Thursday, December 22, 2011

ಪಯಣ

ದೂರದಲ್ಲಿ ಮಿನುಗುತಾರೆ ತಿಳಿ ಬೆಳಗು
ನೋಡಿ ನಿನ್ನ ಅಸೆಯೆಲ್ಲ ಮೊಳೆತಿಹುದು
ಬದುಕ ದಾರಿ ಮತ್ತೆ ನೂರನೇ ತಿರುವಿನಲಿ
ರೆಂಬೆಯದೋ ಇದೋ ಎಂಬೋ ಭ್ರಮೆಯಲ್ಲಿ|

ಕಾಣದ ಹಾದಿ ಹಿಡಿದಿಹ ಮನುಜ
ಮರಳುವನೆ ಗೂಡಿಗೆ?
ಗೊತ್ತುಗುರಿಯಿಲ್ಲ ಹೊತ್ತು ಸಾಗಿಹನು
ಆಸೆಯ ಮೂಟೆ ಬೆನ್ನಿಗೆ|

ನೋಡಿ ಬಾನಲ್ಲಿ ಮರಳಿ ನಿರೀಕ್ಷೆ
ನಿನ್ನದೇ ತರದಲಿ
ಮಿಣುಕಿ ಮಿಣುಕಿ ದಿನ ಇಹ ತೋರೋ
ಬಾನೆಂಬ ಪಟದಲಿ|

ಮರಳದೇ ಕಳೆದರೂ ಸಾಕ್ಷಿ
ನೀನೆ ಬವಣೆಗೆ,
ಬೆಂದು ಗೆದ್ದ, ಉಸಿರಾಡುತಿದ್ದ
ಮನದಾಳದ ಗೆಳೆಯಗೆ|

ಇನ್ನೆಂದು ಬರೆವೆನು ಅರಿಯೆನು ನಾನು
ಬೇಡವೇ ಬೇಸರ
ಮರಳಿ ಚಿಗುರುವುದು ಕಡಿದ ವೃಕ್ಷವು
ಕರುಣಿಯೋ ನೇಸರ|

ಕಲಾಂ-ತಾಯಿಗೆ ನಮನ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)

ಜನನಿ ನಮಿಸುವೆ ಗುಣಿಯ ಬೆಳೆಸಿದೆ
ಮನವ ಒಲಿಸುತ ಶಾಂತಿ ಬಿತ್ತಿದೆ
ಮನುಜ ಜನ್ಮದಿ ತಾಯ ಜನ್ಮವೆ ಹಿರಿದು ಎನ್ನುತಲಿ |
ಪಣತ ಖಾಲಿಯೆ ಆದರಳುಕದೆ
ಮನದ ಕುಡಿಯನು ಹಸಿರೆ ಇರಿಸಲು
ಇನಿತು ಮರುಗದೆ ಎಷ್ಟೊ ಕಷ್ಟವ ಬಿಡದ ನಗುಹಿಂದೆ||

ಮಗನು ಬೆಳೆದನು ಓದಿ ಎತ್ತರ
ಗಗನ ಚಿಮ್ಮೋ ಕ್ಷಿಪಣಿ ಎಂಬುವ
ನೆಗೆತ ವಿಷಯದಿ ನುರಿತ ಅವರಿಗೆ  ನೀಡಿ ಗೌರವವ|
ನಗುವ ಮೊಗದಲಿ ಶರಣು ಎಂದರು
ಜಗದ ಕಿವಿಗಳ ಸೆಳೆದ ಶಕ್ತಿಯ
ಅಗಲ ಹೊಗಳಲು ಪದವು ಸಾಲದೆ ಶಿರವ ನಮಿಸೆಂದೆ||
(ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರ ಮನೆಯಲ್ಲಿ ಬಡತನ. ಅವರ ತಾಯಿ ಆಸೀಯಮ್ಮ ಮಾಡಿದ ರೊಟ್ಟಿಯನ್ನು ಕಲಾಂಗೆ ಮತ್ತಿತರ ಮಕ್ಕಳಿಗೆ ಹಾಕುತ್ತಿದ್ದರಂತೆ. ಕಲಾಂ ತಿನ್ನುತ್ತಾ ಇದ್ದರಂತೆ. ಹೀಗೆ ಕಲಾಂ ಮೈಮರೆತು ತಿನ್ನುತ್ತಿದ್ದಾಗ ಒಂದು ದಿನ ಅವರ ಅಣ್ಣ ಎಳೆಯ ಕಲಾಂ ಅವರನ್ನು ಎಚ್ಚರಿಸಿದರಂತೆ. "ಏ ಕಲಾಂ, ತಾಯಿ ತನ್ನ ರೊಟ್ಟಿಯನ್ನೂ ನಿನಗೇ ಹಾಕುತ್ತಿದ್ದಾಳೆ ಎಂಬುದು ಗೊತ್ತಿದೆಯಾ? " ಎಂದು. ಕಲಾಂರಿಗೆ ಆಗ ಜ್ಞಾನೋದಯವಾದಂತಾಯಿತಂತೆ ಮತ್ತು ತಾಯಿಯ ಮೇಲೆ ಮೊದಲೇ ಇದ್ದ ಪ್ರೀತಿ ಉಕ್ಕಿ ಹರಿಯಿತು. ಆಮೇಲೆ ಅವರು ತಮ್ಮ ಅಪರಿಮಿತ ಪರಿಶ್ರಮದಿಂದ ದೇಶದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹರೆನಿಸಿದರೆಂಬುದು ಇತಿಹಾಸ.. ಅವರೆಲ್ಲರಿಗೂ ಮತ್ತೊಂದು ಸಲಾಂ. .
ಮೇಲಿನ ಪ್ರಸಂಗವನ್ನು ಕಲಾಂರ ಆತ್ಮಕತೆ "ಅಗ್ನಿಯ ರೆಕ್ಕೆಗಳು" ನಲ್ಲಿ ಅವರೇ ಉಲ್ಲೇಖಿಸಿದ್ದಾರೆ ಎಂದು ಓದಿದ ನೆನಪು)

Wednesday, December 21, 2011

ವೈ ದಿಸ್ ಕೊಲವರಿ -ಎಕ್ಸಾಂ version :-)

yo boys i am singing song
xam song
flop song
why this kolaveri kolaveri kolaveri di
why this kolaveri kolaveri kolaveri di
ಧ್ವನಿ ಕರೆಕ್ಟ್

ದೂರ್ದಲ್ಲೆಲ್ಲೋ ಎಕ್ಸಾಮು ಸಾಮು
ಪೇಪರ್ ಕಲರು white-u
white background night-out nigth-out
night-out color-u black-u

ಯಾಕೆ ಈಗ್ಲೆ ವರಿ ಈಗ್ಲೆ ವರಿ, ಸುಮ್ನೆ ಎಕ್ಸಾಮ್ ಬರಿ

ವೈಟು ಪೇಪರ್ ಮೇಲ್ಕಪ್ಪು ಕ್ವಶನ್ನು
setter heart-u black-u
eyes-u eyes-u meet-u meet-u
my future dark

ಯಾಕೆ ಈಗ್ಲೆ ವರಿ ಈಗ್ಲೆ ವರಿ, ಸುಮ್ನೆ ಎಕ್ಸಾಮ್ ಬರಿ

ಝೆರಾಕ್ಸು ಕೈಲಿ ಎತ್ತಕೊ
ಮತ್ತೊಂದ್ರಲ್ ತಿನ್ನೋಕೆ ಹುಡುಕು
ಪ ಪ ಪಾಮ್ ಪ ಪ ಪಾಮ್ ಪ ಪ ಪಾ ಪ ಪ ಪಾಮ್
ಸರಿಯಾ ಮಚ್ಚಿ
ಸೂಪರ್ ಮಚಾ ರೆಡಿ
ರೆಡಿ 1 2 3 4

ವಾವ್ ಎಂಥಾ ಚೇಂಜ್ ಮಗಾ
ಓಕೆ ಮಗಾ, ಈಗ್ ಟ್ಯೂನ್ ಚೇಂಜ್

ಕೈಲಿ ಲೇಖ್ನಿ
only ಮಿಕ್ಸು..

