Saturday, November 18, 2017

ಮೆಕ್ಸಿಕೋ ಮಳೆ ಮತ್ತೆ ಮೊಬೈಲು

ಇದ್ದಕ್ಕಿದ್ದಂತೆ ಮಧ್ಯರಾತ್ರಿ ವಿಪರೀತ ಮಳೆಯಾದ್ರೆ ಏನಾಗುತ್ತೆ ಅಂದ್ರೆ ನಾವು ಯಾವ ಜಾಗದಲ್ಲಿದ್ದೀವಿ ಅನ್ನೋದ್ರ ಮೇಲೆ ಉತ್ತರ ಕೊಡಬಹುದು ಅನ್ನಿಸುತ್ತೆ. ಬೆಂಗಳೂರಲ್ಲಾದ್ರೆ ಅಪಾರ್ಟುಮೆಂಟುಗಳಲ್ಲೆಲ್ಲಾ ನೀರು ತುಂಬಬಹುದು ಅಂತಲೋ, ಮಲೆನಾಡಲ್ಲಾದ್ರೆ ಒಂದಿಷ್ಟು ಫಸಲು ಕೊಚ್ಚಬಹುದು ಅಂತಲೋ ಅನ್ನಬಹುದು. ಆದರೆ ಮೊಬೈಲ್ ಕ್ಯಾಮೆರಾ ಮಟಾಷ್ ಆಗುತ್ತೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ !

ಕ್ಯಾಮರಾ ಮತ್ತು ನೀರು: 
ಏನಾಯ್ತು ಅಂದ್ರಾ ? ಹಿಂದಿನ ದಿನ ರಾತ್ರಿಯ ಭಾರಿ ಮಳೆಗೆ ಬೇಸ್ಮೆಂಟಿನಲ್ಲಿದ್ದ ನಮ್ಮ ಅಪಾರ್ಟುಮೆಂಟಿಗೆ ನೀರು ನುಗ್ಗಿ ಮೊಬೈಲು, ಲ್ಯಾಪ್ತಾಪು, ಬೆಡ್ಡುಗಳೆಲ್ಲಾ ನೀರಲ್ಲಿ ತೇಲಾಡಿದ್ವು ! ನೀರು ಹೊರಗಾಕೋಕೆ ಎರಡೂವರೆ ಘಂಟೆ ಒದ್ದಾಡಿದ ಮೇಲೆ ಮಲಗೋಕೆ ಒಂದಿಷ್ಟು ಒಣ ನೆಲ ಸಿಕ್ಕಿತ್ತು ! ಬ್ಯಾಟರಿ ತೆಗೆದು ಅಕ್ಕಿಡಬ್ಬದೊಳಗಿಟ್ಟ ಮೊಬೈಲಿಗೆ ಮಾರನೇ ದಿನ ಜೀವ ಬಂತು. ಕಾಲ್ ಹೋಗ್ತಿದೆ, ವಾಟ್ಪಾಸ್ ಆನಾಗ್ತಿದೆ ಅಂದ ಮೇಲೆ ನನ್ನ ಖುಷಿಗೆ ಮೇರೆಯೇ ಇಲ್ಲ. ಆ ಮಧ್ಯಾಹ್ನವಷ್ತೇ ಕ್ಯಾಮೆರಾ ಯಾಕೋ ಆನಾಗ್ತಿಲ್ಲವಲ್ಲ ಅಂತ ಗಮನಿಸಿದ್ದು. ಕಂಪ್ಯೂಟರಲ್ಲೂ ಕೆಲವೊಮ್ಮೆ ಸ್ಪೀಕರ್ ಕೆಲಸ ಮಾಡದಿದ್ದಾಗ , ವೆಬ್ ಕ್ಯಾಮ್ ಕೆಲಸ ಮಾಡದಿದ್ದಾಗ ಅದನ್ನು ರೀಬೂಟ್ ಮಾಡಿದಾಗ ಸರಿಯಾಗುತ್ತಲ್ಲ ಅದೇ ತರಹ ಇಲ್ಲೂ ಪ್ರಯತ್ನ ಮಾಡಾಯ್ತು. ಪ್ರಯೋಜನವಿಲ್ಲ. ಮೊಬೈಲಿನ ಸೆಟ್ಟಿಂಗ್ಸಿಗೆ ಹೋಗಿ ಅಲ್ಲಿನ ಅಪ್ಲಿಕೇಶನ್ ಮ್ಯಾನೇಜುಮೆಂಟಿನಲ್ಲಿ ಕ್ಯಾಶೆ ಕ್ಲಿಯರ್ ಮಾಡಾಯ್ತು. ಊಹೂಂ. ಅದರಲ್ಲಿದ್ದ ಡಾಟಾ ಕೂಡ ಕ್ಲಿಯರ್ ಮಾಡಾಯ್ತು. ಊಹೂಂ. ಮೊಬೈಲು ಆಫ್ ಮಾಡಿ , ಬ್ಯಾಟರಿ ತೆಗೆದು ಒಂದೆರಡು ಘಂಟೆಯ ಬಿಟ್ಟು ಮತ್ತೆ ಹಾಕಾಯ್ತು. ಊಹೂಂ. ಮತ್ತದೇ 'unfortunately camera has stopped working' ಅನ್ನೋ ಸಂದೇಶ. ಲೆನೊವೋ ಮೊಬೈಲಾದ ಕಾರಣ ಲೆನೊವೋ ಸಹಾಯಕ್ಕೆ ಹೋಗಿ ಅದರಲ್ಲಿ self diagnostics ಗೆ ಹೋಗಿ ಅಲ್ಲಿದ್ದ ಎಲ್ಲ ಟೆಸ್ಟುಗಳನ್ನೂ ಮಾಡಾಯ್ತು. ಬ್ಲೂಟೂತ್, ವೈಫೈ ಎಲ್ಲಾ ಸ್ರಿಯಾಗೇ ಇದೆ. ಆದರೆ ಮೊಬೈಲಿನ ಮುಂದಿನ ಮತ್ತು ಹಿಂದಿನ ಕ್ಯಾಮೆರಗಳೆರಡಕ್ಕೂ ಇದು ಕೆಲಸ ಮಾಡುತ್ತಿಲ್ಲ ಅನ್ನೋ ಎರರ್ ಮೆಸೇಜ್. ಎರಡು ವರ್ಷವಾಗೋ ಹೊತ್ತಿಗೆ ಮೊಬೈಲು ಎಸೆಯೋ ಹಾಗಾಗಿರುತ್ತೆ ಅಂತಿರ್ತಾರೆ. ಆದರೆ ಚೆನ್ನಾಗೇ ಇಟ್ಟುಕೊಂಡಿದ್ದ ಮೊಬೈಲಿನ ಎರಡೂ ಕ್ಯಾಮೆರಾಗಳು ಇದ್ದಕ್ಕಿದ್ದಂತೆ ಬಂದಾದ್ರೆ ಏನನ್ನೋದು ? ಎಲ್ಲ ಕಡೆ ಇದ್ದಂತೆ ಕಾಂಟಾಕ್ಟುಗಳ ಬ್ಯಾಕಪ್ ತೆಗೆದುಕೊಂಡು ಫಾರ್ಮಾಟೂ ಮಾಡಾಯ್ತು. ಆದರೆ ಅದರಿಂದ ಕ್ಯಾಮರಾ ಸರಿಯಾಗಲಿಲ್ಲ. ಹೊಸ ಸಮಸ್ಯೆಗಳು ಶುರುವಾದ್ವು. 

