Thursday, September 15, 2011

೧೦೮

ಏನಾರು ಕೆಲಸ ಮಾಡೋಕೆ ಹೋದ್ರೆ ನೂರೆಂಟು ಸಮಸ್ಯೆಗಳು ಥೋ.. ಅಂತ ಗುಂಡ ಗೊಣಗ್ತಾ ಇರ್ಬೇಕಾದ್ರೆ ಅವ್ನ ಸ್ನೇಹಿತರೆಲ್ಲಾ ಅಲ್ಲಿಗೆ ಬಂದ್ರು.. ಏನು ಗುಂಡು..ಕಷ್ಟ ಬಂದಾಗ ಅದ್ರ ಎದ್ರುಸುದು ಬಿಟ್ಟು ಎಣಿಸ್ತಾ ಕೂರೂದ? ಅದು ನೂರ ಎಂಟರ ಕರ್ಮ ಅಲ್ಲ. ನೂರೆಂಟು ಬಾಳ ಒಳ್ಳೆ ಸಂಖ್ಯೆ ,ಗೊತ್ತುಂಟಾ? ಅದಕ್ಕೆ ಶಾಪ ಹಾಕೂದ ನೀನು. ನೋಡು ನಾವು ಜಪ ಮಾಡೂದೆಲ್ಲ ಎಷ್ಟೆಷ್ಟು? ೨೮, ೫೪, ೧೦೮.. ಹೀಗೆ ಅಲ್ಲದಾ?ದುರ್ಗಾದೇವೀದೂ ನೂರೆಂಟು ಹೆಸ್ರುಂಟು ದುರ್ಗಾಸಪ್ತಶತಿ ಯಲ್ಲಿ. ನೂರೆಂಟು ಮೋದಕ ಗಣೇಶಂಗು ಭಾರಿ ಇಷ್ಟ ಅಂತೆ ಮಾರ್ರೆ.. ಬೆಂಗ್ಳೂರು ಕುಮಾರು ಸ್ವಾಮಿ ಲೇಯೌಟಲ್ಲಿ ನೂರೆಂಟು ಗಣಪನ ದೇವಸ್ಥಾನವೂ ಉಂಟು ಗೊತ್ತುಂಟೋ ಅಂದ ಮಂಗಳೂರು ಮಂಜ. ಹೌದೌದು ಭಾಳ ಒಳ್ಳೆ ಸಂಖ್ಯೆ.. ಮೊನ್ನೆ ದಾರೀಲಿ ಆಕ್ಸಿಡೆಂಟಾಗಿ ಬಿದ್ದಿದ್ದ ಪರಮೇಶಿನ ಸಿರಿ ರಾಮುಲು ಗಾಡೀಲೆ ಎತ್ಕೊಂಡೋಗಿದ್ದು.. ಅದೇ ೧೦೮.. ಅದಿಲ್ದಿದ್ರೆ ಅವನ ಗತಿ ದೇವರೇ ಗತಿ ಅಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ.

 ಸುಮ್ನಿರಿ ತಿಪ್ಪ..ಬರೀ ತಮಾಷೆನೇ ಆಯ್ತು. ನೂರಾ ಎಂಟಕ್ಕೆ ಗಣಿತದಲ್ಲಿ ಎಷ್ಟು ಮಹತ್ವ ಉಂಟು ಗೊತ್ತುಂಟಾ? Regular pentagon ಅಂದ್ರೆ ಸಮ ಪಂಚಭುಜಾಕೃತಿಯಲ್ಲಿ ಒಳಗಿರೋ ಕೋನಗಳೆಲ್ಲಾ ೧೦೮ ಡಿಗ್ರಿ. ೧೦೮ ಕ್ಕೆ ಒಟ್ಟು ೧೨ ಭಾಜಕಗಳು. ಆ ೧೨ರಿಂದಲೇ ಭಾಗಿಸಲ್ಪಡೋದು ಅದರ ವಿಶೇಷತೆ.ಅದಕ್ಕೆ ಅದನ್ನ refactorable number ಅಥವಾ ಪುನರ್ವಿಭಾಜಕ ಸಂಖ್ಯೆ ಅಂತಾರೆ. ೧೦೮ ಕ್ಕೆ regular number, semi perfect number, tetranacci number, harsha number ಅಂತೆಲ್ಲಾ ಕರೀತಾರೆ ಗೊತ್ತಾ ಅಂದ್ಳು.. ಅವ್ಳು ಹೇಳಿದ್ದು ಯಾರಿಗೆ ಅರ್ಥ ಆಯ್ತೋ ಇಲ್ವೋ ಗೊತ್ತಾಗ್ಲಿಲ್ಲ ಹೌದಾ? ಅಂದ್ರು.. ಅದೂ ಹೇಳ್ದಿದ್ರೆ ಇನ್ನೂ ಕೊರಿತಾಳೆ ಅಂತ.


