Wednesday, May 22, 2013

ಹಿಂಗೇ ಸುಮ್ನೆ.. Fb request ಗಳ ಸುತ್ತ

Fb ಎಂಬ ಸಮುದ್ರದಲ್ಲಿ ಯಾರ್ನ ಬೇಕಾದ್ರೂ ಹುಡುಕ್ಬೋದು, ಅದೊಂದು ಸ್ನೇಹ ಸಾಗರ ಅಂತಾರೆ. ೧೦೦% ನಿಜ. ಆದ್ರೆ ಸಮುದ್ರಮಂಥನದಲ್ಲಿ ಅಮೃತದ ಜೊತೆ ವಿಷನೂ ಸಿಗತ್ತಲ್ವಾ.. ಸ್ನೇಹಸೇತುವೇ ಬೇಸರದ ಋತುವಿಗೆ ಕಾರಣವಾದ್ರೆ..
ಅದ್ರ ಬಗ್ಗೆ ಒಂದು ಕಿರು ಬರಹ..ಬರಹ ಅನ್ನೋಕ್ಕಿಂತ ತಟ್ಟನೆ ಅನಿಸಿದ ಮಾತುಗಳು ಪಟ್ಟನೆ ನಿಮ್ಮ ಮುಂದೆ..


ಹಿಂಗೇ ಒಂದು ಫ್ರೆಂಡ್ ರಿಕ್ವೆಸ್ಟ್:
ನೂರರಲ್ಲಿ ನೂರಾ ಒಂದಾಗೋ ಬದ್ಲು ಇರ್ಲಿ ಅಂತ ಸ್ವಲ್ಪ ಮಾತುಕತೆಯ ಪ್ರಯತ್ನ..
ಅ: ಹಾಯ್.. ನಾವಿಬ್ರೂ ಸಿಕ್ಕಿದೀವಾ ಎಲ್ಲಾದ್ರೂ ? ಹೆಸ್ರು ಎಲ್ಲೋ ಕೇಳ್ದಂಗಿದೆ.. ಆದ್ರೆ ಎಲ್ಲಿ ಅಂತ ಗೊತ್ತಾಗ್ತಾ ಇಲ್ಲ
೧)ಬ: ಹಾಯ್.. ನಂಗೂ ಗೊತ್ತಿಲ್ಲ ! ಹಿಂಗೇ ಫ್ರೆಂಡ್ ಸಜ್ಜೆಷನ್ ಬಂತು. ಕಳ್ಸಿದೆ. ಭಾರತದ ತುಂಬಾ ಪ್ರೆಂಡ್ ಮಾಡ್ಕೋಬೇಕು ಅನ್ನೋ ಬಯಕೆ ನನ್ನದು. ನೀವೂ ನನ್ನ ಫ್ರೆಂಡ್ ಆಗ್ತೀರಾ ? (!!!)

೨)ಬ: ಹಾಯ್.. ನೀವ್ಯಾರು ಅಂತಾನೆ ನಂಗೆ ಗೊತ್ತಿಲ್ಲ. ಯಾರೋ ಚಂದದ ಹುಡ್ಗಿ ಸಿಕ್ಕಿದ್ಲು ಅಂತ ಬರೀ ಇದೇ ಮಾಡ್ರಿ. ಬೇರೆ ಕೆಲ್ಸ ಇಲ್ವಾ ನಿಂಗೆ ? *** (!!)

೩)ಬ: ಲೋ. ನೀನ್ಯಾರು ಅಂತ ನಂಗೇನೋ ಗೊತ್ತು ? ಏನೋ ಕಾಮನ್ ಫ್ರೆಂಡ್ಸು ಇದಾರೆ ಸುಮಾರ್ ಜನ ಅಂತ ರಿಕ್ವೆಸ್ಟ್ ಕಳ್ಸಿದ್ರೆ ಇದೇ ಪ್ರತಿಷ್ಟೇ ಮಾಡ್ತೀಯ *** (!) :-(