ಫಾರ್ಮಾಟು ಮತ್ತು ವಾಟ್ಸಾಪು: 
ಫಾರ್ಮಾಟು ಮಾಡೋ ಮೊದಲು ಅಪ್ಲಿಪ್ಕೇಷನ್ನುಗಳ ಬ್ಯಾಕಪ್ ತೆಗೆದುಕೊಂಡಿದ್ರೂ ಹೊಸದಾಗಿ ಶುರುವಾಗೋ ಮೊಬೈಲಿನಲ್ಲಿ ವಾಟ್ಸಾಪು ಹೊಸದಾಗಿ ಇನ್ ಸ್ತಾಲ್ ಆಗುತ್ತೆ. ವಾಟ್ಸಾಪಿನ ಪಾಲಿಗೆ ಅದು ಹೊಸ ಮೊಬೈಲಿನಂತೆಯೇ. ಹಾಗಾಗಿ ಸಹಜವಾಗೇ ಅದು ವೆರಿಫಿಕೇಶನ್ನಿಗೆ ಪ್ರಯತ್ನಿಸುತ್ತೆ. ವೆರಿಫಿಕೇಶನ್ನಿನ ಸಂದೇಶ ಸ್ವೀಕರಿಸಲು ನನ್ನ ಭಾರತೀಯ ಸಂಖ್ಯೆ ರೀಚಬಲ್ ಆಗಿದ್ರೆ ತಾನೇ ! ಇಂತಿಪ್ಪ ವಾಟ್ಸಾಪು ಮತ್ತು ಅಲ್ಲಿ ನನ್ನ ಭಾರತೀಯ ಹೆಸರಿನ ಮೂಲಕ ನನ್ನ ಪರಿಚಯವಿದ್ದ ಎಲ್ಲರ ಸಂದೇಶಗಳಿಗೂ ಇತಿಶ್ರಿ ಹಾಡಿತ್ತು ಮೊಬೈಲ್  ಫಾರ್ಮಾಟು ! ಇನ್ನು ಮಾಡೋದಿನ್ನೇನು, ಇದ್ದ ಮೆಕ್ಸಿಕೋ ಸಂಖ್ಯೆಯ ಮೂಲಕ ಹೊಸದಾಗಿ ರಿಜಿಸ್ಟರ್ ಮಾಡಿ ಖಾಲಿ ವಾಟ್ಸಾಪಿನ ದುನಿಯಾಕ್ಕೆ ಪ್ರವೇಶಿಸಿದೆ. 

ಕಳೆದೋದ ಕಾಂಟಾಕ್ಟುಗಳ ಹುಡುಕಿ: 
ಕಾಂಟಾಕ್ಟುಗಳು ಕಾರ್ಡಿಗೆ ಎಕ್ಸ್ ಪೋರ್ಟೆಂತೂ ಆಗಿದ್ವು. ಆದರೆ ಇಂಪೋರ್ಟಿಗೆ ಹೋದರೆ ಅದು ವೀ ಕಾರ್ಡಿನ ರೂಪದಲ್ಲಿ ಬೇಕು ಅಂತಿದೆ. ಆದರೆ ಎಕ್ಸ್ ಪೋರ್ಟಾಗಿದ್ದು ಟೆಕ್ಸ್ಟ್ ಫಾರ್ಮಾಟಿನಲ್ಲಿ.ಅದನ್ನು ನಾನು ಓದಬಹುದಾಗಿತ್ತಾದರೂ ಮೊಬೈಲಿಗೆ ಗೊತ್ತಾಗುತ್ತಿಲ್ಲವೇ ? ಪ್ರತಿಯೊಂದನ್ನೂ ಓದಿ ಓದಿ ಹೊಸದಾಗಿ ಸೇವ್ ಮಾಡಬೇಕಾ ಶಿವನೇ ಅಂದುಕೊಳ್ಳುವ ಹೊತ್ತಿಗೆ ಗೂಗಲ್ ಕಾಂಟಾಕ್ಟಿನಲ್ಲಿಟ್ಟಿದ್ದ ಬ್ಯಾಕಪ್ ನೆನಪಾಯ್ತು. ಗೂಗಲ್ಲಿಗೆ ಹೋಗಿ ನೊಡಿದ್ರೆ ಬರೀ ೧೯೦ ಮಾತ್ರವೇ ತೋರಿಸ್ತಿದೆ. ಆ ೧೯೦ ಆಗಲೇ ಮೊಬೈಲಿಗೆ ಬಂದಾಗಿತ್ತು. ಇದ್ದ ೯೦೦ ಚಿಲ್ಲರೆ ಕಾಂಟಾಕ್ಟುಗಳಲ್ಲಿ ಉಳಿದಿದ್ದು ಎಲ್ಲೋಯ್ತಪ್ಪ ಅಂತ ತಲೆಬಿಸಿಯಾಯ್ತು. ಆಫೀಸಿನ ಸಹೋದ್ಯೋಗಿಗಳ ನಂಬರು ಇತ್ಯಾದಿ ಸದ್ಯಕ್ಕೆ ಸೇವ್ ಮಾಡಿಕೊಂಡ ಯಾವೊಂದೂ ಗೂಗಲಿನಲ್ಲಿರಲಿಲ್ಲ.  ಅಂತೂ ಹುಡುಕುಡುಕಿ ಸೆಟ್ಟಿಂಗ್ಸಿಗೆ ಹೋಗಿ ಅಲ್ಲಿದ್ದ recover from sd card ಅನ್ನೋ ಆಯ್ಕೆ ಸಿಕ್ಕಿದ ಮೇಲೆ ಅಲ್ಲಿದ್ದ ಕಾಂಟ್ಯಾಕ್ಟಿನ ಬ್ಯಾಕಪ್ ಸಿಕ್ಕಿತು ! ಅಲ್ಲಿಂದ ರಿಕವರ್ ಕೊಟ್ಟ ಮೇಲೆ ಎಲ್ಲ ಕಾಂಟಾಕ್ಟುಗಳೂ ವಾಪಾಸ್ಸಾದ್ವು. ಅದರ ಮಧ್ಯೆ ಗೂಗಲ್ಲಿಂದ ಕಾಪಿ ಮಾಡೋಕೆ ಹೋಗಿ ಅದೇ ಕಾಂಟ್ಯಾಕ್ಟುಗಳು ಮೂರು ಮೂರು ಬಾರಿ ತೋರಿಸೋಕೆ ಶುರುವಾದ್ವು ! ಕಾಂಟಾಕ್ಟ್ಸು ಗಳಲ್ಲಿನ ಉನ್ನತ ಆಯ್ಕೆಗಳಿಗೆ ಹೋಗಿ merge contacts ಆಯ್ಕೆ ಮಾಡಿದ ಮೇಲೆ ಅವು ಮುಂಚೆಯಿದ್ದ ಸ್ಥಿತಿಗೆ ಬಂದವು. ನಂತರ ಮಾಡಿದ್ದ ಮೊದಲ ಕೆಲಸವೆಂದ್ರೆ ಅವೆಲ್ಲವನ್ನೂ ಗೂಗಲ್ ಕಾಂಟಾಕ್ಟಿಗೆಸೇರಿಸೋಕೆ ಪ್ರಯತ್ನಿಸಿದ್ದು. ಆದರೆ ಈಗಿನ ಗೂಗಲ್ ಕಾಂಟಾಕ್ಟಿಗೆ ಮೊಬೈಲಿಂದ ಸೇರಿಸೋಕೆ ಆಗೋಲ್ಲ. ಅದಕ್ಕೇಂತ ಹಳೆಯ ಆವೃತ್ತಿಗೆ ಹೋದರೆ ಅದು ಮೊಬೈಲಿದ್ದ ವಿಕಾರ್ಡ್ ಕೇಳಬೇಕೆ ? ಜೊತೆಗೆ ಮೊಬೈಲು ಮೆಕ್ಸಿಕೋದಲ್ಲಿದ್ದ ಕಾರಣ ಜೀಮೇಲಿನ ಭಾಷೆ ಇಂಗ್ಲೀಷಾಗಿ ಬದಲಾಗ್ತಿದ್ದಿದ್ದು ಬೇರೆ. ಕಾಂಟಾಕ್ಟಿಗೆ ಮತ್ತೆ ಮರಳಿ ಅದನ್ನು ವಿಕಾರ್ಡಾಗಿ ಎಕ್ಸ್ ಪೋರ್ಟ್ ಮಾಡಾಯ್ತು. ಜೀಮೇಲ್ ಕಾಂತಾಕ್ಟಿನ ಹಳೆಯ ಆವೃತ್ತಿಗೆ ಬಂದು ಅಲ್ಲಿ ಆ ವೀಕಾರ್ಡನ್ನು ಅಪ್ಲೋಡ್ ಮಾಡಿದರೆ ಮುಂಚೆಯಿದ್ದ ಕಾಂಟಾಕ್ಟುಗಳ ಜೊತೆ ಇವು ಡೂಪ್ಲಿಕೇಟಾದವು. ಅಲ್ಲಿದ್ದ ಸೇರಿಸುವ ಆಯ್ಕೆ ಉಪಯೋಗಿಸಿ ಕೊನೆಗೂ ಮೊಬೈಲಿನಲ್ಲಿದ್ದ ಎಲ್ಲಾ ಕಾಂಟಾಕ್ಟುಗಳನ್ನೂ ಗೂಗಲ್ಲಿಗೆ ಸೇರಿಸೋ ಹೊತ್ತಿಗೆ ಮಧ್ಯರಾತ್ರಿ ಹನ್ನೆರಡು ದಾಟಿತ್ತು. 