ಕೈಲಿ ಪೆನ್ನು
ಪೆನ್ನಲ್ಲಿ ಇಂಕು
ಕಣ್ಣ ತುಂಬಾ ಫಿಗರು
ಖಾಲಿ ಪೇಪರ್
ಟೈಮಾಗ್ತಾ ಬಂದ್ರೆ
ಮತ್ತೆ ರಿವರ್ಸು ಗೇರು
ಉತ್ರ ಉತ್ರ
ಓ ನನ್ನುತ್ರ
you showed me bouv-u
cow-u cow-u holi cow-u
i want u here now-u
god i m dying now-u
she is happy how-u

this song for exam boys-u
we dont have choice-u

ಯಾಕ್ ಮಗ ಕೊಲವರಿ ಸುಮ್ಕೆ ನೀ ಎಕ್ಸಾಂ ಬರಿ
flop song

ಮೊಬೈಲು

ನೆಟ್ವರ್ಕು ಇಲ್ದಿದ್ರೆ ಕಷ್ಟಾ ಸಿವಾ
ಮೆಸ್ಸೇಜು ತಲುಪಲ್ಲ ಒಂದೇ ಸಲ
ಕಳಕಳಿಸಿ ಫೇಲಾಯ್ತು ಬಿಡದೇ ಛಲ
ತಟ್ ನೆಟ್ವರ್ಕ್ ಬೈದ್ರೆ ಈಗೇನ್ಪಲ?|

ಇಂದಿನ ಕಾರ್ಯಕ್ಕೆ ನಾಳೆ ಹೋಗಿದೆ ವಿಶ್ಶು
ಹಾಕ್ಸಿದ ದುಡ್ಗೆಲ್ಲ ಬ್ಲೇಡು ಎಲ್ಲೋ ಮಿಸ್ಸು
ಯಾವುದೋ ಸ್ಕೀಮೆಸ್ರು ನಾಮ ಸಿವಾ
ನಂದೊಂದು ಶುರು ಮಾಡ್ಲ ಒಂದೇ ಸಲ|

ಆ ಕೈಲಿ ಒಂದ್ಸೆಲ್ಲು ಈ ಕೈಲಿ ಮತ್ತೊಂದು
ಎರಡ್ರಲ್ಲು ನಿಲ್ಲಾಗಿ ಹೋಗಿದೆ ಬ್ಯಾಲೆನ್ಸು
ಸಿಗ್ನಲ್ಲು ಎಲ್ಲೈತೆ ಹುಡುಕೋ ಸಿವಾ
ಟವರತ್ತಿ ಕೂತ್ಬಿಡ್ಲ ಒಂದೇ ಸಲ ! |

God sees u

Some believe the existence of God and call him by different names. Some believe god is not outside , he is inside ourselves. Some consider many eternal forces which bind us together call it gravity, oxygen , air, water or any other thing as god. Some doesn't believe in any such things considering man as the creator of his own destiny. Title may seem hurting the feelings of atheits. But actually it doesn't. In fact , it has nothing to do with them. Wondering how ? Read below.

Some time back, i was in the sports city of the country.. ya, some got it correct, its meerut. As the name indicates sports goods are cheap there. Its also known as place where Sepoy Mutiny of 1857 started. Coming back to the title topic, I was visiting that city and decided to visit the Dogra temple there. Its good temple and built and maintained by Army people. Before moving further a salute to their contribution and sacrifices to the nation. Outside there was a board hanging that photography is prohibited. But I had purchased the mobile with the cam recently and may be in that enthusiasm didn't read that board properly. When we entered the temple premises, there were no one to check for people taking photos etc(as i thought). some workers were busy in their work and 2 officers(i think so ) were supervising their work .But they were in their track suit. I looked all sides and when i was about to capture a photo a man appeared from nowhere seizing my mobile !!!. He was shouting wat I was doing. I tried to convince him that we are not taking the picture but actually viewing  a message which just came in. But he didn't agree. And finally I succeeded to convince him that i would delete all the photos( didn't take photos of that temple yet, though) taken on that eve and to swith off my mobile til i exit from the temple. Finally he agreed. Thank God, I was saved by a wisker. Inner Instinct was always warning me about that wrong intenntion.  Can call it god or simply instinct, someone was watching and warning from inside .. That was for sure.  

Next Incident happened recently. I visited Jaganmohana Palace or Art Gallery in Mysore. There in the entrance guard asked whether i have bought camera. I said no, as actually i was not having any digital or photograpic film cam. My instinct always urged me to ask whether i can take snaps from the cell or not. But somehow i suppressed that feeling. It also kept me warning. If i take snaps from there and upload it in any social site, it can reach any wrong hand where it may be mis used. But urge of taking a snap couldn't be controlled when i saw a french Clock. It was having soldiers, drummer etc. Drummer rises hand for each second, soldiers make movement for each 3/4 minute. They amrch for every 3/4 hour. etc was the setting. But there was some kind of luminicence on it. So when i pulled out my mobile to take a snap again a guard from no where appeared and seixed my cell. May be he would have used harsh words, but I apolyzed that I didn't saw the board for non use of mobiles(which was in entrance top left corner, saying that guard said only about camera). He told to delete the photo/s I had taken earlier. How come ? that statue was only 5-6 image i saw in that gallery and was the first where i dared to take cel out in an attempt to capture. I recieved the cell from them and deleted the attempt i made. and switched off the cell and deposited in the safety counter there and went on to see rest of the gallery. Again I made mistake thinking that no one is watching me as i could not see any CC tv camera overhead . how stupid :D

I really enjoyed the musuem. Asked about many things i didn't understand from the guards. Wished i had a pen and paper before visiting the musuem. But later recalled that Eyes are the best camera ever and mind is the best storage. And there is always some one who is watching you. call it conciousness or instinct or God or whatever apart from physical things around you.  Later when i came out, I asked some querries to the person(may be incharge) at the counter which could not be answered by guards inside. He happily answered the question and by the time may be relieved that actually my attempt was by stupidity rather than intensional. Still asked how many photos u have taken sir ? Dramatic change from singular tone to respectful one surprised me. Still, that may be because i started to respect the instinct. Ofcourse, respect is give and take policy right ? I said the actual thing what happened and said i can show him the entire folder where recent images are stored after captured. He said thats not necessary and smilingly wished me happy journey.

Next I went to See famous mysore palace. There was also a board for prohibition of photography from inside. I asked the police men "can i take the cel inside or not". He said, u can take and use it. But instinct said its not right to expose the hidden things to unintiated ones(as said in Dan Brown's novel "Lost Symbol" ). So I switched off the cell. In the checking counter again they were asking whether i had camera. I said no. If i had, then i had to deposit in the free counters before i enter. Some said they don't have and somehow escaped. I wondered how high school girls can bring such digi cams inside. They were capturing the photos , some guys from the mobile cams. I thought , they are not using social sites as of now, thank god. Some rich fellows were taking snaps from their high end cells, even foreigners are not left behind taking snaps infront of police men itself (although they had deposited theier digi cam obeying the rules, now taking the snaps using high end cells/smart phones. Whats the difference ? !!)

I again wondered is there no one watching? My instinct refused to take snaps saying its not right. In the dilema i entered each room capturing as much i can not in my camera, but my eyes and mind :-) . It so happened that in one room, suddenly a police rushed from outside and took cameras of the couple who were taking snaps infront of me. They were arguing they didn't take. But bringing cam inside itself was wrong. There was heating debate going  on between them to delete the photos etc. I didn't bother to listen that and moved ahead happy to realise that someone is always watching.

Later that night i watched a kannada play called "Bedara Kannappa" . There comes a character of a priest who thinks god is simply a stone and no one wathches the wrong things he does. But his son kashi believes god is every where and wathches all things. There is similar story of a Guru and his Deciples. The story goes as below. Once the guru gave his deciples one banana each and told them to eat in the place where nobody sees. one eat that behind the door. Other ate that in the black shadows , one more ate that in the darkest of the rooms. But one deciples returned with banana in hand. On being asked by the guru, why is that so, he said, "Oh, Dear Guru, I found the god watching me in all places i went. So even if no one is wathcing me , god is watching me. So I couldn't eat it. " . Faces of all other deciples went down in shame and this deciple has won the test of Guru. There may be plenty of tales like this. Before i finish I want tojustify the title saying that God is always seeing you. U call it God, instinct, Conciousness whaterever .. there is surely some one who will be watching you in your both good,bad acts. But ears must be opened to hear that inner voice and act accordingly.

