Monday, September 29, 2014

ಬಾಳೇಕಾಯಿ ರಂಗಪ್ಪನ ಕತೆಗಳು

ಬಾಳೇ ಹಣ್, ಬಾಳೇ ಹಣ್.. ನೇಂದ್ರ ಬಾಳೆ, ಮೈಸೂರ್ ಬಾಳೆ, ಪುಟ್ ಬಾಳೆ, ಏಲಕ್ಕಿ ಬಾಳೆ, ವಾಟ್ ಬಾಳೆ.ಬಾಳೆ ಹಣ್.. ಬಾಳೇ ಹಣ್.. ಬೀದಿ ಬೀದಿ ಕೂಗಿ ಕೂಗಿ ರಂಗಪ್ಪನ ಬಾಳೇ ಹಣ್ಣಾಗಿಹೋಗಿತ್ತು. ಈ ಬಾಳೇ ಹಣ್ಣಿನ ಕೂಗು ಸಂಜೆ ಹೊತ್ತಿಗೆ ಬರ್ತಾ ಇದ್ರೆ ಬೀದಿ ಹುಡುಗ್ರೆಲ್ಲಾ ಆ ಗಾಡಿಗೆ ಮುತ್ತಾ ಇದ್ರು. ರಂಗಪ್ಪನ ಮನೆಯೂ ಈ ಬೀದಿಯ ಹತ್ರವೇ ಇದ್ದಿದ್ರಿಂದಲೋ, ಆ ಬೀದಿಯ ಚಿಳ್ಳೆ ಪಿಳ್ಳೆ ಹುಡುಗ್ರ ಜೊತೆ ಮಾತಾಡೋದ್ರಲ್ಲಿ ಸಿಗೋ ಅದಮ್ಯ ಸುಖಕ್ಕೋಸ್ಕರವೋ ಗೊತ್ತಿಲ್ಲ ಆ ಮಕ್ಕಳ ಶಾಲೆ ಬಿಡುವ ಸಮಯವಾದ ಮೇಲೇ ಆ ಬೀದಿಗೆ ಬರ್ತಿದ್ದ ರಂಗಪ್ಪ. ಆ ಹುಡುಗ್ರಿಗೂ ಅಷ್ಟೆ. ರಂಗಪ್ಪನೆಂದ್ರೆ ಅಚ್ಚುಮೆಚ್ಚು. ಪೇಟೆಗಿಂತ ಸ್ವಲ್ಪ ಕಮ್ಮಿ ಮತ್ತೆ ಒಳ್ಳೆ ಬಾಳೇಹಣ್ಣು ತರ್ತಾನೆ ಅಂತ ಹುಡುಗ್ರರ ಅಮ್ಮಂದಿರು ರಂಗಣ್ಣನ ಇಷ್ಟಪಟ್ರೆ ಹುಡುಗ್ರಿಗೆ ಅವ ಇಷ್ಟ ಆಗ್ತಿದ್ದುದು ಬೇರೆ ಕಾರಣಕ್ಕಾಗಿಯೇ. ಬೆಳಗ್ಗಿಂದ ಬಾಳೇಹಣ್ಣು ಮಾರಲು ತಿರುತಿರುಗಿ  ಸುಸ್ತಾದ ರಂಗಣ್ಣ ಈ ಬೀದಿಯ ಮಧ್ಯೆ ಇರೋ ಅರಳೀಮರದ ಕಟ್ಟೆ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ತಗೋತಿದ್ದ. ಆ ಸಮಯದಲ್ಲಿ ಹುಡುಗ್ರೆಲ್ಲಾ ರಂಗಣ್ಣ ಕತೆ , ರಂಗಪ್ಪ ಕತೆ ಅಂತ ದುಂಬಾಲು ಬೀಳ್ತಿದ್ರು. ಕೆಲೋ ಸಲ ರಂಗಣ್ಣ ಆ ಬೀದಿಗೆ ಬರೋದು ಲೇಟಾದ್ರೂ ಹುಡುಗ್ರು ಕತೆಗೆಂದು ಕಾಯ್ತಾನೆ ಇರ್ತಿದ್ರು. ಕೆಲೋ ಸಲ ರಂಗಣ್ಣನಿಗೆ ಹುಷಾರಿಲ್ದೇ ಯಾವ ಬೀದಿಗೆ ಬಾಳೇಹಣ್ಣು ಮಾರಲು ಹೋಗದಿದ್ದರೂ ಈ ಬೀದಿಗೆ ಸಂಜೆ ಹೊತ್ತಿಗೆ ಬರಬೇಕೆನಿಸಿಬಿಡುತ್ತಿತ್ತು. ಇವನು ಬರುವವರೆಗೆ ಇರುತ್ತಿದ್ದ ಹುಡುಗರ ಮ್ಲಾನವದನ ಇವನ ಧ್ವನಿ ಕೇಳುತ್ತಿದ್ದಂತೆಯೇ ಅರಳುತ್ತಿದ್ದ ಬಗ್ಗೆ, ನಿಮಿರುತ್ತಿದ್ದ ತಮ್ಮ ಮಕ್ಕಳ ಕಿವಿಯ ಬಗ್ಗೆ ಎಷ್ಟೋ ಅಮ್ಮಂದಿರ ಬಾಯಿಂದ ಕೇಳಿದ್ದ. ಹಾಗಾಗಿ ಆ ಮಕ್ಕಳಿಲ್ಲದ ಒಂದು ಸಂಜೆಯನ್ನು ರಂಗಣ್ಣನಿಗೆ,ರಂಗಣ್ಣನಿಲ್ಲದ ಸಂಜೆಯನ್ನು ಮಕ್ಕಳಿಗೆ ಕಲ್ಪಿಸಿಕೊಳ್ಳೋದೂ ಅಸಾಧ್ಯವಾಗಿತ್ತು.