ಸ್ಕೈಪ ಸಾಹಸ: 
ಬೇರೆ ಎಲ್ಲಕ್ಕಿಂತ ಬೇಜಾರಾದ ವಿಷಯವಂದ್ರೆ ಅಮ್ಮನೊಂದಿಗೆ ಹೇಗೆ ಮಾತಾಡೋದು ಅಂತ. ದಿನಾ ಮಾತಾಡುತಿದ್ದ ವಾಟ್ಸಾಪಿನ ವೀಡಿಯೋ ಕಾಲ್ ಕೆಲಸ ಮಾಡುತ್ತಿಲ್ಲ. ಸ್ಕೈಪ್ ಬಳಸಿ ಲ್ಯಾಪ್ಟಾಪಿನ ಮೂಲಕ ಮಾತಾಡಬಹುದಾದರೂ ಊರಲ್ಲಿದ್ದ ಅಮ್ಮನ ಮೊಬೈಲಲ್ಲಿ ಅದನ್ನು ಹೇಗೆ ಇನ್ಸ್ಟಾಲ್ ಮಾದೋದು ಅಂತ . ಅಂತೂ ಅಮ್ಮನಿಗೆ ಕಾಲ್ ಮಾಡಿ ಗೂಗಲ್ಲಿಂದ ಆದನ್ನು ಡೌನ್ಲೋಡು ಮಾಡಿ ಇನ್ಟಾಲ್ ಮಾಡೋಕೆ ಹೇಳಾಯ್ತು. ಆದರೆ ಜಾಗವಿಲ್ವೆ. ವಾಟ್ಸಾಪಿನ ವೀಡಿಯೋ, ಫೋಟೋಗಳನ್ನು ಡಿಲಿಟ್ ಮಾಡಿಸಿದ್ರೂ ಜಾಗವಿಲ್ಲ. ಕೊನೆಗೆ ಸೆಟ್ಟಿಂಗ್-ಅಪ್ಲಿಕೇಷನ್ ಮ್ಯಾನೇಜ್ಮೆಂಟ್ ಗೆ ಹೋಗಿ ಅದರಲ್ಲಿದ್ದ ಕೆಲವು ಆಟಗಳನ್ನು ತೆಗೆದ ಮೇಲೆ ಜಾಗವಾಯ್ತು.ಅವರಿಗಾಗಿ ಒಂದು ಹೊಸ ಮೈಕ್ರೊಸಾಫ್ಟ್ ಖಾತೆ ತೆರೆದು ಅವರ ಮೊಬೈಲಿಗೆ ಬಂದ ವೆರಿಫಿಕೇಷನ್ ಕೋಡ್ ಕೇಳಿ ಅವರ ಮೊಬೈಲಲ್ಲಿದ್ದ ಸ್ಕೈಪೆಯಲ್ಲಿ ಅವರನ್ನು ಲಾಗಿನ್ ಮಾಡಿಸಿದ್ದೂ ಆಯ್ತು. ಇಷ್ಟೆಲ್ಲ ಕತೆಯಾಗಿ ಅವರಲ್ಲಿಂದ ಕಾಲ್ ಮಾಡೋಕೆ ಪ್ರಯತ್ನಿಸೋ ಹೊತ್ತಿಗೆ ನನ್ನ ಲ್ಯಾಪ್ಟಾಪಲ್ಲಿದ್ದ ಸ್ಪೀಕರ್ ಮಟ ಹತ್ತಬೇಕೆ ? ಮಳೆಯ ಹೊಡೆತಕ್ಕೆ ಇದ್ದ ಹೆಡ್ ಫೋನೂ ಮಟ :-( ಸರಿ ಅಂತ ಲ್ಯಾಪ್ಟಾಪ್ ರಿಬೂಟ್ ಮಾಡಿ ಸ್ಪೀಕರ್ ಸರಿಯಾಗಿಸೋ ಹೊತ್ತಿಗೆ ಭಾರತದಲ್ಲಿ ಮಧ್ಯರಾತ್ರಿ. ಅಂತೂ ಎರಡು ದಿನಗಳ ನಂತರ ಮಗನ ಮುಖ ಕಂಡಾಗ ಅವರಿಗದೆಷ್ಟೋ ಖುಷಿ. ಬೆಳಗ್ಗಿಂದ ಒದ್ದಾಡಿ ಕೊನೆಗೂ ಯಶಸ್ವಿಯಾಗಿದ್ದಕ್ಕೆ ನನಗೂ ಖುಷಿ. 


