Sunday, July 31, 2011

ನಲ್ಮೆಯ ಗೆಳತಿ ನೀತಾ,
ಪ್ರೀತಿಯ ಗೆಳೆಯ ಪ್ರದೀಪ
ಎಂಬೊಕ್ಕಣೆಯನ್ನಾತುಕೊಂಡ
ನೆನಪೊರುವ ಬುಕ್ಕೆ ಸ್ಲಾಂ ಬುಕ್
ಸ್ನೇಹದ ತೋಟದಿ ಅರಿಯದೆ ಅರಳಿದ
ಸೊಬಗನು ನಂಬಿಕೆ ದಾರದಿ ಕಟ್ಟಿದ
ಹೂಗಳ ಬೊಕ್ಕೆ ಸ್ಲಾಂಬುಕ್|1||

ಬಣ್ಣದಕ್ಷರದಿ ಭಾವನೆ ಬಣ್ಣಿಸೋ
ಬೇರ್ಪಡುವ ದಿನದ ನೋವ ನೆನಪಿಸೋ
ಕಾಲಪ್ರವಾಹದಿ ಕೊಚ್ಚಿ ಹೋದವರ
ದಡಮುಟ್ಟಿದವರೆಂದೋ ನೆನೆಯಲು
ಗೆಳೆಯರಿಗೊಳಿದ ದಾರಿ ಸ್ಲಾಂ ಬುಕ್|2|

ಬರಿಯೆಂದು ಬುಕ್ಕು ಕೊಟ್ಟ ಅರೆಕ್ಷಣ
ಬರಿಯುವದೇನಂದರಿಯದೆ ತಲ್ಲಣ
ಹೀಗೆ ಕೂತವರದೆ ಹಲವೆಡೆ ಚಿತ್ರಣ
ಕೈಗೆ ಸಿಗದಾರೋ ಕೋತಿಯ ಕೂರಿಸಿ
ತುಂಬೋ ಸವಿನೆನಪಿಗಿದೇ ಅಂಕಣ
ಸ್ನೇಹವ ಸೂಸೋ ಸ್ಲಾಂಬುಕ್|3

No comments:

Post a Comment