ಒಂದಿನ ಸಂಜೆ ಈ ಬೀದಿಗೆ ಬರೋ ದಾರಿಯಲ್ಲಿ ತನಗೂ ಈ ಮಕ್ಕಳಿಗೂ ನಂಟು ಬೆಳೆದ ಪರಿಯನ್ನು ರಂಗಣ್ಣ ನೆನೆಯುತ್ತಿದ್ದ.ಬಿರು ಬೇಸಿಗೆಯ ಒಂದಿನದ ಧಗೆ. ಹೊತ್ತು ಮುಳುಗುತ್ತಾ ಬಂದಿದ್ದರೂ ಸೆಖೆ ಇಳಿಯುತ್ತಿರಲಿಲ್ಲ. ತಲೆಗೆ ಸುತ್ತಿದ್ದ ರುಮಾಲನ್ನು ಎಷ್ಟು ಸಲ ಬಿಚ್ಚಿ ಬೆವರೊರೆಸಿ ಪುನಃ ಸುತ್ತಿದ್ದನೋ ಗೊತ್ತಿಲ್ಲ. ಕಟ್ಟೆಯೊಡೆದ ನೀರಿನಂತೆ ಹರಿಯುತ್ತಿದ್ದ ಬೆವರಮುಂದಿನ ಪಂದ್ಯದಲ್ಲಿ ರುಮಾಲು ಸೋತು ಒದ್ದೆಯಾಗಿ ಹಿಂಡಿದರೆ ಲೋಟ ನೀರು ಸಿಗುವಂತಿತ್ತು. ಬಿಸಿಲಲ್ಲಿ ಸುತ್ತಿ ಸುತ್ತಿ ದೇಹದ ನೀರೆಲ್ಲಾ ಬೆವರಾಗಿ ಹೊರಹರಿಯುತ್ತಿದ್ದರೂ ಗಾಡಿಯಲ್ಲಿದ್ದ ಬಾಳೆಹಣ್ಣುಗಳಲ್ಲಿ ಅರ್ಧವೂ ಖಾಲಿಯಾಗದೇ ರಂಗಣ್ಣನ ಕಣ್ಣಂಚು ಒದ್ದೆಯಾಗಿತ್ತು.ತೋಟದಲ್ಲಿ ಬೆಳೆದ ಬಾಳೇಕಾಯಿಗೆ ನಲವತ್ತು ಪೈಸೆಯಂತೆ ಹೊರಗಿನವರಿಗೆ ಕೊಟ್ಟುಬಿಡಬೇಕಿತ್ತು. ಎರಡು ರೂಪಾಯಿ ಸಿಗತ್ತೆ ಅಂತ ಮಾರೋಕೆ ಬರಬಾರದಾಗಿತ್ತು.ಮೊದಲೆರಡು ದಿನ ಸಿಕ್ಕ ದುಡ್ಡು ತಗೊಂಡು ಸುಮ್ಮನಿದ್ದುಬಿಡಬೇಕಾಗಿತ್ತು. ವ್ಯಾಪಾರ ಅಂತ ಇಳಿದು ಪಡುತ್ತಿರೋ ಈ ಪಾಡು ಬೇಕಿತ್ತಾ ಅಂತ ನೊಂದುಕೊಳ್ಳುತ್ತಿದ್ದ. ಹೀಗೇ ಸುಸ್ತಾಗಿ ಒಂದು ಬೀದಿಯ ಅರಳೀಮರದ ಕೆಳಗೆ ಕೂತಿದ್ದ. ಹಾಗೇ ಎಷ್ಟು ಹೊತ್ತು ಕೂತಿದ್ದನೋ ಗೊತ್ತಿಲ್ಲ. ಅಲ್ಲಿನ ನೆರಳಿಗೆ, ತಂಗಾಳಿಗೊಂದು ಜೊಂಪು ಹತ್ತಿತ್ತು. ಯಾರೋ ಬಂದು ತಟ್ಟಿ ಎಬ್ಬಿಸಿದಂತಾಗಿ ಎಚ್ಚರವಾಯಿತು. ಕಣ್ಣು ಬಿಟ್ಟರೆ ಸಣ್ಣ ಹುಡುಗನೊಬ್ಬ ತಟ್ಟಿ ತಟ್ಟಿ ಎಬ್ಬಿಸುತ್ತಿದ್ದ.ಛೇ , ಎಂತಾ ಕೆಲಸವಾಯ್ತು, ಬಾಳೇಹಣ್ಣೆಲ್ಲಾ ಯಾರಾದ್ರೂ ತಗೊಂಡು ಹೋಗಿದಾರಾ ನೋಡಿದ್ರೆ ಏನೂ ಆಗಿರಲಿಲ್ಲ. ಬಾಳೇ ಹಣ್ಣಿಗೆಷ್ಟು ಎಂದವನಿಗೆ ಎರಡು ರೂಪಾಯಿ ಎಂದಿದ್ದ ರಂಗಪ್ಪ. ದೂರದ ಅಂಗಡಿಗೆ ಹೋಗಿ ಹತ್ತಕ್ಕೆ ಮೂರು ಬಾಳೇಹಣ್ಣು ತರಬೇಕಾಗಿದ್ದ ಹುಡುಗನಿಗೆ ಹತ್ತು ರೂಗೆ ಐದು ಬಾಳೇ ಹಣ್ಣು ಸಿಕ್ಕಿತ್ತು. ಆತ ಹಣ್ಣಿನೊಂದಿಗೆ ಮನೆ ಕಡೆ ತಿರುಗಿ ಓಡತೊಡಗಿದ. ಆದ್ರೆ ಕಾಲಿಗೆ ಅವನ ಉದ್ದ ಪ್ಯಾಂಟೇ ತೊಡರಬೇಕೇ ?  ನೆಲಕ್ಕೆ ಬಿದ್ದ ರಭಸಕ್ಕೆ ಬಾಳೇಹಣ್ಣುಗಳೆಲ್ಲಾ ರಸಾಯನವಾಗಿತ್ತು. ಕೈಯೂ ಒಂದೆರಡು ಕಡೆ ತರಚಿತ್ತು. ಕೈಗೆ ಆದ ಗಾಯದ ನೋವಿಗಿಂತಲೂ ಬಾಳೇಹಣ್ಣು ತರಲಿಲ್ಲ ಅಂತ ಮನೆಯಲ್ಲಿ ಬಯ್ಯುತ್ತಾರೆನ್ನೋ ಭಯ ಹುಡುಗನನ್ನು ಅಳಿಸತೊಡಗಿತ್ತು. ರಂಗಣ್ಣನಿಗೆ ಅಳುತ್ತಿದ್ದ ಹುಡುಗನನ್ನು ನೋಡಿ ಸುಮ್ಮನಿರಲಾಗಲಿಲ್ಲ. ಅವನನ್ನು ಎಬ್ಬಿಸಿ ಅಲ್ಲೇ ಇದ್ದ ನಲ್ಲಿ ನೀರಲ್ಲಿ ಕೈತೊಳೆದು ಹೋಗಿದ್ದು ಹೋಯ್ತು ಬಿಡು. ತಗೋ ಈ ಐದು ಬಾಳೇಹಣ್ಣು ಕೊಟ್ಟ ಅವನಿಗೆ. ಹುಡುಗನಿಗೆ ತಗೋಬಿಡೋಣ ಅಂತ ಒಂದು ಸಲ ಅನಿಸಿದ್ರೆ ಮತ್ತೊಂದು ಸಲ ಬೇಡ ಅನಿಸಿತು.. ಸಂದಿಗ್ದದಲ್ಲಿದ್ದ ಹುಡುಗನನ್ನು ನೋಡಿ ಏನನ್ನಿಸಿತೋ ಗೊತ್ತಿಲ್ಲ ರಂಗಣ್ಣನಿಗೆ. ಈ ಹಣ್ಣು ನೀನು ತಗೋಳ್ಲೇ ಬೇಕು ಯಾಕೆ ಗೊತ್ತಾ ಅಂದ . ಯಾಕೆ ಅಂದ ಹುಡುಗ. ತಡಿ ಅದ್ರ ಬಗ್ಗೆ ನಿಂಗೊಂದು ಕತೆ ಹೇಳ್ತೀನಿ. ಬಾ ಇಲ್ಲಿ ಕೂತ್ಕೋ ಅಂದ. ಕತೆ ಅಂದ ತಕ್ಷಣ ಆಸೆ ಚಿಗುರಿದ್ರೂ ಪರಿಚಯವಿಲ್ಲದ ವ್ಯಕ್ತಿ ಹತ್ರ ಕೂತ್ಕೋಳೋದಾದ್ರೂ ಹೇಗೆ ಅಂತ ದೂರದಲ್ಲೇ ನಿಂತಿದ್ದ ಹುಡುಗ. ರಂಗಣ್ಣನ ಕತೆ ಶುರುವಾಯ್ತು.