ಫಾರ್ಮಾಟು ಮತ್ತು ಉಬರ್: 
ಫಾರ್ಮಾಟಾದ ಮೇಲೂ ಕ್ಯಾಮೆರಾ ವರ್ಕಾಗಲಿಲ್ಲ ಅನ್ನೋದು ಬಿಟ್ಟರೆ ಬೇರೆಲ್ಲಾ ಅಪ್ಲಿಕೇಶನ್ನುಗಳು ಕೆಲಸ ಮಾಡುತ್ತಿದ್ದವು. ಹೊರಹೋದವ ಬರಬೇಕು ಅಂತ ಉಬರ್ ತೆರೆದರೆ ಅದೇ ಕೆಲಸ ಮಾಡುತ್ತಿಲ್ವೇ ? ಕ್ಯಾಮೆರಾಕ್ಕೆ ಬಂದ ಸಂದೇಶವೇ ಇಲ್ಲಿ ! ಕ್ಯಾಶೆ, ಡಾಟಾ ಕ್ಲಿಯರ್ ಮಾಡಿದ್ರೂ ಉಪಯೋಗವಾಗದಿದ್ದಾಗ ಅದನ್ನೂ ಅನ್ ಇನ್ತಾಲ್ ಮಾಡಿ ಮತ್ತೆ ಡೌನ್ಲೋಡ್ ಮಾಡಿದೆ. ಹೊಸದು ಓಪನ್ನೇನೋ ಆಯ್ತು. ಆದ್ರೆ ಮತ್ತೆ ವೆರಿಫಿಕೇಷನ್ ಸಾಹಸ ! ಈಮೇಲಿನ ಸಹಾಯದಿಂದ ಲಾಗಿನ್ ಆಗೋಕೆ ಪ್ರಯತ್ನ ಪಟ್ಟು ಮೆಕ್ಸಿಕನ್ ಸಂಖ್ಯೆ ನೀಡಿದ್ರೂ ವೆರಿಫಿಕೇಷನ್ ಕೋಡ್ ಬರುತ್ತಿಲ್ಲ. ಅದನ್ನೇ ಉಪಯೋಗಿಸಿ ರಿಜಿಸ್ಟರ್ ಮಾಡೋಣ ಅಂದರೆ ಈ ಈಮೇಲ್ ಆಗಲೇ ನೋಂದಣಿಯಾಗಿದೆ ಅನ್ನೋ ಸಂದೇಶ. ಒಳ್ಳೆ ತಲೆನೋವಾಯ್ತಲ್ಲ ಗುರುವೇ ಅಂತ ಫೇಸ್ಬುಕ್ಕಿನ ಮೂಲಕ ಲಾಗಿನ್ ಆಗೋಕೆ ಪ್ರಯತ್ನ ಪಟ್ರೆ ನನ್ನ ಭಾರತೀಯ ನಂಬರಿನ ಮೂಲಕವೇ ಲಾಗಿನ್ ಆಯ್ತು ! ಅದೂ ಯಾವ ವೆರಿಫಿಕೇಷನ್ ಕೊಡ್ ಕೇಳದೇ ! ಇದ್ದ ಉಬರಿನ ಮೂಲಕವೇ ಬೇರೆ ದೇಶಕ್ಕೆ ಹೋದಾಗ ಅಲ್ಲಿನ ಸಂಖ್ಯೆಗೆ ಬದಲಾಯಿಸೋಕೆ ಹೋದ್ರೆ ಆ ದೇಶದ ನಂಬರಿಗೆ ಮಾತ್ರ ಬದಲಾಯಿಸಬಹುದು. ಬೇರೆ ದೇಶದ ಸಂಖ್ಯೆಗೆ ಬದಯಾಯಿಸಬೇಕಂದ್ರೆ ಒಂದು ವೆಬ್ ಸೈಟಿಗೆ ಹೋಗಬೇಕನ್ನೋ ಆಯ್ಕೆ ಬರುತ್ತೆ. ಅಲ್ಲಿಗೆ ಹೋಗಿ ಪ್ರಯತ್ನ ಪಟ್ರೂ ಆಗಿರಲಿಲ್ಲ ನನಗೆ. ಆದರೆ ಅನ್ ಇನ್ಸ್ಟಾಲ್ ಮಾಡಿ, ಹೊಸದಾಗಿ ಇನ್ ಸ್ಟಾಲ್ ಮಾಡಿದಾಗ ಆದ ಲಾಭವೆಂದರೆ ಇಲ್ಲಿನ ಸಂಖ್ಯೆಗೆ ಬದಲಾಯಿಸೋ ಅವಕಾಶ ಸಿಕ್ಕಿದ್ದು. ಸುಮ್ಮನೇ ನೊಡೋಣ ಅಂತ ಬದಲಾಯಿಸೋಕೆ ನೋಡಿದ್ರೆ ವೆರಿಫಿಕೇಷನ್ ಕೋಡ್ ಬರಬೇಕೆ ? ಮಳೆಯಿಂದ ಎಷ್ಟೆಲ್ಲಾ ಅದ್ವಾನವಾಗಿದ್ರೂ  ಇದಾದ್ರೂ ಒಳ್ಳೆದಾಯ್ತಲ್ಲ ಅಂತಂದ್ಕೊಂಡು  ಮನೆಗೆ ಬಂದೆ. 

ಕೆಲವು ಗೆಳೆಯರಿಗೆ ಹೊಸ ಸಂಖ್ಯೆಯಿಂದ ಮೆಸೇಜ್ ಮಾಡಿ ಈ ತರ ಆಗಿದೆ ಅಂತ ಹೇಳಿದ್ಮೇಲೆ ಅವರ ಮೂಲಕ ಮುಂಚೆಯಿದ್ದ ಹಳೆಯ ವಾಟ್ಸಾಪ್ ಗುಂಪುಗಳಿಗೆ , ಅಮ್ಮನ ಮೂಲಕ ನೆಂಟರ ಗುಂಪುಗಳಿಗೆ ಮರಳಿ ಬಂದರೂ ಮುಂಚೆಯಿದ್ದ ವಾಟ್ಸಾಪಿನ ಕಳೆಯಿಲ್ಲ ಇದಕ್ಕೆ. ಉಪಯೋಗಿಸದೇ ಇದ್ದರೆ ೨೦೨೧ರ ವರೆಗೆ ವ್ಯಾಲಿಡಿಟಿ ಇದ್ದ ಸಿಮ್ಮನ್ನೂ ೩ ತಿಂಗಳಲ್ಲಿ ಡಿ ಆಕ್ಟಿವೇಟ್ ಮಾಡ್ತಾರೆ ಅನ್ನೋ ಹೊಸ ಹುಳ ತಲೆಯೊಳಗಿ ಬಿಟ್ಟಿದ್ದಾರೆ ಒಂದಿಷ್ಟು ಜನ. ಕ್ಯಾಮೆರಾ ಕೊನೆಗೂ ಸರಿಯಾಗುತ್ತಾ ಅಥವಾ ಅದಕ್ಕಾಗಿ ಹೊಸ ಮೊಬೈಲೇ ಕೊಳ್ಳಬೇಕಾ ಅಂತ ಮೊಬೈಲ್ ಸರ್ವೀಸ್ ಸೆಂಟರವರಿಂದಲೇ ಖಚಿತಪಡಿಸಿಕೊಳ್ಳೋ ಅಗತ್ಯವಿದೆ. ಎರಡು ದಿನವಾದರೂ ಒಣಗಲಿಟ್ಟ ಬೆಡ್ ಇನ್ನೂ ಆರದೇ ಇರೋ ಕಾರಣ ಹೊಸ ಬೆಡ್ ಕೊಳ್ಳೋ ಖರ್ಚೊಂದು ಕಾದಿದೆಯಾ ಗೊತ್ತಿಲ್ಲ. ಮಳೆಯ ಹೊಡೆತಕ್ಕೆ ಮನೆಯ ಹೊರಗಿದ್ದ ಹೀಟರಿನ ಇಗ್ನೈಟರಿಗೆ ನೀರು ನುಗ್ಗಿ ದಿನಾ ಬೆಳಗೆದ್ದರೆ ಸ್ನಾನಕ್ಕಾಗಿ ಕೊರೆಯೋ ತಣ್ಣೀರಲ್ಲಿ ಮಾಡಬೇಕಾದ ಐಸ್ವಾಟರ್ ಛಾಲೆಂಜಿಗೆ ಎಂದು ಮುಕ್ತಿಯೋ ಗೊತ್ತಿಲ್ಲ. ರಿಪೇರಿಯವನಿಗೆ ಹೇಳಿದರೂ ಅವರು ತಕ್ಷಣಕ್ಕೆ ಬರಬೇಕಲ್ಲ. ಎರಡು ದಿನವಾದರೂ ಒಣಗದ ಲ್ಯಾಪ್ಟಾಪ್ ಬ್ಯಾಗಿನ ಒಳಾಂಗಣಗಳ ಕಾಟ ಲ್ಯಾಪ್ಟಾಪಿಗೆ ಎಂದು ಬಿಡುಗಡೆಯೋ ಗೊತ್ತಿಲ್ಲ. ಏನೇ ಅಂದರೂ ಮೆಕ್ಸಿಕೋಕೆ ಬಂದು ಮೂರು ತಿಂಗಳಲ್ಲಿ ಕಾಡದಷ್ಟು ಸಮಸ್ಯೆಗಳನ್ನು ಮತ್ತು ಸಾಧ್ಯತೆಗಳನ್ನು ಒಟ್ಟಿಗೇ ತಂದಿಟ್ಟ ಶ್ರೇಯ ಇಲ್ಲಿನ ಮಳೆಗೆ ಅನ್ನೋ ಮಾತನ್ನಂತೂ ತಳ್ಳಿ ಹಾಕೋಕೆ ಸಾಧ್ಯವಿಲ್ಲ ಅನ್ನುತ್ತಾ ಸದ್ಯಕ್ಕೊಂದು ವಿರಾಮ. 

