ನಾಗಿಡ್ಬೋದಲ್ಲಾ ಅನ್ನೋ ನನ್ನ ಐಡಿಯಾದ ಬಗ್ಗೆ.. ಹೀಗೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಬರೋವರ್ಗೂ ಮಾತಾಡಿದ್ವಿ. ಎಲ್ಲೋ ಅಪರೂಪಕ್ಕೊಮ್ಮೆ ಸಿಗೋ ಇಂತ ಜನರು ಮಿಂಚಂತೆ ಮತ್ತೆ ಮರೆಯಾದ್ರೂ ಅವ್ರ ನೆನ್ಪು ಈ ತರ ಮತ್ತೆ ಮತ್ತೆ ಹಸಿರಾಗ್ತಾನೆ ಇರುತ್ತೆ

ಮತ್ತೊಂದ್ಸಲ ಶಿವಮೊಗ್ಗಕ್ಕೆ ಬರ್ತಿರೋವಾಗ ಒಬ್ಬ ಸಣ್ಣ ಹುಡ್ಗ ಮತ್ತು ಅವನ ಕುಟುಂಬ ನನ್ನ ಎದ್ರಿಗೆ ಕೂತಿತ್ತು. ಹಿಂಗೇ ಎಲ್ಲಿಗೆ ಹೋಗ್ತಾ ಇದೀರ ಅಂತ ಮಾತಾಡ್ತಾ ಇರ್ಬೇಕಿದ್ರೆ ಅವ್ನಿಗೆ ನಾನು ಅವ್ನ "ಪುನಿ" ಅಣ್ಣನ ಹಾಗೆ ಕಾಣಕ್ಕೆ ಶುರು ಆದೆ. ತಗಳಪ್ಪ, ಅಲ್ಲಿಂದ ಶುರು . ಪುನಿ ಅಣ್ಣ, ಆ ಆಟ ಆಡೋಣ ಬಾ, ಈ ಆಟ ಆಡೋಣ ಬಾ, ನಮ್ಮನೆಗೆ ಬಾ ಅಂತ ತುಂಬಾನೆ ಹಚ್ಕೊಂಡು ಬಿಟ್ಟಿದ್ದ. ಮಧ್ಯ ಮಧ್ಯೆ WWF ಮಾಡ್ತೀನಿ ನಿನ್ನ ಜೊತೆ ಅಂತ ಶುರು ಮಾಡ್ತಿದ್ದ. ಆಗೆಲ್ಲಾ ಈ ಟೀವಿಯಿಂದ ಮಕ್ಳು ಎಷ್ಟು ಹಾಳಾಗ್ತಿದಾರೆ ಅಂತ ಟೀವಿಗೆ ಶಾಪ ಹಾಕಿದ್ದೊಂದೇ ನನ್ನ ಕೆಲ್ಸ.ಪಾಪ, ಸಣ್ಣ ಹುಡ್ಗ, ಅವ್ನಿಗೇನು ಗೊತ್ತಾಗುತ್ತೆ !! ಅವ್ನು ಇಳೀತಾ ನಮ್ಮನೇಗೆ ಬಾ ಅಂತ ನನ್ನ ಬ್ಯಾಗು ತಗೊಂಡು ಹೋಗಕ್ಕೆ ಶುರು !! ಕೊನೆಗೆ ಅವ್ನ ಅಮ್ಮ ಬೈದು , ನೀವೇನು ಬೇಜಾರು ಮಾಡ್ಕೋಬೇಡಿ ಅಂತ ನಂಗೂ ಸಮಾಧಾನ ಮಾಡಕ್ಕೆ (!!) ಬಂದ್ರು.. ಇಲ್ಲಮ್ಮಾ, ನಂಗೇನೂ ಬೇಜಾರಿಲ್ಲ, ಸಣ್ಣ ಮಕ್ಕಳಲ್ವಾ ಆಟ ಆಡ್ತಾವೆ. ಹೋಗಿ ಬನ್ನಿ , ಪರ್ವಾಗಿಲ್ಲ ಅಂತ ನನ್ನ ಬ್ಯಾಗು ಇಸ್ಕೊಂಡಿದ್ದೆ !!

ಹಿಂಗೇ ಸುಮಾರಷ್ಟು ನೆನ್ಪಾಗ್ತಾ ಹೋಗತ್ತೆ .. ಆದ್ರೆ ಕಾಲ ಬದ್ಲಾಗ್ತಾ ಹೋದಂಗೇ ಜನಾನು ಬದ್ಗಾಗ್ತಾ ಹೋಗ್ತಿದಾರಲ್ವಾ ಅನುಸುತ್ತೆ ಕೆಲೋ ಸಲ. ಕೆಲೋ ಸಲ ಶಿವಮೊಗ್ಗದಿಂದ ಹೊರಟು, ಬೆಂಗಳೂರವರೆಗೆ ಬಸ್ಸಲ್ಲಿ ಬಂದ್ರೂ ಪಕ್ಕದೋರು ಬೆಂಗಳೂರಿಗೆ ಹೋಗ್ತಿದಾರೆ ಅನ್ನೋದು ಬಿಟ್ಟು ಬೇರೇನೂ ಮಾತಾಡಿರಲ್ಲ!!ಪಕ್ಕದೋರಿಗೆ ಅಥವಾ ನಮಗೆ ಅವರ ಮೇಲೆ ಅನುಮಾನವ, ಅವಿಶ್ವಾಸವಾ.. ಅಂತಲ್ಲ. ಆದರೂ , ಯಾಕೆ ಬೇಕು, ನಮ್ಮ ಪಾಡಿಗೆ ನಾವಿರೋಣ ಅನ್ನೋ ಭಾವನೇನೆ ಅದೇಗೋ ಅರಿದೇ ಮೇಲುಗೈ ಸಾಧಿಸಿರುತ್ತೆ. ಆದ್ರೂ ಕೆಲೋ ಸಲ  ಸಹಪ್ರಯಾಣಿಕರು ಮಿಂಚಂತೆ ಅದ್ಯಾವ್ದೋ ಗಳಿಗೇಲಿ ಸ್ನೇಹಿತರಾಗಿ ಸುಮಧುರ ನೆನ್ಪುಗಳ್ನ ಉಳಿಸಿ ಬಿಡ್ತಾರೆ. 
   