ಒಬ್ಬ ವ್ಯಾಪಾರಿ ತನ್ನ ಬಟ್ಟೆ ಗಂಟುಗಳೊಂದಿಗೆ ವ್ಯಾಪಾರಕ್ಕೆ ಹೊರಟಿದ್ದ. ಹಿಂಗೇ ಒಂದಿನ ಒಂದು ಊರಿನಿಂದ ಹೊರಟ ಮೇಲೆ ಮೈಲುಗಳು ನಡೆದ್ರೂ ಯಾವ ಊರೂ ಸಿಕ್ಕಿರಲಿಲ್ಲ. ಸಿಕ್ಕ ಒಂದೆರಡು  ಹಳ್ಳಿಗಳಲ್ಲೂ ಇವನ ಬಟ್ಟೆಗಳನ್ನು ಯಾರೂ ತಗೊಂಡಿರಲಿಲ್ಲ. ಒಂದಿಷ್ಟು ಬಟ್ಟೆ ಮಾರಿಯೇ ಇವತ್ತಿನ ಊಟ ಮಾಡಬೇಕೆನ್ನೋ ಉತ್ಸಾಹದಲ್ಲಿ ನಡೆದೇ ನಡೆದ. ಆದರೆ ಮಧ್ಯಾಹ್ನ ಊಟದ ಹೊತ್ತು ಮೀರೋ ಸಮಯವಾಗಿದ್ರೂ ಬಟ್ಟೆ ವ್ಯಾಪಾರವಾಗಲಿಲ್ಲ. ಹೀಗೇ ನಡೆಯುತ್ತಿರುವಾಗ ಮಾವಿನ ತೋಪೊಂದು ಕಂಡಿತು. ಇಲ್ಲಿ ಮಾವಿನ ಹಣ್ಣು ತಿಂದು , ಇರಬಹುದಾದ ನೀರು ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೆ ಮುಂದಿನ ಪಯಣ ಮುಂದುವರೆಸೋಣ ಅಂದುಕೊಂಡ. ಆದರೆ ಒಳಪ್ರವೇಶಿಸದಂತೆ ಆ ತೋಟದ ಮಾಲಿ ತಡೆದ. ವಿಪರೀತ ಹಸಿವಾಗಿರುವುದನ್ನು ತಿಳಿಸಿದಾಗ ನೀನು ತೋಟದ ಮಾವಿನ ಹಣ್ಣು ಕೊಂಡುಕೊಂಡರೆ ಮಾತ್ರ ಒಳಗೆ ಬಿಡುತ್ತೇನೆಂದ ಮಾಲಿ. ಸರಿಯೆಂದು ಒಪ್ಪಿದ ವರ್ತಕ ತನ್ನಲ್ಲಿದ್ದ ಹಣದಲ್ಲಿ ಒಂದಿಷ್ಟು ಮಾವು ಕೊಂಡ. ಕಡಿಮೆ ಬೆಲೆಯಲ್ಲಿದ್ದ ಆ ಮಾವಲ್ಲಿ ಕೆಲವನ್ನು ತಿಂದು ಹಸಿವು ನೀಗಿಸಿಕೊಂಡರೂ ಉಳಿದವನ್ನು ಮಾರಿ ಎರಡರಷ್ಟು ಹಣ ಸಂಪಾದಿಸುವ ಆಲೋಚನೆ ಅವನದು. ಆದ್ರೆ ಸಿಕ್ಕಾಪಟ್ಟೆ ಬಾಯಾರಿಕೆಯೂ ಆಗುತ್ತಿದೆಯೇ. ಕೊಂಡ ಮಾವಿನ ಹಣ್ಣುಗಳನ್ನು, ತನ್ನ ಚೀಲವನ್ನು ಒಂದು ಬದಿಯಿಟ್ಟು ಮಾಲಿ ತೋರಿಸಿದ ನಾಲೆಯ ಬಳಿಗೆ ಹೆಜ್ಜೆ ಹಾಕಿದ. ಬಂದು ನೋಡುತ್ತಾನೆ. ತಾನಿಟ್ಟಿದ್ದ ಜಾಗದಲ್ಲಿ ಮಾವಿನ ಹಣ್ಣುಗಳಿಲ್ಲ. ಅದಿರಲಿ ತನ್ನ ಬಟ್ಟೆ  ಚೀಲ ? ಅದೂ ಇಲ್ಲ. ಹೋಗಲಿ ಮಾಲಿಯನ್ನಾದ್ರೂ ಕೇಳೋಣವೆಂದರೆ ಆ ಮಾಲಿಯೂ ಇಲ್ಲ. ಉಕ್ಕೇರುತ್ತಿದ್ದ ಸಿಟ್ಟಿನಲ್ಲಿ ಆ ಮಾಲಿಯೇನಾದ್ರೂ ಅಡ್ಡ ಸಿಕ್ಕಿದ್ರೆ ಕೊಂದೇ ಬಿಡುವಂತಿದ್ದ ಆ ವರ್ತಕ. ಎಷ್ಟು ಹುಡುಕಿದರೂ ಆ ಮಾಲಿ ಸಿಗಲಿಲ್ಲ. ಹಸಿದವನ ಊಟದ ಜೊತೆಗೆ ಅವನ ಜೀವಿತವನ್ನೂ ಕಸಿದುಕೊಂಡ ಪಾಪಿಗೆ ಆ ವರ್ತಕ ಹತಾಶೆಯಿಂದ ಶಪಿಸಿದ. ಮುಂದಿನ ಜನ್ಮದಲ್ಲಿ ನೀನು ಹಣ್ಣಾಗಿ ಹುಟ್ಟು. ದಿನಗಟ್ಟಲೇ ನೀನು ಬಿಸಿಲಲ್ಲಿ ಒಣಗೊಣಗಿ ಯಾರೂ ನಿನ್ನ ಕೊಳ್ಳದಿರಲಿ. ಕೊನೆಗೆ ಕೊಂಡರೂ ನೀನು ಅವರಿಗೆ ದಕ್ಕದೇ ಮಣ್ಣಾಗಿ ಹೋಗು ಎಂದು. ಇನ್ನು ಆ ತೋಟದಲ್ಲಿದ್ದು ಏನು ಮಾಡುವುದು. ಒಳಜೇಬಿನಲ್ಲಿದ್ದ ಒಂದಿಷ್ಟು ದುಡ್ಡಿನಲ್ಲಿ ಮರಳಿ ಊರಿಗೆ ಹೋಗಲಾಗದಿದ್ದರೂ ಅರ್ಧ ದಾರಿಯವರೆಗೆ ಹೋಗಬಹುದು. ಅಲ್ಲಿಂದ ಯಾರಿಗಾದರೂ ಕಾಡಿಬೇಡಿ ಊರಿಗೆ ಹೋದೇನೆಂಬ ಭರವಸೆಯಲ್ಲಿ ತನ್ನೂರ ದಿಕ್ಕಿನಲ್ಲಿ ಹೆಜ್ಜೆ ಹಾಕಿದನು. ದಾರಿಯಲ್ಲಿ ಅರ್ಧಂಬಂರ್ಧ ತಿಂದ ಮಾವಿನ ಹಣ್ಣುಗಳು ಕಂಡವು. ಒಂದೆರಡು ಹೆಜ್ಜೆ ಮುಂದಿಡುವಷ್ಟರಲ್ಲಿ ನಾಯಿಗಳ ಗುಂಪೊಂದು ಚೀಲವೊಂದ ಹಿಡಿದು ಕಚ್ಚಾಡುತ್ತಿದ್ದುದು ಕಂಡಿತು. ಅವುಗಳನ್ನು ಓಡಿಸಿ ನೋಡಿದರೆ ಅದು ತನ್ನದೇ ಚೀಲ. ಛೇ  ನಾಯಿಗಳ ದೆಸೆಯಿಂದ ಅಮಾಯಕ ಮಾಲಿಗೆ ಶಪಿಸಿಬಿಟ್ಟೆನಲ್ಲಾ ಎಂಬ ಪಶ್ಚಾತ್ತಾಪವಾಯಿತು. ಮಾಲಿಗೆ ಆದ ವಿಷಯ ತಿಳಿಸೋಣವೆಂದು ತೋಟದತ್ತ ವಾಪಾಸಾದ. ಇವ ಬರೋ ಹೊತ್ತಿಗೆ ಮಾಲಿ ತೋಟದ ಮತ್ತೊಂದು ಮೂಲೆಯಿಂದ ಬರುತ್ತಿದ್ದ. ನಿಮ್ಮ ಹಣ್ಣುಗಳಿಗೆ ನಾಯಿಗಳ ಗುಂಪೊಂದು ದಾಳಿಯಿಟ್ಟಿತ್ತು ಆಗ. ಹೋದದ್ದು ಹೋಯಿತು. ತಗೋಳಿ ಈ ಹಣ್ಣುಗಳನ್ನು. ನಿಮ್ಮ ದುಡ್ಡಿಗ್ಯಾಕೆ ನಾನು ಮೋಸ ಮಾಡಲಿ ಎಂದ ಮಾಲಿ. ವರ್ತಕನ ಕಣ್ತುಂಬಿ ಬಂತು. ನೀನು ಹಣ್ಣಾಗಿ ಹುಟ್ಟಿ ಯಾರಿಗೂ ದಕ್ಕದೇ ಮಣ್ಣಾಗುತ್ತಿದ್ದರೂ ನಿನ್ನನ್ನು ಕಾಪಾಡೋ ಒಬ್ಬ ದಯಾಮಯಿ ಹಣ್ಣು ಮಾರುವವನು ಬರುತ್ತಾನೆ. ಅವನು ಹಾಳಾದ ನಿನ್ನ ಬದಲಿಗೆ ಹೊಸ ಹಣ್ಣುಗಳನ್ನು ಕೊಡುತ್ತಾನೆ. ಅಂದೇ ನಿನಗೆ ಹಣ್ಣ ಜನ್ಮದಿಂದ ಮುಕ್ತಿ ಸಿಗಲಿ ಎಂದು ಮನಸ್ಸಲ್ಲೇ ಆಶೀರ್ವದಿಸಿದ.