Thursday, November 16, 2017

ಮೆಕ್ಸಿಕೋ ಮಳೆಗಾಲ

ನಾವು ಸಣ್ಣವರಿದ್ದ ದಿನಗಳಲ್ಲಿ ಮಳೆಗಾಲ ಬಂತಂದ್ರೆ ಕಂಬಳಿಕೊಪ್ಪೆ ತಯಾರಿಮಾಡೋ ಬಗ್ಗೆಯೋ, ಕೆಲಸಕ್ಕೆ ಹೋಗೋಕೆ ಪ್ಲಾಸ್ಟಿಕ್ ಕೊಪ್ಪೆ ಮಾಡೋ ಬಗ್ಗೆಯೋ, ಮಳೆಗಾಲಕ್ಕಾಗುವಷ್ಟು ಹಪ್ಪಳ-ಸಂಡಿಗೆ ಮಾಡೋ ಬಗ್ಗೆಯೋ ಮಾತುಕತೆ ನಡೆಯುತ್ತಿತ್ತು. ಶಾಲಾ ಕಾಲೇಜಿಗೆ ಹೋಗೋ ಸಮಯದಲ್ಲಿ ರೈನ್ ಕೋಟು, ಛತ್ರಿ ಖರೀದಿಯ ಬಗ್ಗೆಯೋ, ಸೈಕಲ್ಲಿಗೆ ಓವರಾಲ್ ಮಾಡಿಸೋ ಬಗ್ಗೆಯೋ ಚರ್ಚೆ ನಡೆಯುತ್ತಿತ್ತು. ಬೆಂಗಳೂರಿಗೆ ಬಂದ ದಿನಗಳಲ್ಲಿ ಇವತ್ತು ಮಳೆ ಬರತ್ತಾ ಇಲ್ಲವಾ, ಯದ್ವಾ ತದ್ವಾ ಮಳೆಯಾಗಿ ರಸ್ತೆಗಳೆಲ್ಲಾ ಮುಳುಗಡೆಯಾಗಿ ಆಫೀಸಿಗೇನಾದ್ರೂ ರಜೆ ಸಿಕ್ಕಬಹುದಾ ಅಂತಲೋ, ಆಫೀಸಿಗೋಕೋಕೆ ಆಗದೇ ಇದ್ದರೂ ಕರೆಂಟಿಲ್ಲದಿದ್ದರೂ ವರ್ಕ್ ಫ್ರಂ ಹೋಮ್ ಮಾಡಿ ಅಂತೇನಾದ್ರೂ ಕಾಲ್ ಬರಬಹುದಾ ಅನ್ನೋ ಆಲೋಚನಾ ಲಹರಿಗಳಿರುತ್ತಿದ್ದವು. ಆದರೆ ಮೆಕ್ಸಿಕೋಕೆ ಬಂದ ಮೇಲೆ ಮಳೆಗಾಲ ಅಂದ್ರೆ ಹೊಸ ಬೆಡ್, ಹೊಸ ಮೊಬೈಲ್ ತಗೊಳ್ಳೋ ಕಾಲ ಅನ್ನುವಂತಾಗೋಯ್ತು !. ಯಾಕೆ ಅಂದ್ರಾ ? ಅದೇ ಇವತ್ತಿನ ಲೇಖನದ ವಿಷಯ

೮.೫ ಮತ್ತು ೭.೧ ತೀವ್ರತೆಯ ಭೂಕಂಪಗಳು ಎರಡು ವಾರಗಳಲ್ಲಿ ಆಗಿ ಮೆಕ್ಸಿಕೋದಲ್ಲಿದ್ದವರ ಮತ್ತು ಅವರಿಗೆ ಸಂಬಂಧಪಟ್ಟಂತೆ ವಿಶ್ವದಾದ್ಯಂತ ಇದ್ದವರನ್ನ ನಡುಗಿಸಿದ್ದವು. ಮೆಕ್ಸೀಕೋ ದೇಶದಲ್ಲಿ ಭಾರತೀಯರು ಹೆಚ್ಚಿರುವ ಗ್ವಾದಲಹರ ಮತ್ತು ಮಾಂಟೆರರಿ ನಗರಗಳಿಗೆ ಏನೂ ಆಗದಿದ್ದರೂ, ಮೆಕ್ಸಿಕೋ ನಗರದಲ್ಲೇ ಇದ್ದ ಭಾರತೀಯರಿಗೆ ಹೆಚ್ಚೇನೂ ತೊಂದರೆಯಾಗದಿದ್ದರೂ ಭೂಕಂಪಗಳು ತಂದಿತ್ತ ಭಯ ಅಷ್ಟಿಷ್ಟಲ್ಲ. ಕಣ್ಣೆದುರೇ ಮಗುಚಿ ಬಿದ್ದ ಕಟ್ಟಡಗಳ ಕಂಡವರಿಗೆ ದಿನಗಟ್ಟಲೇ ನಿದ್ದೆಯಿಲ್ಲ. ಬೆಳಗಾಗೆದ್ದು ನ್ಯೂಸ್ ನೋಡಿದ ಅವರ ಭಾರತದಲ್ಲಿದ್ದ ಹೆತ್ತವರಿಗೆ ಮಕ್ಕಳಿಗೆ ಕಾಲ್ ಮಾಡೋವರಿಗೆ ಸಮಾಧಾನವಿಲ್ಲ. ಭಾರತಕ್ಕಿಂದ ಹದಿಮೂರೂವರೆ ಘಂಟೆ ಹಿಂದಿರುವ ಕಾರಣ ರಾತ್ರಿಯಿಡೀ ಭಾರತದಿಂದ ಬರುತ್ತಿದ್ದ ಕಾಲು, ಮೆಸೇಜುಗಳಿಗೆ ಉತ್ತರಿಸುತ್ತಾ ಇಷ್ಟೆಲ್ಲಾ ಜನರಿಗೆ ನಮ್ಮ ಮೇಲಿರೋ ಕಾಳಜಿಗೆ ಖುಷಿ ಪಡೋದಾ ? ಅಥವಾ ಅದೇ ಉತ್ತರ ಎಲ್ಲರಿಗೂ ಹೇಳೇಳಿ ಬೇಜಾರು ಮಾಡ್ಕೊಳ್ಳೋದಾ ಗೊತ್ತಾಗುತ್ತಿರಲಿಲ್ಲ. ವಾರಗಟ್ಟಲೆ ಇಲ್ಲಿನ ವೃತ್ತಪತ್ರಿಕೆಗಳಲ್ಲಿ ಬಿದ್ದ ಕಟ್ಟಡಗಳ , ನೊಂದ ಜೀವಗಳ ಸುದ್ದಿಯೇ.  ಮೂರನೆಯ ವಾರ ನಾಲ್ಕರ ತೀವ್ರತೆಯ ಮತ್ತೊಂದು ಭೂಕಂಪವಾದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಸಮಯವಿರಲಿಲ್ಲ. ಮೊದಲೆರಡರಿಂದ ಹಾನಿಗೊಳವಾದವರಿಗೆ ನೆರವಾಗಬೇಕಲ್ಲ. ಕೆಂಪೆನಿಗಳು, ಎನ್ಜಿವೋ ಗಳು ತಮ್ಮ ಉದ್ಯೋಗಿಗಳಿಂದ ಬಟ್ಟೆ, ಆಹಾರ, ದುಡ್ಡು.. ಹೀಗೆ ಕೈಲಾದದ್ದನ್ನು ಸಂಗ್ರಹಿಸಿ ಹಂಚೋ ಪ್ರಯತ್ನದಲ್ಲಿದ್ದಾಗ ನಮ್ಮಿಂದಲೂ ಆದಷ್ಟು ಸಹಾಯ ಮಾಡೋ ಭಾವ. ದೇವರ ದಯೆಯಿಂದ ನಮಗೇನೋ ಆಗಿಲ್ಲವಲ್ಲ ಅನ್ನೋ ನೆಮ್ಮದಿಯ ನಿಟ್ಟುಸಿರು ಕೂಡ. 