ಇಂತದ್ದು ನಿಮ್ಮ ಜೊತೆಗೂ ನಡ್ಡಿರಬಹುದು. ಅಥವಾ ನಾನು ಪ್ರಸ್ತಾಪಿಸಿದವ್ರಲ್ಲಿ ಒಬ್ರಾದ್ರೂ ಈಗ ಈ ಲೇಖನ ಓದ್ತಾನೂ ಇರ್ಬೋದು!! ಹಾಗೇನಾದ್ರೂ ಇದ್ರೆ ಅದು ನನ್ನ ಮಹಾಪುಣ್ಯವೇ ಸೈ. ನಿಮ್ಮೆಲ್ಲಾ ಮಧುರ ನೆನಪುಗಳಿಗೆ ಮತ್ತೊಮ್ಮೆ ಸಲಾಂ.

Tuesday, June 5, 2012

FB, ಮೊಬೈಲು ಮತ್ತು ನಾವು

ಲೇ ಲೇ.. ಯಾಕಿಂಗಾಡ್ತೀಯೋ,  
ಏನಾಗಿದ್ಯೋ ನಿಂಗೆ
FB ಗೆ ಯಾವಾಗ ಬಂದ್ರೂ ನೀನು ಹಾಕಿರೋ ೩-sad status ಕಾಣತ್ತೆ.  
ಮೆಸೇಜಿಗೆ ರಿಪ್ಲೆ ಇಲ್ಲ. ಫೋನ್ ಮಾಡಿದ್ರೂ ರಿಸೀವ್ ಮಾಡಲ್ಲ
ಕಾಲೇಜಲ್ಲಿ ಹೆಂಗಿದ್ದೋನು ಹೆಂಗಾಗಿದಿಯಲ್ಲೋ, ಏನೋ ಕರ್ಮ ನಿಂಗೆ 
ಪ್ರೇಮ್ ಅಂತ ಒಂದೇ ಉಸುರಿಗೆ ಬಯ್ದ ವಿಶ್ವ.  

ಹೂಂ ಕಣೋ , ನೀನೊಬ್ಬ ಕಮ್ಮಿ ಇದ್ದೆ ನೋಡು ನಂಗೆ ಬಯ್ಯಕ್ಕೆ..
ಕೆಲ್ಸ ಇಲ್ಲ ಅಂತ ನಾನು ಒದ್ದಾಡ್ತ ಇದ್ರೆ ನಿಂಗೆ ಅದು ಏನೂ ಅಲ್ಲ ಅಲ.  
ನಿಮ್ಗೇನಪ ಆರಾಮಗಿದೀರ.  
ಕಾಲೇಜು ಮುಗಿದು ಮೂರು ತಿಂಗ್ಳಲ್ಲಿ ಎಷ್ಟು ಮೆಸೇಜು ಹಾಕಿದ್ದೆ, ಎಷ್ಟು ಸಲ FB ಲಿ ಮೆಸೇಜು ಹಾಕಿದ್ದೆ, poke ಮಾಡಿದ್ದೆ,ಒಂದಕ್ಕಾದ್ರೂ ರಿಪ್ಲೆ ಮಾಡಿದ್ಯ ನೆನ್ಪು ಮಾಡ್ಕೊ.
 ಇಡೀ ದಿನ FB ಲಿ ಏನು ಮಾಡ್ತೀಯ ಅಂತ ಒಂದಿನ ಬಯ್ದಿದ್ಯಲ್ಲ, ಅವತ್ತು ಬೆಳಿಗ್ಗೆ ಅಷ್ಟೆ ನಾನು ನನ್ನ ನಂಗೇ ಲೆಕ್ಕ ಇಲ್ಲದ ಅದೆಷ್ಟನೇದೋ interview ನಲ್ಲಿ ಫೇಲಾಗಿ ಬಂದಿದ್ದೆ ಗೊತ್ತಾ?
ನಾಳೆ ಬೆಳಿಗ್ಗೆ ಯಾವ ಪೀರಿಯಡ್ ಫಸ್ಟು, internal ಗೆ ಯಾವ್ದು ಮುಖ್ಯ ಅಂತ ಒಂದೂ ಬಿಡ್ದೇ ಮೆಸೇಜು ಮಾಡ್ತಿದ್ರಿ..  
ಕ್ಲಾಸಲ್ಲಿದ್ದ ೬೦ ಜನರಲ್ಲಿ ಒಬ್ರಾದ್ರೂ ಈಗ ಬದ್ಕಿದ್ಯಾ ಸತ್ತಿದ್ಯಾ ಅಂತನಾದ್ರೂ ಮೆಸೇಜು ಮಾಡ್ತಿರೇನ್ರೋ..  
ಬಂದುಬಿಟ್ಟ ದೊಡ್ಡದಾಗಿ ಬುದ್ದಿ ಹೇಳಕ್ಕೆ ಅಂದ ಪ್ರೇಮ್..

