Tuesday, March 6, 2012

ರೈಲ ಬಾಳು

ರೈಲ ಬಾಳಿನಲಿ ಆಸೆ ಕಿಟಕಿಯಲಿ
ಇಣುಕಿತೊಮ್ಮೆ ಒಂದೆಳೆಜೀವ
ಮುಖವ ಸುಡುವಂತೆ ರಾಚಿ ಧಗೆ
ಸುತ್ತಿದ್ದ ಬಂಡೆಗಳ ಒಳನೋವ |೧|

ಹೊಟ್ಟೆ ಹೆಸರಿನಲಿ ಬೇಡೋ ಬಾಲೆ
ಕೈಚಾಚಿ ಹಾಡೋ ದೀನ ಮುಖ
ಹೊರಳಾಡಿ ಕಾಲ ಜಗ್ಗೊ ಹುಡುಗ
ಕೊನೆಯೆಂದು ಜೀವಗಳಿಗೀ ನರಕ ? |೨|

ಬಂಡೆ ಸಿಡಿಸಿ ತಲೆಯತ್ತಿದಾಫೀಸು
ಪಕ್ಕದಲಿ ಮೌನ ಸ್ಮಶಾನ
ಉತ್ತರವಿಲ್ಲದ  ಸತ್ತಿಹ ಪ್ರಶ್ನೆ
ಎಳೆಯ ಬಾಲ ಮನದಲ್ಲಿ
ನಗುತ ಏರುತಿಹ ಕೆಂಪನೆ ಸೂರ್ಯ
ಮರಳದ ಸೆಳೆಯುವ ಗೆಲುವಲ್ಲಿ |೩|   

2 comments:

  1. ತುಂಬಾ ಸೊಗಸಾದ ಭಾವಸೃಷ್ಟಿ ಈ ನಿಮ್ಮ ಕವನ.. ಓದುತ್ತಾ ಹೋದಂತೆ ಭಾವುಕರನ್ನಾಗಿಸಿಬಿಡುತ್ತದೆ.. ಮತ್ತು ಪ್ರಶ್ನೆಗಳು ಚಿಂತನೆ ಮಾಡಲು ಏನೇನೋ ಕಲ್ಪಿಸುತ್ತದೆ.. ನಿಮ್ಮ ಈ ಸುಂದರ ಪದಬಳಕೆಯ ಸಾಲುಗಳನ್ನು ಓದುವುದೇ ಮತ್ತೊಂದು ಸಂತಸದ ವಿಚಾರ.. ನಿಮ್ಮಿಂದ ಕವನದ ರಚನೆಯ ಬಗ್ಗೆ ಕಲಿಯುವಂತಹದ್ದು ತುಂಬಾ ಇದೆ.. ನಿಮ್ಮ ವಿಚಾರಗಳು ಪ್ರತಿಯೊಂದು ಕವನಕ್ಕೂ ಬೇರೆಯೇ ಆಗಿರುತ್ತದೆ.. ಅದು ತುಂಬಾ ಆಕರ್ಷಿಸುತ್ತದೆ ನಿಮ್ಮ ಕವಿತೆಗಳನ್ನು ಓದಲು.. & ದಯವಿಟ್ಟು ಬರೆಯುವುದನ್ನು ನಿಲ್ಲಿಸದಿರಿ.. ನಿಮ್ಮ ಕವಿತೆಗಳನ್ನು ಓದಲು ಎಲ್ಲರಂತೆ ನಾವು ಸಹ ಕಾಯುತ್ತಿರುತ್ತೇವೆ.. & ಶುಭದಿನ.. :)

    ReplyDelete