ಭೂಕಂಪಗಳು ಸಾಕಾಗಿಲ್ಲ ಅಂತ ಅವುಗಳ ಜೊತೆ ಚಂಡಮಾರುತ ಇರ್ಮ ದ ಕಾಟ ಬೇರೆ. ಮಾಂಟೆರರಿ ಮುಂತಾದ ನಗರಗಳಲ್ಲಿ ಚಂಡಮಾರುತ ನೇರವಾಗಿ ಕಾಡದಿದ್ದರೂ ಅದರ ಪರೋಕ್ಷ ಪರಿಣಾಮಗಳು ಕಾಡುತ್ತಿದ್ದವು. ಇದ್ದಕ್ಕಿದ್ದಂಗೆ ಶುರುವಾಗಿ ಧೋ ಎಂದು ಸುರಿಯೋ ಮಳೆ. ಸಾಯಂಕಾಲ ಶುರುವಾದ್ರೆ ರಾತ್ರೆಯವರೆಗೂ ಬಿಡುವಿಲ್ಲದೇ ಸುರಿಯೋ ಕುಂಭದ್ರೋಣ ಮಳೆ. ಸಂಜೆಯೆಲ್ಲ ಮೋಡ ಮುಸುಕಿದ ವಾತಾವರಣವಿದ್ದರೆ ಮಧ್ಯರಾತ್ರಿಯೆಲ್ಲೋ ಶುರುವಾಗೋ ಮಳೆಗೆ ಬೆಳಗಾಗೋ ಹೊತ್ತಿಗೆ ಕಂಡಲ್ಲೆಲ್ಲಾ ನೀರು. ಇಂತದ್ದೇ ಒಂದು ರಾತ್ರಿ ಸುರಿದ ಮಳೆಗೆ ಟ್ರಾನ್ಸ್ ಫಾರ್ಮರ್ ಉಡೀಸ್ ಆಗಿ ಆಫೀಸಿಗೆ ೪ ಪಟ್ಟು ಹೆಚ್ಚು ದುಡ್ಡು ಕೊಟ್ಟು ತಲುಪಿದ್ದ ನಮಗೆಲ್ಲಾ ಆಘಾತ.ದಿನಾ ಬರುವ ಮುಕ್ಕಾಲು ಕಿ.ಮೀ ಸುರಂಗದ ಲೈಟುಗಳೆಲ್ಲಾ ಬಂದಾಗಿ ಬೆಳಗ್ಗೆಯೂ ಘೋರ ಕತ್ತಲೆ. ಟ್ರಾಫಿಕ್ ಲೈಟುಗಳೆಲ್ಲಾ ಬಂದು, ನೀರು ನಿಂತ ರಸ್ತೆಗಳಲ್ಲಿ ದಿನಾ ಇರಬೇಕಾದ ಚೆಂದದ ಪೋಲೀಸವಳೂ ಇಲ್ಲ ! ಅಂತೂ ಆಫೀಸಿಗೆ ತಲುಪಿದ್ರೆ ಅಲ್ಲೂ ಕತ್ತಲ ಸಾಮ್ರಾಜ್ಯ. ಆಫೀಸಲ್ಲಿದ್ದ ಪವರ್ ಬ್ಯಾಕಪ್ಪೂ ಮಟಾಷ್ ಆಗಿ ಇಂಟರ್ನೆಟ್ಟಿದೆ. ಕರೆಂಟಿಲ್ಲ. ಲ್ಯಾಪ್ಟಾಪಲ್ಲಿ ಪವರಿರುವಷ್ಟು ಹೊತ್ತು ಕತ್ತಲಲ್ಲೇ ಕೆಲಸ ಮಾಡಿ ಮನೆಗೆ ಹೋಗಿ ಕನೆಕ್ಟ್ ಮಾಡಿ ಅನ್ನೋ ಆದೇಶ ಅಲ್ಲಿಯವರಿಂದ. ಅಂತೂ ಹೀಗೇ ಮುಕ್ಕಾಲು ಘಂಟೆ ಕಳೆಯುವಷ್ಟರಲ್ಲಿ ಟ್ರಾನ್ಸ್ ಫಾರ್ಮರ್ ಸರಿಯಾಗಿ ಕರೆಂಟ್ ಬಂತು ಅನ್ನುವಲ್ಲಿಗೆ ಅವತ್ತಿನ ವ್ಯಥೆ ಕೊನೆಯಾಗಿತ್ತು. 
 

