Wednesday, April 24, 2013

ಕಳೆದುಹೋದ ಕವಿತೆ

ಎಲ್ಲಿ ಹೋಯಿತೋ ಕವಿತೆ,ಸಿಕ್ಕದಂತೆ
ಹೂವಿನಲ್ಲೆ, ನೋವಿನಲ್ಲೆ, ಸಾವಿನಲ್ಲೆ ?
ಜೀವ ಬೇಡೋ ಹೊತ್ತಾ ತುತ್ತಿನಲ್ಲೆ ?
ಕಳೆದುಹೋಯಿತೇ ಕವಿತೆ, ದಕ್ಕದಂತೆ..

ಒಲವಿರದ ಸಾಲುಗಳಿಂತ
ಬರವಿರದ ಅಕ್ಷರ ಲೇಸು
ಮನಸಿರದ ಮಾತುಗಳಿಂತ
ಇಂಕಿಲ್ಲದ ಲೇಖನಿ ಲೇಸು
ಶೂನ್ಯವನೇ ಮಾನ್ಯ ಮಾಡುತಾ
ಮೌನದಲ್ಲಿ ಸಾಥಿ ಹುಡುಕುತ
ತಾತ್ಸಾರದ ಸವಾರಿಯಲ್ಲಿ
ಗುರಿಯು ಎಲ್ಲಿ, ನೋವೇ ಇಲ್ಲಿ

ಮನವೇ, ಬರಸಿಡಿಲೇ ಇದು ?
ಕುಗ್ಗದಿರು.
ಉದುರೋ ಎಲೆ, ಹೊಸತನಕೆಂದೇ
ಬಿಕ್ಕದಿರು.
ಬರಲಿದೆ ವಸಂತ , ಶಿಶಿರವಲ್ಲವೋ
ಶಾಶ್ವತ
ಸಾಗಲಿ ನಿನ್ನಯ ಪಯಣವು ಹೀಗೇ
ಅನವರತ

3 comments:

  1. ಸಾಲುಗಳು ಕಳೆಯಲು ಶುರುವಾದಾಗ ಅಕ್ಷರಗಳೇ ದಾರಿ ದೀಪ
    ಕಾಲುಗಳು ಮರಗಟ್ಟಿದಾಗ ಕೈಗಳೇ ಆಧಾರ
    ಭಾವಗಳು ಖಾಲಿಯಾದಾಗ ಅನುಭವ ಜೀವಾಳ
    ಸುಂದರ ಆಶಾದಾಯಕ ಅಂತ್ಯ ಇಷ್ಟವಾಯಿತು

    ReplyDelete
  2. ಈಗಿನ ಕವಿತೆ ಎಲ್ಲಿ ಜೋತು ಬಿದ್ದು ನೇತಾಡುತಿದೆ ಎನ್ನುವುದು ನಿಮ್ಮ ಮೊದಲ ಸಾಲುಗಳೇ ಎತ್ತಿ ತೋರುತ್ತಿವೆ.

    ಎರಡನೇ ಚರಣದ ಆರಂಭದಂತೆಯೇ ಒಲವಿದ್ದರೇಣೆ ಕವಿತೆ.

    ಮೂರನೇ ಚರಣಕ್ಕೆ ಬರುವಾಗ ಕವಿಯು ನಮ್ಮಲ್ಲಿ ಅದಮ್ಯ ಚೈತನ್ಯವನ್ನು ತುಂಬುತ್ತಾನೆ.

    ಮೂರು ಆಯಾಮದ ರಚನೆ.

    ReplyDelete
  3. "ಎಲ್ಲಿ ಹೋಯಿತೋ ಕವಿತೆ,ಸಿಕ್ಕದಂತೆ" ಎನ್ನುತ್ತಾ ಇಷ್ಟು ಒಳ್ಳೆಯ ಕವಿತೆ ಬರೆದಿದ್ದೀರಿ ಪ್ರಶಸ್ತಿ ... ನಿಮ್ಮ ಪಯಣವು ಸಾಗಲಿ ಹೀಗೆ ಅನವರತ ..ಓಳ್ಳೆಯ ಆಶಯ .. ಇಷ್ಟವಾಯಿತು ..

    ReplyDelete