ಇಲ್ಲಿಗೆ ತನ್ನ ಕತೆ ಮುಗಿಸಿದ ರಂಗಣ್ಣ. ಆ ಹುಡುಗನಿಗೆ ನೋಡು ಆ ಬಡ ಮಾಲಿ ಇದೇ ಬಾಳೇಹಣ್ಣಾಗಿ ಹುಟ್ಟಿರಬಹುದು. ನಿನ್ನಿಂದ ಅವನಿಗೆ ಒಳ್ಳೆಯದಾದರೆ ಅದು ಒಳ್ಳೇದಲ್ಲವೇ ಅಂದ. ಮಗುವಿನ ಮುಖ ಅರಳಿತು. ಹೌದೌದು ಎಂದು ರಂಗಣ್ಣ ಕೊಟ್ಟಿದ್ದ ಹೊಸ ಬಾಳೆಹಣ್ಣುಗಳನ್ನು ಹಿಡಿದು ಮನೆಯತ್ತ ಧಾವಿಸಿದ. ಬಾಳೇಹಣ್ಣಿನ ವ್ಯಾಪಾರಿಯಾಗಿ ಬದಲಾಗೋ ಮೊದಲಿದ್ದ ತನ್ನ ಪೂರ್ವಾಶ್ರಮವನ್ನೇ ರಂಗಣ್ಣ ಕತೆಯಾಗಿಸಿದ್ದರೂ ಆ ಹುಡುಗನಿಗೆ ಅದು ಇಷ್ಟವಾದಂತೆ ಅವನ ಮೊಗದಲ್ಲಿನ ಮಂದಹಾಸ ಹೇಳುತ್ತಿತ್ತು. ಆ ಘಟನೆಯನ್ನು ಅಲ್ಲೇ ಮರೆತುಬಿಟ್ಟಿದ್ದ ರಂಗಣ್ಣ ಮಾರನೇ ದಿನವೂ ಆಕಸ್ಮಿಕವಾಗಿ ಆ ಬೀದಿಗೇ ಬಂದ ಸಂಜೆಯ ಹೊತ್ತಿಗೆ. ಈತನ ಧ್ವನಿ ಕೇಳುತ್ತಿದ್ದಂತೆಯೇ ಒಬ್ಬ ಹುಡುಗ ಓಡಿ ಬಂದ. ಅವನ ಜೊತೆಗೆ ಇನ್ನೊಬ್ಬ. ನಿಮ್ಮ ಹೆಸರೇನು. ಚೆನ್ನಾಗಿ ಕತೆ ಹೇಳ್ತೀರಂತೆ ಅಂದ ಇಂದು ಬಂದ ಹೊಸ ಹುಡುಗ. ರಂಗಪ್ಪ ಅಂತ ಕಣ್ರಪ್ಪ ಅಂದ ಇವ. ಹೌದು ರಂಗಣ್ಣ ಸಖತ್ತಾಗಿ ಕತೆ ಹೇಳ್ತಾರೆ ಅಂದ ನಿನ್ನೆ ಬಂದವ. ಹೌದಾ ? ಹಂಗಾರಿ ಇವತ್ತೂ ಒಂದು ಕತೆ ಹೇಳಿ ರಂಗಣ್ಣ ಅಂದ ಎರಡನೆಯವ. ಇಂದು ಮುಕ್ಕಾಲಿನಷ್ಟು ಬಾಳೇಹಣ್ಣುಗಳು ಖರ್ಚಾಗಿದ್ದರಿಂದ ರಂಗಣ್ಣನಿಗೂ ಖುಷಿಯಾಗಿ ಮತ್ತೊಂದು ಹೊಸ ಕತೆ ಹೇಳಿದ ಹುಡುಗರಿಗೆ. ಹಿಂಗೇ ದಿನಾ ದಿನಾ ಹೊಸ ಹೊಸ ಹುಡುಗ್ರು ಸೇರ್ಕೊಳ್ತಿದ್ರು. ಯಾರೋ ಮಕ್ಕಳಿಗೆ ಕತೆ ಹೇಳ್ತಾನಂತೆ ಅಂತ ಮೂಗು ಮುರಿದ ಹಿರಿಯರೂ ಒಂದೆರಡು ದಿನ ಮಕ್ಕಳ ಜೊತೆಗೆ ಮಕ್ಕಳಾಗಿ ಕೂತು ರಂಗಣ್ಣನ ಕತೆ ಕೇಳಿ ನಲಿದ್ರು. ಶಹಬ್ಬಾಸ್ಗಿರಿ ಕೊಟ್ರು. ಮಾತು ಕೇಳದ ಮಕ್ಕಳಿಗೆ ಅಮ್ಮಂದಿರು ನೋಡು ನೀ ಹಿಂಗೇ ಮಾಡಿದ್ರೆ ರಂಗಣ್ಣಂಗೆ ಹೇಳ್ತೀನಿ, ಕೊನೆಗೆ ಅವ್ನು ಕತೇನೇ ಹೇಳಲ್ಲ ಅಂತ ಹೆದರಿಸೋ ಮಟ್ಟಿಗೆ ಪ್ರಖ್ಯಾತನಾದ ರಂಗಣ್ಣ.ಮುಂಚಿನ ಬೀದಿಗಳಲ್ಲೆಲ್ಲಾ ಸೇರಿಸಿ ಅರ್ಧ ಗಾಡಿ ಬಾಳೆಹಣ್ಣು ಖಾಲಿಯಾಗಿದ್ರೂ ಇಲ್ಲಿ ಬಂದ ಮೇಲೆ ಒಂದೂ ಹಣ್ಣುಗಳುಳಿಯದಂತೆ ಖಾಲಿಯಾಗಿಬಿಡುತ್ತಿದ್ದವು.  ಕೆಲವೊಮ್ಮೆ ಊರೆಲ್ಲಾ ತಿರುಗೋ ಬದಲು ಇಲ್ಲೇ ಒಂದು ಬಾಳೇಹಣ್ಣಿನ ಅಂಗಡಿಯಿಟ್ಟು ಬಿಡಲಾ ಅಂದುಕೊಳ್ಳುತ್ತಿದ್ದ ರಂಗಣ್ಣ. ಆದ್ರೆ ಅಂಗಡಿಯೆಂದು ಇಟ್ಟುಬಿಟ್ರೆ ಹೀಗೆ ಸಂಜೆ ವೇಳೆ ಮಕ್ಕಳ ಜೊತೆ ಕೂರೂಕೆಲ್ಲಾಗತ್ತೆ ? ಸಂಜೆ ವೇಳೆಯೇ ಅಂಗಡಿ ವ್ಯಾಪಾರ ಜಾಸ್ತಿಯಾಗೋದು ಎಂದು ಎಚ್ಚರಿಸಿತು ಮತ್ತೊಂದು ಭಾವ. ಕೊನೆಗೆಆ ಊರಲ್ಲಿ ಆಗಲೇ ಇಟ್ಟಿರೂ ಅಂಗಡಿಯವರ ಹೊಟ್ಟೆ ಮೇಲೆ ಹೊಡೆಯೋಕೆ ಮನಸ್ಸಿರಲಿಲ್ಲ ರಂಗಣ್ಣನಿಗೆ. ಸಂಜೆ ವೇಳೆಗೆ ಅರಳೀಕಟ್ಟೆಯ ಬಳಿ ಹಾಜರಾಗುತ್ತಿದ್ದ ರಂಗಣ್ಣನ ಬಾಳೇಹಣ್ಣಿನ ತಳ್ಳುಗಾಡಿಯ ಬಳಿ ಇವತ್ತು ಒಂದರ ಬದಲು ಎರಡು ಕತೆ ಹೇಳಿದ ಹಾಗೆ, ಅವನ ಬಾಳೇಹಣ್ಣುಗಳಿಗೆ ನಾನು ಮನೆಯಲ್ಲಿ ಶಿಫಾರಸು ಮಾಡಿದ್ದನ್ನ ತಿಳಿದ ರಂಗಣ್ಣ ತನ್ನತ್ತ ಒಂದು ಮೆಚ್ಚುಗೆಯ ನಗೆ ಬೀರಿದಂತೆ .. ಹೀಗೆ ಮಕ್ಕಳ ಕನಸಿನಲ್ಲೂ ರಂಗಣ್ಣ ವಿರಾಜಮಾನನಾಗಿದ್ದ.. ನೆನಪಿನಂಗಳದಿಂದ ಹೊರಬಂದ ರಂಗಣ್ಣ ಎಂದಿನಂತೆ ಆ ಸಂಜೆ ಮತ್ತೆ ಅರಳೀಕಟ್ಟೆಯ ಬುಡದಲ್ಲಿ ತನ್ನ ಬದುಕ ಮತ್ತೊಂದು ಪುಟವನ್ನು ಕತೆಯಾಗಿಸಲು ತಯಾರಾಗಿ ಹಾಜರಾಗಿದ್ದ. ಮಕ್ಕಳ ಸೈನ್ಯ ಒಬ್ಬೊಬ್ಬರಾಗಿ ಅತ್ತ ನೆರೆಯುತ್ತಿತ್ತು..

Friday, September 26, 2014

The day when i saw day



It was a sunny morning started with the chirp of birds, someone humming Kishore kumar, Suprabhatam heard from a temple nearby and neighbors hurrying to catch up with the honking cab driver at the gate. Amidst these noises there was someone who was still asleep in a lonely corner of a room. Bunch of soiled formals, jeans and Ts lying haphazardly, books thrown here and there were a about to tell a different story altogether.Although this scene was uncommon for his roomies earlier and felt something is really wrong, they could not gather enough courage to speak it out. Thus, one time top performer awardee was lying silently in some PG of an IT city unaware of the surprises which were waiting to unfurl soon

Ram was a young lad from a remote village of the state where finishing tenth was a big feat. Ram was one among those Gen Y guys who struggled a lot to pursue their dreams and completed his Engineering. He was very sad when he had to leave his mom to join an IT firm which has hired him during campus recruitment. She was the one to console him with the fact that he has lived 4 years without her and they can still be in touch via daily phone calls and can still meet each other once in 2-3 months,if not in every week which they used to earlier. 

Ram was talented, ambitious and hardworking lad who was willing to take any responsibilities in his quest for knowledge. As the days passed, his polite nature and ability to gel up with anyone made him quickly likeable by the colleagues of his age group even though it raised eyebrows of some skeptic seniors. Thanks to the efforts, awards like Top Performer, Star of the month followed him within first few months

With great responsibilities, there arrived the great pressure. The thought of deadlines would tense him so much that every day he would end up extending his working hours. He just wanted to continue receiving appreciations for advance completion of his work and started sacrificing weekends for it. But slowly these sacrifices also did not help to finish his work and he would oftenend up in a pile of things to do and no time to do any of it. It increased the tension further. 
One day when he accidentally happened to visit the terrace of his office, he saw the “smoking zone” As he was from rural background it was quite uncommon for him to imagine a separate area in a building where people could go and smoke freely!. Throughout his engineering days he was never tempted to smoke in spite of numerous offers by his dearest classmates. Might be the way he has seen his brother battle for life after becoming addicted to smoking and tobacco might have touched him.
In initial days he felt that this is not as good as the happiness given by early morning jogs or Pranayama during evening yoga. But slowly his thought started to change. He used to think "where is the time for morning jogging or evening yoga now? In that time i can stay back in office and reach my milestones earlier. Aren’t  these waste of time! Instead, cigarette seems to be a better option" . Days went on and a strong feeling deep rooted in his mind that cigarette is the only option. Thus one more chain smoker was added as permanent member of the smoking zone. 

