Tuesday, April 7, 2015

ಕರ್ನಾಟಕದ ಹೊಯ್ಸಳ ದೇಗುಲಗಳು ೧೪: ಅರಸೀಕೆರೆ ಶಿವಾಲಯ,ಅರಸೀಕೆರೆ ಚಂದ್ರಮೌಳೀಶ್ವರ, ವೀರೇಶ್ವರ, ಬಕ್ಕೇಶ್ವರ ದೇಗುಲಗಳು

Sideview of Arasikere Shivalaya from distance

ಪೀಠಿಕೆ:
ಕರ್ನಾಟಕದಲ್ಲಿ ೯೨ಕ್ಕಿಂತಲೂ ಹೆಚ್ಚಿನ ಹೊಯ್ಸಳ ದೇಗುಲಗಳಿವೆಯೆಂಬ ಗಿರೀಶಣ್ಣನ ಮಾತ ಕೇಳಿ ಅವುಗಳನರಸಿ ಹೊರಟವ ಹದಿಮೂರು ದೇಗುಲಗಳ ಸಂದರ್ಶಿಸಿದ ಬಗ್ಗೆ ಹಿಂದಿನ ಲೇಖನಗಳಲ್ಲಿ ಓದಿರುತ್ತೀರಿ. ಅವುಗಳ ಮುಂದಿನ ಭಾಗವೇ ಇದು. ಈ ಬಾರಿ ಹದಿನಾರು ಕೋನಗಳ ಮಂಟಪವನ್ನು ಹೊಂದಿರುವ ಅರಸೀಕೆರೆಯ ಚಂದ್ರಮೌಳೀಶ್ವರ ಮತ್ತು ವೀರೇಶ್ವರ, ಬಕ್ಕೇಶ್ವರ ದೇಗುಲಗಳ ಸಂದರ್ಶನಕ್ಕೆ

ಹೋಗೋದು ಹೇಗೆ? : ಅರಸೀಕೆರೆ ಬೆಂಗಳೂರಿಂದ, ಶಿವಮೊಗ್ಗದಿಂದ, ಹಾಸನ, ಚಿಕ್ಕಮಗಳೂರಿಂದ ಸಿಕ್ಕಾಪಟ್ಟೆ ಬಸ್ಸುಗಳಿವೆ. ಮೊದಲ ಮೂರು ಸ್ಥಳಗಳಿಂದ ರೈಲುಗಳೂ ಇವೆ. ಅರಸೀಕೆರೆಗೆ ಕಾಲಿಟ್ಟು ಇಲ್ಲಿ ಚಂದ್ರಮೌಳೇಶ್ವರ/ಹೊಯ್ಸಳರ ಕಾಲದ ದೇವಸ್ಥಾನ ಎಲ್ಲಿದೆ ಅಂದ್ರೆ ಯಾರಾದ್ರೂ ತೋರುಸ್ತಾರೆ. ನಡೆದು ಬರೋದಾದ್ರೆ ಇಲ್ಲಿನ ಸಂತೇಬೀದಿಯ ಪಕ್ಕದ ಹುಳಿಯಾರ್ ರಸ್ತೆಯಲ್ಲಿ ಬಂದ್ರೆ ಸ್ವಲ್ಪ ದೂರದಲ್ಲೇ ಈ ಶಿವಾಲಯವಿದೆ.
ತೆರೆದಿರುವ ಸಮಯ: ಬೆಳಗ್ಗೆ ಏಳರಿಂದ ಸಂಜೆ ಏಳು
Sideview of Arasikere Shivalaya

