Monday, March 19, 2012

ಪರಮಾತ್ಮನ ನಿದ್ರೆ

ಮಧ್ಯರಾತ್ರಿ ಮಲಗಿದ್ದ ಪರಮಾತ್ಮ!!
ಹೊಟ್ಟೆಗಿಲ್ಲದೇ ನಿದ್ರೆಯೆಲ್ಲಿ?
ಕಚ್ಚೊ ಸೊಳ್ಳೆಗೇ ರಕ್ತವಿಲ್ಲ
ಮೂಳೆಗೂಡು ತಡೆದೀತೆ ಪ್ರಾಣ
ದ್ವಾರಪಾಲಕರು ನಿತ್ರಾಣ|೧|

ಮಾನಕೆಂದು ಹರಿದ ಬಟ್ಟೆಯುಟ್ಟು
ಶೋಕಿಗೆಂದು ಅರಿವೆ ಹರಿದು
ಒಣಗಿ ನಿಂತ ಕಲ್ಪತರುವ ಮರೆತು
ನೀರುಣ್ಣುತ್ತಿದೆ ಹೊಸ ಗಾರೆ
ನೋಡಲಾಗದ ನಿದ್ರೆಯೇ ಆತ್ಮ? |೨

ನೀರ ಬೇಡುತಿಹ ತಾಯಿ ನೆಲ
ಅನ್ನ ಬೇಡುತಿಹ ಕಾಗೆ ಪಿತ
ಕಾಲ ನೆಕ್ಕುತಿಹ ನಾಯಿ ಸುತ
ಯಾರೂ ಬೇಡದ ಒಂಟಿ ಬೇತಾಳ
ಕಳ್ಳನ ನಿದ್ರೆಯು ಹೇಗೋ ಪರಮಾತ್ಮ?|೩|

1 comment:

  1. ನಿದ್ದೆ ಸಮಯದಲ್ಲಿ ನಿದ್ದೆಯ ದರ್ಶನ .. ಆತ್ಮ ಮತ್ತು ಪರಮಾತ್ಮನ ಅರ್ಥವಿವರಣೆ ಸೊಗಸಾಗಿದೆ.. ನಿದ್ದೆಯಲ್ಲಿ ಎಷ್ಟು ಅರ್ಥವಾಗಿದೆಯೋ ತಿಳಿದಿಲ್ಲ.. ನಿಮ್ಮ ಕಲ್ಪನೆಗೆ ನಮ್ಮ ಕಲ್ಪನೆಯ ಹೋಲಿಕೆ ಹೊಂದುವುದೋ ಇಲ್ಲವೋ ಗೊತ್ತಿಲ್ಲ.. ಆದರೆ ಒಂದು ಅವತಾರದಲ್ಲಿ ಸಾಮಾಜಿಕ ಜೀವನ ರೀತಿಯ ವಿವಿಧ ವಿಚಾರಗಳ ಕಥೆಯೊಂದು ಗೋಚರಿಸಿತು.. ಮೂರು ಸಾಲುಗಳ ಅರ್ಥ ಮಾತ್ರ ಸ್ವಲ್ಪ ದೂರ ದೂರ ಹೋಗುತ್ತೆದೆ.. ಅದು ಹತ್ತಿರವಾಗಲು ನೀವೇ ದಾರಿ ತೋರಿಸಬೇಕು.. :)

    ಅನ್ನ ಬೇಡುತಿಹ ಕಾಗೆ ಪಿತ
    ಕಾಲ ನೆಕ್ಕುತಿಹ ನಾಯಿ ಸುತ
    ಯಾರೂ ಬೇಡದ ಒಂಟಿ ಬೇತಾಳ

    ReplyDelete