Friday, August 5, 2011

ಗುಂಡಣ್ಣನ ಗೂ+ ಪುರಾಣ


" fb ಹೋಯ್ತು ಗೂ+ ಬಂತು ಢಂ ಢಂ ಢಂ.." ಅಂತ ಕಟ್ಟಾ ಗೂಗಲ್ ಪ್ರೇಮಿ ಗುಂಡಣ್ಣ ಕಾಲೇಜ್ ಗ್ರೌಂಡಲ್ಲಿ ಗುನುಗ್ತಿರ್ಬೇಕಿದ್ರೆ ಅವನಂಗೆ ಕೆಲಸಿಲ್ಲದ ಕೆಲ ದೋಸ್ತುಗಳು ಅಲ್ಲಿಗೆ ವಕ್ಕರಿಸಿದ್ರು. ಗುಂಡಣ್ಣ ಪೇಟೆಗೆ ಬಂದು ಅಲ್ಲಿನ ಕೆಲ ದೋಸ್ತುಗಳ ಬಾಯಲ್ಲಿ ಮಿ.ರೌಂಡ್ ಆಗಿದ್ದ. ಏನು ಮಿ.ರೌಂಡ್ ತುಂಬಾ ಖುಷಿಯಾಗಿದ್ದೀರಿ ಅಂದ್ಳು ಇಳಾದೇವಿ ಅಲಿಯಾಸ್ ಇಳಾ. ಆಗ್ದೇ ಇನ್ನೇನು ಆರ್ಕುಟು, ಜೈಕು,ವೇವು,ಬಜ್ಜು ಎಲ್ಲಾ ಆದ್ಮೇಲೆ ಹೊಸಾದು ಬಂದಿದ್ಯಲ್ಲಾ ಗೂಗಲ್ ಪ್ಲಸ್ಸು ಅದ್ರಿಂದ ಸಾಹೇಬ್ರು ಸಿಕ್ಕಾಪಟ್ಟೆ ಖುಷಿಯಾಗಿದಾರೆ ಅಂದ ಟಾಂಗ್ ತಿಪ್ಪ ಅಲಿಯಾಸ್ ಟಿಪ್ಸ್. ಆರ್ಕುಟ್ ಅನ್ನೋದನ್ನ ಆರ್ಕುಟ್ ಬಯೋಕ್ಕೊಟೇನ್ ಅನ್ನೋ ಮಹಾಶಯ ಕಂಡು ಹಿಡಿದಿದ್ದಲ್ವಾ ಮಾರಾಯ್ರೇ ಅಂತ ತನ್ನನುಮಾನ ಹೇಳ್ದ ಮಂಗಳೂರು ಮಂಜ ಅಲಿಯಾಸ್ ಮಿ.ಮ್ಯಾಂಜ್.
ಹೌದು ಆದ್ರೆ ಅವ್ನು ಈಗ ಗೂಗಲ್ ಅಲ್ಲಿ ಪ್ರಾಡಕ್ಟ್ ಮ್ಯಾನೇಜರ್. ಆರ್ಕುಟ್ ನ ಗೂಗಲ್ ಕೊಂಡ್ಕಂಡು ಸುಮಾರು ವರ್ಷ ಆಯ್ತು, ನೀವೆಲ್ಲಿದೀರಾ ಮಿ.ಮ್ಯಾಂಜ್ ಅಂದ್ಳು ಸರಸ್ವತಿ ಅಲಿಯಾಸ್ ಸರ್. ತಾನೇ ಬುದ್ದಿವಂತ ಅಂದ್ಕಂಡಿದ್ದ ಮಂಜನ ಮುಖ ಹುಳ್ಳಗಾಯ್ತು.

ಓ ಹೌದಾ? ಅದೆಂತದು ಜೈಕು ಅಂದ್ಯಲಾ ಅದೆಂತದು ಮಾರಾಯ ಅಂದ ತಿಮ್ಮ ವಿಷಯ ಬದಲಾಯಿಸಕ್ಕೆ . ಅದೂ fb ತರ ಒಂದು ಸಾಮಾಜಿಕ ತಾಣ. ಮಿಕ್ರೋ ಬ್ಲಾಗಿಂಗ್, ಲೈಫ್ ಸ್ಟ್ರೀಮ್ ಅನ್ನೋ ಸೇವೆ ಗಳನ್ನ ಟ್ವಿಟ್ಟರ್ ಗೆ ಕೊಡುತ್ತೆ ಅಂದ ತಿಪ್ಪ. ಹಂಗದ್ರೇ ಏನು ಅಂತ ಇಳಾ ಕೇಳೋದ್ರೊಳಗೆ ಅದನ್ನ 2006 ರಲ್ಲಿ ಫಿನ್ ಲ್ಯಾಂಡಿನ ಜೆರ್ರಿ ಮತ್ತೆ ಪೆಟ್ರಿ ಅನ್ನೋರು ಕಂಡು ಹಿಡಿದ್ರು ಅಂದ್ಳು ಸರು. ಅದನ್ನೂ ನಂಗೂಗಲ್ ನವ್ರು 2007 ರಲ್ಲಿ ತಂಗೊಡ್ರು. ಉಪ್ಪಿಗಿಂತ ರುಚಿ ಬೇರೆ ಇಲ್ಲ. ಗೂಗಲ್ಗಿಂತ ಬ್ರೌಸರ್ ಬೇರೆ ಇಲ್ಲ... ಅಂತ ಹಾಡೋಕೆ ಶುರು ಮಾಡ್ದ ಗುಂಡಣ್ಣ. ಎಲ್ಲ ಸ್ವಲ್ಪ ಹೊತ್ತು ಕಿವಿ ಮುಚ್ಕಂಡ್ರು.