Tuesday, December 20, 2011

ಕುಡಿತ

ಹಗಲಲೂ ಕತ್ತಲು ಸೂರ್ಯ ಮುಚ್ಚಿ
ಹೊಗೆಯುಗುಳೊ ಬೀಡಿ, ಸಾರಾಯಿ ಬಾಯಿ
ಓದೋ ಕಂಗಳು ಹುಡುಕುತ್ತ ಕೊಳಕು
ಮೂಲೆ ಕ್ಯಾಂಟೀನಲ್ಲಿ ಅಪ್ಪನ ಸಾಲಕ್ಕೆ |೧|

ಕೆತ್ತದ ಗಡ್ಡ ಜೇನುಗೂಡು ಬುದ್ಧಿ
ಬಳಸದೇ ಹಳಸಿ ಸೆಳೆದು ನೊಣ
ಆ ಪಾದ ಸೇರಿ ಸತಿ, ಮಾರಿ ಮನೆ
ಇದ್ದೊಬ್ಬ ಮಗನೂ ಜೀತದಾಳು|೨|

ತುಟಿ ಒಣಗಿ ಕಾಯುತಿದೆ ವಿಷ
ಅರಿತೂ ತಡೆಯದೇ ಸೆಳೆತ ಅತ್ತ
ಎಂದೋ ಬತ್ತಿವೆ ಶಾಪ, ಕಣ್ಣೀರು
ಮೊದಲ ಗುಟುಕಲೇ ಸತ್ತಿಹನು ಮುಗ್ದ|೩|

ನಿನ್ನ ಆಲಿಂಗನ ಮೊದಲ ಗುಟುಕು
ಕಹಿಯಲ್ಲಿ ಮರೆಯಲು ಬಾಳ ನೋವ
ನೆಪವೇ ಅಂಟಾಗಿ ಜೀವಜಡೆ ಸಿಕ್ಕಾಗಿ
ಜೀವ ಕಾದಿದೆ ಇಂದು ತುಳಸಿ ಗುಟುಕು|೪|

ಎಲ್ಲಿಲ್ಲ ಸೋಲು? ಅರಿ ಮರೆಯ ಗೆಲುವು
ಇಷ್ಟವಾದರೂ ಬೇಡ ಜೀವ ತೀರ್ಥ
ಪುಗಸಟ್ಟೆ ಕೊಟ್ಟರೂ ಕೊಲ್ಲು ಆ ಕೊರಮನ
ಮತ್ತೆ ಮೂಡಲಿ ಆ ಆರೋಗ್ಯ ಸೂರ್ಯ

Monday, December 19, 2011

ಶಂಭೋ ಶಿವಶಂಭೋ

ಅಂಗವ ತೆಗೆಯಲು ಬಾಂಬನು ಸಿಡಿಸಿ
ದೇಶವ ಒಡೆಯಲು ಧರ್ಮವ ಬೆಳೆಸಿ
ಮಹಾಪಾಪಿಗಳ ಗದ್ದುಗೆ ಏರಿಸಿ
ಸುಮ್ಮನೆ ಚೆಂದವ ನೋಡಿಹೆ ಸರಿಯೆ
ಶಂಭೋ , ಶಿವಶಂಭೋ..,ಶಿವಶಿವ ಶಂಭೋ|

ಬಾರೋ ಕಾಲದ  ಶೃಂಕಲೆ ಕಳೆದು
ಸೋಲನು ಸಾಯಿಸಿ ಜಯವನು ಸೆಳೆದು
ಆಗದು ಎನ್ನುವ ಭಾವವ ಬಡಿದು
ಶಂಭೋ, ಶಿವಶಂಭೋ|

ದಾಷ್ಟ್ರ್ಯದ ಬದಲಿಗೆ ಗೌರವ ತಂದು
ರಾಷ್ಟ್ರಕೆ ತುಡಿಯುವ ಭಾವವ ಇಂದು
ಬೆರೆಸೋ ರಕ್ತದಿ ಸ್ವಾರ್ಥವ ತೆಗೆದು
ಶಂಭೋ , ಶಿವಶಂಭೋ|

ಗಡಿಯಲಿ ಕಾದುವ ಸೈನಿಕನಂತೆ
ರೋಗವ ಕೊಲ್ಲುವ ವೈದ್ಯನ ಬಳಿಗೂ
ಮೌಡ್ಯವ ತೊಡೆಯುವ ಮಾಸ್ತರವರೆಗೂ
ಎಲ್ಲೆಡೆ ಮೂಡಲಿ ದೇಶಪ್ರೇಮವು
ಶಂಭೋ ಶಿವಶಂಭೋ..,ಶಿವಶಿವ ಶಂಭೋ|

ನೆನಪು

ಸಮಯ ಸವೆದರೂ
ಮಂಜಾಗದೆ ಅದು
ಮುಂಜಾವಿನ ಸವಿ ರವಿಯಂತೆ
ಮರಳಿ ಮಳೆಯಾಗಿ
ನೆನಪ ನೀರನ್ನು
ಹನಿದು ತೋಯಿಸದ ಹನಿಯಂತೆ|೧|

ಇರದ ಶಕ್ತಿ, ಹೊಸ ಸ್ಪೂರ್ತಿ
ಹುಡುಕಿ ಹೊರಗೆಲ್ಲೊ ನೀತಿ
ಸಿಗದೆ ಈ ಹತ್ತಿಯದೇ ದಾರ
ಮರ್ಯಾದೆಗೆ ನೂಲೊಂದು ವಸ್ತ್ರ |೨|

ಅರ್ಥದ ಬೆಲೆಯನು ಅರ್ಥೈಸದ ಅದು
ಹುಡುಕಿ ಹಳೆ ಬಯಲು, ಮಳೆ, ಕೆಸರು
ಮೊಳೆ ಮುರಿದ ಬುಗುರಿ, ಒಡೆದ ಗೋಲಿ
-ಗಳೆ ಒಳ್ಳೆಯದೆನ್ನುತ ಬರಸೆಳೆದು|೩|

ಜೀವ ಸಾಗರದಿ ತೊಡೆಯ ದಡ ಬಿಟ್ಟು
ಥೈಲಿಯ ಆಸೆಗೆ, ತಡೆಯದ ಹಸಿವಿಗೆ
ಕಾಲಗಾಳಿಯಲಿ ದಿಸೆ ಕಳೆದ ನಾವೆ
ನೆನಪ ಸೂಚಿಯಲಿ ದಿಕ್ಕನು ಕಾಣುತ
ಸಾಗಿದೆ ಕಾಣದ ತೀರದೆಡೆ|೪|

Sunday, December 11, 2011

Some Things I hate with email providers


Rediffmail:

spams:
Here some spams or offer mails are marked with red colour. But they arrive directly to your Inbox! instead of going to Junk Mail Folder. Of course Junk mail folder is having plenty of spams which are ones which are marked spams by u. only relief is they provide option for blocking a sender along with selecting that kind of mail as spam.

No Indication of spams
Plenty of fake mails like UK lottery, UNO money,Microsoft offer, Mail from Africa etc arrive frequently asking for information like Credit Card details etc. I always wonder how these cheters get my rediff id?

Problem in recovering old mails
I had a picture mailed to my rediff ID somewhat 5 years ago. Have stored it there only in inbox. WIth curiocity i tried to retrive those files from rediffmail. I could search/reach that file. But when i tried to open the file I was getting "Our Servers are facing problems in retrieving mail. Please try again later". Tried at differrent times thrice later. But same thing happened. So I gave up that effort

Mobile Version(Rediffmail NG)
These are the problems with using the rediffmail.com using mobile
1)When u type www.rediffmail.com instead of getting a place for entering mail id n password it takes to rediff.com screen. Have to Select mail option again there. If 1 wanted to select rediff.com he/she would have typed rediff.com itself directly. What's the  purpose in typing rediff.com and again selecting mail option which redirects to other screen ?
2) Sometimes it shows "You have no mails to show or Inbox is Empty" !!! You have to come back and visit that page again sometimes until it shows the mails in your Inbox.. I am not saying it happens always. But happens ..

Gmail
Absence of Select All Option while Deleting
Gmail shows 50 emails by default in its inbox at once. But when u are added to any group in social sites like fb and it has settings enabled for sending you messages whenever any user posts in that group.. It so happened that my crated a new gmail id and soon she was added to one such group in fb. She didn't check here mail for 2 months.. after that she was having 2000 mails from that group !!!

OMG. Then how to delete them? Gmail was not providing select all option. If it provided 50 messages could be deleted at once. That means selecting "select all and delete" 40 Times!. But its far better than selecting each one of 50 messages and then finally selecting Delete.. . .Horrible..