 ಕೃಷ್ಣನಿಗೆ ನೂರಾ ಎಂಟು ಜನ ಗೋಪಿಯರಿದ್ರಂತೋ ಅಂತ ಶುರು ಮಾಡದ ತಿಪ್ಪ. ನಂ ಬುದ್ದನಿಗೆ ೧೦೮ ಪ್ರಶ್ನೆ ಕೇಳಿದ್ನಂತೆ ಭೋದಿಸತ್ವ ಮಹಾಮುನಿ ಅಂದ್ಳು ಇಳಾ. ಝೆನ್ ಮುನಿಗಳು ೧೦೮ ಮಣಿಗಳಿರೋ ಸರ ಸುತ್ಕೋತಾರಂತೆ ಕೈಗೆ ಅಂದ ಗುಂಡ ತಾನೂ ಏನೂ ಕಮ್ಮಿ ಇಲ್ಲ ಅನ್ನೋ ತರ. ನಿಮಗೆ ಬೇರೆ ಅವ್ರನ್ನ ಹೊಗಳೋದೆ ಆಯ್ತು.. ಇದರ ಮಹತ್ವ ನಮ್ಮ ವೇದಾಂತಿಗಳಿಗೆ ಮೊದಲೇ ಗೊತ್ತಿತ್ತಂತೆ ಅಂದ ಮಂಜ. ಅದು ಹ್ಯಾಗೆ ಮಾರ್ರೆ ಅಂದ್ರು ಎಲ್ಲಾ? ಈಗ ನ್ವಾಡಿ.. ಸೂರ್ಯನಿಂದ ಭೂಮಿಗಿರೋ ದೂರನ ಸೂರ್ಯನ ವ್ಯಾಸದಿಂದ ಭಾಗಿಸಿದ್ರೆ ಬರೋದು ಎಷ್ಟು ಗೊತ್ತುಂಟಾ ಅಂದ. ಯಾರ್ಗೂ ಗೊತ್ತಿರ್ಲ್ಲಿಲ್ಲ. ಅದು ೧೦೮, ಅದೇ ತರ ಚಂದ್ರನಿಂದ ಭೂಮಿಗಿರೋ ದೂರನ ಚಂದ್ರನ ವ್ಯಾಸದಿಂದ ಭಾಗಿಸಿದ್ರೆ ಬರೋ ದೂರನೂ.. ೧೦೮ ಅಂದ್ರು ಎಲ್ರೂ ಒಟ್ಟಿಗೆ.. ಒಮ್ಮೆ ನಗು.. ಅದಕ್ಕೇ ನೂರಾ ಎಂಟಕ್ಕೆ ವೇದಾಂತದಲ್ಲಿ ಮಹತ್ವ ಅಂದ ಮಂಜ.. ಆದ್ರೂ ನಗು ಕಮ್ಮಿ ಆಗ್ಲಿಲ್ಲ..



