Tuesday, August 30, 2011

ಪ್ರೀತಿ.. ಒಡೆದಾಗ


ನೂರೆಂಟು ಮಾತು ಅಲ್ಲಲ್ಲೆ ಅವಿತು
ಹೊರತಂತು ವಿರಹ ಬರಹ
ಮೀಟಿ ಸೋತೆ ನಾ ಪ್ರೀತಿ ತಂತಿ
ಕೊಡದಾದೆ ದುಡಿದು ವರಹ
ನಾ ಜಲ್ಲೆಯಂತೆ ನೀ ಹರಿವ ಹಾಲು
ಬೇರಾದೆ ನೂರು ತರಹ


ನಾನು ಹಕ್ಕಿ , ಅರೆ ಹಕ್ಕಿ ನೀನು
ಹುಡುಕೋಣ ಪ್ರೀತಿ ಕಾಳ
ಎಂದುಸುರಿ ಒಮ್ಮೆ, ಕಲಿಸಿದ್ದೆ ಕನಸ ಬಾಳ
ಅಂದರಿಯದಾದೆ ನಾ ಪಾರಿವಾಳ
ನೀ ಹೊಂಚಿ ಕಾಯೋ ಗಿಡುಗ
ಮನಸಿಟ್ಟ ನನಗೆ ಕೈ ಕೊಟ್ಟೆಯಲ್ಲೊ ಹುಡುಗ

2 comments:

  1. ಕವನ ಚೆನ್ನಾಗಿದೆ. (ಎಲ್ಲವೂ).
    ಬ್ಲಾಗೂ ಚೆನ್ನಾಗಿದೆ. ಇನ್ನೊಮ್ಮೆ ಓದಿ ಪ್ರತಿಕ್ರಿಯಿಸುತ್ತೇನೆ. ಮುಂದುವರೆಯಲಿ. ಕವನಕ್ಕಿಂತಲೂ ಇಷ್ಟವಾಗಿದ್ದು ಲೇಖನವೆನ್ನಬಹುದಾದ ಹರಟೆಗಳು. ಖುಷಿಯೆನಿಸುತ್ತದೆ.

    ReplyDelete