ಮಳೆಗಾಲದ ಆಟಗಳು ಅಲ್ಲಿಗೇ ಮುಗಿಯಲಿಲ್ಲ. ಆ ದಿನ ರಾತ್ರಿಯೇ ನಾವೆಲ್ಲಾ ಮಲಗಿರುವಾಗ ಶುರುವಾದ ಭಯಂಕರ ಮಳೆಗೆ ಬೇಸ್ಮೆಂಟಿನಲ್ಲಿದ್ದ ನಮ್ಮ ಅಪಾರ್ಟ್ ಮೆಂಟಿಗೆ ನೀರು ನುಗ್ಗಿತ್ತು. ಮುರು ಅಂತಸ್ತುಗಳ ನಮ್ಮ ಕಟ್ಟಡದಲ್ಲಿ ಬಿದ್ದ ಮಳೆ ನೀರೆಲ್ಲಾ ನಮ್ಮ ರೂಮಿನ ಪಕ್ಕದಲ್ಲೇ ಕೆಳಕ್ಕೆ ಬಂದು ಹೊರ ಹೋಗೋ ವ್ಯವಸ್ಥೆ. ಮೇಲಿನವರು ಎಸೆದ ತೋರ್ತಿಲ್ಲ(ರೊಟ್ಟಿಯಂತಹ ತಿಂಡಿ) ಮುಂತಾದ ಖಾಲಿ ಕವರುಗಳಿಂದ ನೀರು ಹೊರಹೋಗೋ ಜಾಗ ಬ್ಲಾಕಾಗಿ ನೀರಿಗೆ ಹೊರಹೋಗೋಕೆ ಕಷ್ಟವಾಗಿತ್ತು ಅಂತ ಹಿಂದಿನ ದಿನಗಳ ಮಳೆಯಿಂದ ನಮಗೆ ಅಂದಾಜಾಗಿರಲಿಲ್ಲ. ಬಿದ್ದ ಭಾರೀ ಮಳೆಗೆ ನೀರು ಹೊರಹೋಗೋಕೆ ಜಾಗವಿಲ್ಲದೆ ನಮ್ಮ ರೂಮಿಂದ ಆ ಪ್ಯಾಸೇಜಿಗೆ ಹೋಗೋ ಜಾಗವೆಲ್ಲ ಬಂದಾಗಿ ಅಲ್ಲಿದ್ದ ಬಾಗಿಲಿನ ಮೂಲಕ ಮನೆಗೆ ನೀರು ನುಗ್ಗಿತ್ತು. ಹತ್ತಿರದಲ್ಲಿದ್ದ ಅಡಿಗೆ ಮನೆ, ಹಾಲುಗಳನ್ನೆಲ್ಲಾ ಆವರಿಸಿದ ನೀರು ನಂತರದ ಬಚ್ಚಲುಗಳನ್ನೂ ದಾಟಿ ಮುಂದಿದ್ದ ನನ್ನ ರೂಮಿಗೆ ಬಂದರೂ ನನಗೆ ಎಚ್ಚರವಿಲ್ಲ. ಪಕ್ಕದೆರೆಡು ರೂಂ ಮೇಟುಗಳ ಕಾಟಿನ ಮೇಲೆ ಬೆಡ್ಡಿದ್ದರಿಂದ ಅವರಿಗೆ ಅಷ್ಟೇನೂ ತೊಂದರೆಯಾಗದಿದ್ದರೂ ಅವರು ಎಚ್ಚರವಾಗಿ ನೀರು ಹೊರಚೆಲ್ಲೋ ಕೆಲಸದಲ್ಲಿ ತೊಡಗಿದ್ದರು. ಹೊಸದಾಗಿ ಬಂದವನಾದ ನಾನು ಕಾಟಿಲ್ಲದೇ ನೆಲದ ಮೇಲೆ ಬೆಡ್ ಹಾಕಿದ್ದೆ. ಮಲಗಿದ್ದವನಿಗೆ ಕಾಲ್ಯಾಕೋ ತೇವವಾದಂತಿದೆಯಲ್ಲ ಅನಿಸಿ ಎದ್ದು ನೋಡಿದರೆ ಸುತ್ತೆಲ್ಲಾ ನೀರು ! ತೆಪ್ಪದಲ್ಲಿ ಕೂತವನಿಗೆ ಕಾಣುವಂತೆ ಸುತ್ತೆಲ್ಲಾ ನೀರು ! ಪಕ್ಕ ನೋಡಿದ್ರೆ ಚಾರ್ಜಿಗಿಟ್ಟಿದ್ದ ಮೊಬೈಲು ನೀರಲ್ಲಿ ತೇಲಾಡುತ್ತಿತ್ತು. ಲ್ಯಾಪ್ಟಾಪಿನ ಬ್ಯಾಗೂ ನೀರಲ್ಲಿ ಒದ್ದೆಯಾಗಿದೆ. ಎದ್ದೆನೋ ಬಿದ್ದೆನೋ ಅಂತ ಮೊಬೈಲನ್ನು ಚಾರ್ಜಿಂಗಿದ ತೆಗೆದೆ. ಲ್ಯಾಪ್ಟಾಪನ್ನು ಬ್ಯಾಗಿಂದ ತೆಗೆದು ಆದಷ್ಟು ನೀರೊರೆಸಿ ಮೇಲಿಟ್ಟೆ. ಆಫೀಸಿನ ಲ್ಯಾಪ್ಟಾಪು ಮಟ ಹತ್ತಿದರೆ ಎಷ್ಟು ದಂಡ ಕಟ್ಬೇಕಾಗತ್ತಪ್ಪ ಅನ್ನೋ ಭಯ. ಅದನ್ನು ಸದ್ಯಕ್ಕೆ ಅತ್ತಲಿರಿಸಿ ಮೊಬೈಲಿನ ಬ್ಯಾಟರಿ ತೆಗೆದು ಅಕ್ಕಿ ಡಬ್ಬದೊಳಗಿಟ್ಟೆ. ಮಧ್ಯರಾತ್ರಿ ಒಂದೂವರೆಯಾಗಿದೆ. ರೂಮಲ್ಲೆಲ್ಲಾ ನೀರು. ರೂಮಲ್ಲೇನು, ಎಲ್ಲೆಡೆ ನೀರು. ರೂಂ ಮೇಟು ಅವನ ರೈನ್ ಕೋಟ್ ಹೊರತೆಗೆದು ಹೊರಗಡೆಯಿದ್ದ ಮಳೆನೀರು ಹೋಗೊಕೆ ಇದ್ದ ಬ್ಲಾಕ್ ಸರಿ ಮಾಡಿ ಬರೋ ಹೊತ್ತಿಗೆ ನಾನು ಮತ್ತು ಮತ್ತೊಬ್ಬ ರೂಂ ಮೇಟು ನೀರು ಹೊರಹಾಕೋ ಪ್ರಯತ್ನದಲ್ಲಿದ್ದೆವು. ಸ್ವೀಪರ್ ಇಲ್ಲದ ಕಾರಣ ನೀರನ್ನು ಮಗೆದು ಹೊರಹಾಕೋದು ಕಷ್ಟದ ವಿಷಯವೇ. ಮೊಪ್ ಇಂದ ಎಷ್ಟೂಂತ ಗುಡಿಸೋದು ಅಥವಾ ಕಾಲುಗಳಿಂದ ಎಷ್ಟೂಂತ ತಳ್ಳೋದು ? ಆಗ ಹೊಳೆದ ಐಡಿಯಾವೇ ಬೆಡ್ ಶೀಟು !


ಬೆಡ್ ಶೀಟನ್ನೇ ನೀರಲ್ಲಿ ಉದ್ದ ಹಾಸೋದು. ಅದು ಹೀರಿಕೊಳ್ಳೋ ನೀರ ಜೊತೆಗೆ ಅದನ್ನು ಹೊರಗೆಳೆದು ಹಿಂಡೋದು ಅನ್ನೋ ಐಡಿಯಾ ವರ್ಕಾಯ್ತು. ಎರಡೂ ಕಾಲವರೆಗೂ ಎಳೆದೆಳೆದು ಕೈಗಳೆಲ್ಲಾ ನೋವ ತೊಡಗಿ ಉಳಿದೆರೆಡು ರೂಂ ಮೇಟುಗಳು ನಾವು ಸ್ವಲ್ಪ ಹೊತ್ತು ಮಲಗ್ತೀವಿ ಅಂತ ಹೊರಟ್ರು. ಮತ್ತೆ ನೀರು ನುಗ್ಗಿದ್ರೆ ಗೊತ್ತಾಗ್ಲಿ ಅಂತ ಹಾಲ ಮತ್ತು ಅಡಿಗೆ ಮನೆಯ ಲೈಟುಗಳ ಹಾಗೇ ಇಟ್ಟೆವು. ಅವರ ಮಂಚಗಳೇನೂ ಆಗಿರಲಿಲ್ಲ. ಆದ್ರೆ ನನ್ನ ಬೆಡ್ ಪೂರ್ತಿ ನೀರು ಮಯ. ನಾ ಮಲಗೋದೆಲ್ಲಿ ? ನೀವು ಮಲ್ಕೊಳ್ಳಿ ನಾನು ಉಳಿದ ನೀರ ಸಾಧ್ಯವಾದಷ್ಟು ತಳ್ತೀನಿ ಅಂತ ನೋಯುತ್ತಿದ್ದ ಕೈಗಳಲ್ಲಿ ನಾ ಎರಡನೆಯ ಇನ್ನಿಂಗ್ಸಿಗೆ ಮುಂದಾದೆ. ಬರೀ ಮಳೆ ನೀರಾಗಿದ್ರೆ ಬೇಜಾರಾಗ್ತಿರಲಿಲ್ಲ. ಅದು ಕಾಲೊರೆಸೋ ಮ್ಯಾಟಿನ ಮಣ್ಣು, ಬಾತ್ರೂಮಿನ ಹೊರಗಿದ್ದ ಕಸ ಎಲ್ಲವನ್ನೂ ತಂದು ಎಲ್ಲೆಡೆ ಹರಡಿತ್ತು. ಬೆಡ್ಡನ್ನು ಗೋಡೆಗೆ ಸಾಚಿದ್ರೆ ಅದರೊಳಗಿಂದ ಮಳೆಗಾಲದಲ್ಲಿ ಗುಡ್ಡದಿಂದ ಜಿಮುರುವಂತೆ ನೀರು ಜಿಮುರುತ್ತಿತ್ತು. ಅದರ ಕೆಳಗೆ ಒರಸಿ ರೂಮಿನ ಒಂದು ಮೂಲೆ ಉರಸುವಷ್ಟರಲ್ಲಿ ಬೆಡ್ಡಿಂದ ಮತ್ತಷ್ಟೆ ನೀರು ! ಅಂತೂ ಇಂತೂ ರೂಂ ಕ್ಲೀನ್ ಮಾಡಿ ಹೊರಗಡೆಯಿದ್ದ ನೀರು ಮುಕ್ಕಾಲು ಭಾಗ ಖಾಲಿ ಮಾಡಿ ಹೊರಗಡೆಯಿದ್ದ ಏಸಿಯ ಫ್ಯಾನನ್ನು ಹಾಕುವಷ್ಟರಲ್ಲಿ ಮುಖದಲ್ಲೆಲ್ಲಾ ಬೆವರ ಧಾರೆ ! ಘಂಟೆ ಎರಡೂಮುಕ್ಕಾಲಾಗುತ್ತಾ ಬಂದಿತ್ತು. ಮತ್ತೊಮ್ಮೆ ಹೊರಗೋಗಿ ಮತ್ತೆ ಬ್ಲಾಕಾಗೋಕೆ ರೆಡಿಯಾಗಿದ್ದ ನೀರು ಹೊರಹೋಗೋ ದಾರಿಯನ್ನು ಸರಿ ಮಾಡಿ ಅಲ್ಲಿದ್ದ ಕಸವೆಲ್ಲಾ ಹೊರಹೋಗಿ ನೀರು ಸಾಮಾನ್ಯವಾಗಿ ಹೋಗ್ತಿದೆ ಅಂತ ಖಾತ್ರಿಪಡಿಸಿಕೊಂಡೇ ಒಳಬಂದೆ. 