Although tension used to relieve temporarily with couple of puffs,it did not solve the actual problem. Suggestions like watching movies every night or engaging more in social network did not help out to come out of his tension. Gradually he started losing interest on everything. Neither his work nor people around him could console him except the senior most colleagues during his bad mood. Days were getting difficult for the colleagues to work with him and his performance decreased alarmingly. He could not give time even to the calls of his mother. One could only see tension in his red eyes which started filling up with dark circles due to lack of sleep.

Coming back to present, Ram is lying in his PG all alone after his friends missed to notice their beloved roomie catching fever and lying in a poor condition. As they had to leave for their work anyhow, they could not care much about the guy who rarely talked with them in last couple of weeks. Nobody knows how long he was lying like that until the continuous ring of a call waked him up. With lot of difficulty of his half opened eyes he could observe that it is his Mom who is calling him. By the time he woke up, call got disconnected. He woke up wondering why she has called so early in the morning. When he noticed the phone, he was shocked. Alas it is not early morning. It is 10 Am already!! And there were 9 missed calls.

All 9 were from mom and none from his colleagues! Motherly conversation begun as follows.
Mom:I am really sorry sonny. Sorry for calling in your busy working hours. I tried to call you early morning. But could not reach you.
Ram: Oh is it? I am really sorry mom. By this time, thoughts started flowing in his mind about how lonely she might have felt as he did not talk to her properly since longtime. By the time he could speak more, his eyes were filled up with tears.
Mom: Hey, It is ok Sonny. I guess you might be quite busy nowadays. Just wanted to wish you happy B'day. Let the god give my age also to you as well. Live happily ok?
Ram silently started crying at this listening to her. What a pity! A mom has to try 8-9 times to reach her own sun and she has to even apologize for calling him!!
Mother was getting tensed at the other end not getting any response from here.
Mom: Sonny, are you OK?
Hey Ram, what happened? Her questions seemed to reverberate in her own ears.
Mom: Hello Ram, are you there?Is everything OK? Please talk something. I can’t resist this silence. Not getting any answer for this as well, she started crying.
Ram came to his senses hearing his weeping mom.
No mom, I am Ok. But he was poor in hiding emotions and motherly heart could feel it. She sensed something is wrong. But it may not proper time to ask. Let him tell it on the right time.
Ram continued after sometime wiping his own tears: Mom, why are you crying? I am just having some cold and fever. You should not cry on my b’day. Come on, laugh a bit now. OK?
Mom could finally smile wish him to get well soon and hung up as he was already getting late to office. He promised to continue their talk in evening. He picturized himself in place of his brother who has battling for life due to smoking. He could already feel his health deteriorating due to smoking. At any cost he could not let his mom suffer seeing the second son committing the same mistake as of first. So some strong resolution was being formed in his mind.

Although he was still feeling giddiness, he did not want to take leave as he expected some celebration at office for his b’day. Surprisingly there were no wishes or questions about him coming late as there was no deadline to worry about. Whole meaning of life seemed to change all of a sudden. Life is how he leads it. He is the one who should lead it not the other way round. Although the desire to have a puff was driving him towards smoking zone, he controlled himself with lots of difficulty. Tried interacting with others via talk or chats . Colleagues were bit reluctant initially. But gradually accepted the old Ram coming back to form. Each second avoiding smoke was paining him like hell and it was even difficult to resist even someone offered to join for smoke. He just kept one thing in mind. A Single smoke could make him a chain smoker again. He should not let it happen. Finally the day passed on and he was back to PG in time.

He saw the sunset over a lake nearby, enjoyed the shapes made by birds retuning home.Washed the pile of clothes and dusted the books which were very happy to see their owner back in form. Pair of jogging shoes and yoga mats were very keen to see the next day as one story was about to unfurl and next one was about to begin.The call of mom and resolution made by it made him take a very important decision in his life. It was the day which made him see the day. 
--> This story has won first prize in  TCS literary uproar contest under the "short story" category on 26/09/2014

Wednesday, September 24, 2014

Nalakkad Palace -Tadiyandamol, Madikeri

VivahaMantapa @the entrance of Nalakkad Palace
People going to Tadiyandamol trekking start their trekking by visiting the Nalakkad palace which is at the base of trekking. Even if you miss seeing it, you would definitely notice a school in whose ground lots of vehicles will be standing. Beside that school lies an old palace of the 18th century known as Nalakkad palace.
Tushar showing the Echoing point of the VivahaMantapa
If you would like to revisit the pages of history, you will get info that this beautiful palace was built in 1792 by the then Kodagu king Chikkaveera Rajendra.  It was the hiding place for this last king of Kodagu dynasty until he lost to british in 1834.After the kingdom was annexed to british , the palace went into ruins lacking proper care until it came under the jurisdiction of Archaelogical department of India. Some renovations efforts are on to retain what remains atleast and can say it is definitely worth watching if you are visiting tadiyandamol. There is also a famous work by Kannada Jnanapeeta Laureate Masti Venktatesh Iyengar about the king Chikkaveera Rajendra with the same name which is based on real life stories of the king.

Corners of the Vivaha Mantapa showing Gandabherunda and others

Paintings of RajSabha at the Ground Floor
When you enter the palace from the main door heading east , you would see a VivahaMantapa at your right. It has 4 corners which are decorated by different scriptures like Gandabherunda , Surya-Chandra, Gods and different shapes at the 4 corners. It has 4 nandis facing 4 different directions. It
was said to have 4 lions in 4 corners which were destroyed in the meanwhile. We can make it out from the reminsces and the narration of the security therin. One more speciality of this hall is the echoing place at its center. For a normal echo to happen minimum distance between the speaker and obstacle should be 17 Meters. But if you stand at the center of the hall and speak, you will be surprised to hear your echo in that small place !! Security was explaining to us that the echo is said to have reduced after people have digged at the center in the quest of money and destroyed the whole architecture marvel when they could not find any. Still it is worth a try .

Naga Mandala Carvings on the pillers


Once you move on, a palace of 2 stories welcomes you. Entrance of it has 2 steps believed to resemble that of Right feet of Raja and Rani coming from VivahaMantapa.The palace has the  "Padasaale" or the hall which has long ceilings the support of which is believed to be made of a single tree.On the roof and pillers we can see different carvings of Nagamandala(snakes).

Mainly 2 reasons are given for these carvings. One says it was to respect the farmer friednly snakes which ate the insects which used to destroy the crops. Second one says it was to terrify the enemies who often used to attack this place. Whatever might be the reason,these carvings have become integral part of the architecture of the palace.

You can also see the closed Shastragara(ammunary) before entering inside  the palace. While entering the palace you can see a darkroom which was mainly used to keep people for punishment or also used as a hiding place. It does not have any windows and can be illuminated only by a lamp hole.
After that you will enter a small hall and then a kitchen. The kitchen has a window with 24 holes. If you observe closely from that window you can see across the 3 doors of the palace and till the main entrance. We got the information that when the enemies used to enter the palace, they could be fired using this remote place itself. You could keep rifles in variuos hole to aim either the head or chest of the enemy depending on various positions he could stand. It also has a armrest to assist easy shooting !!

Kitchen also has  a secret hiding room which can be accessed from the top of the building and nobody gets a idea of the person hiding there either from the top floor or from the ground floor !!

Next to kitchen there are 2 more dark rooms with the narrow entrace once again used as a hiding place.From there starts the stairs to go to second floor. In second floor you can see the darbar hall , a room filled with the restored paintings of the queens.A Surprising thing of these paintings is
that we could not capture the face of the queen in the camera eyes inspite of lots of efforts. Although We can enjoy the beauty of it with our eyes,  we could not capture it lile others. So, probably one has to visit the palace to enjoy its beauty. It also has wooden carvings like Pallakki

carrying the Rani, rooftop carving of a flower etc.  There was One more open room having from where king entered the darbar hall. It is filled with rooftop carvings. Darbar hall was recently decorated for the shooting of a kannada movie Belliyappa , Bangarappa starting the then renowned star Kumar Bangarappa in 1992. Ironically it also marked the 200 years of building the the palace !!

You can also find 2 bath rooms of the royal family at the second floor. You can also make out a dimishing dog painting after the first bath room which leads to the stairs leading to terrace. One can also findpaintings like that of Rajsabha at the ground floor and and plenty of others on the
walls. But one should have keen eyes to observe them out of no where and have patience to understand what it is trying to say in its last voices.

As per the information obtained by Nalakkad palace security person, it will be open till 6:30PM daily and visitors are welcomed on all days without any entry fees. Hope the palace attracts more historians and visitors and gets  its glory back.


