Monday, August 5, 2013

ಸ್ನೇಹಜೀವನದಿ ಎಲ್ಲೋ ಇದ್ದ
ನಾನು, ನೀನೆಂಬ ಬಿಂದು
ಸಂಧಿಸಿದ ರೇಖೆ ಹೆಸರು ಚೆಲುವ ಈ ಸ್ನೇಹ
ನಾನು ನೀನೆಂಬ ನಿನ್ನೆ
ನಾವೆಂಬ ಇಂದಿನಲ್ಲಿ
ಬೆಸೆದಂತ ಗೋಂದು, ಒಲವು ಮಧುರ ಈ ಸ್ನೇಹ


 

ಜಾತಿ, ಲಿಂಗ ಭಾಷೆಗಳೆಂಬ
ಬೇಲಿಯಿಲ್ಲ , ಮಾತೇ ಎಲ್ಲ
ನೋವಿನಲೂ ನಲಿವಿನಲ್ಲೂ
ಸಾಥಿ ಈ ಸ್ನೇಹ
ಸೋಲಿನಲೂ ಸೊರಗದಂತ
ಪ್ರೀತಿ ಈ ಸ್ನೇಹ


 

ಮೌನದಲೂ ಕಾಡೋ ನೀನು
ಸಕಲ ಸುಖದ ಕಾಮಧೇನು
ಎಲ್ಲವನೂ ದೂರ ತಳ್ಳೋ
ಬೇಸರ ಬಂತೇನು
ಅಹಮಿಕೆಯ ಕಿಡಿ ಬೆನ್ನಲ್ಲೇ
ಅಗಲಿಕೆ ಇತ್ತೇನು ?

ಬಾಳೆ ಒಂದು ಭಾವಗೀತೆ
ನಾನೆ ರಾಮ ನೀನೆ ಸೀತೆ
ನೀನು ಸಿಗಲು ಮಾಯ ಚಿಂತೆ
ಬೇರೆ ನಾನರಿಯೆ
ಹಕ್ಕಿ ಹಾರಿ ಹಾಗೇ ಉಳಿದ
ಮರದ ಒಣ ಪೊದರೆ

14 comments:

 1. ಬಾಳೆ ಒಂದು ಭಾವಗೀತೆ
  ನಾನೆ ರಾಮ ನೀನೆ ಸೀತೆ
  ನೀನು ಸಿಗಲು ಮಾಯ ಚಿಂತೆ ..ನಿಜ.
  nice lines..

  ReplyDelete
  Replies
  1. ಧನ್ಯವಾದಗಳು ಶಾರದಕ್ಕ.. "ನಾನೆ ರಾಮ.." ಸಾಲುಗಳು ಹೊಳೆದಿದ್ದು ಎಲ್ಲಕ್ಕಿಂತ ಕೊನೆಗೆ.. ಆದರೆ ಅದೇ ಎಲ್ಲಕ್ಕಿಂತ ಇಷ್ಟವಾಗೋಯ್ತು ಎಲ್ಲರಿಗೂ.. ಯಾವುದೋ ಒಂದು ಸಾಲು, ಪ್ಯಾರಾವಾದರೂ ಎಲ್ಲರಿಗೂ ಮೆಚ್ಚುಗೆಯಾದರೆ ಅದಕ್ಕಿಂತ ಖುಷಿ ಬೇರಿಲ್ಲ ಅಲ್ಲವೇ ಕವಿಗೆ..

   Delete
 2. ಚಂದದ ಸ್ನೇಹ ಕವನ...
  ಸೂಪರ್....

  ReplyDelete
  Replies
  1. ಧನ್ಯವಾದ ರಾಘಣ್ಣ :-)

   Delete
 3. This comment has been removed by the author.

  ReplyDelete
  Replies
  1. ಧನ್ಯವಾದಗಳು ಪ್ರಸಾದ್ :-)

   Delete
 4. ಗೆಳೆಯ ಪ್ರಶಸ್ತಿಯವರೇ ಸ್ನೇಹದ ವಿಸ್ತಾರವನ್ನು ಸಶಕ್ತವಾಗಿ ನಿರೂಪಿಸಿದ್ದೀರಿ. ತುಂಬಾ ದಿನಗಳ ನಂತರ ಕನ್ನಡ ಬ್ಲಾಗಿನಲ್ಲಿ ನಿಮ್ಮ ಕವಿತೆ ನೋಡಿದೆ. ಖುಷಿಯಾಯಿತು. ಮತ್ತಷ್ಟು ಕವಿತೆಗಳನ್ನು ಆಸ್ವಾದಿಸುವ ನನ್ನ ಹಂಬಲಕ್ಕೆ ನಿಮ್ಮ ಇಂಬು ದೊರೆಯುವಂತಾಗಲಿ. ಶುಭವಾಗಲಿ.

