Wednesday, April 10, 2013

ಯುಗಾದಿ ಶುಭಾಶಯ!

ಆಫೀಸಲ್ಲಿ ಯುಗಾದಿ ಆಚರಣೆ !!!

ಸ್ವಾಗತದ್ವಾರದಲ್ಲಿ ಸ್ವಾಗತಕಾರಿಣಿಯಿಂದ ಬೇವು ಬೆಲ್ಲ ವಿತರಣೆ ! ಯುಗಾದಿ ಹಿಂದಿನ ದಿನ ಹಬ್ಬದೂಟ. ಹೋಳಿಗೆ, ಕೋಸಂಬ್ರಿ, ಚಿತ್ರಾನ್ನ, ಮೊಸರನ್ನ, ಅಂಬೊಡೆ, ಚಟ್ನಿ, ಹಪ್ಪಳ..
"ಹಬ್ಬ ತಪ್ಪಿದ್ರೂ ಹೋಳಿಗೆ ತಪ್ತಲ್ಲೆ.." ಅಂತ ಅಪ್ಪ ಹೇಳ್ತಿದ್ದು ನೆನಪಾಗ್ತಿದೆ. ಬರಲಿರೋ ವಿಜಯ ಸಂವತ್ಸರಕ್ಕೊಂದು ಜೈ ಹೋ :-) ಹಾಂ.. ನಿಮ್ಮೆಲ್ಲರಿಗೂ ಕೂಡ ಹೊಸ ವರ್ಷದ ಶುಭಾಶಯಗಳು :-) ಹೊಸ ವರ್ಷ ಹೊಸ ಹರ್ಷೋಲ್ಲಾಸಗಳನ್ನು ತರಲಿ :-)


ಪ್ರತೀ ಹಬ್ಬ ಬಂದಾಗ್ಲೂ ಏನೋ ಒಂತರಾ ಖುಷಿ. ..
ಎಲ್ಲೆಲ್ಲೋ ಮಿಸ್ಸಾದ, ಸಮಯದಲೇಲಿ ಕಳೆದೋದ ಗೆಳೆಯರಿಗೆ ಒಂದು ಮೆಸೇಜೋ, ಕಾಲೋ, ಎಫ್ಬೀಲೋ ವಿಷ್ ಮಾಡೋದು. ಈ ಹಾರೈಕೆ ಪ್ರತಿ ಹಾರೈಕೆಗಳ ನಡುವೇನೆ ಮತ್ತೆ ಗೆಳೆಯ, ಬಂಧುಗಳೆಲ್ಲಾ ನೆನ್ಪಾಗೋದು. ಕೆಲಸ ಕಾರ್ಯಗಳ ನಡುವೆ ಎಷ್ಟೇ ಕೆಳೆದುಹೋದ್ರೂ, ಸಮಯನೇ ಇಲ್ಲ ಅಂತ ಎಷ್ಟೇ ಬಡ್ಕೊಂಡ್ರೂ, ಸ್ವಂತದ ಕಷ್ಟ ನೋವುಗಳೇನೇ ಇದ್ರೂ ಹಬ್ಬದ ನೆಪದಲ್ಲಾದ್ರೂ ಈ ರೀತಿ ಮಾತಾಡ್ತಾ ಮತ್ತೊಂದ್ಸಲ ಖುಷಿಯ ಅಲೆ ಏಳುತ್ತೆ, ಬಾಂಧವ್ಯಗಳೂ ಉಳ್ಯತ್ತೆ .. ಈ ರೀತಿ ಹಬ್ಬಗಳು ಬರ್ತಿರ್ಬೇಕು ಕಣ್ರಿ :-)