Should thank The security at Nalakkad Palace, My new young friend Tushar, Medu and seniors Akshay, Mahesh sir for accompanying in the journey to the palace and all the friends of Tadiyandamol trek

Monday, September 15, 2014

ಹುಡುಕಾಟ


ಭಾನುವಾರದ ಬಿಡುವು ಬೇಸರಿಸಿ ಎಳೆಮನಕೆ
ಆಫೀಸ ರಸ್ತೆಯೆಡೆ ಎಳೆಯಿತೊಮ್ಮೆ
ದಿನದ ಹೊಗೆ, ಹಾರನ್ನು,ಟ್ರಾಫಿಕ್ಕು, ತಡೆದಿಣ್ಣೆ
ಕಾಣದೇ ಬೇಸತ್ತ ಜೀವಮೊಮ್ಮೆ

ಆದರೇನಚ್ಚರಿಯು , ಶಬ್ದ ಸತ್ತಿಹ ಪರಿಯು
ಸ್ವಚ್ಛ ಕಪ್ಪನೆ ರಸ್ತೆ ಎಷ್ಟು ಚಂದ
ದಿನದ ಕಸ, ಕೊಳೆಯೆಲ್ಲಿ? ಮುಖಸುಡುವ ಬಿಸಿಲೆಲ್ಲಿ
ಎಲ್ಲ ಹುಟ್ಟಿದ ಭ್ರಮೆಯೆ ಚಿಂತೆಯಲ್ಲಿ ?

ಬೆಲೆಯಿಲ್ಲವೇ ಇಲ್ಲಿ ಭಾವಗಳ ತೋರಿಕೆಗೆ
ಮುಖವಾಡವಿಲ್ಲದೆಯೆ ಬದುಕಲುಂಟೆ ?
ಕಾಡುತಿರು ಜೀವಗಳ ಕುಂಟು ನೆಪಗಳ ಹುಡುಕಿ
ರಕ್ತ ಹೀರದೆ ಸೊಳ್ಳೆ ಬದುಕಲುಂಟೆ? !

ಮನಮುರಿದ ಸ್ನೇಹಗಳು ಸತ್ತ ಗೋರಿಗೆ ಒಂದು
ಹೂವ ಹಾರವನಿಕ್ಕಿ ನಮನವೆನಲೆ
ಕಳೆದ ಕಾಲದ ನೆನಪು, ಕೆದಕಿ ನೋವನೆ ಆಯ್ದು
ಕಣ್ಣೀರ ಮಡುವಾಗೆ ಮಿಂದು ಬರಲೆ

ದಿನಕಳೆದು ಇರುಳಾಯ್ತು . ರವಿವಾರ ಕರಗೋಯ್ತು
ನಾನು ನಾನಾಗಿರಲು ಸಮಯವಾಯ್ತೆ ?
ಕಾಲದಲೆ ನೆನಪಾಗಿ, ಕರಗಿರುವ ನನ್ನನ್ನು
ಹುಡುಕೊ ಎಂದಿನ ಹಠವು ವಿಫಲವಾಯ್ತೆ ?
ಓಡುತಿಹ ಕಾಲದಲಿ, ಕ್ಷಣಕಾಲ ಸಿಕ್ಕನಗೆ
ಒಂದು ಉತ್ತಮ ಓದ ತೃಪ್ತಿ ನಾನು.
ಸಿಕ್ಕ ನಿದ್ದೆಯ ಜೇನು, ಹಸಿರ ಸಿರಿ, ಬಿಳಿ ಬಾನು
ಸೌಂದರ್ಯ ದಾಖಲಿಸೊ ಧರೆಯು ನಾನು
ಅಸ್ಮಿತೆಯ ಅರಸುತ್ತ ನಾಳೆಗಳ ನಾಡಿನಲಿ
ಹೊರಟು ದಾರಿಯ ಮರೆತ ಪಯಣ ನಾನು
ಜೀವನದ ನೀರಿನಲಿ ದ್ವೇಷ, ಸ್ವಾರ್ಥದ ಕೊಳೆಯ
ಅಳಿಸೊ ಮಾಂತ್ರಿಕನರಸಿ ಕಳೆದ ಮೀನು

Wednesday, September 3, 2014

ನಾನೋದಿದ ಪುಸ್ತಕ: ಯಾನ

ನಾನೋದಿದ ಪುಸ್ತಕ: ಯಾನ

ಸತ್ಯವನ್ನೋದ್ರಲ್ಲಿ ಸಾರ್ವಕಾಲಿಕ ಸತ್ಯವನ್ನೋದಿರುತ್ತಾ ಅನ್ನೋದು ಸ್ವಲ್ಪ ಮುಂಚೆಯಿಂದ ಕಾಡುತ್ತಿದ್ದ ಪ್ರಶ್ನೆಗಳಲ್ಲೊಂದು. ಅಂದರೆ ಎಲ್ಲರಿಗೂ ಎಲ್ಲ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಇದೇ ಸತ್ಯ ಅನಿಸುವಂತದ್ದು ? ನಂಗೆ ಸತ್ಯವೆನಿಸಿದ್ದು ನಿಮಗೆ ಸತ್ಯವೆನಿಸಲೇ ಬೇಕಾ ? ನಿಮಗೆ ಸುಳ್ಳೆನಿಸಿದ್ದು ನನಗೆ ಸತ್ಯವೆನಿಸಲೇಬಾರದಾ ? ನಮ್ಮಿಬ್ಬರಿಗೂ ಸತ್ಯವೆನಿಸಿದ್ದು, ಪ್ರಪಂಚದ ಇನ್ನೊಂದು ಮೂಲೆಯಲ್ಲಿದ್ದವನಿಗೂ ಸತ್ಯವೆನಿಸಬೇಕಾ ? ಈ ಕಾಲಕ್ಕೆ ಸತ್ಯವೆನಿಸಿದ್ದು ಭೂತದಲ್ಲಿ ಹುಚ್ಚು ಕಲ್ಪನೆಯಂತೆ ಅನಿಸಿ, ಭವಿಷ್ಯದಲ್ಲಿ ವಿವೇಚನೆಯಿಲ್ಲದ ಮಂಗಾಟದಂತೆಯೂ ಅನಿಸಬಾರದೇಕೆ ? ವಿಷಯದ ಅರಿವಿಲ್ಲದವನ ಬಳಿ ನಾನು ಹೇಳುವುದು ಸತ್ಯವಾದರೂ ಸುಳ್ಳೆನೆಸಿದಂತೆಯೇ , ಸುಳ್ಳೇ ಸತ್ಯದಂಎ ಭಾಸವಾಗೋ ಸಾಧ್ಯತೆಯೂ ಇಲ್ಲದಿಲ್ಲ.ಇನ್ನು  ಕಾಲವೆಂಬುದು ಸರಳ ರೇಖೆ ಅನ್ನೋ ಭಾವ ಹೊಡೆದು ಹಾಕಿ ಅದೊಂದು ಸುರುಳಿ ಸುತ್ತಿಕೊಂಡಿರೋ ಸರ್ಪದಂತೆಂಬ ವೈಜ್ನಾನಿಕ ಸಿದ್ದಾಂತದ ಪ್ರಕಾರ ನೋಡೋದಾದ್ರೆ ಕಾಲದಲ್ಲಿ ಕತೃ, ಕರ್ಮಗಳೆಂಬುದು,  ಭೂತ, ವಾಸ್ತವ, ಭವಿಷ್ಯಗಳೆಂಬ ಕಲ್ಪನೆಗಳೇ ಅಲ್ಲೋಲ ಕಲ್ಲೋಲ. ವಾಸ್ತವದಲ್ಲಿನ ನಮ್ಮ ಭಾವ, ಪ್ರತಿಜ್ನೆ, ಆಣೆ, ಭಾಷೆಗಳಿಗೆಲ್ಲಾ ನಮ್ಮ ನೆಲೆಯಾಗಿರೋ  ಭೂಮಿಯನ್ನೇ ದಾಟಿದ ಮೇಲೆ ಬೆಲೆಯುಂಟೆ ? ಸರ್ವ ಸಾಕ್ಷಿಯಾದ ಸೂರ್ಯನಿಂದ ಮರೆಯಾದ ಮೇಲೂ ಮೌಲ್ಯವುಂಟೇ ?  ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಾ ಹೋಗತ್ತೆ ಯಾನದ ಪುಟಗಳಲ್ಲಿನ ಪದಗಳಿಗೆ ಕಲ್ಪನೆಗಳ ಗರಿಗಳು ಮೂಡುತ್ತಾ ಸಾಗಿದಂತೆ.