Yahoo
yahoo Group
Wanted to join yahoo Group. For that obviously u need to have a yahoo id. But somewhere got the option that 1 can use his gmail id.. then But email verification and password selection for that id etc are same as that of any sign up. Got Id and password. It said successful . After that went to that group agai using newly created ID. Then again it wont allows to join saying that u have to create a user name etc before coming. But that is created early by going to yahoo home.. .If there is problems like this Y they allow using gmail ?

Saturday, December 10, 2011

ಚಂದ್ರಗ್ರಹಣ

ಸ್ವಲ್ಪ ಹೊತ್ತಿಗೇ ಬಿಟ್ಟು ಬಿಡುವುದು
ಯಾಮಿನೀಪತಿಯ ಮರೆ, ಗ್ರಹಣ
ಎಂದು ಬಿಡುವುದೋ ಭೂಮಿಭಾರರ
ನೊಣದಂತಹ ಅದೆ ಕೊಳೆ ಭ್ರಮಣ

ಬಿಟ್ಟೆವೆಂದರೂ ಬಿಡದ ಲಾಲಸೆ
ಅವನ ಕಾಲೆಳಿ, ಅಲ್ಲಿ ಬಡಿ
ಹೊಡೆದು ಕೊಚ್ಚುವ, ತಿನ್ನೊ ಭಾವವು
ನಮಗೆ ಮುಚ್ಚಿಹೀ ಪರದೆ ಎತ್ತಣ

ಬಡವನೊಬ್ಬನು ಬೆಳೆದನೆಂದರೆ
ಎಂತ ಮೋಸ,ಹುಡುಕೆಲ್ಲ ದೋಷ
ಕಣ್ಣ ನೀರನೂ ಬತ್ತಿ ರೋಷಕೆ
ಅವನು ಕನಸಲೂ ಇಲ್ಲಿ ಬಾರ

ಚಿತ್ತಚಾಂಚಲ್ಯ ರೋಹಿಣಿಯೇ ?
ಅವಳ ಪತಿಗೀಗ ಮರೆಯ ಸ್ಥಿತಿ
ಹಲವು ಮಿಥ್ಯಗಳು ಮೋಡದಂತೆ
ಸತ್ಯವ ಕಣ್ಣಿಗೆ ತೋರದಂತೆ
ಸೊಬಗ ಚಂದಿರಗೆ ಗ್ರಹಣ
ಎಂದೀ ಭ್ರಮೆಗಳ ಹರಣ ?

Friday, December 9, 2011

ಹೀಗೊಂದು ನೆನಪು

ಓರೆ ನೋಟದಲಿ ನೋಡಿ ನಕ್ಕವಳೆ
ಮತ್ತೆ ಕಾಡುತಾಳೋ
ದೂರ ಏಕಿರುವೆ ಸನಿಹ ಬಾರೆಂದು
ಮೆತ್ತ ಕರೆಯುತಾಳೋ|೧|

ಒಂದೆ ನೋಟಕೆ ಮಿಂಚಿನಂದದಿ
ಒಳಗೆ ಹೊಕ್ಕೆ ಚೆಲುವೆ
ಪ್ರೇಮವೆಂಬ  ರಸ ಎಷ್ಟು ಹರಿಯಿತೊ
ಅರಿಯದಾದೆ ಒಲವೆ|೨|

ತಡೆಯದಾ ಕಾಲ ಯಮನ ಗಡಿಯಾರ
ನೀನೆ ಬೇಕೆ ಅದಕೆ?
ಹಮ್ಮು ಬಿಮ್ಮುಗಳ ಬಿಟ್ಟು ನಗುತಿದ್ದ
ಪ್ರಿಯೆಯೆ ನೀನೆ ಬೇಕೆ?|೩|

ತಡೆಯೊ ಮನವೆ ಇದೆ ನಿನಗೆ ಕೊನೆಯಲ್ಲ
ಇನ್ನೂ ಕಾಲವುಂಟು
ಮನೆಯು ಕಾದಿಹುದು ಮದುವೆ ಅಗುಳಿಗೆ
ಇಹುದು ಹಲವು ಗಂಟು|೪|

Thursday, December 8, 2011

ಗಂಗಾವತರಣ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)..

ಹರಿಯ ಪಾದವ ತೊಳೆವ ಗಂಗೆಯ
ಧರೆಗೆ ಇಳಿಸಲು ನೃಪನು ಬೇಡಲು
ಭರವ ತಾಳಲು ಹರನ ಕೇಳಲು ಹೇಳಿದಾ ಬ್ರಹ್ಮಾ|
ಹರನ ಭಜಿಸಲು ಅವನ ಪೂಜಿಸಿ
ಶಿರಕೆ ಧುಮುಕಲು ಗಂಗೆ ಜಂಬದಿ
ಹೊರಗೆ ಬಾರದೆ ಅಲ್ಲೆ ಸಿಲುಕಲು ಮತ್ತೆ ಬೇಡಿದನೋ|೧|

ಇಳೆಗೆ ಇಳಿಸಲು ಹರಸಿ ಪರಶಿವ
ಹಲವು ಧಾರೆಗಳಾಗಿ ಒಡೆದಳು
ತೊಳೆವ ಬದಲಿಗೆ ಜಹ್ನು ಆಶ್ರಮ ಕೊಚ್ಚಿ ಒಯ್ದಿಹಳೋ|
ಎಲೇ ಸೊಕ್ಕೇ ಎಂದು ಅವಳನು
ಬಲಿಯ ಪಡೆದನು ಮುನಿಯು ಮುನಿಯುತ
ಹಲವು ಋಷಿಗಳು ನೃಪನು ಬೇಡಲು ಹರಿಸಿ ಕಿವಿಯಿಂದಾ|೨|

ಸ್ನಾನ ಮಾತ್ರದಿ ಪಾಪ ಕಳೆವಳು
ಮೌನದಿಂದಲೆ  ಇಳೆಗೆ ಇಳಿದಳೊ
ಮಾನವನ ಈ ಶ್ರಮದ ಗೆಲುವಿಗೆ ಮತ್ತೆ ಮೆಚ್ಚುತಲೀ|
ಪ್ರಾಣತೊರೆದಿಹ ಪಿತರ ಭಸ್ಮವ
ಲೀನವಾಗಿಸಿ ಮೋಕ್ಷವಿತ್ತಳು
ತನ್ನ ಧ್ಯೇಯವ ಬಿಡದೆ ನಡೆದಿಹ ಧನ್ಯ ತಾ ನರನೋ|೩|

(ಮೊದಲ ಸಲ ಬರೆದಾಗ ಆದಿ ಪ್ರಾಸ ತಪ್ಪಿದ್ದಾಗ ತಿದ್ದಿದ ಕಿರಣಣ್ಣ, ಹರೀಶಣ್ಣರ ತಿದ್ದುಪಡಿಗಳನ್ನು ಕೆಳಗೆ ಹಾಕಿದ್ದೇನೆ.. ಇನ್ನೂ ಓದುವ/ಬರೆವ ಪ್ರಯತ್ನದಲ್ಲಿ )
ಚಿತ್ರಕೃಪೆ: Divinebrahmanda.com

ಜೀವನ ಜೀವ ನಾ

ಎಲ್ಲೋ ಹುಡುಕಲಿ ಕಳೆದಿರುವೆ ಜೀವ ನೀ
ಹುಡುಕೀತೆ ನೀರಲ್ಲಿ ಈ ಕಂಬನಿ?
ಗಾಳಿಯನೆ ತಡಕುವೆಯ ಬಿಸಿಯುಸಿರೆ ನೀ
ಭೂಮಿಯನೆ ಬಗೆಯಲೇ ಎಲ್ಲೋದೆ ನೀ?|೧|

ಮರವನ್ನ, ನರನನ್ನ ಎಲ್ಲ ಬರಸೆಳೆದೊಮ್ಮೆ
ಯೌವನವ ಎಳಕಿಸಿ ಸಿಪ್ಪೆಯಂತೆ
ಕಿತ್ತೆಸೆದು ನಗುತಿರುವೆ ಯಮನ ದೂತನೆ ನೀನು
ಮುಪ್ಪೆಂಬ ರೂಪದಲಿ ಸಪ್ಪೆಯಾಗಿ|೨|