ಈಗಿನ ತಲೆಮಾರಿನ ಪ್ರತೀ ಯುವಕ/ಯುವಕಿಯ ಬಾಳಿನ ಅವಿಭಾಜ್ಯ ಅಂಗ ಅನ್ನೋ ತರ ಆಗ್ಬುಟ್ಟಿದೆಯಲ್ಲಾ ಈ FB ಮತ್ತು ಮೊಬೈಲ್. ಉಂಡಿದ್ದು , ತಿಂದಿದ್ರಿಂದ ಹಿಡಿದು ಕೆಲ್ಸ ಸಿಕ್ಕಿದ್ದು, ಪ್ರಾಜೆಕ್ಟು ಮುಗ್ದಿದ್ದು, Internal , ಎಕ್ಸಾಂ ಬರ್ಯೋದು.. ಎಲ್ಲವೂ ಇಲ್ಲಿ Status ಗಳೇ. ದಿನಕ್ಕೆ ಕನಿಷ್ಟ ಆದ್ರೂ ೨೫-೩೦ ರಷ್ಟು ಸಂದೇಶ ಸುತ್ತಾಡ್ಸೋ ಮೊಬೈಲುಗಳು ಕೆಲವೊಂದು ಸಲ ಸ್ಮಶಾನ ಮೌನ ವಹಿಸಿಬಿಡುತ್ತೆ. ಕಾಲೇಜು ಸಮಯದಲ್ಲಿ ಪಾದರಸದಷ್ಟು ಗೆಲುವಾಗಿದ್ದೋರು ಮುಗಿದ ಕೆಲವೇ ಸಮಯದಲ್ಲಿ ಎಲ್ಲೋ ಕತ್ತಲೇಲಿ, ಯಾರಿಗೂ ಸಿಗದಂಗೆ ಮರೆಯಾಗಿಬಿಡ್ತಾರೆ. ಹಿಂಗ್ಯಾಕಾಗತ್ತೆ ಅನ್ನೋದಕ್ಕೆ ನಿರ್ದಿಷ್ಟ ಉತ್ರ ಇಲ್ದಿದ್ರೂ ಕೆಲ ಅಂಶಗಳೆಂತೂ ಸತ್ಯ...ಗುರಿ, ಬೇಸರ, ಹತಾಶೆ, ನಿರಾಸೆ.. ಅದೇ ಇಲ್ಲಿ ಪ್ರೇಮ್ ನ ಬಾಳಲ್ಲೂ ಆಗಿದ್ದು.

ಕೊನೆಯ ಎಕ್ಸಾಮು ಮುಗಿದ ದಿನ ಪ್ರೇಮಿಗೆ ತುಂಬಾ ಖುಷಿ. ಕೊನೆವರೆಗೂ ಕಾಂಟಾಕ್ಟಲ್ಲಿರೋಣ, ಎಂದೂ ಮರೀಬೇಡ ನನ್ನ ಅನ್ನೋ ಹುಡುಗಿಯರ ಮೆಸೇಜುಗಳು, ನಾಳೆ ಹಾಸ್ಟೆಲ್ ಖಾಲಿ ಮಾಡ್ತಾ ಇದೀನಿ. ಇನ್ಯಾವಾಗ್ಲಾದ್ರೂ ಸಿಗೋಣ ಲೈಫಲ್ಲಿ ಅನ್ನೋ ಪಕ್ಕದ ರೂಂ ಹುಡುಗ್ರು .. ಹಿಂಗೆ ಎಲ್ಲರ ಕಣ್ಣಲ್ಲೂ ನೀರು. ಅಂತೂ ಒಲ್ಲದ ಮನಸ್ಸಿಂದ ಊರಿಗೆ ಬಂದು ಎರಡು ದಿನ ಆಗಿತ್ತಷ್ಟೇ.. ಆಗ್ಲೇ ಮುಂದೆ ಕೆಲ್ಸ ಹುಡ್ಕಬೇಕಾದ ಅನಿವಾರ್ಯತೆ ನೆನ್ಪಾಗತೊಡಗಿತ್ತು. ಓದಕ್ಕೆ ಅಂತ ಮಾಡಿದ ಸಾಲ ಬೇರೆ ಇತ್ತಲ್ಲ.. ಗೂಗಲ್ಲು, ಮೈಕ್ರೋಸಾಫ್ಟು, ಇಂಟೆಲ್ಲು ಹೀಗೆ ದೊಡ್ಡ ದೊಡ್ಡ ಕಂಪನಿಗಳಿಗೆಲ್ಲಾ ಅರ್ಜಿ ಗುಜರಾಯಿಸಿದ. ಬೆಳಗಿಂದ ಸಂಜೆವರೆಗೆ ಅಂತರ್ಜಾಲದಲ್ಲೇ ಇದ್ದು ಸಿಕ್ಕ ಸಿಕ್ಕ ಕೆಲ್ಸಕ್ಕೆಲ್ಲಾ ಅರ್ಜಿ ಹಾಕೋದು, FB ಯಲ್ಲಿ , ಮೆಸೇಜಲ್ಲಿ ಗೆಳೆಯರಿಗೆ , Seniors ಗೆ ಎಲ್ಲಾದ್ರೂ ಉದ್ಯೋಗ ಇದ್ಯಾ ಅಂತ ಕೇಳೋದು.. ಇದೇ ಆಯ್ತು.