ಯಾನದಲ್ಲಿರೋ ವಿಷಯವೈವಿಧ್ಯ, ಮಾಹಿತಿ ಸಂಗ್ರಹಣೆ ಕನ್ನಡದ ಓದುಗನಾದ ನನ್ನ ಮಟ್ಟಿಗೆಂತೂ  ಒಂದು ಹೊಸ ಅನುಭವ, ಖುಷಿ ಕೊಟ್ಟಿದ್ದು ಸುಳ್ಳಲ್ಲ. ಮೊದಲೇ ಅಂದಂತೆ ನನಗೆ ರುಚಿಸಿದ್ದು ಎಲ್ಲರಿಗೂ ರುಚಿಸಬೇಕೆಂಬ ನಿರೀಕ್ಷೆಗಳಿಲ್ಲದ ಸಾಮಾನ್ಯ ಓದುಗನ ಅನಿಸಿಕೆಯಷ್ಟೇ ಇದು. ಭೂಮಿಯಾಚೆಗಿನ ಜೀವದ ಹುಡುಕುವಿಕೆ ಅನ್ನೋ ವಿಷಯ ಬಾಹ್ಯಾಂತರಿಕ್ಷ ಕ್ಷೇತ್ರದ ಬಗೆಗಿನ ಸಾಹಿತ್ಯದ ಓದುಗರಿಗಾಗಲಿ , ಹಿನ್ನುಡಿಯಲ್ಲಿ ಭೈರಪ್ಪನವರೇ ಹೇಳುವಂತೆ "ವಿಜ್ನಾನ ಸಾಹಿತ್ಯ" ಅನ್ನೋ ಪ್ರಕಾರದ ಇಂಗ್ಲೀಷ್ ಸಾಹಿತ್ಯದ ಕೃತಿಗಳ ಓದುಗರಿಗಾಗಲೀ ಹೊಸತಲ್ಲ. ಸುಮ್ನೇ ಭೂಮಿ ಬಿಟ್ಟು ಇನ್ನೆಲ್ಲೋ ಹೊರಟಿರೋ ನೌಕೆಯ ಕುರಿತ ಕೃತಿ ಅನ್ನೋ ಭಾವ ಕೃತಿಯ ಶೀರ್ಷಿಕೆ ನೋಡಿ ಮೂಡುತ್ತಾದರೂ ಕೃತಿಯಲ್ಲಿರೋದು ಇಷ್ಟೇ ಅಲ್ಲ. ಅಂಟಾರ್ಟಿಕಾ ಇದೆ, ಹಿಮಾಲಯವಿದೆ, ಅವೆರಡರ ನಡುವಿನ ಭಾವನಾತ್ಮಕ, ವೈಜ್ನಾನಿಕ ನೆಲೆಗಟ್ಟಿನ ಹೋಲಿಕೆಗಳಿವೆ. ಬದರೀ ಕೇದಾರಗಳಿವೆ, ಬೆಂಗಳೂರಿದೆ, ಕಪ್ಪು ರಂದ್ರಗಳಿವೆ, ಪ್ಲಾಸ್ಮಾ ಸೆಂಟಾರಿ, warm holes ಗಳ ಕಲ್ಪನೆ ಇದೆ. ಹೇಳಹೋದರೆ ಹತ್ತು ಹಲವು ವಿಷಯಗಳು. ಅಂಡಾಣು, ವೀರ್ಯಾಣು, ಯುಗ್ಮಾಣು(zygote) ಗಳ ಜೀವಶಾಸ್ತ್ರವಿದೆ, ಆಧ್ಯಾತ್ಮವಿದೆ, ಮನಶ್ಯಾಸ್ತ್ರವಿದೆ, ಭಾರತೀಯ ವಾಯುಸೇನೆಯ ನೌಕರರ ಚಿತ್ರಣವಿದೆ. ಆದರೆ ಈ ಎಲ್ಲಾ ಬಿಡಿ ಬಿಡಿ ಮಾಹಿತಿಗಳನ್ನು ಸಂಯೋಜಿಸಿದರೆ ಅದೇ ಒಂದು ಪುಸ್ತಕವಾಗಿಬಿಡುತ್ತಾ ? ಇಲ್ಲವನ್ನುವಂತೆ ಇವೆಲ್ಲವನ್ನೂ ಎಲ್ಲೂ ಅಧಿಕವಾಗದಂತೆ ಹಿಡಿದಿಡೋ ನಿರೂಪಣಾ ಶೈಲಿ, ಒಂದೆರಡು ಬಿಟ್ಟರೆ ಯಾವ ಪಾತ್ರವನ್ನೂ ತುಚ್ಚೀಕರಿಸದೇ ಚಿತ್ರಿಸೋ ಆಯಾಮಗಳಿವೆ. ಮೊದಲೇ ಹೇಳಿದಂತೆ ನಾನು ಭೈರಪ್ಪನವರ ಕಟ್ಟಾಭಿಮಾನಿಯಲ್ಲ. ಮೂರ್ತಿಗಳ ಅನುಯಾಯಿಯೂ ಅಲ್ಲ. ಆ ಪಂಥ, ಈ ಪಂಥ ಅಂತ ತಲೆಕೆಡಿಸಿಕೊಳ್ಳದೇ ಓದುವ ಸಾಮಾನ್ಯ ಓದುಗನಷ್ಟೇ.

ಪುಸ್ತಕ ಹೇಗಿದೆ. ಏನು ಕತೆ ಅಂತ ಈಗಾಗ್ಲೇ ಹೇಳಿಬಿಟ್ಟೆ. ಇನ್ನೇನು ಪುಸ್ತಕ ಓದೋದು ಅಂದ್ಕಂಡ್ರಾ ? ಹಂಗೇನಾದ್ರೂ ಅಂದ್ಕೊಂಡಿದ್ರೆ ಅದು ಖಂಡಿತಾ ತಪ್ಪು. ಪುಸ್ತಕದ ಮೊದಲ ಇಪ್ಪತ್ತು ಪೇಜುಗಳಲ್ಲಿ ನನಗಿದ್ದ ನಿರೀಕ್ಷೆ ಹಠಾತ್ತನೆ ಬದಲಾಯ್ತು. ಇನ್ನೇನು ಕೊನೆಯ ಹದಿನಾರು ಪೇಜುಗಳಿವೆ ಅನ್ನುವಷ್ಟರಲ್ಲಿ ಮತ್ತೆ ತಿರುಗಿತದು. ಏನೋ ಆಯಿತು ಅಂದುಕೊಳ್ಳುವಷ್ಟರಲ್ಲಿ ಕತೆಗೆ ಮತ್ತೇನೋ ಅಂತ್ಯ. ಇದರಲ್ಲಿ ಕತೆಯ ಅಲ್ಲಲ್ಲಿ ಬರುವ ಅನಿರೀಕ್ಷಿತ ತಿರುವುಗಳ ಬಗ್ಗೆ ಹೇಳುತ್ತಿಲ್ಲ. ಕತೆ ಮೇಧಿನಿ, ಆಕಾಶ, ಸುದರ್ಶನ್, ಉತ್ತರಾ, ಯಾದವ್ ಹೀಗೆ ಮುಖ್ಯವಾಗಿ ಐವರ ನಿರೂಪಣೆಯಲ್ಲಿ ಸಾಗುತ್ತದಾದರೂ ಅಲ್ಲಲ್ಲಿ ಬರುವ ಉತ್ತರೆಯ ತಂದೆತಾಯಿ, ಸುದರ್ಶನನನ ಕುಟುಂಬದ ಕಲ್ಪನೆ. ವೈಜ್ನಾನಿಕ ಸಂಶೋಧನೆಗಳು, ಎಡ್ವರ್ಡ್, ಲೀಸಾ, ಎಂಗಾ, ರಜನಿ, ವೆಂಕಟೇಶ್ವರ್, ಎ.ಎಸ್. ಸಾನಿ, ಹೀಗೆ ಹಲವು ಪಾತ್ರಗಳ  ನಿಲುವುಗಳಲ್ಲಿ ಹೊಯ್ದಾಡುತ್ತದೆ. ಮುಂದೇನು ಬರಬಹುದು ಅನ್ನೋ ನಿರೀಕ್ಷೆಯನ್ನ ಹುಟ್ಟು ಹಾಕೋಕೂ ಬಿಡದಂತೆ ಕೆಲವು ಘಟನಾವಳಿಗಳು ಓದಿಸಿಕೊಂಡು ಹೋಗುತ್ತೆ. ಮುಂದೆ ಹೀಗಾಗಬಹುದು ಅಂತ ನಿರೀಕ್ಷೆ ಹೊಡಿಸಿ ಬೋರ್ ಹೊಡಿಸಿದ ಪ್ರಸಂಗಗಳ ನಂತರ ಆಗೋದು ಇನ್ನೊಂದೇ.

