Thursday, September 1, 2016

ಇಳಿಮನೆ/ಬುರುಡೆ ಫಾಲ್ಸ್ ಟ್ರೆಕ್ಕಿಂಗು

ಫ್ಲಾಷ್ ಬ್ಯಾಕ್:
ಹರೀಶಣ್ಣನ ಮದ್ವೆಗೆ(ಡಿಸೆಂಬರ್ ೭,೨೦೧೪)ಕ್ಕೆ ಬಂದಿದ್ದ ನಂಗ ಅದ್ರ ಹಿಂದಿನ ದಿನ ಶಿರಸಿಯ ಯಾಣಕ್ಕೋ ಅಥವಾ ಸಿದ್ದಾಪುರದ ಬುರುಡೆಫಾಲ್ಸಿಗೋ ಹೋಗನ ಅಂತಿತ್ತು. ಬೆಳಗ್ಗೆ ಒಂಭತ್ತೂಕಾಲಿಗೆ ಸಾಗರ ಬಸ್ಟಾಂಡಿದ ಹೊಂಟ ನಂಗಕ್ಕೆ ಸಿರ್ಸಿಯ ಒಂಭತ್ತೂ ಇಪ್ಪತ್ತರ ಬಸ್ಸು ಸಿಕ್ಕಿತ್ತು. ಸಿದ್ದಾಪುರದಲ್ಲಿಳಿದು ಅಲ್ಲಿಂದ ಬುರುಡೆ ಫಾಲ್ಸಿಗೆ ಹೋಗನ ಅಂತಾತು. ಸಿದ್ದಾಪುರದಿಂದ ೭.೫ ಕಿ.ಮೀ ದೂರದಲ್ಲಿರೋ ಬುರುಡೆ ಫಾಲ್ಸಿಗೆ ಹೋಗಕ್ಕೆ ನೇರವಾದ ಬಸ್ಸಿಲ್ದೇ ಇದ್ರೂ ಅಲ್ಲಿರೋ ಇಳಿಮನೆ ಕ್ರಾಸಿನ ಸೇತುವೆ ತಂಕ ಸಿದ್ದಾಪುರ ಕುಮಟಾ ಮಾರ್ಗದಲ್ಲಿ ಹೋಗ ಬಸ್ಸು ಹೋಗ್ತು . ಅರ್ಧ ಮುಕ್ಕಾಲು ಘಂಟೆಗೆ ಒಂದಿರೋ ಬಸ್ಸಲ್ಲಿ ಇಳಿಮನೆ ಕ್ರಾಸಲ್ಲಿ ಇಳಿದ ನಂಗ ಅಲ್ಲಿಂದ ಇಳಿಮನೆಗೆ ೧ ಕಿ.ಮೀ ಮತ್ತೆ ಅಲ್ಲಿಂದ ಬುದುಡೆ ಫಾಲ್ಸಿಗೆ ಮುಂದೆ ನಾಲ್ಕು ಕಿ.ಮೀ ನಡೆದು ಹೋದ್ಯ. ಆ ಅನುಭವ ಮತ್ತು ಚಿತ್ರಗಳೇ ಈ ಬರಹವಾಗಿ ನಿಮ್ಮುಂದೆ


ಇಳಿಮನೆ ಕ್ರಾಸಲ್ಲಿ ಇಳಿದ ನಾವು ಹಂಗೇ ಬಲಕ್ಕಿರೋ ರಸ್ತೇಲಿ ಸ್ವಲ್ಪ ದೂರ ಸಾಗ ಹೊತ್ತಿಗೆ ಅಲ್ಲೊಂದು ಹೊಳೆ ಸಿಗುತ್ತೆ. ಆ ಹೊಳೆ ಮತ್ತು ಅದ್ರ ಮೇಲಿನ ಸೇತುವೆಯಲ್ಲಿ ಸಾಗಿದ್ರೆ ಇಳಿಮನೆ ಶಾಲೇಮನೆ ಮತ್ತು ಬುರುಡೆ ಫಾಲ್ಸಿಗೆ ಹೋಗೋ ಬೋರ್ಡು ಕಾಣುತ್ತೆ

