Saturday, May 25, 2013

ಬ್ಲಾಗಿಗೆ ಇನ್ನೂರು ಪೋಸ್ಟು ತುಂಬಿದ ಸಂಭ್ರಮ :-)

ಏನೋ ತೀರಾ ದೊಡ್ಡ ಸಾಧನೆ ಅಂತಲ್ಲ.. ಆದರೆ ಏನೋ ಒಂದು ಖುಷಿ.
ಎಲ್ಲೋ ಕಳೆದು ಹೋಗುತ್ತಿದ್ದ, ಮರೆಯಾಗುತ್ತಿದ್ದ ಭಾವಗಳನ್ನು, ಕ್ಷಣಗಳನ್ನು ದಾಖಲಿಸಿದ ಒಂದು ಖುಷಿ.. ತೀರಾ ಸುತ್ತಿ ಬಳಸಿ ಹೇಳೋ ಬದ್ಲು ನೇರ ವಿಷಯಕ್ಕೆ ಬರೋದಾದ್ರೆ ಇಂದು ಬ್ಲಾಗಿಗೆ ೨೦೦ ಪೋಸ್ಟುಗಳು ತುಂಬಿದ ಸಂತಸ. ಏಕಾಂಗಿತನದಲ್ಲಿ ಶಾಂತಿಯಿದ್ದರೂ ಸಂಭ್ರಮವಿಲ್ಲ :-) ಹಾಗಾಗಿ ನನ್ನ ಬರಹಗಳನ್ನು ಓದುತ್ತಾ, ಪ್ರೋತ್ಸಾಹಿಸುತ್ತಾ ಬಂದಿರುವ ಗೆಳೆಯರಿಗೆಲ್ಲಾ ಒಂದು ಆತ್ಮೀಯ ಆಹ್ವಾನ. ಇಂದೋ, ನಾಳೆಯೋ, ಈ ವಾರವೋ ನಿಮಗೆ ಬಿಡುವಾದಾಗ ನನ್ನ ಬ್ಲಾಗಿಗೆ ಬನ್ನಿ. ಇನ್ನೂರರ ಸಂಭ್ರಮದಲ್ಲಿ ಜೊತೆಯಾಗಿ :-) ಫೇಸ್ಬುಕ್ಕು, ನಿಲುಮೆ, ಬ್ಲಾಗು, ಸಂಪದ.. ಹೀಗೆ ನನ್ನ ಬರಹಗಳಲ್ಲಿ ಬೆನ್ನುಲುಬಾಗಿ ನಿಂತ ಹಿರಿಯರು ಅನೇಕರಿದ್ದೀರಿ. ಬರಹ ಕ್ರಮೇಣ ಬೋರು ಹೊಡೆಸದೇ, ಗಟ್ಟಿಗೊಳ್ಳುತ್ತಿದೆ ಅಥವಾ ಅಂತಹ ಲಕ್ಷಣಗಳೇನಾದರೂ ಗೋಚರಿಸುತ್ತಿದೆ ಅನ್ನಿಸಿದರೆ ಅದಕ್ಕೆ ಕಾರಣಿಗರು ನೀವೆ.. ನಿಮಗೆಲ್ಲಾ ಮತ್ತೊಮ್ಮೆ ಆಹ್ವಾನ .. :-)

ನಿಮ್ಮ ಖುಷಿ, ಕಂಪ್ಲೇಟುಗಳೇನೇ ಇದ್ದರೂ ದಾಖಲಿಸಿ.. ನಿಮ್ಮ ಜೊತೆ ಜೊತೆಯೇ ಬರೆಯುತ್ತಾ ಬರೆಯೋ ಬೆರಗಿನ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಈ ಎಳೆಯನಿಗೆ ನಿಮ್ಮ ಪ್ರೋತ್ಸಾಹಗಳೇ ಶ್ರೀರಕ್ಷೆ. ಹೇಗೆ ಬರೆಯಬಹುದಿತ್ತು, ಎಲ್ಲಿ ತಪ್ಪಾಗಿದೆ, ಇನ್ನೂ ಯಾವ್ಯಾವ ಕ್ಷೇತ್ರಗಳಲ್ಲಿ ಗಮನಿಸಬೇಕು ಎಂಬ ತಿದ್ದುವಿಕೆ, ಬರೆಯೋದೆ ಜೀವನವಲ್ಲ, ಇದನ್ನು ಬಿಟ್ಟು ಉದ್ದಾರ ಆಗು ಎಂಬಂತಹ (!) ಮಾತುಗಳಿದ್ದರೂ ತಿಳಿಸಿ.. ಅವೇ ಮುಂದಿನ ಹಾದಿಯಲ್ಲಿ ಎಚ್ಚರಿಕೆ. ಈ ಪೋಸ್ಟು ನನ್ನದಲ್ಲ. ನಿಮ್ಮದೇ.. ನಿಮ್ಮ ಪ್ರತಿಕ್ರಿಯೆಗಳಿಗೆ ಕಾದಿರುವ..
ನಿಮ್ಮೊಲವಿನ.. :-)

