Friday, March 8, 2013

ಮಹಿಳೆಯರ ದಿನ

ಮಹಿಳೆಯರ ದಿನ..

ಎಪ್ಬಿಯ ಸ್ಟೇಟಸ್ಗಳಲ್ಲಿ ನಮನ, ಗೌರವ ಅಲ್ಲಲ್ಲಿ ಕಾಣುತ್ತಿದೆ. ಶ್ರೀಕಾಂತ್ ಮಂಜುನಾಥ್ ಅವರು ಹೇಳುವಂತೆ ಹದಿನೈದನೇ ಲೋಕ ಬ್ಲಾಗ್ ಲೋಕದಲ್ಲಂತೂ ಇವತ್ತು ಅದರದ್ದೇ ಕಲರವ.

ಸುಮತಿ ದೀಪಾ ಅವರ "ಹೀಗೇ ಸುಮ್ನೆ", ಭಾಗ್ಯ ಭಟ್ಟರ "ಪೆನಾಲ್ಟಿ", ಭದ್ರಿ ಭಾಯಿಯ "ಪರದೆಯ ಹಿಂದೆ" , ಆಜಾದ್ ಭಾಯಿಯ "ನಿನ್ನಿಂದಲೇ",ಅಘನಾಶಿನಿ-ಸಮನ್ವಯ ಭಟ್ಟರ "ಅಪ್ಪ",ಕೊಳಲು- ಡಿ.ಕೆ.ಎಸ್ ಮೂರ್ತಿಗಳ "ಮಹಿಳೆ", ವೆಂಕಣ್ಣನ "ನನ್ನೊಳಗಿನ ಕನಸು",ಅಲೆದಾಡುವ ಕಾಲ ವಿನಾಯಕ ಭಟ್ರ "ಸೂರ್ಯ ಡಿಮ್ಮಾದ"... ಹೀಗೆ ಇವತ್ತು ಓದಿದ ಲೇಖನಗಳಲ್ಲೆಲ್ಲಾ ಹೆಣ್ಣಿನ ಕುರಿತಾದ್ದೇ.. ಒಂದಾದ ಮೇಲೆ ಒಂದು ಓದಿಸಿಕೊಂಡು ಹೋದವು.

ಹೆತ್ತು ಹೊತ್ತು, ತುತ್ತಿತ್ತ ತಾಯಿಗೆ, ಮುತ್ತಂತ ಮಾತುಗಳನ್ನು ಕಲಿಸಿದ ,ಎಲ್ಲರ ತಪ್ಪು ಹೊಟ್ಟೆಗೆ ಹಾಕಿಕೊಂಡು ಸದಾ ಒಳ್ಳೆಯದನ್ನೇ ಬಯಸಿದ ಸ್ತ್ರೀ ದೇವತೆಗಳಿಗೆ ಈ ಮೂಲಕ ಇನ್ನೊಂದು ನಮನ. ಹಳ್ಳಿಯ ರಂಗಮ್ಮ, ಗಂಗಮ್ಮ, ನನ್ನ ಅಜ್ಜಮ್ಮನಿಗೂ ಈ ತರದ ಒಂದು ದಿನವಿದೆ ಅಂತ ತಿಳಿದಿಲ್ಲ.ಒಂದು ದಿನ ಗೌರವಿಸಿ ಉಳಿದ ದಿನಗಳೆಲ್ಲಾ ಕಾಡಿಸೋ ಬದಲು ಒದ್ದಾಡುತ್ತಿರೋ ಆ ಜೀವಗಳಿಗೆ ಪ್ರತಿದಿನವೂ ಇದೇ ತರದ ಗೌರವ ಸಿಗಲಿ.. ಪೇಟೆಯ ಈ ಒಂದು ದಿನದ ಗುಲಾಬಿ ಸಲ್ಲಿಕೆ, ಗಿಪ್ಟ್ ಕೊಟ್ಟು ಹಾಡಿ ಹೊಗಳೋ ಆಚರಣೆ ಹಳ್ಳಿಗೆ ಮುಟ್ಟದಿದ್ದರೂ ಅವರು ಮಾಡಿದ್ದ, ಮಾಡುವ, ಮಾಡೋ ಅಸಂಖ್ಯ ಕೆಲಸಗಳಿಗೆ ಕೃತಜ್ನತಾ ಭಾವವಾದರೂ ಸಿಗಲಿ..

ಸ್ನೇಹಿತೆಯರು, ಅಕ್ಕ-ತಂಗಿಯರು, ಆಂಟಿ, ಅಜ್ಜಿಯಂದಿರಿಗೂ ಎಲ್ಲಾ ಮಹಿಳಾ ದಿನದ ಶುಭಾಶಯಗಳು :-)

6 comments:

  1. very nice....2 line nalli ella mahileyarigu 'vishwa mahilaa dina'da shubhashaya tilisiddeeri:)..chenagide

    ReplyDelete
    Replies

    1. ಧನ್ಯವಾದಗಳು ಭಾಗ್ಯ :-)

      Delete
  2. ಚೊಲೊ ಇದ್ದು ಆರ್ಟಿಕಲ್ . ಈ ಪೋಸ್ಟ್ ನೋಡಿದ ಮೇಲೆ ಎಲ್ಲಾ ಬ್ಲಾಗಿಗೂ ಹೋಗಿ ಬಂದೆ. :) #informative

    ReplyDelete
    Replies

    1. ಧನ್ಯವಾದಗಳು ಹೆಗ್ಡೇರೆ :-)

      Delete
  3. ಸಿಂಹಾವಲೋಕನ ಸೊಗಸಾಗಿದೆ. ನಿಮಗೆ ನಿಮ್ಮ ಹೆಸರನ್ನೇ ಕೊಡಬೇಕು! ಸೂಪರ್

    ReplyDelete
    Replies
    1. ಹೆ ಹೆ ಧನ್ಯವಾದಗಳು ಶ್ರೀಕಾಂತ್ ಜೀ :-)
      ತೀರಾ ನಿರೀಕ್ಷಿಸಿದ್ದ ಪುಟಗಟ್ಟಲೇ ಉದ್ದದ ಪೋಸ್ಟಿಗೆ ಸಿಕ್ಕದ ಮನ್ನಣೆ, ಗೌರವ, ಕಾಮೆಂಟುಗಳು ಕೆಲವು ಗಂಟೆಗಳು ಮಾತ್ರ ಇದ್ದ ಈ ಪೋಸ್ಟಿಗೆ ಸಿಕ್ಕಿದೆ ! :-)

      Delete