ಗುಂಡಣ್ಣ ನಿಲ್ಸಿದ ಅಂತ ಗೊತ್ತಾದ ಮೇಲೆ ಇಳಾ ಕೇಳಿದ್ಳು. ಅದೆಂತದೋ ವೇವು ಅಂದ್ರಲಾ ಮಿ.ಟಿಪ್ಸ್ ಅದೇನು ಅಂತ. ಅದನ್ನ ಗೂಗಲ್ ನವ್ರೇ 2009 ರ ಒಂದು ಸಮ್ಮೇಳನದಲ್ಲಿ ಗೂಗಲ್ ವೇವ್ ಅಂತ ಬಿಡುಗಡೆ ಮಾಡಿದ್ರು.ಅದರ ನಿಜವಾದ ಹೆಸರು ಅಪಾಚೆ ವೇವ್ ಅಂತ ಅಂತ ಹೇಳಿ ನಿಲ್ಸೋದ್ರೋಳಗೆ ಅದ್ರಲ್ಲಿ ಮಿಂಚಂಚೆ, ತ್ವರಿತ ಸಂದೇಶ.ವಿಕಿ ಹೀಗೆ ಸಾಮಾಜಿಕ ತಾಣದ ಎಲ್ಲಾ ಸೌಲಭ್ಯನೂ ಇದೆ ಅಂದ ಗುಂಡಣ್ಣ. ಸಾಕು ಸುಮ್ನಿರ್ಲ. ಅಷ್ಟಿದ್ರೂ ಅದು ನಂ fb ಮುಂದೆ ಅದ್ಯಾಕ ನಿಲ್ಲಿಲ ಅಂತ ಟಾಂಗ್ ಕೊಟ್ಟ ತಿಪ್ಪ.

ಈ ಹುಡುಗ್ರು ಹಿಂಗೇ ಬಿಟ್ರೆ ಇಡೀ ದಿನ ಕಚ್ಚಾಡ್ತಾನೆ ಇರ್ತಾರೆ ಅಂತ ಇಳಾ, ಗೂಗಲ್ ಬಜ್ ಅಂದ್ರಲಾ ಅದೇನೇ ಸರು ಅಂದ್ಳು. ಪಾಪ ಸರೂಗೂ ಅದ್ರ ಬಗ್ಗೆ ಏನೂ ಗೊತ್ತಿರ್ಲಿಲ್ಲ. ಮಂಜನ ಕಡೆ ನೋಡಿದ್ಳು. ಮಂಜಂಗೂ ಪಾಪ ಅನುಸ್ತು. ಅದೂ ಹಿಂಗೇ ಒಂದು ಸಾಮಾಜಿಕ ತಾಣ. ಅದನ್ನ ಜೀಮೇಲ್ ಜೊತೆಗೇನೆ ಉಪಯೋಗಿಸ್ಬೋದು. ಅದ್ರಲ್ಲಿ ಕೊಂಡಿಗಳ್ನ, ಚಿತ್ರಗಳ್ನ, ವೀಡಿಯೋನ,
ಸ್ಥಿತಿ(status) , ಪ್ರತಿಕ್ರಿಯೆನ ಎಲ್ಲಾ ಹಂಚಿಕೋಬೋದು. ಅದೆಲ್ಲಾ ಸಂದೇಶದ ಒಳಪಟ್ಟಿಯಲ್ಲಿ ನೋಡ್ಬೋದು ಮಾರ್ರೇ ಅಂದ