೪)ಬ: no reply at all for any questions :-( :-(

ಇದು ಕೆಲ ನಮೂನೆಗಳು.. ಇನ್ನೊಂದು ಗ್ರೂಪು. ಅದಕ್ಕೆ ಒಂದ್ನಾಕು ಹೊಸ ರಿಕ್ವೆಸ್ಟ್ಗಳು ಬಂದಿದೆ.. ಯಾರನ್ನೋ ಸೇರ್ಸ ಬದ್ಲು ಪೂರ್ವಾಪರ ವಿಚಾರ್ಸೋದು ಅಡ್ಮಿನ್ನಿನ ಕರ್ತವ್ಯ..ಹಂಗೇ ಸ್ವಲ್ಪ ಮಾತುಕತೆ..
ಅ: ಹಾಯ್ ನಂ ಗ್ರೂಪಿಗೆ ಸೇರ್ಕಳ್ಳೋ ರಿಕ್ವೆಸ್ಟ್ ಬಂದಿದೆ ನಿಮ್ಮಿಂದ. ಇದು ನಮ್ಮ ಕಾಲೇಜು ಹುಡುಗ್ರ ಗುಂಪು.. ನಿಮ್ಮ ಪ್ರೊಫೈಲಲ್ಲಿ ನಮ್ಮ ಕಾಲೇಜಲ್ಲಿ ಓದಿದ್ದ ಬಗ್ಗೆ ಏನೂ ಕಾಣ್ಲಿಲ್ಲ.. ನಿಮ್ಮ ಬ್ಯಾಚ್ಯಾವ್ದು ಅಂತೇನಾದ್ರೂ ಪರಿಚಯ ಮಾಡ್ಕೋತೀರಾ ಪ್ಲೀಸ್.. ಗುಂಪಿನ ಇತರ ಸದಸ್ಯರ ಕೋರಿಕೆ ಕೂಡ..

೧)ಬ: who the hell are you ? (!!) i don't know you and who joined me to the group. get lost.. (after that admin is blocked from that user!!)

೨)ಬ: no reply for any questions..

ಇಷ್ಟೆಲ್ಲಾ ಸಾಲ್ದು ಅಂತ ಹಿಂದೆ ಬಿಟ್ಟು ಮಾತುಗಳು
೧)ಲೇ, ಅಹಂಕಾರದ ಮುದ್ದೆ ಕಣೋ.. ಯಾರತ್ರ ಹೆಂಗೆ ಮಾತಾಡ್ಬೇಕು ಗೊತ್ತಿಲ್ಲ (!) ತಾನೇ ದೊಡ್ಡೋನು ಅಂತ ಮಾತಾಡ್ತಾನೆ. ..
೨)ಲೋ, ಇಪ್ಪತ್ನಾಲ್ಕು ಘಂಟೆ ಫೇಸ್ಬುಕ್ಕಲ್ಲಿ ಏನ್ ಮಾಡ್ತೀಯ.. ಬೇರೆ ಕೆಲ್ಸ ಇಲ್ವಾ ? ..
೩) you accepted fried request. But no reply for any message , post, wish anything.. ಎಲ್ಲರಿಗೂ ನಿನ್ನಂಗೆ ಫೇಸ್ಬುಕ್ಕಲ್ಲಿ ಅಡ್ಡಾಡೋಕೆ ಟೈಮ್ ಇರಲ್ಲಪ.. --> ಹೌದಪ್ಪ ನಮಗ್ಮಾತ್ರಾ ಪ್ರಪಂಚದಲ್ಲಿ ಯಾವ ಕೆಲಸಗಳೂ ಇಲ್ದೇ ಇದೊಂದೇ ಕೆಲ್ಸವಾ ? ..