ಹಂಗೂ ಹಿಂಗೂ ಒಂದು ತಿಂಗ್ಳಾಯ್ತು. ಅಕ್ಕ ಪಕ್ಕದ ಮನೆ ಅವ್ರೆಲ್ಲಾ ಬಂದು ನಿಮ್ಮಗನಿಗೆ ಇನ್ನೂ ಕೆಲ್ಸ ಸಿಕ್ಕಿಲ್ವಾ, ನನ್ನ ಅಕ್ಕನ ಮಗಳಿಗೆ ಆ ಕಂಪೆನಿ, ಮಾವನ ಮಗಂಗೆ ಈ ಕಂಪನಿ ಅಂತ ಶುರು ಮಾಡೋರು. ಇವ್ರಿಗೆ ನೆರೆ-ಹೊರೆ ಅಂತ ಇಟ್ಟಿರೋ ಹೆಸ್ರಲ್ಲಿ ನೆರವಾಗಕ್ಕಾಗ್ದಿದ್ರೂ ಹೊರೆ ಆಗಿ ಹೆಸ್ರು ಸಾರ್ಥಕ ಮಾಡ್ಕೊಳ್ತಾರೆ. ನಾನು ಹೆಂಗಿದ್ರೆ ಇವ್ರಿಗೇನು ಅಂತ ಅನೇಕ ಸಲ ಗೊಣಗಿದ್ದ ಪ್ರೇಮ್. ಮನೇಲೆ ಖಾಲಿ ಕೂತು ಕೂತು ಬೇಜಾರು ಬೇರೆ. ಮುಂಚೆ ಎಲ್ಲಾ ದಿನಕ್ಕೆ ಐವತ್ತು ಸಲವಾದ್ರೂ ಹೊಡ್ಕೊಳ್ತಾ ಇದ್ದ ಸೆಲ್ಲು ಈಗ ತಣ್ಣಗೆ ಬಿದ್ಕೊಂಡಿರ್ತಿತ್ತು. ಮುಂಚೆ ಎಲ್ಲಾ ದಿನಾ ಫಾರ್ವಡ್ರು ಕಳುಸ್ತಿದ್ದವ್ರುದ್ದೂ ಈಗ ಸುದ್ದಿ ಇಲ್ಲ.ದಿನಾ ಬೆಳಗ್ಗೆ ಅತ್ವಾ ರಾತ್ರೆ ಇವ್ನು ತನ್ನ ಸೆಲ್ಲಲ್ಲಿರೋ ಎಲ್ಲ ಗೆಳೆಯರಿಗೂ ಮೆಸೇಜಿಸೋ ಅಭ್ಯಾಸನೂ ಮಾಡ್ಕಂಡಿದ್ದ ಊರಿಗೆ ಬಂದ ಹೊಸದ್ರಲ್ಲಿ. ಆದ್ರೆ ಈಗ ಅದೂ ಇಲ್ಲ. ರಿಪ್ಲೇನೆ ಇಲ್ಲ ಅಂದ್ರೆ one-way ಆಗಿ ಎಷ್ಟು ಮೆಸೇಜು ಅಂತ ಕಳ್ಸೋದು?

ಹಿಂಗೇ ಮತ್ತೊಂದು ತಿಂಗ್ಳೂ ಆಯ್ತು. ಯಾವ್ದೂ ಕೆಲ್ಸ ಇಲ್ಲ. ದೊಡ್ಡ ಕಂಪೆನಿಗಳು ಸಾಯ್ಲಿ ಅಂತ ಸಣ್ಣಸಣ್ಣದಕ್ಕೆ ಹಾಕದಕ್ಕೆ ಶುರು ಮಾಡಿದ್ದ ಈಗ ಪ್ರೇಮ್. ಕೇಳಿದ ನೆಂಟ್ರೆಲ್ಲಾ ಕ್ಯಾಂಪಸಲ್ಲಿ ಆಗಿಲ್ವಾ ಅಂತ ಇವ್ನಿಗೆ ಹಂಗ್ಸೋರು. ಆಮೇಲೆ ನೆಂಟ ಅನ್ನೋ ಸಂಕಟಕ್ಕೆ ಆಮೇಲೆ ನೋಡ್ತೀನಿ ಅನ್ನೋರು. ಹೀಗೆ ೨-೩ ಸಲ ಸುಮಾರು ಜನ ಕೇಳಿದ ಮೇಲೆ ಈ ನೆಂಟ್ರೆಲ್ಲಾ ಹಿಂಗೇ ಅಂತ ಗೊತ್ತಾಯ್ತು ಪ್ರೇಮಿಗೆ. ಇಂಟರ್ನಶಿಪ್ ಮಾಡಿದ್ರೆ, ಸರ್ಟಿಫಿಕೇಟ್ ಇದ್ರೆ ಅತ್ವಾ ರೆಫರೆನ್ಸ್ ಇದ್ರೆ ಅತ್ವಾ ಒಳ್ಳೇ ಪರ್ಸಂಟೇಜ್ ಇದ್ರೆ ಮಾತ್ರ ದೊಡ್ಡ ದೊಡ್ಡ ಕಂಪೆನಿಗಳೆಲ್ಲಾ ಕರೀತಾರೆ. ಇಲ್ಲಾಂದ್ರೆ ಹಾಕಿರೋ ಸಾವಿರಾರು ಅರ್ಜಿಗಳಲ್ಲಿ ನಿನ್ನ ಮೂಸೂ ನೋಡಲ್ಲ ಅಂದ ಒಬ್ಬ ಗೆಳೆಯ