ವ್ರತಭೀಷ್ಮನನೆ ಕಾಡಿ ಶರದ ಹಾಸಿಗೆಯಂತೆ
ಹಿಂಡಿ ಹಿಪ್ಪೆಯ ಮಾಡಿ ಜೀವವನ್ನೇ
ಮಗನನ್ನೊ ಮಗಳನ್ನೊ ಇನ್ಯಾರ ಬೇಡಲಿ
ತುತ್ತು ಅನ್ನವ ನೀಡು ಜೀವಕೆಂದು
ಮುಂಜಾನೆ ನಾ ನೆಟ್ಟ ಗಿಡವೆಲ್ಲಾ ಮುಳ್ಳಾಗಿ
ನೆರಳು ನೀಡದೆ ಇಂದು ತೊರೆದವೆಂದು|೩|

ಇದ್ದಕಿದ್ದೊಡೆ ಯಾಕೆ ತಣಿದೆಯೋ ಓ ದೇಹ
ಕರೆದೆಯ ಓ ಯಮನೆ ಬಾರೊ ಎಂದು
ಯಾಕೀ ತಂಗಾಳಿ ಚಾಮರವ ನುಡಿದಂತೆ
ಪಕ್ಕದಲೆ ಹಣ್ಣುಗಳು ಕನಸಿನಂತೆ !! |೪|

ಆನೆ ನಿಂತಿಹುದಲ್ಲೋ ನೆರಳಾಗಿ ಹಿಂದೆಯೇ
ಅದರ ಮೇಲಿಹ ಒಬ್ಬ ಕರಿಮೊಗದವ
ಕೆಳಗಿಳಿದು ಅಲ್ಲಿಂದ ಕಾಲಿಗೆರಗಿದನಲ್ಲೋ
ನಾನಿತ್ತ ತುತ್ತೊಂದ ನೆನಪಿಟ್ಟವ
ಇಂದವನೆ ಜೀವವನು ಕಾಪಿಟ್ಟವ|೫

ಬೇಸರ

ಬೇಸರವೆ ಬೇಸರಿಸಿ ಹೊಡೆದಾಕಿ ಬೇಸರವ
ಮನದಿ ಉದಯಿಸಿತೊಂದು ನೇಸರನ ಕಿರಣ
ಎಲ್ಲ ಸುಡು,ತಿನ್ನೆಂಬ ಸ್ವಾರ್ಥಾಗ್ನಿ ತಣಿಸಲು
ಮೂಡಿದನೆ ತಾಳ್ಮೆಯ ಮಳೆಯಾಗಿ ವರುಣ|೧|

ಮೋಸ, ದ್ವೇಷ, ಹುಡುಕಿದರೆ
ಹಲದೋಷ ಸರಿಯೆಲ್ಲಿದೆ?
ಬುನಾದಿ ಸರಿಪಡಿಸೊ
ಸಮಯವೇ ಹೆಚ್ಚಾದ್ರೆ
ಮನೆ ಕಟ್ಟಿ ಗುಣನೀಡೋ ಸ್ಥಿತಿಯೆಲ್ಲಿದೆ?|೨|

ನೂರು ಮಾರಿಗಳಂತೆ ದಾರಿಹೋಕರು
ಕಂಡು ಅವಿತಿಟ್ಟ ಭೂತ ಕನ್ನಡಿ ಕಣ್ಣಿಗೆ
ಎಲ್ಲರಲೂ ಸದ್ಗುಣವೆ ಹುಡುಕಿ ಹೊರಡೆವೆನೆನ್ನು
ಬಾಳೆ ಸಕ್ಕರೆಯಂತೆ ಮುತ್ತುವವು ಯಶದಿರುವೆ|೩|

Wednesday, December 7, 2011

ಇದೂ ಕಳೆವುದು

("Thomas Bailey Aldrich" ಅವರ "Even This Will Pass Away" ಯ ಕನ್ನಡಾನುವಾದದ ಒಂದು ಪ್ರಯತ್ನ..)

ಮನಮುಟ್ಟಿದ ವಸಂತದ ಹಸಿ ಚಿಗುರು
ನಂತರದಿ ಮೊಗವೆತ್ತಿಹ ಚೆಂಗುಲಾಬಿ
ನಕ್ಷತ್ರಗಳ ನಭದಿ ಮಿಂಚಿಹ ಜೋತಂತಿಹ ಭೂಮಿ
ನಿನ್ನೆಯಷ್ಟೇ ಸಿಕ್ಕ ಹೊಸ ಮುತ್ತಿನಂತೆ.
ಆದರೂ ಹಳತಿದು ನಾಲಿಗೆಯು ನುಡಿವಂತೆ
ವಯಸ್ಸೆಷ್ಟು? ಕುಲಕುಲಗಳೇ ಗತಿಸಿ
ಮರೆತು ಮರೆತೋಗಿ; ತಮ್ಮ ಸ್ಥಳದಿ
ಗೋಪುರ ಮಂದಿರಗಳು ಮುಳುಗಿ; ಎಲ್ಲ ಅಲ್ಪಾಯು
ಗೋರಿಯ ಮೇಲೆ ಕಟ್ಟಿ ದಿನ ಕಳೆದು ಸಾಯುವೆವು
ನಮ್ಮ ಧೂಳಲೆ ಹೊಸ ಗೋಪುರ, ಮಂದಿರದುದಯ
ನಮ್ಮ ಹೆಸರೇ ವಿಸ್ಮಯವಾಗಿ.
ಹೆಸರೇ ಕೇಳದ ಪಟ್ಟಗಳಿತ್ತೆಂದು
ಹಿಮನದಿಯ ಕೆಳಗೆ, ಪರ್ವತದ ಎದೆಗೆ
ಶೋಕಸಾಗರದ ಕಡುನೀಲಿ ಕತ್ತಲಲ್ಲಿ.

ಮೂಲ ಕವನ:    Even This Will Pass Away


 Touched with the delicate green of early May,
Or later, when the rose uplifts her face,
The world hangs glittering in starry space,
Fresh as a jewel found but yesterday.
And yet 'tis very old; what tongue may say
How old it is? Race follows upon race,
Forgetting and forgotten; in their place
Sink tower and temple; nothing long may stay.
We build on tombs, and live our day, and die;
From out our dust new towers and temples start;
Our very name becomes a mystery.
What cities no man ever heard of lie
Under the glacier, in the mountain's heart,
In violet glooms beneath the moaning sea!


Thomas Bailey Aldric

Monday, December 5, 2011

ವೈಫಲ್ಯ

ಚೂರೇ ಬರೆದೆ ಹೊಳೆಯದಂತೆ
ಪ್ರೀತಿಯ ನೆನಪುಗಳು ಮತ್ತೆ
ಮನದ ಮರಳೊಳಗೆ ಇಳಿದು
ಕನಸಗೋಪುರ ಕೊಚ್ಚಿ ಓಡದಂತೆ
ಸುಂದರ ಇಂದಿನ ಮೇಲೆ
ನಿನ್ನೆಯ ನೆನಪಿನ ಬರೆ ಬೀಳದಂತೆ|೧|

ಮುಳುಗುತಿಹ ಶಶಿಯೊಡನೆ
ಚೆಲ್ಲಾಟವೇ ಪ್ರಿಯೇ ಯಾರು ಚಂದ?
ಕ್ಷಯ, ವೃದ್ಧಿಗಳೆ ಇರದ ದಂತದಂತೆ
ಕಬ್ಬಿಣವ ಬರಸೆಳೆವ ಕಾಂತದಂತೆ
ನಗುವೆ ಬೀರದ ನೀನು ವಕ್ರದಂತೆ ?!! |೨|

ನನಗೋ ಹಗಲಿಗಿದೆ ಕೆಲಸ,ಚಿಂತೆ
ನಿನ್ನಿಂದೆ ಮರುಳಾದೆ ಅಣ್ಣನಂತೆ !
ಅವನಿಗೂ ದ್ರೋಹ, ನನ್ಯಾಕೆ ಹಿಡಿದೆ?
ಓ ಚೆಲುವೆ, ನಗುಬೀರೋ ವೈಫಲ್ಯವೇ?
ಬೆನ್ನ ತಿರುಗಿಸಿ ನೋಡೆ ಮತ್ತೆ ನಗುವೆ|೩|