ನೂರಾರು ಗೆಳೆಯರಿರ್ತಾರೆ. ಹೇಳ್ಬೇಕಾಗಿದ್ದ, ಹೇಳ್ಬಹುದಾಗಿದ್ದ ಮಾತೊಂದು ವರ್ಷಗಟ್ಲೆ ಹಾಗೇ ಉಳ್ದೋಗತ್ತೆ :-(
ಆದ್ರೂ ಈ ಫಾಸ್ಟ್ ದುನಿಯಾದಲ್ಲಿ, ಸ್ವಂತಕ್ಕೇ ಟೈಮಿಲ್ಲದ ಓಟದಲ್ಲಿ ಹಿಂಗೂ ಆಗತ್ತೆ.. ಸಾಕಪ್ಪಾ ಸಾಕು.. ಡೊಡ್ನಮಸ್ಕಾರ.. ನನ್ನ ಗೆಳೆಯರು ಹೇಳ್ತಾನೆ ಇರ್ತಾರೆ.. ಯಾಕೆ ತಲೆ ಕೆಡಸ್ಕೋತೀಯ.. ಜಸ್ಟ್ ಇಗೋರ್..ಈಂತ ಬೇಸರ ಪದೇ ಪದೇ ಆಗೋ ಬದ್ಲು ಒಂದೇ ದಾರಿ.. ಮುಖ ಪರಿಚಯ ಇಲ್ದಿರೋ ಯಾರ ರಿಕ್ವೆಸ್ಟ್ ಬಂದ್ರೂನೂ ಜಸ್ಟ್ ಇಗೋರ್.. ಆದ್ರೂ ಕೆಲ ಸಲ ಹಿಂಗೆಲ್ಲಾ ಅನಿಸ್ತಿರುತ್ತೆ.. ಬರಸ್ತಿರುತ್ತೆ .. :-)


2 comments:

 1. ಸಮಯವಿಲ್ಲ ಸಮಯವಿಲ್ಲ ಅಂತ ಹೇಳ್ತಾನೆ ಬೇಡದ ಡಬ್ಬಾ ಕೆಲಸ ಮಾಡುತ್ತಾ ಕೂತಿರುವವರು ಹಲವಾರು ಮಂದಿ. ಸ್ನೇಹದ ಹಸ್ತವನ್ನು ಚಾಚಿ ಇರುವ ಆಯಸ್ಸಿನಲ್ಲಿ ಭೂಮಿಯ ಮೇಲೆ ತಮ್ಮ ಛಾಪನ್ನು ಮೂಡಿಸುವ ಹಂಬಲ ಕೆಲವರಿಗೆ. ಬ್ಯುಸಿ ಬ್ಯುಸಿ ಅಂತ ಅನ್ಕೊಂಡು ಎಲ್ಲಿಯೂ ಗಮನ ಕೊಡದೆ ಹೋಗುವುದಕ್ಕಿಂತ ಸ್ನೇಹದ ಸಂಕೋಲೆಯಲ್ಲಿ ಬಂಧಿಗಳಾಗಿ ಒಂದಷ್ಟು ಹರಟಿ ನಾಲ್ಕು ಮೊಗದಲ್ಲಿ ನಗು ತರಿಸುವ ಪ್ರಯತ್ನ ಮಾಡುತ್ತಿರಬೇಕು. ಅಂತ ಒಂದು ಆಶಯ ನಿಮ್ಮ ಲೇಖನದಲ್ಲಿ ಮೂಡಿದೆ. ಸುಂದರ ಬರಹ. ಮಂಗಗಳಿಂದ ಮರಕ್ಕೆ ತೊಂದರೆ ಇಲ್ಲ..ಮರದಿಂದ ಮಂಗಗಳಿಗೆ ತೊಂದರೆಯಿಲ್ಲ.. ಸಿಕ್ಕ ಸಾಮಾಜಿಕ ತಾಣವನ್ನು ಒಳ್ಳೆಯ ಆಶಯಗಳಿಗೆ ಬಳಸಿಕೊಳ್ಳಬೇಕು ಎನ್ನುವ ಹಂಬಲ ಇರಬೇಕು ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಿಮ್ಮ ಲೇಖನ ಸರಿಯಾಗಿದೆ

  ReplyDelete
  Replies
  1. ಮತ್ತೊಂದ್ಸಲ ಧನ್ಯವಾದಗಳು ಶ್ರೀಕಾಂತಣ್ಣ :-)
   ಇಡೀ ಲೇಖನದ ಸಾರವನ್ನು ಒಂದೇ ಪ್ಯಾರಾದಲ್ಲಿ ಹೇಳ್ಬಿಟ್ರಿ :-) ಸೂಪರ್ :-)

   Delete