ಪ್ರಶಸ್ತಿ

22 comments:

  1. This comment has been removed by the author.

    ReplyDelete
  2. ಅಭಿನಂದನೆಗಳು ಪ್ರಶಸ್ತಿ :)
    ೨೦೦ ಆಗಿದ್ದು ದೊಡ್ಡದೊಂದು ಸಾಧನೆಯೆ :)
    ಖುಷಿ ಆಯ್ತು :)

    ಬ್ಲಾಗ್ನಲ್ಲೊಂದು ವಿಶಿಷ್ಟ ಹೆಸರು ಪ್ರಶಸ್ತಿ!...
    ನಿಜಕ್ಕೂ ತುಂಬಾನೇ ಪ್ರಶಾಂತ ಅನಿಸೋ ನಿಮ್ಮೀ ಪ್ರಶಾಂತವನ...
    ಪಂಜುವಿನಲ್ಲಿ "ಅಂಕಣ ಬರಹಗಾರ"ನೆಂಬ ಹೆಮ್ಮೆ ,
    ’ಪ್ರಶಸ್ತಿ ಅಂಕಣ’ದ ಖುಷಿ ...
    ಸಖಿ ಪಾಕ್ಷಿಕದಲ್ಲಿನ ಕೆಲಸದ ಬಗೆಗಿನ ಆರ್ಟಿಕಲ್ ...
    ಇನ್ನೂ ಏನೇನೋ ಖುಷಿಗಳ ಒಡೆಯ ...

    ಮನ ಮುಟ್ಟೋ ತರದ ಪದಗಳ ಭಾವ ಲಹರಿ ...

    ಇಷ್ಟವಾಗೋ ಬ್ಲಾಗ್ ...ಅತೀ ಇಷ್ಟವಾಗೋ ನಮ್ಮದೇ ಅನ್ನೋ ತರದ ಭಾವಗಳು

    ಪ್ರಶಾಂತವನದಲ್ಲಿ ಕಾಡೋ ಭಾವಗಳನ್ನ ಕಾದು ಓದೋಕೆ ನಾನೂ ಕುಳಿತಿದ್ದೀನಿ ಇಲ್ಲಿ ....

    ಇನ್ನೂರು ನಾನೂರಾಗ್ಲಿ...ನಾನೂರು ಎಂಟ್ನೂರಾಗ್ಲಿ :)
    ಮೃದು ಮಧುರ ಶುಭಾಶಯಗಳೊಂದಿಗೆ ...
    -ಭಾಗ್ಯಾ ಭಟ್


    ReplyDelete
  3. anna nimma shabda bhandara chennagide, hagagi neevu ee sadhanayennu madiderendu hela bayasuve :)

    ReplyDelete
  4. 200 - 2000 ವಾಗುವ ಕಾಲ ಬಲು ಬೇಗ ಬರಲಿದೆ. ನಿಮ್ಮ ಬ್ಲಾಗ್ ಮಾಹಿತಿ ಪೂರ್ಣ ಮತ್ತು ಸಂಗ್ರಹಯೋಗ್ಯ. ನಿಮಗೆ ನಮ್ಮೆಲ್ಲರ ಸಾಥ್ ಇದೆ. ಒಳ್ಳೆಯದಾಗಲಿ.