  ReplyDelete
  Replies
  1. ನಿಮ್ಮ ಮೆಚ್ಚುಗೆಗೆ ಮತ್ತು ಸ್ನೇಹಕ್ಕೆ ಮತ್ತೊಮ್ಮೆ ಸಲಾಂ ಪ್ರಮೋದ್ :-) ಯಾಕೋ ಕವನಗಳು ಕಮ್ಮಿಯಾಗುತ್ತಿವೆ ಈಗ.. ನಿಮ್ಮ ಮಾತಿನಂತೆ ಬರೆಯಲು ಪ್ರಯತ್ನಿಸುತ್ತೇನೆ. ಬೆನ್ನುತಟ್ಟುವಿಕೆಗೆ ಮತ್ತೊಮ್ಮೆ ಧ.ವಾ

   Delete
 5. ಬಾಳೆ ಒಂದು ಭಾವಗೀತೆ ಎನ್ನುವುದ ಅದೆಷ್ಟು ಚೆನ್ನಾಗಿ ಬರೆದುಕೊಟ್ಟಿದ್ದೀರಾ ಗೆಳೆಯ.
  ನಿಮ್ಮ ಚಿತ್ರಗಳೂ ಚೆನ್ನ.

  ReplyDelete
  Replies
  1. ಧನ್ಯವಾದಗಳು ಬದ್ರಿ ಭಾಯ್.. ಹಿಂದೊಮ್ಮೆ ಹೀಗೇ ಚಿತ್ರಗಳನ್ನ ಬರೆದು ಲೇಖನವೊಂದರಲ್ಲಿ ಬಳಸಿದ್ದೆ.. ಸುಮಾರಿಗೆ ಬಂದಿತ್ತು.. ಈ ಬಾರಿ ತೀರಾ ಚೆನ್ನಾಗಿ ಅಂತಲ್ಲದಿದ್ದರೂ ಯಾಕೋ ನಿರೀಕ್ಷೆಯಂತೆ ಮೂಡಿದ ರೇಖೆಗಳು ಖುಷಿ ಕೊಟ್ಟವು..
   ಆದರೆ ಈ ಚಿತ್ರಗಳನ್ನು ಬರೆದವನು ನಾನೇ ಎಂದು ಗಮನಿಸಿ ಬೆನ್ನುತಟ್ಟಿದವರಲ್ಲಿ ನೀವೇ ಮೊದಲಿಗರು..ಹಾಗಾಗಿ ಡಬಲ್ ಧನ್ಯವಾದಗಳು :)

   Delete
 6. ತುಂಬಾ ದಿನಗಳ ನಂತರ ಕವನ ಬಂದಿದೆ ಪ್ರಶಾಂತವನದಲ್ಲಿ , ಖುಷಿ ಆಯ್ತು ಲಯಬದ್ಧ ಹಾಡು :)

  ReplyDelete
  Replies
  1. ಒಂದೇ ತರ ಬರ್ಯಕ್ಕೆ ಬೇಜಾರ್ ಬಂದ್ಬುಟ್ತಲ.. ಅದ್ಕೆ..

   Delete
 7. ಸ್ನೇಹ ದಿನಕ್ಕೊಂದು ಸ್ನೇಹದ ಚಿತ್ತಾರದ ಜೊತೆಗೊಂದು ಚಂದದ ಪದಗಳ ಭಾವ :)
  ಇಷ್ಟ ಆಗ್ಲೇ ಬೇಕು ...
  ಸ್ನೇಹದ ಮಧುರ ಭಾವ ಹತ್ತಿರ ಅನ್ನಿಸ್ತು ..

  ReplyDelete
  Replies
  1. ಧನ್ಯವಾದಗಳು ಭಾಗ್ಯ.. ನಿಂಗೂ ಧನ್ಯವಾದ ಸುಬ್ಬು :-)

   Delete