Friday, August 10, 2012

ಕವಿತೆ

ಬಯಸಿದಾಗ ಬಳಿ ಬಾರದಂತ
ಪ್ರಿಯೆ, ಹಸಿವಿನಂತೆ ಕವಿತೆ
ಬಳಿಗೆ ಬರಲು ಜಗವೆಲ್ಲ ಮರೆತು
ಸವಿಯಲ್ಲೆ ನನ್ನ ಮರೆತೆ


ತಂಪ ಮಳೆಯೀವ ಭಾವ ಮೋಡ
ಮರೆಯಾಗೋ ಓಟ ಹೂಡಿ
ಮುನಿಸು ದಹಿಸಿದ ಮೂಕ ಮನಸು
ಒಣ ಕಾಲ ಮುಗಿಲ ನೋಡಿ

ಕಾಲದಂತೆಯೇ ಎಲ್ಲ ಹಸಿವು
ಮರೆಸೋ ಹಸಿವು ಕವಿತೆ
ಜಾರೋ ಭಾವ ಮೋಡಿ ಮಾಡಿ
ಕರೆತಾರೋ ಗಾಡಿ ಕವಿತೆ

ನೋವ ತಮದಿ ಮನವೆಲ್ಲೊ ಕಳೆದಿರೆ
ನಲಿವ ಬೆಳಕ ಹಣತೆ
ಬಾಳ ನೋವಿಗೆ ಬಿರಿಯೂ ತನುವಿಗೆ
ತಂಪ ನೀರು ಕವಿತೆ
ಮನ ತಣಿವ ಚೆಲುವೆ ಕವಿತೆ

6 comments:

  1. ಒಂದು ಒಳ್ಳೆಯ ಕವಿಯೆ ಕವಿಯಲ್ಲೂ ಮತ್ತು ಓದುಗನಲ್ಲೂ ಉಂಟು ಮಾಡಬಲ್ಲ ಎಲ್ಲ ಭಾವಗಳ ಸಮಿಶ್ರಣ ಈ ಕವನ.

    ಪದ ಲಾಲಿತ್ಯದಿಂದ ಇದು ಅನನ್ಯವಾಗಿ ನಿಲ್ಲುತ್ತದೆ.

    ReplyDelete
    Replies
    1. ಮೆಚ್ಚುಗೆಗೆ ಮತ್ತು ಬ್ಲಾಗ್ ಭೇಟಿಗೆ ಧನ್ಯವಾದಗಳು ಬದ್ರಿ ಸರ್ :-)

      Delete
  2. ಒಳಗಿಂದ ಭಾವ ಸ್ಪುರಿಸಿದಾಗ ಮಾತ್ರ ಹುಟ್ಟುವುದು ಕವಿತೆ.....
    ಚಂದದ ಕವಿತೆ...

    ReplyDelete
    Replies
    1. ಧನ್ಯವಾದಗಳು ಸುಷ್ಮಾ ಅವರೆ :-)

      Delete
  3. chandada kavite oduva bhaagya karunisiddakke prashastiyavare thamage dhanyavaadagalu...

    ReplyDelete
    Replies
    1. ನಿಮ್ಮ ಚೆಂದದ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ವಂದನೆಗಳು ಉಷೋದಯ ಅವರೇ :-)

      Delete