ಹಂಗಂತಾ ಇದರಲ್ಲಿದ್ದುದೆಲ್ಲಾ ಇಷ್ಟವಾಯಿತೆಂದಲ್ಲ. ಇದು ಕನ್ನಡ ಸಾಹಿತ್ಯ. ಹಾಗಾಗಿ ಇಲ್ಲಿ ಬಂದಿರೋ ಕೃತಿಗಳಲ್ಲಿ ಈ ಮಟ್ಟಿನ ಹೊಸತನ ತಂದಿದ್ದೇ ಹೆಚ್ಚು ಅಂತ ತೃಪ್ತಿಪಟ್ಟುಕೊಳ್ಳುವ ಹಂತ ದಾಟಿ ವೈಜ್ನಾನಿಕ ಸಾಹಿತ್ಯದ ಸಾಮಾನ್ಯ ಓದುಗನಾಗಿ ನೋಡಿದ್ರೆ ಅನೇಕ ವಿರೋದಾಭಾಸಗಳು ಕಣ್ಣಿಗೆ ರಾಚುತ್ತೆ. ಅಂಟಾರ್ಟಿಕಾ ಪ್ರಸಂಗದಲ್ಲಿ ಆರು ಸಾವಿರ ಮೀಟರ್ ಹಿಮದ ಮೇಲಿನ ನಡಿಗೆ ಅಂತ ಮೊದಲ ಉಲ್ಲೇಖದಲ್ಲಿದ್ದರೆ ಮತ್ತೆ ಬರುವ ಉಲ್ಲೇಖದಲ್ಲಿ ಅದು ನಾಲ್ಕು ಸಾವಿರ ಮೀಟರ್ ಅಂತಾಗಿರುತ್ತೆ ! ತಮ್ಮ ತಾಯಿಗೆ ಅರವತ್ತು ವರ್ಷವಾದರೂ ಇನ್ನೂ ಕಳೆಯಿಂದಿದ್ದಾಳೆ ಅಂತ ಯೋಚಿಸುವ ಮೇಧಿನಿಗೆ ೨೪ ವರ್ಷ, ಆಕಾಶನಿಗೆ ಅವಳಿಗಿಂತ ಮೂರು ವರ್ಷ ಸಣ್ಣ ಪ್ರಾಯ ಅಂತ ಬರುತ್ತೆ. ಇಲ್ಲಿಯವರೆಗೆ ಸರಿ. ಆದ್ರೆ ನಂತರ ಉತ್ತರಾ ನಲವತ್ತು ವರ್ಷಕ್ಕೆ ತಾಯಿಯಾಗೋ ಸಂದರ್ಭ ಅಂತ ಬರುತ್ತೆ. ನಲವತ್ತು ಮತ್ತು ಇಪ್ಪತ್ನಾಲ್ಕು ಅಂದುಕೊಂಡರೂ ಉತ್ತರೆಗೆ ಅರವತ್ನಾಲ್ಕಾಗಬೇಕಲ್ಲವೇ  ಅನ್ನೋ ಪ್ರಶ್ನೆ ಛಂಗನೆ ಎದುರಾಗುತ್ತೆ.  ಕಾದಂಬರಿ ಶುರುವಾಗೋದ್ರಲ್ಲೇ ಹೇಳುವ ಭೂಮಿಯೆಂಬ ಭೂಮಿಯಿಂದ ಬಿಟ್ಟು ಮೂವತ್ತೇಳಿ ವರ್ಷವಾಯಿತಂತೆ ಅನ್ನೋ ಮಾತಿದೆ,ಭೂಮಿ ಬಿಡುವಾಗ ಉತ್ತರೆಗೆ ಇಪ್ಪತ್ತೆಂಟರ ಪ್ರಾಯ ಮತ್ತೆ ಇಲ್ಲಿಗೆ ಬಂದು ಹದಿಮೂರು ವರ್ಷದ ನಂತರ ಮಕ್ಕಳಾಗೋ ಯೋಚನೆ ಮೂಡಿ ನಲವತ್ತಕ್ಕೆ ಮೊದಲ ಮಗುವೆಂಬ ಲೆಕ್ಕಾಚಾರ ಬಂದರೂ ಮಕ್ಕಳ ಆಯಸ್ಸು, ಅಮ್ಮನ ಆಯಸ್ಸಿನ ಲೆಕ್ಕ ಹೊಂದೋಲ್ಲ. ಇನ್ನು ಸೆಕೆಂಡಿಗೆ ಒಂದು ಲಕ್ಷ ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ವಾಹನ. ಅದಕ್ಕೂ ಮಾಹಿತಿಯನ್ನು ಮುಟ್ಟಿಸಿ, ವಾಪಾಸ್ ಸಂದೇಶಗಳನ್ನು ಪಡೆಯುವಷ್ಟು ತಂತ್ರಜ್ನಾನ ಬೆಳೆಯುತ್ತೆ ಅಂದುಕೊಂಡ್ರೂ ಈಗಿನ ವಾಹನಕ್ಕಿಂತ ಹತ್ತುಪಟ್ಟು ಹೆಚ್ಚು ವೇಗವಾಗಿ ಚಲಿಸೋ ವಾಹನ ತಯಾರಿಸಿ ಅಂತ ಸ್ವತಃ ವಿಜ್ನಾನಿಯಾದ ಸುದರ್ಶನ್ ಹೇಳೋದು ಯಾಕೋ ಆಭಾಸವೆನಿಸುತ್ತೆ. ಯಾಕೆಂದರೆ e=mc2 ಎಂಬ ಸಾಮಾನ್ಯ ಸೂತ್ರದ ಪ್ರಕಾರ ಯಾವುದೇ ವಸ್ತುವಿನ ವೇಗ ಬೆಳಕಿನ ವೇಗ ಮುಟ್ಟಿದಾಗ ಅದು ವಸ್ತು ಸ್ಥಿತಿಯಿಂದ ಶಕ್ತಿ ಸ್ಥಿತಿಗೆ ಬದಲಾಗುತ್ತೆ ಅಂತ. ಒಂದು ಲಕ್ಷ ಕಿ.ಮೀ ವೇಗದ ಹತ್ತು ಪಟ್ಟು ಅಂದರೆ ಬೆಳಕಿನ ವೇಗಕ್ಕಿಂತಲೂ ಮೂರು ಪಟ್ಟು ಹೆಚ್ಚು ವೇಗವಾಗಿ ಚಲಿಸೋ ವಾಹನ !! ವಾಹನವಾಗಿಯೇ ಉಳಿಯದಿರುವ ಸಂದರ್ಭದಲ್ಲಿ ಅದರೊಳಗಿನ ಯಾನದ ಕಲ್ಪನೆ.. !!! ಅಷ್ಟೆಲ್ಲಾ ಮುಂದೆ ಹೋಗೋ ಅನಿವಾರ್ಯತೆಯಿರಲಿಲ್ಲ. ಇದೊಂದು ಕತೆ. ಕತೆಯ ದೃಷ್ಠಿಯಲ್ಲೇ ನೋಡೋದಾದ್ರೆ ವಿಭಿನ್ನವಾದ ಉತ್ತಮ ಕತೆಯೇ. ಆದ್ರೆ ವೈಜ್ನಾನಿಕ ಅನ್ನೋ ಪರಿಕಲ್ಪನೆ ಹೊತ್ತಾಗ ಅದಕ್ಕೆ ತಕ್ಕ ನಿರೀಕ್ಷೆಗಳೂ, ಅಂಕಿ ಅಂಶಗಳಲ್ಲಿನ ವೈರುಧ್ಯವಿರದ ಅಪೇಕ್ಷೆಯೂ ಇರುತ್ವೆ ಅನಿಸುತ್ತೆ. ವಿಷಯವನ್ನು ಬೌದ್ಧಿಕ, ಭೌತಿಕವೆಂದು ವಿಭಜಿಸಿದ ಪಾಶ್ಚಾತ್ಯರ ದೃಷ್ಠಿಕೋನದ ಬಗ್ಗೆ, ವಿವೇಕಾನಂದರ ಬಗ್ಗೆ, ಎಸ್ಕಿಮೋಗಳ ಬಗ್ಗೆ.. ಹೀಗೆ ಹಲವಷ್ಟು ಹೊಸ ಹೊಳವುಗಳ ಕೊಟ್ಟ ಪುಸ್ತಕವೊಂದರ ಬಗ್ಗೆ ವಿಮರ್ಶಿಸುವಷ್ಟಾಗಲೀ, ಟೀಕಿಸುವಷ್ಟಾಗಲೀ ಓದು ನನಗಿಲ್ಲ. ಎರಡು ದಿನ ಬಿಟ್ಟೂ ಬಿಡದೇ ಓದಿಸಿದ ಪುಸ್ತಕವೊಂದರ ಬಗ್ಗೆ ಪ್ರಾಮಾಣಿಕ ಅನಿಸಿಕೆ ತಿಳಿಸೋ ಸಾಮಾನ್ಯ ಓದುಗನ ನಾಲ್ಕು ಸಾಲುಗಳಷ್ಟೇ ಇವು. ಇದನ್ನ ಓದಿದವರು ಮೆಚ್ಚಬಹುದು. ಖಂಡಿಸಬಹುದು. ಅದರ ನಿರೀಕ್ಷೆಗಳಿಲ್ಲ. ಮುಂದೊಮ್ಮೆ ನಾನೇ "ಯಾನ" ವನ್ನೋದಿ ಈ ಅಭಿಪ್ರಾಯವನ್ನೋದಿದಾಗ ಆಗ ಬೇರೆ ಅಭಿಪ್ರಾಯಗಳನ್ನೋದಿ ಇದರ ಬಗ್ಗೆ ಭಿನ್ನಾಹಿಪ್ರಾಯ ಮೂಡಲೂಬಹುದು. ಆದರೆ ಇದು ಸದ್ಯದ ಭಾವಗಳ ದಾಖಲೆಯಷ್ಟೇ. ಅಂದ ಹಾಗೆ ಸಾರ್ವಕಾಲಿಕ ಸತ್ಯವೆಂಬುದೇನಿಲ್ಲವಲ್ಲ..

ಪುಸ್ತಕ ಕೊಟ್ಟ ಮತ್ತು ಓದೋಕೆ ಪ್ರೇರೇಪಿಸಿದ ಹರೀಶಣ್ಣ ದ್ವಯರಿಗೊಂದು ಧ.ವಾ