ಘಂಟೆ ಮೂರಾಗ್ತಾ ಬಂದಿದೆ. ಆದ್ರೇನು. ಬೆಳಗ್ಗೆ ಆಫೀಸಿಗೆ ಏಳಲೇಬೇಕು. ಏಳೋದಾದ್ರೂ ಹೇಗೆ ? ಅಲಾರಾಮಿಡಲು ಮೊಬೈಲು ಬ್ಯಾಟರಿಯಿಲ್ಲದೆ ಅಕ್ಕಿಡಬ್ಬದಲ್ಲಿ ಮಲಗಿದೆ. ಇನ್ನೊಂದು ಮೊಬೈಲು ನೋಡೋಣ ಅಂದರೆ ಅದರಲ್ಲಿ ಚಾರ್ಜೇ ಇಲ್ಲದೆ ಅದು ಆನೂ ಆಗುತ್ತಿಲ್ಲ. ಅದರ ಚಾರ್ಜರ್ ಹುಡುಕಿ ಅದನ್ನು ಚಾರ್ಜಿಗೆ ಹಾಕಿ ಹದಿನೈದು ನಿಮಿಷ ಕಷ್ಟಪಟ್ಟು ನಿದ್ರೆ ತಡೆದುಕೊಳ್ಳೋ ಹೊತ್ತಿಗೆ ಅದಕ್ಕೆ ಸ್ವಲ್ಪ ಜೀವ ಬಂತು. ಅದರಲ್ಲಿ ಬೆಳಗ್ಗಿಗೆ ಅಲಾರಾಮಿಟ್ಟು ಒದ್ದೆಯಾಗದೇ ಇದ್ದ ಒಂದು ಜೊತೆ ಬೆಡ್ ಶೀಟುಗಳನ್ನೇ ಹಾಸಿಕೊಂಡು ಮಲಗಿಬಿಟ್ಟೆ. ಹಾಸಿಗೆಯ ಮೇಲೆ ಮಲಗಿದ್ದವರಿಗೆ ಖಾಲಿ ಬೆಡ್ ಶೀಟಿನ ಮೇಲೆ ನಿದ್ದೆಯಾದ್ರೂ ಹೇಗೆ ಬರಬೇಕು ?   ಮಾರನೆಯ ದಿನ ನನಗೆ ಕಾದಿರಬಹುದಾದ ಇನ್ನಷ್ಟು ಆಘಾತಗಳ ಅರಿವಿಲ್ಲದಿದ್ದರಿಂದ ಆ ರಾತ್ರಿಯ ಸುಸ್ತಿನಿಂದ ಮಲಗಿದಲ್ಲೇ ನಿದ್ದೆ ಹತ್ತಿತ್ತು

Thursday, November 9, 2017

Parque La Huasteca,Monterrey

When i was googling for places near Monterrey, La Hausteca appeared multiple times. But i used to ignore it multiple times as many people had written about the Rock climbing activities here. One of my friend who had been there was there for rock climbing as well. So, i was somehow postponing the rockclimbing option there as i am not a professional or hobbyist in rockclimbing. But somehow, got an update that we can go there for running or cycling as well for a stretch of 16km. Although i had done a 16km trail run in Grutas de Garcia before, i was bit hesitant to go by running as it was 16KM one side in Huasteca and i was not fully confident about completing 32 KM in a single shot. So, thought of going by Cycle . When i asked my friends about this, Sudheendra and Aman agreed for it. So, W trio, went ahead to explore La Huasteca

Where is La Huasteca and how to reach there ? 
It is situated next to Santa Catarina and you can visit it during any part of the day.  You have bus no 126 travelling between Downtown to La Huasteca every 20 minutes. You can get Uber/Green/Yellow taxis to this place as well.

There are no entry tickets as it is a open road . People generally come here in morning to evening and few people visit here in night as well to enjoy the views of the clear moon unaffected by citylights. There are some party houses or mini resorts as well across the road and you can jump in if you want to explore :-)

Once you reach there, its better to take Cycles to visit the place and i personally liked the feel of going in cycle . We went in a van second time. But i did not like and could not enjoy the views of surrounding climate although the van was going slow.  

Cycles you get for rent in the entrance of La Huasteca
Rent of the cycles: 
It is 200 as initial deposit which covers first 2 hours. You need to pay an extra 50 pesos per hour after 2 hours
You need to deposit your INM card or any ID proof document here as guarantee before taking cycles. So, don't forget to take any ID card while going here. If you are going in a group, one ID card from any member of the group is fine
They accept both cash and credit/debit cards


Views change here in every 300-500 meters and you see varieties of landscapes. 




You would see many boards like this. But don't worry about it too much unless you want to visit those resorts. The end point of your cycling path is a dam which we would see later. So, you can safely head straight unless you see the dam


As i said, views would change

In a quite surprising manner

what you have seen while going might not be there while you are coming back :-)


They provide best quality of cycles here which have 8 gears for the front and 3 for the back wheel. You can adjust the seats to your height
.
There are steps to climb till the top of the Dam


Once you climb till the top, you have a tunnel to go in. That is pitch dark and you can walk further if you have a torch or mobile light. You would also get metal ladder to go to the top of Dam. But those Ladders are bit scary and i don't recommend taking them

view while climbing up

However, if you are interested, you can walk across the tunnel for approx 1.5 minutes to reach the other end of the Dam and view is Damm good from there.
View from other side of the tunnel of the dam

There are steps to get down from there. But if you get down from there, you need to do bit of circus in the Rocks like this to reach the cycling path as you don't have steps till the end.

Time to travel back




I have seen people hiking for these steep mountains as well. But not sure about which trekking group takes them here :-)
Will catch up soon with the details about next destination to visit near Monterrey. Keep an eye for more surprises :-)