ವಿಶೇಷತೆ: ಹದಿನಾರು ಮೂಲೆಗಳ ಮಂಟಪ ಇಲ್ಲಿನ ವಿಶೇಷತೆ. ಇಲ್ಲಿಯವರೆಗೆ ಕಂಡ ಹೊಯ್ಸಳ ದೇಗುಲಗಳ ಸಮೀಪ ಕಾಣದಿದ್ದ ವೀರಗಲ್ಲುಗಳು ಇಲ್ಲಿನ ಪರಿಸರದಲ್ಲಿ ಕಂಡದ್ದು (ವೀರಗಲ್ಲುಗಳು/ಸತಿಗಲ್ಲುಗಳನ್ನು ನಂತರ ಬಂದ ಕೆಳದಿ ಅರಸರು ಮುಂತಾದವರ ದೇಗುಲಗಳ ಸಮೀಪ ಕಾಣಬಹುದು.ಹೊಯ್ಸಳರಲ್ಲಿ ಕಮ್ಮಿ) ಮತ್ತು ಇಲ್ಲಿರುವ ಆನೆಗಳ ಕೆತ್ತನೆಯಲ್ಲಿ ಸಮಕಾಲೀನ ಹೊಯ್ಸಳ ಶೈಲಿಗಿಂತ ಭಿನ್ನತೆಯಿರುವುದನ್ನು ಕಾಣಬಹುದು.ಬೇರೆಡೆಗಳಲ್ಲಿ ಓಡುತ್ತಿರುವ ಭಂಗಿಯಲ್ಲಿರೋ ಗೆಜ್ಜೆಗಳಿಂದಾಲಂಕೃತ ಆನೆಯಿದ್ದರೆ ಇಲ್ಲಿನ ಆನೆಯ ಮುಂದಿನೆರಡು ಕಾಲುಗಳು ಮಾತ್ರ ಕಾಣುತ್ತಿವೆ ಮತ್ತು ಮುಂದಿನ ಸೊಂಡಿಲಲ್ಲಿ ಅದು ತನ್ನ ಆಹಾರವನ್ನು ಹಿಡಿದಂತಿರೋ ಶಿಲ್ಪ ! ಹೊಯ್ಸಳ ದೇಗುಲಗಳ ಶಿಖರಗಳಲ್ಲಿ ಹೊಯ್ಸಳ ಲಾಂಛನವಿರುವುದು ಸಾಮಾನ್ಯ. ಆದರಿಲ್ಲಿ ನಂದಿಯ ಲಾಂಛನವಿದೆ !
16 cornered mantapa of Arasikere shivalaya
Different design for the elephants !


ಮೊದಲು ಸಿಗುವ ಮಂಟಪವನ್ನು ಹೊಕ್ಕು ತಲೆಯೆತ್ತಿ ನೋಡಿದರೆ ಕಮಲಗಳ ನಾಲ್ಕು ಸುಂದರ ಸಾಲುಗಳು ಕಾಣುತ್ತವೆ. ಹೊರಗಿರುವ ನಾಲ್ಕನೇ ಸಾಲಿನ ನಂತರ ದೇವಾನುದೇವತೆಗಳ ಕೆತ್ತನೆಗಳಿವೆ. ಹಾಗೆಯೇ ತಲೆಯನ್ನು ಕೆಳ ಹಾಯಿಸಿ ಕೆಳಗಿರುವ ಆನೆಗಳತ್ತ ದಿಟ್ಟಿ ಹಾಯಿಸಿದರೆ ಯಾಕೋ ಬೇಸರ. ಧಾಳಿಕೋರರು ಆನೆಗಳ ಬಾಲ, ಮೂತಿಗಳನ್ನು ಇಲ್ಲೂ ಬಿಟ್ಟಿಲ್ಲವಲ್ಲ !

Inner view of Mantapa

 












ಹಾಗೇ ಮುಂದೆ ಸಾಗಿದರೆ ಚಂದ್ರಮೌಳೀಶ್ವರನ ದೇಗುಲವ ಪ್ರವೇಶಿಸುವ ಮುಂಚೆ ಹಾಗೇ ಒಮ್ಮೆ ತಲೆಯೆತ್ತಿ. ಛಾವಣಿಯಲ್ಲಿ ನವಗ್ರಹಗಳ ಮತ್ತು ದೇವತೆಗಳ ಕೆತ್ತನೆಯನ್ನು ಕಾಣಬಹುದು.