ಮಾತು

ಆಡಿ ಒಡೆಯೋ ವಸ್ತು
ಇಲ್ಲದಿದ್ದಾಗ ಅರ್ಥ
ಅನಿವಾರ್ಯದ ಮಳೆಗೆ
ಹೊರತಂದ ಛತ್ರಿ ಮಾತು|1|


ಕಿವಿ ತೆಗೆಯೋ ಸಿಡಿಲಿನಂತೆ
ಕಣ್ಣ, ಜೀವ ತೆಗೆದು ಮಿಂಚು
ಬೆಳಕಿದ್ದರೂ ಬೇಡವಾಗಿ
ಬದುಕುವ ಶಾಪ ಮಾತು||

ಬೀಸಿದ ಗಾಳಿ ನುಂಗಿತೇ
ತರಗೆಲೆ ಸಪ್ಪಳ ಹೆಚ್ಚೇ
ಪ್ರಶಾಂತ ಉದ್ಯಾನದಲ್ಲೂ
ಕಾಲ ಕೇಳದ ಉಸಿರು ಮಾತು||

ಆನೆಯನೆ ಅಶ್ವತ್ಥಾಮನೆಂದು
ನಂಬಿಸಿ ಶಸ್ತ್ರತ್ಯಜಿಸಿ,ದಿಕ್ಕುಬದಲಿಸಿ
ಸುಳ್ಳಿಲ್ಲದ ಬಾಯ ಸತ್ಯದಂತೆ
ಕಂಡ ಮೌನ ಮಾತು||

ಶತಮಾನದ ದೌರ್ಜನ್ಯ
ಪ್ರತೀಕಾರದ ಹೆಸರ ಬೆಂಕಿ
ಹಲತರದ ತುಳಿತಕೂ ತೆರೆಯದ
ಹೊಲಿದ ಬಾಯ ಬಿಸಿ, ಅರಳಿದ
ಮೂಗ ಹೊಳ್ಳೆಗಳು ಮಾತು||

ಮರಳದ್ದು

ಅನ್ಯಾಯ ಕಾಯೋ ಕಳ್ಳ
ಕೆಂಪುದೀಪದ ಹಿಂದೆ
ಇದ್ದರದೇ ಭಾಗ್ಯ
ಹೊಂಚಿದ್ದು ಮರಳದ್ದನ್ನು||

ಸಾಗಿದೆ ಬಸ್ಸು ಚಾಲಕ ನಿದ್ರೆಗೆ
ಗುರಿಯಿಲ್ಲದೆ ವೇಗದಲ್ಲಿ
ಮಲಗಿರುವ ಜೀವ ನೆಲದಲ್ಲೇ
ಸೇರಿತು ಮರಳದ್ದನ್ನ |೨|

ಸಿಟ್ಟೋ, ಚಟವೋ , ಆಕೆಯೋ
ಮದಿರೆಯ ಕೈಗೆ ಗಾಡಿ
ಸರಿಯಿದ್ದೂ ಎದುರಿಗೆ ಬಂದವ
ಸಾಥಿಯಾದ ಮರಳದ್ದಕ್ಕೆ|೩|

ವಿವೇಕಕ್ಕೆ ಬೇಡ ಕಣ್ಣಿಗೆ
ಮೋಹ ಅಂಟಿದ್ದು ಮೇಣದಂತೆ
ಗೊತ್ತಾಗದಿರೂ ಬಯ್ಯುತಿದೆ
ಮನ ಮತ್ತೆ ಮರಳದ್ದಕ್ಕೆ|೪|

Saturday, December 3, 2011

ಮೆಸೇಜೆಂಬ ಅಂಚೆ

ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. "ಮೆಸೇಜೆಂಬ ಅಂಚೆ" .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. ಸಂದೇಶ ಹಾಕದು ಜಂಗಮದಾಗೆ, ಅಂಚೆ ಹಾಕದು ಡಬ್ದಾಗೆ. ಅದುಕ್ಕೂ ಇದುಕ್ಕೂ ಎಂತ ಸಂಬಂಧ ಗುಂಡು ಅಂದ್ಲು ಸರಿತಾ. ಹೌದು ಕಣ್ಲಾ, ಏನೂ ತಿಳ್ಯಾಕಿಲ್ಲ, ನೀನೇ ಬುಡ್ಸಿ ಹೇಳಪಾ ಸಾಯಿತಿ ಅಂತ ಕಾಲೆಳೆದ ತಿಪ್ಪೇಶಿ.

    ಏ ಥೋ, ಸಾಯಿತಿ ಅಲ್ಲೋ , ಸಾಹಿತಿ.. "ಕೋಣಂಗೆ ಕಿನ್ನರಿ ನಾದನೇ ತಿಳ್ಯಕ್ಕಿಲ್ಲ" ಅಂತ ಹಾಡಕ್ಕೆ ಶುರು ಹಚ್ಕಂಡ ಗುಂಡ..ಎಲ್ಲಾ ನಗಕಿಡಿದ್ರು. ಕದ್ದಿರೋ ಟ್ಯೂನಿಗೆ ಗೊತ್ತಿರೋ ಗಾದೆ ಸೇರ್ಸಿ ಹೊಸ್ಯೋ ಬದ್ಲು ನೀನು ಬರ್ದಿದ್ದಲಿ ಹೊಸದೇನಿದೆ ಹೇಳು ಅಂದ ತಿಪ್ಪ ಸ್ವಲ್ಪ ಬೇಜಾರಾಗಿ. ಮುಂಚೆ ಎಲ್ಲ ಅಂಚೆ ಕಳಿಸ್ತಿದ್ವಿ, ಈಗ ಮೆಸೇಜು ಅಷ್ಟೆಯ ಬೇರೆಲ್ಲಾ ಅಲ್ಲಿದ್ದಿದ್ದೇ ಇಲ್ಲಿ, ಇಲ್ಲಿದ್ದದ್ದೇ ಅಲ್ಲಿ ಅಂದ ಗುಂಡ. ಮಾರ್ರೆ ವೇದಾಂತ ತರ ಹೇಳೋದು ಬಿಟ್ಟು ಸ್ವಲ್ಪ ಬಿಡ್ಸಿ ಹೇಳೂಕಾತ್ತ ? ಅಂದ ಮಂಜ. ಸರಿತಾ, ಇಳಾನೂ ಅದೇ ಸರಿ ಅನ್ನೋ ತರ ಹೂಂ ಅಂದ್ರು..

       ವಿಳಾಸ ಸರಿ ಇದ್ರೂ ಅಂಚೆ ಕಳ್ಸಿದ್ದು ಕಳ್ದೇ ಹೋಗ್ತಿತ್ತು ಕೆಲೋ ಸಲ.ಅದೇ ತರ ಸಂದೇಶಗಳ "ಕಳಿಸುವಿಕೆ ವಿಫಲ" ಎಂಬ Delivery Report ಉ ಅಂದ ಗುಂಡ. ಎಲ್ಲರಿಗೂ ಒಂದ್ಸಲ ಕತ್ಲಲ್ಲಿ ಬಲ್ಬು ಹತ್ಕಂಡಗಾಯ್ತು. ಗುಂಡನ ಮುಖದಲ್ಲಿ ಈಗ ನಗು ಮೂಡಿತು.. ಮುಂದುವರ್ಸಿದ ಹಾಗೆ.ಇನ್ನು ವಿಳಾಸ ಸರಿ ಬರಿದೆ ರಾಮಪ್ಪ, ಬೆಂಗಳೂರು ಅಂತ ಬರ್ಯೋರು..ಮಗ, ರಾಮಪ್ಪ ಅನ್ನೋನು ಬೆಂಗಳೂರಲ್ಲಿದಾನೆ ಅನ್ನೋ ಖುಷೀಲಿ.. ಯಾವ ಬೀದಿ,ಎಷ್ಟನೇ ಮನೆ, ಏರಿಯಾ, ಕೇರಿ ಏನೂ ಇಲ್ಲೇ ಇಲ್ಲ. ಬರ್ದವನುದ್ದು ಪಾಪ ಸಣ್ಣ ಊರು. ಅಲ್ಲಿ ಇದ್ದಿದ್ದೇ ಹತ್ತು ಮನೆ.ಆದ್ರೆ ಬೆಂಗ್ಳೂರು ಹಂಗಾ? ಅದ್ನ ಯಾವ ರಾಮಪ್ಪಂಗೆ ಕೊಡದು. ಮತ್ತೆ ಕಳ್ಸಿದವಂಗೇ ವಾಪಾಸು ಹೋಗೋದು ಅದು. ದಂಡ ಬೇರೆ ಹಾಕೋರು!!! ಆ ಪತ್ರ ಬಿಡಿಸ್ಕಳಕ್ಕೆ ದಂಡ ಕಟ್ಟಿ ಬಿಡಿಸ್ಕೋಬೇಕು.. ಅಷ್ಟೆಲ್ಲಾ ಸುತ್ತಿಸಿದ್ದಕ್ಕೆ !!!