ಇರೋ ಬೇಜಾರನ್ನ ಯಾರತ್ರ ಅಂತ ಹೇಳ್ಕೋಳ್ಳೋದು? ಅಪ್ಪ-ಅಮ್ಮಂಗೆ ಹೇಳ್ಕೊಂಡ್ರೆ ಅವ್ರು ಮತ್ತೂ ಬೇಜಾರಾಗ್ತಾರೆ. ಇವ್ನು ಹೀಗೇ ಬೇಜಾರು ಅಂತ ಹಾಕಿದ ಮೆಸೇಜುಗಳು ಇವ್ನ ಹೆಚ್ಚಿನ (ಹಳೆ)ಗೆಳೆಯರಿಗೆ ಹೋಗ್ತಾನೆ ಇರಲಿಲ್ಲ. ಸುಮಾರು ಜನ ನಂಬರ್ನೇ ಬದಲಾಯಿಸಿದ್ರೂ ಇವ್ನಿಗೆ ಕೊಟ್ಟಿರಲಿಲ್ಲ. ಏನೋ ದಿನಾ ನಿಂಕ್ಲಾಸು ಹುಡ್ಗೀರಿಗೆ ರೋದನೆ ಮೆಸೇಜು ಹಾಕಿ ಗೋಳು ಕೊಡ್ತೀಯಂತೆ ಅಂತ ಪಕ್ಕದ ಕ್ಲಾಸವ್ನೊಬ್ಬ ಬೇರೆ ಮೊನ್ನೆ ಹೇಳಿದ್ದ. ಹಾಗಾಗಿ ಹುಡ್ಗೀರ ನಂಬರನ್ನ ಇವನೇ ಅಳಿಸಿ ಹಾಕಿದ್ದ. ಅವ್ರೆಲ್ಲಿದಾರೋ ಚೆನ್ನಾಗಿ ಇರ್ಲಿ. ನನ್ನ "ಗೋಳು" ಅವ್ರಿಗೆ ಮುಟ್ದೇ ಇರ್ಲಿ ಅಂತ..ಆದ್ರೆ ಈ ಹಾಳಾದ ಬೇಜಾರು ಅನ್ನೋದು ಯಾರಿಗಾದ್ರೂ ಹೇಳ್ಕಳದಿದ್ರೆ ಕಮ್ಮಿ ಆಗೊಲ್ವಲ್ಲ ಅಂತ FB status ಗಳ ಮರೆ ಹೋಗಿದ್ದ ಪ್ರೇಮ್.FB ನಲ್ಲಿ ಇವ್ನು ಮೆಸೇಜು ಮಾಡಿದ ಕೂಡ್ಲೇ Offline ಹೋಗಿ ಬಿಡ್ತಿದ್ರು ಇವ್ನ ನೆಂಟ್ರು, ಗೆಳೆಯರೆಲ್ಲಾ.. ಒಳ್ಳೇ ಟಾರ್ಚರ್ ಕೇಸು ಅಂತ..
ಈಗ Good Bye all, Deleting FB Account ಅಂತ status ಹಾಕಿದ್ದಕ್ಕೆ ವಿಶ್ವನ ಕೈಲಿ ಬಯ್ಗುಳ ಸಿಕ್ಕಿತ್ತು !!..


ಕಾಲೇಜು ಮುಗಿದ ದಿನದಿಂದ್ಲೇ ಬೇಜಾರು ಸಾರಿಕಾಗೆ.ಕೆಲ್ಸ ಏನೋ ಸಿಕ್ಕಿತ್ತು. ಆದ್ರೆ ಜಾಯಿನ್ ಆಗಕ್ಕೆ ಇನ್ನೂ ಸುಮಾರು ಸಮಯ ಇತ್ತು. ಮನೇಲಿ ಬೇಜಾರಾಗ್ಡೇ ಇರ್ಲಿ ಅಂತ ಇಂಟರ್ನೆಟ್ ಹಾಕಸ್ಕಂಡಿದ್ಲು ಸಾರಿ.ಮೊನ್ನೆ ಯಾವನೋ ಗೊತ್ತಿಲ್ದೇ ಇರೋನ Friendship ರಿಕ್ವೆಸ್ಟ್ ಬಂದಿತ್ತು. ಯಾರು ಅಂತ ಗೊತ್ತೇ ಇಲ್ಲ ಅಂತ delete ಮಾಡಿದ್ಲು. ಸ್ವಲ್ಪ ದಿನ ಆದ್ಮೇಲೆ ಮತ್ತದೇ ವ್ಯಕ್ತೀದು. ನಿಮಗೆ ನಾನು ಗೊತ್ತ ಅಂತ ಮೆಸೇಜು ಹಾಕಿದ್ಲು. ಸಾರಿ, ಗೊತ್ತಿಲ್ಲ. suggestion ತೋರುಸ್ತು ಕಳ್ಸಿದೆ. ನಾವು FB ಲಿ ಗೆಳೆಯರಾಗ್ಬೋದಲ್ವಾ ಅಂತ ಉತ್ರ ಬಂದಿತ್ತು. ಹೂಂ ಅಂತ ಸಂತೋಷದಿಂದ್ಲೇ ಒಪ್ಪಿದ್ಲು. ಕೊನೆಗೆ ಇವಳು ಹಾಕಿದ್ದ ಫೋಟೋಗಳಿಗೆಲ್ಲಾ awesome, superb ಅಂತೆಲ್ಲಾ ಕಾಮೆಂಟುಗಳು ಬೀಳದು, ಪ್ರತಿಯೊಂದಕ್ಕೂ ಲೈಕುಗಳು ಬೀಳೋದು ಶುರು ಆಯ್ತು. ಇವತ್ತಿನ ಫೋಟೋ ಸಖತ್ತಾಗಿದೆ ಅನ್ನೋ ಮೆಸೇಜುಗಳೂ ಬರೋಕೆ ಶುರು ಆದ್ವು.ಇವ್ಳು ಫೋನ್ ನಂಬರೊಂದು ಕೊಟ್ಟಿರ್ಲಿಲ್ಲ .