ಎಂತಕೆ ಈ ವಿಷ್ಯ ಬಂತಪಾ ಅಂದ್ರೆ..
ಒಬ್ರಿಗೆ ಹಿಂಗೇ ಒಂದು ಹಬ್ಬಕ್ಕೆ ಅಂತ ಒಬ್ರಿಗೆ ವಿಷ್ ಮಾಡಿದಿ.
ಚಾಟ್ ಹಿಸ್ಟರಿ ನೋಡಿದಾಗ ಹಿಂದಿನ ಮೆಸೇಜ್ ಕಳ್ಸಿದ್ದು ಹಿಂದಿನ ವರ್ಷ ಹೊಸವರ್ಷಕ್ಕೆ !! ಅಂದ್ರೆ ಒಂದು ವರ್ಷ ಆದ್ರೂ ಸುದ್ದೀನೆ ಇರ್ಲೆ. ಹಿಂಗೇ ಒಂದೂವರೆ ವರ್ಷ ಆದ್ಮೇಲೆ ಸಿಕ್ಕವ್ರೂ ಇದ್ದ. ಅಲ್ಲಿವರೆಗೆ ಅವ್ರು ಎಲ್ಲೋದ , ಎಂತ ಕತೆ ಏನೂ ಸುದ್ದಿ ಇರ್ಲೆ.. ಎಲ್ಲಾ ಎಫ್ಬಿಲಿ ಸಿಕ್ತ ಹೇಳ್ತ.. ಆದ್ರೂ ಇದು ನಿಜ !!
ಒಬ್ರಿಗೆ ಹಿಂಗೇ ಒಂದು ಹಬ್ಬಕ್ಕೆ ಅಂತ ವಿಷ್ ಮಾಡಿದಿ.
ಚಾಟ್ ಹಿಸ್ಟರಿ ನೋಡಿದಾಗ ಹಿಂದಿನ ಮೆಸೇಜ್ ಕಳ್ಸಿದ್ದು ಹಿಂದಿನ ವರ್ಷ ಹೊಸವರ್ಷಕ್ಕೆ !! ಅಂದ್ರೆ ಒಂದು ವರ್ಷ ಆದ್ರೂ ಸುದ್ದೀನೆ ಇರ್ಲೆ. ಹಿಂಗೇ ಒಂದೂವರೆ ವರ್ಷ ಆದ್ಮೇಲೆ ಸಿಕ್ಕವ್ರೂ ಇದ್ದ. ಅಲ್ಲಿವರೆಗೆ ಅವ್ರು ಎಲ್ಲೋದ , ಎಂತ ಕತೆ ಏನೂ ಸುದ್ದಿ ಇರ್ಲೆ.. ಎಲ್ಲಾ ಎಫ್ಬಿಲಿ ಸಿಕ್ತ ಹೇಳ್ತ.. ಆದ್ರೂ ಇದು ನಿಜ !!


ಮತ್ತೊಂದ್ಸಲ ಎಲ್ರಿಗೂ ಯುಗಾದಿಯ, ಬರಲಿರೋ ವಿಜಯನಾಮ ಸಂವತ್ಸರದ ಶುಭಾಶಯಗಳು :-)
ಸಂವತ್ಸರಗಳೆಲ್ಲಾ ಮರ್ತೋಗಿರೋರ ಹೆಲ್ಪಿಗೆ ಹೇಳೊಂದು ಸಂವತ್ಸರಗಳ ಲಿಂಕು
http://groups.yahoo.com/group/satvargas/message/4952

3 comments:

  1. ಇಂದಿನ ಆಚರಣೆಯ ಅರುಚಿಯನ್ನು ಸಮರ್ಥವಾಗಿ ಬಿಂಬಿಸಿದ ಬರಹ.
    ತಮಗೂ ತಮ್ಮ ಮನೆ ಮಂದಿಗೆಲ್ಲ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
  2. ಹಬ್ಬ ಯಾವ ರೀತಿಯಲ್ಲದಾರು ಆಚರಿಸಬೇಕು ಆಗ ಮಾತ್ರ ಮನಕ್ಕೆ ಒಂದು ತುಸು ನೆಮ್ಮದಿ ಅಲ್ಲವೆ. ಸುಂದರ ಲೇಖನ ಗೆಳೆಯ. ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  3. ನಿಮ್ಮ ಮಾತು ಒಪ್ಪಿದೆ ಶ್ರೀಕಾಂತ್ ಜೀ ಮತ್ತು ಬದ್ರಿ ಸರ್. ಧನ್ಯವಾದಗಳು :-)
    ನಿಮಗೂ ಶುಭಾಶಯಗಳು :-)

    ReplyDelete