 ಅದು ಶಾಂತ ಆಗೋದ್ರೊಳಗೆ ಇಳಾ ಹೇಳಿದ್ಳು. ನಾನೊಂದು ಸಂಶೋಧನೆ ಮಾಡಿದ್ದೀನಿ. ಸಂಖ್ಯಾಶಾಸ್ತ್ರ ಉಪಯೋಗಿಸ್ಕಂಡು.. ಅದೂ ನೂರಾ ಎಂಟರ ಬಗ್ಗೆ ಅಂದ್ಳು. ಎಲ್ರೂ ಸುಮ್ನಾದ್ರು. ಅವ್ಳೇ ಹೇಳಿದ್ಲು. ೧೦೮ ನ one not eight ಅಂತ ಬರೀತಿವಲ್ಲಾ. ಅದ್ರ a=1 , z=26 ಅಂತ ಎಣಿಸ್ಕೊಂಡು ಕೂಡಿದ್ರೆ ಅದರ ಮೊತ್ತ ೧೦೪ ಬರುತ್ತೆ. ಎಷ್ಟು ಹತ್ರ ಅಲ್ವಾ ಅಂದ್ಳು.. ಭೇಷ್ ಅಂದ್ರು ಎಲ್ಲಾ. ಅಷ್ಟೇ ಅಲ್ಲ. ನಮ್ಮ ಕನ್ನಡದಲ್ಲೂ ನ್=೩೬, ರ್=೪೩, ಟ್=೨೬. ಎಲ್ಲಾ ಕೂಡಿದ್ರೆ ೧೦೬. ಆದ್ರೆ "ನೂರಾ ಎಂಟು" ಅಂತ ಬರ್ದು ಸ್ವರಗಳನ್ನೂ ಲೆಕ್ಕಕ್ಕೆ ತಗಂಡ್ರೆ ಅಂದ್ರೆ ಆ=,=,=,=,ಅಂ=೧೫.. ಒಟ್ಟು ೧೪೪ ಬರುತ್ತೆ. ++= . ಅದೇ ರೀತಿ ೧++=.. ಎರಡೂ ಒಂದೇ ಆಯ್ತಲ್ವಾ.. ನಮ್ಮ ಹೇಗಿದೆ ನನ್ನ ಸಂಶೋಧನೆ ? ನಮ್ಮ ಹಿಂದೆ ಇಂಥದ್ದು ಎಷ್ಟೋ ಇರುತ್ತೆ ನಾವೇ ನೋಡಿರಲ್ಲ ಅಂದ್ಲು.. ಇದಕ್ಕೆ ಎಲ್ರೂ ಒಮ್ಮೆ ಚಪ್ಪಾಳೆ ಹೊಡುದ್ರು.. ನಮ್ಮ ದಶಮಾನ ಪದ್ದತಿಯಲ್ಲಿ ಒಂಭತ್ತಕ್ಕೆ ಹೆಚ್ಚು ಬೆಲೆ. ಅದಕ್ಕೆ ಮೊತ್ತ ೯ ಬರೋ ತರದ ೧೦೮ ಸಂಖ್ಯೆಗೆ ಮಹತ್ವ ಇರ್ಬೋದು ಅಂತ ನನ್ನ ಭಾವನೆ.. ಏನಂತೀರ ಮಂಜು ಅಂದ್ಳು




ನಮ್ಮ ಆಯುರ್ವೇದದ ಪ್ರಕಾರ ದೇಹದಲ್ಲಿ ೧೦೮ ಸ್ಪರ್ಶ ಕೇಂದ್ರಗಳಿದ್ಯಂತೆ. ಇದನ್ನು ಚೀನಾದ ಯುದ್ದ ಕಲಾ ಶಾಲೆಗಳೂ ಒಪ್ಪುತ್ತಂತೆ. ಕರಾಟೆಗೂ ೧೦೮ಕ್ಕೂ ಸಂಬಂಧ ಇದ್ಯಂತೆ. ಅಂದ ೧೦೮ ಕ್ಕೆ ಮತ್ತೆ ಭಾರತೀಯತೆಯ ಸ್ಪರ್ಶ ಕೊಡ್ತಾ ಮಂಜ. ಕರಾಟೆ , ಚೀನಾ ಅಂದ ತಕ್ಷಣ ನೆನ್ಪಾಯ್ತು ನೋಡು.. ಜಪಾನ್ ನಲ್ಲಿರೋ ಬೌದ್ದ ದೇವಾಲಯಗಳಲ್ಲಿ ವರ್ಷದ ಕೊನೇ ದಿನ ಹಳೇ ವರ್ಷಕ್ಕೆ ವಿಧಾಯ ಹೇಳಕ್ಕೆ ಮತ್ತೆ ಹೊಸದನ್ನ ಬರಮಾಡಿಕೊಳ್ಳಕ್ಕೆ ಅಂತ ೧೦೮ ಸಲ ಘಂಟೆ ಬಡೀತಾರಂತೆ ಅಂದ ಗುಂಡ.. ಯಾಕ್ಲಾ ನಮ್ಕಡೇ ಘಂಟೆ ಹೊಡ್ದು ಸತ್ಯ ಹೇಳ್ತೀನಿ, ಸುಳ್ಳು ಹೇಳಾಕಿಲ್ಲ, ತಪ್ಪು ಮಾಡಾಕಿಲ್ಲ ಅಂತಾರಲ ಹಂಗಾ ? ಅಂದ ತಿಪ್ಪ.. . ಆ ತರ ಅಲ್ಲಲೇ, ಅವ್ರ ಪ್ರಕಾರ ನಿರ್ವಾಣ ಹೊದ್ಬೇಕಿದ್ರೆ ೧೦೮ ಮಾಯೆಗಳಿಂದ ಬಿಡುಗಡೆ ಹೊಂದ್ಬೇಕಂತೆ..ಪ್ರತೀ ಹೊಸ ವರ್ಷಕ್ಕೂ ಅದನ್ನ ನೆನಪಿಸೋ ಸೂಚಕ ಅಂತೆ ಕಣ್ಲಾ ಅದು ಅಂದ ಗುಂಡ. ಎಲ್ಲ ಓ ಅಂದ್ರು




