Friday, August 26, 2011

ಇರುವೆ

ಮೇಲೇರು ನೀ ಇರುವೆ.
ಒಣಜಂಭದೊಡೆ ಸಾಯ್ವೆ.
ನಿನ್ನ ದೇಹಕೂ ಮೀರಿದ ಭಾರ ಸಂಸಾರ.
ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.
ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.
ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.

ಬ್ರಹ್ಮನೇ ಬಿದ್ದರೂ ನಿನ್ನಯ ದಾರಿಯಲಿ
ಬಳಸಿ ನೀ ಸಾಗುವೆ ಬದಲಾದ ಪಥದಲಿ.
ಮಳೆಯೆಂದು,ಚಳಿಯೆಂದು,ಮರವೆಂದು,ಶಿಲೆಯೆಂದು
ಹಲಕಾರಣದ ಮೈಗಳ್ಳತನ ಬೇಡೆಂದು
ಕೂಡೆಂದು ಆಹಾರ ಕಾಣೆ ನಾಳೆಯ ಎಂದು
ಅಗುಳಗುಳು ಕೂಡಿದರೆ ಮನವರಳಿ ಅನುಬಂಧ
ಅರಿವ ಭಾವವು ಬೆಸೆಯೆ ಮನೆಯರಳೊ ಸಂಬಂಧ

2 comments:

  1. ಓದುವಿಕೆ ಉತ್ತಮ ಚಿಂತನೆ ಮತ್ತು ಸಮೃದ್ಧ ಬರಹಗಾರನನ್ನು ಸೃಷ್ಟಿಸುತ್ತದೆ. ಅದು ನಿಮ್ಮಲ್ಲಿದೆ ಅಂತ ಗೊತ್ತಾಯಿತು.ಬರಹದಲ್ಲಿ ಒಂದು ಹದತನವನ್ನು ಸಾಧಿಸುವ ಕುರುಹು ಉಂಟು ನಿಮ್ಮ ಬರವಣಿಗೆಯಲ್ಲಿ. ಉತ್ತಮ ಸಾಹಿತಿಗಳ ಪುಸ್ತಕಗಳನ್ನು ಓದಿ ಅರಗಿಸಿಕೊಳ್ಳಿ ಬರಹದ ಶೈಲಿ ತನ್ನಿಂತಾನೆ ಮೈಗೂಡುತ್ತದೆ. ಶುಭವಾಗಲಿ.

    ReplyDelete
  2. ಧನ್ಯವಾದಗಳು ಮೂರ್ನಾಡರೇ :-)

    ReplyDelete