ಯಾಕೋ ಒಂದಿನ ಇದ್ದಕ್ಕಿದ್ದಾಗ ನಿನ್ನ ಪ್ರೀತಿಸ್ತೀನಿ ಅಂತ ಮೆಸೇಜ್ ಹಾಕ್ದ. ಸಾರಿ ನಾನಿನ್ನ ಆ ತರ ನೋಡೇ ಇಲ್ಲ. ಸುಮ್ನೆ ಗೆಳೆಯನ ತರಹ ನೋಡಿದೀನಿ ಅಷ್ಟೇ ಅಂದ್ಲು. ಆಮೇಲಿಂದ ಇವ್ಳು ಆನ್ ಲೈನ್ ಹೋದಾಗೆಲ್ಲಾ ಅವ್ನ ಮೆಸೇಜುಗಳೇ ಕಾಣಕ್ಕೆ ಶುರು ಆದ್ವು.ದಿನಾ ಹೊಸ ತರ ರೋದನೆ. ನೀನಿಲ್ದೇ ನಾನಿಲ್ಲ. ನೀನಿಲ್ದೇ ಹೋದ್ರೆ ನಾ FB ಅಕೌಂಟ್ನೇ ಡಿಲಿಟ್ ಮಾಡ್ಬಿಟ್ತೀನಿ. ನನ್ಯಾಕೆ ಅವಾಯ್ಡ್ ಮಾಡ್ತೀಯ ಅಂತೆಲ್ಲಾ ಶುರು ಆಯ್ತು. ಅವ್ಳಿಗಷ್ಟೇ ಅಲ್ಲದೇ ಅವಳ ಗೆಳತಿಯರಿಗೂ ಅವಳಿಗೆ ಸಮಾಧಾನ ಹೇಳಿ ಅಂತ ಮೆಸೇಜು ಹಾಕ್ತಿದ್ದ. ಕೊನೆಗೊಂದು ದಿನ ಸಾರಿ ಗೆಳತಿ ಸಾರಿಗೆ ನಿಂಗೆ ಮೆಸೇಜು ಹಾಕ್ತಿರೋ ವ್ಯಕ್ತಿ ಸರಿ ಇಲ್ಲ ಅನ್ಸುತ್ತೆ ಅಂದ್ಲು. ಅವ್ನು ಅವ್ಳ ಫ್ರೆಂಡ್ ಲಿಸ್ಟಲ್ಲೂ ಇದ್ನಂತೆ. ಯಾವುದೋ ದಿನ ಯಾರದೋ ಫೋಟೋಗೆ ಆ ವ್ಯಕ್ತಿ ಅಶ್ಲೀಲವಾಗಿ ಕಾಮೆಂಟಿಸಿದ್ದನ್ನ ನೋಡಿ ಅವನನ್ನ ಗೆಳೆತನದಿಂದ್ಲೇ ತೆಗೆದು ಹಾಕಿದ್ಲು.. ಅವತ್ತಿಂದ ಸಾರಿ FB ಕಡೆ ಹೋಗೋದೆ ಕಡ್ಮೆ ಮಾಡಿದಾಳೆ. ಯಾರು ರಿಕ್ವೆಸ್ಟ್ ಕಳ್ಸಿದ್ರೂ accept ಮಾಡಲ್ಲ, ಭಾರಿ ಜಂಬ ಅಂತ ಸುಮಾರು ಜನ ಹಿಂದೆ ಬಿಟ್ಟು ಹೇಳ್ತಾರೆ. ಆದ್ರೆ ಸಾರಿ ಅದಕ್ಕೆಲ್ಲಾ ತಲೆ ಕೆಡ್ಸಿ ಕೊಳ್ಳೊಲ್ಲ. ಗೊತ್ತಿರೋರನ್ನ ಮಾತ್ರ ಗೆಳೆಯರನ್ನಾಗಿಸೋದು FB ಲಿ...