ಹೂಂ ಸರಿ, ಅದು ಹಳೇ ಪುರಾಣ. ಅದು ಇಲ್ಯಾಕೆ ಅಂದ ತಿಪ್ಪ. ಇಲ್ಲಿ ನೀನು ೧೦ ಅಂಕಿ ಹೊಡಿದೇ ಇದ್ರೆ ಅದೇ ಆಗದು. ಆ ಸಂದೇಶ ಮತ್ತೆ ನಿಂಗೇ ವಾಪಾಸ್ ಬರಕಿಲ್ವಾ ಅಂದ್ಳು ಸರಿತಾ.. ಅರ್ಥ ಆಗ್ತಾ ಇದೆ ತಂಗೂವ ಅನ್ನೋ ನಗೆ ಅವಳಿಗೆ.. ಎಲ್ಲಾ ಎಂದು ಚಪ್ಪಾಳೆ ಕೊಟ್ರು ಅವ್ಳಿಗೆ..

        ಅದೇ ತರ ವಿಳಾಸ ತಪ್ಪು ಬರದು ಅಂಚೆ ಯಾರ್ಯಾರಿಗೋ ಹೋಗ್ತಿತ್ತು. ಒಂದೇ ಊರಲ್ಲಿ ಇಬ್ರು ಕಾಳಪ್ಪ ಇದ್ರೆ, ಬರ್ದೋರು ಅವರ ಕುಟುಂಬದ ಹೆಸರನ್ನೋ, Initial ಅನ್ನೋ ಬರೀದಿದ್ರೆ ಅವ್ನಿಗೆ ಬರ್ದಿದ್ದು ಇವನಿಗೆ, ಇವನಿಗೆ ಬರ್ದಿದ್ದು ಅವನಿಗೆ ಎಲ್ಲಾ ಹೋಗ್ತಿತ್ತು. ಹೂಂ ಸರಿ, ಇದ್ರಲ್ಲಿ ಹೆಂಗೆ ಅಂದ ಮಂಜ. ಮೊನ್ನೆ ಇವ್ನ ಗೆಣೆಕಾರ ಇವ್ನಿಗೆ ರಾಮನಗರ ಪೋಲಿಸಾ ಅಂತ ಫೋನ್ ಮಾಡಿದ್ದ, ಮತ್ತೊಂದು ದಿನ ಬ್ಯಾಂಕಾ ಅಂತ ಸಂದೇಶ ಕಳ್ಸಿದ್ದ.. ಅವ ಇವ್ನ ಹೆಸ್ರನ್ನ ಸರಿ ಉಳ್ಸಿಕೊಂಡಿರ್ಲಿಲ್ಲಂತೆ. ಅಲ್ವಾ ಗುಂಡ ಅಂದ ತಿಪ್ಪ. ಹೂಂ, ಮಂಜು. ನೀವು ರಾಗಿಣಿ ಅಂದ್ಕಂಡು ಇಳಾಗೇ ಐಲು ಅಂತ ಸಂದೇಶ ಕಳ್ಸಿದ್ರಿ ಮೊನ್ನೆ ಅಂದ್ಳು ಸರಿತಾ.. ಏ ಹುಷ್ ಹುಷ್ ಅಂದ ತಿಪ್ಪ.. ಎಲ್ಲ ನಗಕಿಡಿದ್ರು ಮತ್ತೆ :-)

         ಹೂಂ, ವಿಳಾಸ ಬದಲಾದ್ರೆ ಎಷ್ಟೆಲ್ಲಾ ಅನಾಹುತ. ಆದ್ರೆ ವಿಳಾಸ ಬದಲಾದ್ರೂ ಒಂದೊಂದ್ಸಲ ಗೆಳೆಯರು ಸಿಗ್ತಾರೆ ಗೊತ್ತಾ ಇಲ್ಲಿ ಅಂದ ಗುಂಡ. ಹಾಂ ಹೌದು,ನನ್ನ ಅಣ್ಣ ಜಂಗಮ ತಗಂಡ ಹೊಸತ್ರಲ್ಲಿ ಸಿಕ್ಕಾಪಟ್ಟೆ ಉಚಿತ ಸಂದೇಶ ಇತ್ತು. ಮನಸಿಗೆ ಬಂದ ಸಂಖ್ಯೆಗೆಲ್ಲಾ ಹಾಯ್ , ಹಲೋ ಅಂತ ಸಂದೇಶ ಕಳಿಸ್ತಿದ್ದ ಅವ. ಉತ್ರ ಬಂತು ಅಂದ್ರೆ ಹಂಗೇ ಮಾತಾಡದು.. ಅವ್ರು ಯಾರೋ ಏನೋ, ಒಟ್ಟು ಅವ್ರನ್ನ ಗೆಳೆಯ/ಗೆಳತಿ ಮಾಡ್ಕಳದು.. ದಿನಾ ಚಾಟ್ ಮಾಡದು ಮಾಡ್ತಿದ್ದ.. ಕೆಲೋ ಸಲ ಗೊತ್ತಿರೋರ ಸಂಖ್ಯೆಯ ಯಾವುದಾದರೂ ಒಂದು ಅಂಕೆ ತೆಗ್ದು ಬೇರೆ ಹಾಕಿ ಕಳೋದು. ಸಾಲಾಗಿ ಒಂದಾದ ನಂತರ ಅದಕ್ಕಿಂತ ಹೆಚ್ಚಿನ ಸಂಖ್ಯೆಗೆ ಕಳ್ಸೋದು ಮಾಡ್ತಿದ್ದ.. , Pen Friends ಅಂತ ಇರ್ತಾರಲ್ಲ ಆ ತರ ಅಂದ್ಳು ಇಳಾ.. ಮತ್ತೆ ಗುಂಡನ ವಿಷಯಕ್ಕೇ ಬಂದಿದ್ದಕ್ಕೆ ಎಲ್ಲಾ ಒಮ್ಮೆ ಅವನನ್ನ ನೋಡಿ ನಕ್ಕರು.

         ಅವ್ನೂ ನಕ್ಕ. ಹೂಂ. ಆದ್ರೆ ಕೆಲೋ ಸಲ ಪತ್ರ ಬರ್ದಿದ್ದಕ್ಕೆ ಉತ್ರನೇ ಬರ್ತಿರ್ಲಿಲ್ಲ. ಅವ್ರು ಸಿಗ್ಲೇ ಇಲ್ಲ ಅನ್ನೋರು ಆಮೇಲೆ.ಅದಕ್ಕೇ ಅಂತ ಬಂದಿದ್ದು ರಿಜಿಸ್ಟರ್ ಅಂಚೆ. ತಡೆ ನಾ ಹೇಳ್ತೆ, ಈ ಮೊಬೈಲಲ್ಲಿ Delivery Report ಅಲ್ವಾ ಅಂದ ಮಂಜ. ಈಗ ಮಂಜಂಗೂ ಒಂದು ಮೆಚ್ಚುಗೆ ಸಿಗ್ತು ಎಲ್ರ ಕಡೆಯಿಂದ. ಸಿಕ್ಕಿದ್ರೂ ಅವ್ರ ಉತ್ತರ ಕೊಡ್ತಿರ್ಲಿಲ್ಲ... ಇಷ್ಟು ದಿನ ಆದ್ರೂ ಪತ್ರಕ್ಕೆ ಉತ್ರ ಬರ್ಲಿಲ್ಲ ಅಂದ್ರೆ ಏನೋ ಆಗಿದೆ, ಎಲ್ಲವೂ ಸರಿ ಇಲ್ಲ ಅಂತ ಬೇಜಾರು ಶುರು ಆಗ್ತಿತ್ತು. ಈಗ ಮೆಸೇಜಿಗೆ ಉತ್ರ ಬರ್ಲಿಲ್ಲ ಸುಮಾರು ಹೊತ್ತಾದ್ರೂ ಅಂದ್ರೆ ಶುರು ಆಗತ್ತಲ ಆ ತರ ಅಲ್ವಾ ಅಂದ್ಳು ಇಳಾ... ಆದ್ರೆ ಯಾರೂ ಏನೂ ಹೇಳ್ಲಿಲ್ಲ. ಇಳಾ ಮುಖ ಪೆಚ್ಚಾಯ್ತು.. ಎಲ್ಲಾ ಒಟ್ಟಿಗೆ ನಗಕಿಡಿದ್ರು ಅವ್ಳ ಮುಖ ನೋಡಿ ಈಗ.. :-)