ಸರಿ ಅಂತ ಈ ಕಡೆ ನೋಡಿದ್ರೆ ಗುಂಡಂಗೂ ತಿಪ್ಪಂಗೂ fb, ಗೂ + ಬಗ್ಗೆ ಜಗಳ ಶುರುವಾಗಿತ್ತು. ನಿಂ ಗೂಗಲ್ ಅವ್ರು fb ಲಿರೋ like ನೋಡೋ plus ಕುಕ್ಕೋ ಸೇವೆ ಶುರು ಮಾಡಿದ್ದು ಅಂದ ತಿಪ್ಪ. ಗೂಗಲ್ ಅಲ್ಲಿರೋ ಸಂಗೀತ ಸೇವೆ ನೋಡಿ fb ನಲ್ಲಿ ಸಂಗೀತ ಸೇವೆ ಪ್ರಾರಂಬಿಸಿದಾರೆ fb ನವ್ರು ಅಂದ ಗುಂಡ. ಅದ್ರ ಹೆಸ್ರು "ವೈಬ್ಸ್" ಅಂತ ಇಡ್ತಾರಂತಲಾ ಅಂತ ಸೇರಿಸಿದಳು ಇತ್ತೀಚೆಗೆ ಇಂತದ್ದೆಲ್ಲಾ ಎಲ್ಲಿಂದಲೋ ಓದಕ್ಕೆ ಶುರೋ ಮಾಡಿರೋ ಇಳಾ. ಹಾಂ ಹೌದು. ಸ್ಕೈಪೆ ಅವರ ಜೊತೆಗೆ ಸೇರಿ ವೀಡಿಯೋ ಕರೆ ಸೌಲಭ್ಯನೂ ಕೊಡ್ತಿದಾರೆ ಅಂದ ಗುಂಡ. ಕೊನೆಗೂ ಅದು ಗೂಗಲ್ ಕಾಪಿ ಅಂತ ಒಪ್ಕಂಡ್ಯಾ ಅಂತ ತಿಪ್ಪ ಕೇಳ್ಬೇಕು ಅನ್ನೋವಷ್ಟರಲ್ಲಿ ಸರು ಮಧ್ಯಸ್ತಿಕೆ ಮಾಡೋ ತರ ಮಧ್ಯ ಬಂದಳು. ಸರಿ ಗೂ+ ಅಲ್ಲಿ ಏನಿದೆ ಅಂತ ನೀವೇಳಿ ಮಿ.ರೌಂಡ್.fb ಬಗ್ಗೆ ಮಿ.ಟಿಪ್ಸ್ ಹೇಳ್ತಾರೆ. ಈ ವಿಷ್ಯದಲ್ಲಿ ನಂ ಮಧ್ಯ ಜಗಳ ಯಾಕೆ? ಎಲ್ಲಾ ಕೇಳಾದ ಮೇಲೆ ತೀರ್ಮಾನ ಮಾಡೋಣ ಅಂದ್ಳು. ಸರು ಮಾತಿಗೆ ಇಲ್ಲಾ ಅನ್ನೋಕೆ ಆಗತ್ತಾ? ಎಲ್ರೂ ಕೋಲೇ ಬಸವನ ತರ ಹೂಂ ಅಂತ ತಲೆ ಹಾಕಿದ್ರು.