    ReplyDelete
  5. Superro super. Congrats. Innu hechu bari. Sahitya seve mundevariyali. : )

    ReplyDelete
    Replies
    1. thanks a lot hegdere.. prayatna madti :-) nimma sath hinge irli :-)

      Delete
  6. ಪ್ರಶಸ್ತಿ.. !
    ನಿಮ್ಮ ಬರಹಗಳನೇಕವನ್ನ ನಾನು ಓದಲಾಗಿಲ್ಲ..! ಆದರೆ ಓದಿದ ಕೆಲವು, ನಿಮ್ಮೊಡನೆ ನಡೆದ ಹಲವು ಮಾತುಕತೆಗಳು ನನಗೆ ನಿಮ್ಮ ಬರಹದ ಬಗ್ಗೆ, ನಿಮ್ಮ ಪ್ರಯತ್ನದ ಬಗ್ಗೆ ಭರವಸೆ, ಸಂತಸ ತಂದುಕೊಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
    ನಿಮ್ಮಿಂದ ಇನ್ನೂ ಹಲವು ಬರಹಗಳನ್ನು, ಪಕ್ವತೆಯನ್ನ ಖಂಡಿತ ನಿರೀಕ್ಷಿಸುತ್ತೇವೆ. ನಾವು ಎಷ್ಟೇ ಹಿಂದುಳಿದರೂ, ನಿಮ್ಮ ದಾಪುಗಾಲಿಗೆ, ವೇಗಕ್ಕೆ ತಡೆಯಿರದಿರಲಿ.
    ಇನ್ನೂ ಹೆಚ್ಚಿನ ತಾಂತ್ರಿಕ, ಸಾಹಿತ್ಯ, ವಿಷಯ, ವಿಚಾರಾತ್ಮಕ ಸಹಾಯಕ್ಕಾಗಿ ನಿಮ್ಮ ಹಿತಚಿಂತಕರ ಪಟ್ಟಿ ಬೆಳೆಯುತ್ತಿದೆ, ಬೆಳೆಯುತ್ತದೆ. ಶುಭವಾಗಲಿ. :)

    ReplyDelete
    Replies
    1. ತುಂಬಾ ಧನ್ಯವಾದಗಳು ಸತ್ಯಚರಣ್ ಅವ್ರೆ :-)
      ನಿಮ್ಮ ಆಶಯದಂತೆಯೇ ಆಗಲಿ :-)

      Delete
  7. ಅಭಿನಂದನೆಗಳು ಪ್ರಶು .... ನಿನ್ನ ಹೆಸರಿನಷ್ಟೇ ವಿಶಿಷ್ಟವಾಗಿ ಸುಂದರವಾಗಿದ್ದು ನಿನ್ನ ಬ್ಲಾಗ್ ....
    ಬರಿತಾ ಇರು... ನಂಗ ಯಾವಾಗ್ಲು ಓದ್ತಾ ಇರ್ತ್ಯ ...
    ಒಂದು ಸಣ್ಣ ಸಲಹೆ ...
    ಹೆಚ್ಚು ಹೆಚ್ಚು "Abstract" ಲೇಖನ ಬರಿ ...ಯಾಕನ್ದ್ರೆ ಅದ್ನ ತುಂಬಾ ಚೊಲೊ ಬರಿತೆ .... :)
    Hope u dont mind ...

    ReplyDelete
  8. Congratulation for reaching double century..keep clocking the milestones!

    ReplyDelete
  9. ಬರವಣಿಗೆ ಸುಧಾರಿಸಿ, ನಿಮ್ಮನ್ನು ಪ್ರಬುದ್ಧತೆಯ ಹಾದಿಯಲ್ಲಿ ನಡೆಸಿದೆ ನಿಮ್ಮ ಬ್ಲಾಗ್. ಅಭಿನಂದನೆಗಳು ಪ್ರಶಸ್ತಿ. ಚಂದ ಬರೆಯುತ್ತಿದ್ದೀರಿ, ಮುಂದುವರೆಯಲಿ ಪಯಣ :)

    - ಪ್ರಸಾದ್.ಡಿ.ವಿ.

    ReplyDelete
  10. tumbaa thanks prasad.. bahudinagala nantarada nimma bheti kushi needitu :-)

    ReplyDelete