our batch on the way to Burude falls:ನಮ್ಮ ತಂಡ==>ಎಡದಿಂದ: ಗೌತಮ ಸಾಗರ,ಹರೀಶ ಕೆ.ಸಿ, ಚಂದ್ರಕಾಂತ ಗೌಡ,ಚೇತನ್ ಜೋಷಿ(ಬಿಳಿಯಂಗಿ),ಮಲ್ಲಿಕಾರ್ಜುನ ಬರ್ಸಳ್ಳಿ ಮತ್ತು ಫೋಟೋಗ್ರಾಫರ್ರಾಗಿ ನಾನು :-)
ಆ ಹೊಳೆಯ ಬುಡದಲ್ಲೇ ಒಂದು ಚೌಡಿಗುಡಿಯಂತಹ ಮಂಟಪ ಕಾಣುತ್ತೆ. ಮುಂದಿನ ಸಲ ಹೋಗೋರಿಗೆ ಸಹಾಯವಾಗ್ಲಿ ಅಂತ ಅದ್ರ ಚಿತ್ರನೂ ಹಾಕಿದ್ದೀನಿ
ಅಲ್ಲಿಂದ ಮುಂದೆ ಬರ್ತಿದ್ದಂಗೆ ಇಳಿಮನೆ ಗ್ರಾಮ ಅರಣ್ಯಸಮಿತಿಯವರ ಬುರುಡೆ ಫಾಲ್ಸಿಗೆ ದಾರಿಯೆನ್ನೋ ಬೋರ್ಡ್ ಸಿಗುತ್ತೆ. ಅದ್ರಲ್ಲೇ ಹೋದರೆ ಸುಮಾರು ನಾಲ್ಕು ಕಿ.ಮೀ ನಡೆದ್ರೆ ಸಿಗೋದು ಬುರುಡೆ ಫಾಲ್ಸು. ಇದಕ್ಕೆ ಇಳಿಮನೆ ಫಾಲ್ಸು ಅನ್ನೋ ಹೆಸ್ರೂ ಇದೆ
ಇಳಿಮನೆ ಕ್ರಾಸಿನ ಬಸ್ಟಾಪಿಂದ ೧೨:೨೦ಕ್ಕೆ ಹೊರಟಿದ್ದ ನಾವು ಬುರುಡೆಯ ನ ಮಣ್ಣ ಹಾದೀಲಿ ನಡೆದ ನಾವು ಸುಮಾರು ಒಂದು ಒಂದೂವರೆ ಘಂಟೆ ನಡೆದು ಬುರುಡೆ ಫಾಲ್ಸ್ ತಲುಪೋ ಹೊತ್ತಿಗೆ ಒಂದೂನಲವತ್ತಾಗ್ತಾ ಬಂದಿತ್ತು. ಫಾಲ್ಸಿನ ಮೇಲಿಂದ ಕೆಳಗಿಳಿಯೋಕೆ ಸಿಮೆಂಟಿನ ಮೆಟ್ಟಿಲುಗಳು, ಬಂದವರು ಕೂತುಕೊಳ್ಳಲು ತಂಗುದಾಣಗಳೂ ಇವೆ 
Our Group walking towards Burude falls

Cement Steps to descend to Burude falls
ಆದ್ರೆ ಸಿಮೆಂಟ್ ಮೆಟ್ಟಿಲುಗಳು ಮುಗಿದಾದ ಮೇಲೆ ಇನ್ನೂ ಕೆಳಗಿಳಿಯಬೇಕಂದ್ರೆ ಅದು ಚೂರು ಪ್ರಯಾಸದ ಹಾದಿ. ಸಿಮೆಂಟ್ ಮೆಟ್ಟಿಲು ಮುಗಿಯುವಲ್ಲಿಂದ ಜಲಪಾತದ ದೃಶ್ಯ ಕಂಡರೂ ಮಧ್ಯ ಒಂದಿಷ್ಟು ಮರಗಳು ಅಡ್ಡ ಬಂದು ಕೆಳಗಿಳಿಯುವಂತೆ ಮಾಡುತ್ತೆ ನಮ್ಮನ್ನ
We are getting down to Burude falls
ಅಲ್ಲಿಂದ ಮರಗಳ ಬೇರುಗಳನ್ನ ಹಿಡಿದು ನಿಧಾನವಾಗಿ ಕೆಳಗಿಳಿಯೋಕೆ ಹದಿನೈದರಿಂದ ಇಪ್ಪತ್ತು ನಿಮಿಷ ಬೇಕಾಗುತ್ತೆ. ಮಧ್ಯ ಮಧ್ಯ ನಿಂತು ಜಲಪಾತದೆದ್ರು ಫೋಟೋ ಸೆಷನ್ ಮಾಡಿದ್ರೆ ಇನ್ನೂ ಹೆಚ್ಚು ಸಮಯ ಬೇಕಾಗ್ಬೋದು :-) ಆದ್ರೆ ಇಲ್ಲಿ ಫೋಟೋ ಸೆಷನ್ ಮಾಡೋಕೋಗಿ ಜಾರಿ ಬೀಳದೇ ಹೋದಂಗೆ ಎಚ್ಚರವಹಿಸೋದು ಅಗತ್ಯ