ಎರಡೂ ಸ್ವಲ್ಪ ಬೇರೆ ಬೇರೆನೆ ಕಥೆ. ಆದ್ರೆ ಎರಡರಲ್ಲೂ ಇದ್ದಿದ್ದು ನಾವು ನಮ್ಮ ಜೊತೆಗೆ ಇರೋರನ್ನ ಬಿಟ್ಟು ಈ ಮೊಬೈಲು, FB ಹೀಗೆ virtual world ನಲ್ಲೇ ಹೇಗೆ ಬದುಕ್ತಾ ಇದೀವಲ್ಲ ಅಂತ.. ಅದ್ರಲ್ಲಿ ಯಾರೋ ಏನೋ ಕಾಮೆಂಟು ಹಾಕಿದ್ರು, ಇವತ್ತು ಹಾಕಿದ ಫೋಟೋಗೆ ಕಾಮೆಂಟು ಬಿದ್ದಿಲ್ಲ, ಲೈಕು ಬಿದ್ದಿಲ್ಲ. ನನ್ನ ಪೋಸ್ಟು ಓದದೇ ಮತ್ತೊಂದು ದರಿದ್ರ ಪೋಸ್ಟಿಗೆ ಹೊಗಳ್ತಾ ಇದಾರಲ್ಲಾ.. ನಂಗೆ ಬೈದಿದ್ದಕ್ಕೆಲ್ಲಾ ಲೈಕು ಒತ್ತತಾರಲ್ಲಾ.. ಹಿಂಗೆ ಪ್ರತಿಯೊಂದಕ್ಕೂ ತಲೆ ಕೆಡಿಸಿಕೊಳ್ತಾ ಇದೀವಲ್ಲಾ.. ಈ ತರದ ಮನೋಭಾವದ ಬಗ್ಗೆ.ತಂತ್ರಜ್ನಾನವನ್ನ ಈ ತರ ಹ್ಸಚ್ಕೊಳ್ಳೋದು ಒಳ್ಳೇದೋ ಕೆಟ್ಟದ್ದೋ ಗೊತ್ತಿಲ್ಲ. ಪ್ರೇಮ್, ಸಾರಿ ಅಂತವರು ನಿಮ್ಮ್ ಮಧ್ಯೆನೂ ಇರಬಹುದು . ಅಂತ ಘಟನೆಗಳನ್ನ ನೀವೂ ನೋಡಿರಬಹುದು, ಕೇಳಿರಬಹುದು. ಹಾಗಾಗಿ ತೀರ್ಮಾನ ನಿಮ್ಮದೇ..

Friday, June 1, 2012

Hogenakal Falls

When i heard about the name "Hogenakal" i recalled the news about it for the wrong reasons. The border and water issues, the almost death of kannada film "Krishnan Love Story" hero and many others. One of my friend who had read the reviews about it also said that the place is not nice, costly, filled with voilent people, no proper food blaw blaw blaw.. But after i had been there , i really felt bad for hearing those news about such a marvellous place. We would have missed a relly wonderful day if we hadn't been there. Ok, let me come back to the original content about Hogenakal falls


Infront of "Cini Falls" in Hogenakal


Hogenakal Falls is located at around 180 Km frm Bangalore. You have KSRTC buses also to hogenakal. But they are rare .we saw only one bus during our travel to hogenakal. So its better to go in a Tata Sumo or Cab or Tempo Traveller. It not only saves your time and convienient but also helps to see the places on the way like Crocodile Park..(more on that a bit later)

View from the top-near the watch tower

It would be better if you leave for the place early. We planned to leave from Marathhalli(Bangalore) by 7:00. But we managed to leave by 7:30. Thanks to Bangalore traffice. The reason being,if you get late at the Tamil Nadu checkpost (after 8am), there will be huge queue of trucks and you may have to wait for more than 1 hr at check post.Meanwhile, u have to pay 1500 Rupees for the Traveller at the checkpost.For Tata Sumo it may be a bit less , but more or less the same. Its better have breakfast or carry it for the journey as you don't get good food one the way. If you start from Marathalli, it is Marathalli>SilkBoard>Elecronic City> Hosur. Then from Hosur, its 67 km to Hogenakal. Here is the road map.

When we reached hogenakal, it was almost afternoon. On the entrance to the falls, we found many policemen guarding the entrance. we found plenty of hotels also. But thought to feast the eyes first, then treat our stomach. If you like fish, its said to be at its best taste in Hogenakal. Don't worry veggies, it wont bore you too. Mangoes, churumuris, bhel puri and many others to pass time   throught ur journey to the foot of the falls and also in river !! :-) :-)

First, you have to get a boat to go to the foot of the falls. They charge you 150-160 per head or 900 per boat(In a boat 6 ppl). They also provide 2 life jackets per boat and the boats called "Teppa" in kannada are in good condition and no need to worry. They may  say more initially, but agree to this aound this rate.
From the place where you start, you have to get down at one place, from there the boatman takes you to the steep steps, from where real fun begins :-)



Initially you see the shooting spot of Film Roza. Then a big water fall. He takes you under the waterfall. That is really thrilling. (If you go in rainy season, all these things wil be covered by water. And they will show you some new wonders in another route). After that he showed us the making spot of Chandramouli(Chandramouli falls) and 2 more films, of that of hindi film Ashoka and an upcoming film "kashta pattu ishta patte" being released in 3 south indian languages. To learn the names of other films and see the spots, you have to be there only ! :-) :-)

moving to the foot of hogenakal falls


  • The more facinating thing about hogenakal is you can go to almost  foot of the falls in boat and enjoy the water splashing on you.
  • There will be vendors selling cocunts, biscuits, lays in their seperate boats!!
  • There is one photo studio "Shabari" just near the water falls


    Last one might be less fascinating although :P . Sometimes boatmen asks you whether he can swirl the boat. The swirling experience is also really good.Sometime he may give you the row to run the boat also(on request). You can enjoy like anything, but be a bit careful as always :) He also shows you the caves created by running waters in rainy season.
    In a burrow created by running waters

      After you see the initial falls, you will be taken near karnataka Tamil Nadu border. From there we got to know that u can come to this from the side of mysore also. If you go that side, u can enjoy the places like Male Mahadeshwara betta (at 45 km) and others. You have buses also that way. Near that place only there is a sand shore. At that shore, fish food will be prepared. If you want to enjoy, you can go there and enjoy that too


    After that we returned back to the place of steep steps. Near that only there is one more waterfall. U can enjoy that well. you have to cross the waters of waist length to get to that. There are crabs in the water!! But they are of no harm. You will feel like something is biting you if you stand at a place for a while. But no harm from them. And you wont find this also if you keep moving:-)