ನಮ್ಮ ಕೆಂಪು ಟೋಪಿ ಕಂಪ್ಯೂಟ್ರು ಒಕ್ಕೂಟುದೋರು... ಅಂತ ಗುಂಡ ಶುರು ಮಾಡ್ತಿದ್ದಂಗೆ ಸ... ಪಕ್ಸನಾ ಅಂದ ತಿಪ್ಪ. ಹೇ ಅದಲ್ಲಲೇ ಶುದ್ದ ಕನ್ನಡ ವಿರೋಧಿ ನೀನು.. ಅದೇ redhat ಕಣ್ಲಾ.. ಅವ್ರು ಶುರು ಮಾಡಿರೋ developer ಗಳ ಸಂಘದ ಹೆಸ್ರೂ ೧೦೮ ಕಣ್ಲಾ ಅಂದ ಗುಂಡ. .ಯಾಕೋ ಅಂದ್ರೆ ಉತ್ರ ಇಲ್ಲ ಗುಂಡನತ್ರ.. ಏನೋ ಹೇಳಕ್ಕೋಗಿ ಸಿಕ್ಕಾಕಂಡಂಗೆ ಆತು ಈಗ ಗುಂಡಂಗೆ.. ಎಲ್ಲ ನಗಕ್ಕೆ ಹಿಡುದ್ರು. ಏ ಮರ್ತೇ ಹೋಗಿತ್ತು. ನಮ್ಮನೆ ಕರೆಂಟು ಬಿಲ್ಲು ಬಂದೈತೆ. ಥತ್ ತರೇಕಿ.. ಅದೂ ಈ ಸಲ ೧೦೮ ರೂಪಾಯಿ ನೋಡ್ರಿ.. ಕಟ್ಬೇಕು ಇವತ್ತು.. ಅಗ್ಲೇ ೮ನೇ ತಿಂಗ್ಳ ಹತ್ತನೇ ದಿನ ಆಗೋಯ್ತು. .ಥೋ ಹೋಗ್ಬೇಕು ಈಗ ಆಗ್ಲೇ ಹತ್ತು ಘಂಟೆ ೮ ನಿಮಿಷ ಆಗೇ ಹೋಯ್ತು.. ನಿಮ್ಮತ್ರ ಮಾತಾಡ್ತಾ ಆಡ್ತಾ ಟೈಮೇ ನೆಪ್ಪಾಗ್ಲಿಲ್ಲ ಅಂತ ಹೊಂಟ ಅಲ್ಲಿಂದ ಕಾಲ್ಕಿತ್ತ ಗುಂಡ. ಏ ಗುಂಡ ನಿಧಾನ ಹೋಗೋ.. ೧೦೦ ರಲ್ಲಿ ಹೋಗಿ ೧೦೮ರಲ್ಲಿ ಬರ್ಬೇಡ ಮತ್ತೆ ಅಂತ sms ಜೋಕ್ ಹಾರ್ಸಿದ ತಿಪ್ಪ.. ಎಲ್ಲಾ ನಗಕಿಡಿದ್ರು.. ನಿಧಾನ ಹೋಗೋ , ರಸ್ತೆ ನೋಡ್ಕಂಡು ಹೋಗೋ.. ಪಕ್ಕದಲ್ಲಿದ್ದೋರ್ನೂ ನೋಡ್ಕಂಡು ಹೋಗೊ..ಫಾಸ್ಟ ಬರ್ತಿರೋ ೧೦೮ ನೋಡ್ಕಂಟು ಹೋಗು, ಅದ್ರಲ್ಲಿ ಬರ್ದಿದ್ದಂಗೆ ನೋಡ್ಕಂಡು ಹೋಗೋ.. ಅಂತ ರಾಗ ಶುರುವಾಯ್ತು...

No comments:

Post a Comment