ಹಾಗೇ ದೇಗುಲವನ್ನೊಮ್ಮೆ ಸುತ್ತು ಹಾಕಿದರೆ ನೃತ್ಯಗಾತಿಯರು, ವಾದ್ಯವೃಂದ, ಉಗ್ರನರಸಿಂಹ, ಗಣಪತಿ, ಮುಂತಾದ ದೇವತೆಗಳ ಶಿಲ್ಪಗಳನ್ನು ಕಾಣಬಹುದು.  ಭಗ್ನಗೊಂಡಿರೋ ಮೂರ್ತಿಗಳಿಗಿಂತಲೂ ಬೇಸರ ತರಿಸೋದು ಗಡಿಬಿಡಿಯಲ್ಲಿ ಮಾಡಿದಂತೆ ಕಾಣೋ ಜೀರ್ಣೋದ್ದಾರ !! ಗರುಡನ ಪಕ್ಕದಲ್ಲಿ ಇಕ್ಕಟ್ಟಿಕ್ಕಟ್ಟಿನಲ್ಲಿ ಬಂದು ನಿಂತಂತಿರೋ ಛಾಮರ ಬೀಸೋ ಬಾಲೆ ! ಮೂಲ ದೇಗುಲದಲ್ಲಿ ಇಷ್ಟು ಇಕ್ಕಟ್ಟಿನ ಶಿಲ್ಪವಿರೋಕೆ ಸಾಧ್ಯವೇ ಇಲ್ಲ !



Sri Vishnu

One of the sculpture facing the attackers :-(

Devi.. Portions are attacked again and rest are losing its shape due to exposure to sun,rain


ಹಾಗೇ ಪ್ರದಕ್ಷಿಣೆ ಹಾಕಿ ಬಲಕ್ಕಿರೋ ವೀರೇಶ್ವರ , ಬಕ್ಕೇಶ್ವರ ದೇಗುಲಗಳ ದರ್ಶನವನ್ನು ಪಡೆಯಬಹುದು. ಇವೆರಡು ದೇಗುಲಗಳ ಕೆತ್ತನೆ ಮೂಲ ದೇಗುಲದ ಕೆತ್ತನೆಗಿಂತ ಭಿನ್ನವಾಗಿದ್ದು ತದನಂತರ ಕೆತ್ತಿರಬಹುದೆಂಬ ಊಹೆಯಿದೆ. ಹಾಗೇ ಉದ್ಯಾನದಲ್ಲಿರುವ ಗಣಪತಿ, ಪಾರ್ವತಿ ಮುಂತಾದ ಭಗ್ನ ವಿಗ್ರಹಗಳನ್ನು ಕಂಡು ಮತ್ತೊಂದಿಷ್ಟು ಮನನೋಯುತ್ತದೆ.
Veereshwara Degula@Arsaikere , next to Chandramouleshwara
Veeragallu
Veeragallu

Side view of Arasikere Shivalaya

ವೀರೇಶ್ವರ, ಬಕ್ಕೇಶ್ವರ ದೇಗುಲಗಳ ಪಡಸಾಲೆ




ಮುಂದಿನ ಪಯಣ: ಹಾರ್ನಹಳ್ಳಿಯ ದೇಗುಲಗಳು

2 comments:

  1. ಕ್ಷೇತ್ರವೇ ಸ್ವತಹ ನಮ್ಮನ್ನು ಸ್ವಾಗತಿಸುವಂತಹ ಬರಹ. ಚಿತ್ರಗಳೂ ಚೆನ್ನಾಗಿವೆ.

    ReplyDelete
  2. prashasti,

    Gottiralle ee jaagada baggoo. Pratee sala nin blog odidaagloo gottiro jaagadallina gottillada prekshaneeya sthalada bagge odida anubhava aaguttade.

    Good work kano. Keep it up.

    ReplyDelete