ಗೂ+ ಅಲ್ಲಿ ವೃತ್ತ(circles) ಇದೆ. ಅದಕ್ಕಿರೂ animation, ಯಾರನ್ನ ಬೇಕಾದ್ರೂ ಎಳ್ದು ಹಾಕೋ ಅಂತ ಸೌಲಭ್ಯ ನಿಮ್ಮ Fb ಗೆಳೆಯರ ಪಟ್ಟಿ(friend list) ಅಲ್ಲಿ ಇಲ್ಲ ಅಂದ ಗುಂಡಣ್ಣ. fb ನಲ್ಲಿ ವೀಡಿಯೋ ಕರೆ, chatphone ಇದೆ. ಅದು ಗೂ+ ಅಲ್ಲಿ ಇಲ್ಲ ಅಂದ ತಿಪ್ಪ. ಗೂ+ ಅಲ್ಲಿ hangout ಅಂತ ಇದೆ. ಅದ್ರಲ್ಲಿ ಎಷ್ಟು ಜನನ್ನ ಬೇಕಾದ್ರೂ ಒಂದು ಗ್ರೂಪ್ ಮಾಡಿ ಒಟ್ಟಿಗೆ ಕರೆ ಮಾಡ್ಬೋದು. ಗ್ರೂಪ್ ಕರೆ ಸೌಲಭ್ಯ fb ಲಿ ಇಲ್ಲ ಅಂದ ಗುಂಡ. fb ನಲ್ಲಿ chat ಇದೆ. ಎಷ್ಟು ಜನನ್ನ ಬೇಕಾದ್ರೂ ಅದಕ್ಕೆ ಸೇರಿಸಿಕೊಳ್ಬೋದು. ಗ್ರೂಪ್ chat ಕೂಡ ಮಾಡ್ಬೋದು ಅಂದ ತಿಪ್ಪ. ಆದ್ರೆ ಗ್ರೂಪಲ್ಲಿ ಇರೋರ ಸಂಖ್ಯೆ 250 ದಾಟಿದ್ರೆ chat ತಾನಾಗೇ ನಿಶ್ಕ್ರಿಯ ಆಗುತ್ತೆ. ಗೂ+ ಅಲ್ಲಿ huddle ಅಂತ ಚಾಟ್ ಸೌಲಭ್ಯ ಇದೆ. ಅದು ಆಂಡ್ರಾಯ್ಡ ಮೊಬೈಲುಗಳಿಗೂ ಸಹಕಾರ ನೀಡುತ್ತೆ.fb ನಲ್ಲಿ ಮೊಬೈಲ್ chat ಇಲ್ಲ ಅಂದ ಗುಂಡ. fb ನಲ್ಲಿ ಆಲ್ಬಂ ಗಳಿದೆ. ಫೋಟೋ, ವೀಡಿಯೋ ಗಳನ್ನೆಲ್ಲಾ ಟ್ಯಾಗ್ ಮಾಡ್ಬೋದು. ಹುಟ್ಟಿದಬ್ಬಕ್ಕೆ, ಗೆಳೆಯರ ದಿನಕ್ಕೆ ಉಡುಗೊರೆ ಅನ್ನೋ ತರದ್ದು ಹಲವಾರು app ಗಳಿವೆ. ಯಾರು ಹೆಚ್ಚು ಲೈಕು ಕುಕ್ತಾರೆ, ಯಾರು ಹೆಚ್ಗೆ ಕಮೆಂಟ್ ಮಾಡ್ತಾರೆ ಅನ್ನೋದರ ಮೇಲೆ ಅವರಿಗಿಲ್ಲ ಬೇರೆ ಬೇರೆ ಸ್ಥಾನ ಕೊಡ್ಬೋದು ಗೊತ್ತಾ ಅಂದ ತಿಪ್ಪ. ಆದ್ರೆ ಗೂ+ ನಲ್ಲಿರೋ picassa ಆಲ್ಬಂ ನಷ್ಟು ವೇಗವಾಗಿ ನಿಂ fb ಆಲ್ಬಂ ನೋಡಕಾಗಲ್ಲ ಬಿಡಲೇ ಅಂದ ಗುಂಡ.


ಈಗ ತಿಪ್ಪಂಗೂ ತಡ್ಯಕಾಗ್ಲಿಲ್ಲ. ನಂ fb ನಲ್ಲಿ ಪ್ರಶ್ನೆಗಳಿವೆ, ಪುಟಗಳಿವೆ, ಆಟಗಳಿವೆ. ಇನ್ನೂ ಸುಮಾರು ಇದೆ ಅಂತ ತಿಪ್ಪ ಹೇಳ್ತಿರ್ಬೇಕಿದ್ರೆ cityville ಸೂಪರ್ ಅಂತ ಇಳಾ, farmville ಸೂಪರ್ ಅಂತ ಮಂಜ ಜಗಳ ಶುರು ಹಚ್ಕಂಡ್ರು. ಇದೊಳ್ಳೆ ಜಗಳ ಆಯ್ತಲ್ಲಾ ಅಂತ ಸರು ಗೊಣಗ್ತಿರಬೇಕಾದ್ರೆ ಬಸ್ ಬರ್ರ್ ಅಂದಗಾಯ್ತು. ಎಲ್ರೂ ಅಲ್ಲಿ ನೋಡಿದ್ರೆ ತಂ ಕಾಲೇಜ್ ಬಸ್ಸೇ. ಹರಟ್ತಾ ಕೂತವ್ರಿಗೆ ಸಮಯ ಆಗಿದ್ದೇ ಗೊತ್ತಾಗಿಲ್ಲ. ಬಸ್ ಹಿಡಿಯೋಕಂತ ಎಲ್ರೂ ಎದ್ನೋ ಬಿದ್ನೋ ಅಂತ ಓಡಿದ್ರು. ಯಾರು ಗೆದ್ರು ಅಂತ ಅವ್ರಿಗಂತೂ ನಿರ್ಧಾರ ಮಾಡಕ್ಕಾಗ್ಲಿಲ್ಲ. ನಂಗೂ ಆಗ್ಲಿಲ್ಲ. ಓದಿದ ನಿಮಗೆ ?

ಮಾಹಿತಿ ಮೂಲ: wikipedia.org
ಚಿತ್ರ ಮೂಲ: Google

6 comments:

 1. ಮಸ್ತ್ ಐತ್ರಿ ಸಾಹೇಬ್ರೆ....

  ReplyDelete
 2. ಧನ್ಯವಾದಗಳು ಆದಿ :-)

  ReplyDelete
 3. ಧನ್ಯವಾದಗಳು vt :-)

  ReplyDelete
 4. ಧನ್ಯವಾದಗಳು ಜಿತಿನ್ :-)

  ReplyDelete