    After that the boat journey almost takes you back to the place you came from. On the way , you can see people getting oil massage. People believe that water here has medicinal values. So Oil, massage is in great demand. But, be careful anyways. After returning to the bank where we started, we thought to see the remaining falls. so we went ahead. Initially you get the seperate bath sections for men and wome. They too are like falls only. But we didnt go there. Went to the left of it. There you have a hanging Bridge. 5/head is the entry fee to cross that. From the top of the bridge you can see the running river at hundreads of feet down.
    View from Hanging Bridge of Hongenakal Falls


    After you cross the hanging bridge, you can see the Cini falls and then the mini falls. Both are good. You can enjoy many snaks and masla mango and other things on the way here. To bath in mini water falls, again entry fee of 5. We didn't go there and and rested on the rocks there itself. After resting for a while, we returned back to the place where we started. After seeing the falls, you can also enjoy shopping dolls and other things in the street. Ice creams, juices and others need not be mentioned !! As we ate many things near the falls, we were in no hurry to rush to nay hotel. So we came near our tempo.Then went to crocodile park

    Mini Falls-Hogenakal


    Crocodile Park
    It is located around 1.5 Km from Hogenakal falls. Its good. Entry fee is 1 Rs !! You can enjoy the views of many sleeping, walking crocodiles of different ages and sizes. When we entered, a goat was just fed into a cage of crocodiles.. The scene of crocodiles dissucting it and sharing among themselves.. caused nausea in some and interest in many. Then , after that we headed back to bangalore with nice memories of Hogenakal



     Note:One warning to the people with vomitting sensation in ghats. Hogenakal route has lot of curvings and many people get vomitting sensation. So you can rely on Arecanut, lemon or  moreover will power to overcome it :-) :-)







    Thursday, May 24, 2012

    ಪೆಟ್ರೋಲ್ ದರ ಹೆಚ್ಚಳ ಮತ್ತು ನಾವು

    ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು .

    ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?

    ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ?

    ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಐಟಿಪಿಲ್ ಕಡೆ ಎಷ್ಟೊಂದು ಬಸ್ಸುಗಳು ಸಂಚರಿಸುತ್ತದೆ, ಅದರಲ್ಲಿ ಎಷ್ಟೊಂದು ಓಲ್ವೋಗಳು ಬೇರೆ. ಆದರೂ ಯಾವುದೇ ಸಿಗ್ನಲ್ಲಲ್ಲಿ ನೋಡಿದರೂ ಸರಾಸರಿ ಒಂದು ಬಸ್ಸಿಗೆ ೧೫-೨೦  ಬೈಕು, ೭-೮ ಕಾರುಗಳು ನಿಂತಿರುತ್ತದೆ. ಅದೂ ಒಂದು ಕಾರಿನಲ್ಲಿ ನಾಲ್ಕು ಜನರು ಬರುವ "ಕಾರ್ ಪೂಲ್" ಪದ್ದತಿಯನ್ನಾದರೂ ಅನುಸರಿಸುತ್ತಿದ್ದೇವಾ ? ಅದೂ ಇಲ್ಲ. ಎಲ್ಲ ಕಾರಿನಲ್ಲೂ ಒಬ್ಬೊಬ್ಬರೇ!! ದಯವಿಟ್ಟು ಅನ್ಯಥಾ ಭಾವಿಸದಿರಿ. ಯಾರನ್ನೂ ದೂಷಿಸುತ್ತಿಲ್ಲ.ಈ ಮಾರ್ಗ ಒಂದೇ ಅಲ್ಲ. ಬಹಳಷ್ಟು ಕಡೆ ಇದೇ ಕಥೆ. ಸರಕಾರವನ್ನು ಅಥವಾ ಇನ್ಯಾರನ್ನೋ ಎಲ್ಲದಕ್ಕೂ ದೂಷಿಸುವ ನಾವು ಇರೋ ಪೆಟ್ರೋಲನ್ನು ಉಳಿಸುವತ್ತ ನಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ್ದೇವಾ ಎಂದರೆ ಇಂತಹ ನಿರಾಶಾದಾಯಕ ಉತ್ತರಗಳೇ ದುತ್ತೆಂದು ಎದುರಾಗುತ್ತವೆ. ಸೌರಶಕ್ತಿಯ ಬಳಕೆ ಇರಬಹುದು, ಕಾರ್ಪೂಲಿಂಗ್ ಇರಬಹುದು. ನವೀಕರಿಸಲಾಗದ ಶಕ್ತಿ ಮೂಲಗಳನ್ನು ಉಳಿಸಲು, ಸಮರ್ಪಕವಾಗಿ ಬಳಸಲು ತಂತ್ರಜ್ನಾನಗಳು ನೂರೆಂಟು ಇವೆ. ಅದರಲ್ಲಿ ನ್ಯೂನತೆಗಳೂ ಇರಬಹುದು. ಆದರೆ ಮನಸ್ಸಿದ್ದಲ್ಲಿ ಮಾರ್ಗ.ಅದನ್ನು ಬಿಟ್ಟು ಇನ್ಯಾರನ್ನೋ ಗೂಬೆ ಕೂರಿಸುತ್ತಾ ಕೂತರೆ ಪೆಟ್ರೋಲ್ ರೇಟು ತೊಂಬತ್ತಲ್ಲ , ಸದ್ಯದಲ್ಲೇ ನೂರೂ ದಾಟಬಹುದು. ಇನ್ನೂರೂ ದಾಟಬಹುದು

    Image Source: allaboutindia.org