Way to get down in Burude falls. It becomes difficult with increased rain
ಕೆಳಗಿಳೀತಿದ್ದಂಗೆ ಬುರುಡೆ ಜಲಪಾತದ ದೃಶ್ಯಗಳು ನಿಚ್ಚಳವಾಗುತ್ತಾ ಸಾಗುತ್ತೆ
Burude falls, Siddapura

one more view of the burude falls

Me infront of Burude falls
ಜಲಪಾತದ ಬುಡಕ್ಕೆ ಇಳಿದಾಗ ಕಾಣೋ ದೃಶ್ಯವೇ ಬೇರೆ. ಇಲ್ಲಿ ಮಳೆ ಕಮ್ಮಿಯಿದ್ದಾಗ ಜಲಪಾತದ ನೀರೊಂದಿಗೆ ಆಟವಾಡ್ಬೋದು. ಆದ್ರೆ ನೀರು ಧುಮುಕುವಲ್ಲಿಗೆ ಹೋಗೋದು ಎಂದಿಗೂ ಅಪಾಯ
Another view of Burude falls
ಇಲ್ಲಿನ ನೀರಲ್ಲಿ ಸುಮಾರು ಒಂದೂವರೆ ಘಂಟೆ ಆಟವಾಡಿ, ಫೋಟೋ ಸೆಷನ್ ಮಾಡಿದ ನಾವು ಅಲ್ಲಿಂದ ಮೂರೂ ಐವತ್ತಕ್ಕೆ ಮೇಲೆ ಹತ್ತೋಕೆ ಶುರು ಮಾಡಿದ್ವಿ
Getting ready to return

Time to say sayonara to Burude
ಅಲ್ಲಿಂದ ಬರ ಹೊತ್ತಿಗೆ ಹರೀಶಣ್ಣನ ಫ್ರೆಂಡೊಬ್ರು ಬಿದ್ದು ಅವರ ಪ್ಯಾಂಟೆಲ್ಲಾ ಕೆಸರಾಗಿ ದೊಡ್ಡ ಕಾಮಿಡಿಯಾಗಿತ್ತು. ಅದ್ರಲ್ಲೇ ಅವ್ರು ಪಾಪ ಮಣ್ಣು ರಸ್ತೆ, ತೋಟದ ದಾರಿ, ಟಾರ್ ರಸ್ತೆ ದಾಟಿ ಸಿದ್ದಾಪುರದ ಕಡೆಯ ಮುಖ್ಯ ರಸ್ತೆಗೆ ಬರ ಹೊತ್ತಿಗೆ ಘಂಟೆ ಐದೂವರೆಯಾಗ್ತಾ ಬಂದಿತ್ತು. ಅಲ್ಲೇ ಹತ್ತಿರದಲ್ಲಿದ್ದ "ಅಳ್ಳಿಮಕ್ಕಿ" ಹೇಳ ಸ್ಟಾಪಿಗೆ ಬಂದು ಅಲ್ಲಿಂದ ಐದೂಮುಕ್ಕಾಲಿಗೆ ಬರ್ತಿದ್ದ ಸಿದ್ದಾಪುರ ಬಸ್ಸು ಹಿಡಿದು ಸಿದ್ದಾಪುರ ಸೇರ್ಕೊಂಡು ಅಲ್ಲಿಂದ ಸಾಗರ ಮುಟ್ಟಿದ್ವಿ ಅನ್ನುವಲ್ಲಿಗೆ ಈ ಬುರುಡೆಫಾಲ್ಸ್ ಪ್ರವಾಸದ ನೆನಪುಗಳಿಗೊಂದು ವಿರಾಮ
Travelling back

If you fall and don't get yourself injured , its a memory to remember for a long time

Back on track. There was no food for the afternoon. Bananas,biscuits were the lunch

one more path to cross to reach our homes back..

Bus stop near Burude falls from where we could catch bus to Siddapur
ಇದ್ರ ಬಗ್ಗೆ ಬರೀಲೆ ಇಲ್ಯಲ ಅಂತೇಳಿ ಇದ್ನ ಬರ್ಯಕ್ಕೆ ಮೊನ್ನೆ ಮೊನ್ನೆ ನೆನಪಿಸಿದ ಹರೀಶಣ್ಣಂಗೆ ಈ ಲೇಖನ ಅರ್ಪಣೆ :-)

Fb album: https://www.facebook.com/prashasti.prashantavanam/media_set?set=a.880818625276002.1073741896.100000436198310&type=3

No comments:

Post a Comment