         ಹೂಂ, ಕೆಲೋ ಓಬಿರಾಯನ ಕಾಲದವ್ರು ಇರ್ತಾರಪ್ಪ. ಅವ್ರಿಗೆ ಸಂದೇಶ ಹಾಕಿದ್ರೆ ಹೋಗೋದೆ ಇಲ್ಲ. ಇವತ್ತು ಕಳ್ಸಿದ್ದು ನಾಳೆ ಹೋಗತ್ತೆ. ಅವ್ರು ಇನ್ನೊಂದು ವಾರದ ನಂತರ ಅದಕ್ಕೆ ಉತ್ರ ಕೊಡ್ತಾರೆ. Snail Mail ಅನ್ನೋದನ್ನ ಈಗ ಇಂತವ್ರಿಗೆ ಇಡ್ಬೋದೇನೋ ಅಲ್ವಾ ಗುಂಡ ಅಂತ ಗುಂಡಂಗೆ ಮತ್ತೆ ಕಾಲೆಳೆದ ತಿಪ್ಪ.. ಓ , ಅವ್ನ ತರ್ಕಾರಿ ಜಂಗಮ ಕಂಪ್ನೀನೆ ಸರಿ ಇಲ್ಲ ಬಿಡಿ ಅಂದ ಮಂಜ.. ಹೇ ಹಾಗೆಲ್ಲ ಅನ್ಬೇಡ.. ಇದು ಒಂದು ಹಾಕಿದ್ರೆ ಒಂದೇ ಕೊಡದು , ನಿಮ್ಮಂಗೆ ಒಂದು ಕಳ್ಸಿದ್ರೆ ನಾಲ್ಕು ಕಳ್ಸಲ್ಲ ಅಂದ ಗುಂಡ.. ಹೇ ಮತ್ತೆ ಜಗಳಕ್ಕೆ ಶುರು ಹಚ್ಕಂಡ್ರಾ.. ಗುಂಡ ನಿನ್ನ ಮೊಬೈಲನ್ನ ಯಾವಾಗ್ಲೂ ಮಲಗ್ಸೇ ಇಟ್ಟಿರ್ತೀಯ. ಮೊದ್ಲು ಅದ್ನ ಎಬ್ಸೋ ಬ್ಯಾಟ್ರಿ ಹಾಕು, ನಿನ್ನ ಒಳಪಟ್ಟಿ ಯಾವಾಗ್ಲೂ ಕಸದ ತೊಟ್ಟಿ ತರ ತುಂಬಿ ತುಳುಕ್ತಾನೇ ಇರತ್ತೆ. ಅದ್ನ ಸ್ವಲ್ಪ ಖಾಲಿ ಇಟ್ಕ. ಅವಾಗ ಎಲ್ರ ಸಂದೇಶಾನೂ ಬರುತ್ತೆ, ನಿನ್ನ ತರ್ಕಾರಿ ಬಗ್ಗೇನೂ ಯಾರೂ ಮಾತಾಡಲ್ಲ ಆಯ್ತಾ ಅಂತ ಸಮಾಧಾನ ಮಾಡಿದ್ಳು ಇಳಾ.


        ಹೂಂ ಗುಂಡು. ಸ್ಯಾನೆ ಸಂಶೋಧನೆ ಮಾಡಿಟ್ಟಿ. ಅವಾಗ ಕಾಗದದ ಜೊತೆ ರಾಖಿ, ಸರ, ಮತ್ತೊಂದು ಎಲ್ಲ ಕಳಿಸ್ತಿದ್ರು. ಆ ತರಾ ಈಗ ಚಿತ್ರ ಸಂದೇಶ ಅಂತಿ? ಜೊತಿಗೆ ಅವಾಗಿನ ಪಾರ್ಸಲ್ಗಳು ಈಗಿನ MMS ಅಂತಿ ? ಅಂದ್ಳು ಸರಿತಾ. ಹೌದಮ್ಮಿ , ಗುಂಡ ಮಾಡದೆಲ್ಲಾ ಚೆಂದ್ ಕಾಣ್ತೀತಿ ನಿಂಗೆ, ನಾನೂ ಒಂದು ಬರೀಕ್ಯತ್ತೀನಿ ನೋಡು ಅಂದ ಟಾಂಗ್ ತಿಪ್ಪ. ಏನ್ ಮಾರ್ರೆ, ಚೂರು ಹೇಳ್ರಿ, ನಾವೂ ಕೇಂಬ ಅಂದ ಮಂಜ. ಅದ್ರ ಟೈಟಲ್ಲು ಹಿಂಗೊಂದಿಷ್ಟು ತರ್ಲೆ ತಲೆಗಳು ಅಂದ. . ಹೂಂ ಅಂದ್ರು ಎಲ್ಲ.. ಮಾರ್ಚಲ್ಲಿ ಇಪ್ಪತ್ತೆಂಟೇ ದಿನ ಇದ್ರೆ ಹೆಂಗೆ? ಅಂತ ಮೊದ್ಲನೇದು ಅಂದ.ಯಾರಿಗೂ ಅರ್ಥ ಆದಂಗಿರ್ಲಿಲ್ಲ. ಅಂದ್ರೆ ೪ ವರ್ಶಕ್ಕೊಂದ್ಸಲ ೨೯ ಬರ ಹಂಗೆ...ಆಗ್ಲೂ ಯಾರೂ ಬಾಯಿ ತಿಗಿಲಿಲ್ಲ. ಅದಕ್ಕೆ ಹೇಳದು.. ನಾನು ಬರ್ದಿದ್ದನ್ನ ಅರ್ಥ ಮಾಡ್ಕಳೋ ರೇಂಜಿಗೆ ಇಲ್ಲ ನೀವು. ಅದ್ಕೆ ಸುಮ್ನಿದೀನಿ ನಾನು ಅಂದ ತಿಪ್ಪ.. ಇಳಾಗೆ ತಡ್ಯಕ್ಕಾಗಿಲ್ಲ. ಹಂಗಾದ್ರೆ ಮಾರ್ಚ್ ೨೯ಕ್ಕೆ ಹುಟ್ಟಿದೋರ್ಗೆ ೪ ವರ್ಷಕ್ಕೊಂದ್ಸಲ ಹುಟ್ಟಿದಬ್ಬ ಅಂದ್ಳು. ಹೂ ಪಾಪ, ಏಪ್ರಿಲ್ ಒಂದಕ್ಕೆ ಆಚರಿಸಿಕೊಳ್ಬೋದಲ ಅಂದ್ಳು ಸರಿತಾ. ಎಲ್ರಿಗೂ ಕನ್ಫೂಸೇ.. ನಾಕೊರ್ಷಕ್ಕೊಂದ್ಸಲ ೨೯ ಕ್ಕೆ, ಉಳಿದಿದ್ದ ವರ್ಷ ಒಂದಕ್ಕೆ ಹಾರೈಸದು. ಸ್ವಲ್ಪ ಮಿಸ್ಸಾದ್ರೂ ಫೂಲೇ ಅವ್ರು.. ಹೆ ಹೆ ಹೆ ಅಂದ ತಿಪ್ಪ. ಯಾರಿಗೂ ನಗು ಬರ್ಲಿಲ್ಲ. :-) :-)..ತಿಪ್ಪನ ಮುಖ ಸಪ್ಪಗಾಯ್ತು..

        ನೀ ಮಾತ್ರ ಬರಿ , ಪೇಪರಿಗೆ ಕಳ್ಸಿ ದೊಡ್ಡ ಸಾಹಿತಿ ಆಗು ನಂಗೊಂಚೂರೂ ಸಪೋರ್ಟ್ ಮಾಡ್ಬೇಡ ಗುಂಡ ಅಂದ.. ಹೇ, ನಾ ಇದ್ನ ಪೇಪರಿಗೆ ಕಳ್ಸತೀನಿ ಅಂತ ಯಾರು ಹೇಳಿದ್ರೋ.. ಸುಮ್ನೆ ಏನೋ ಯೋಚ್ನೆ ಮಾಡ್ತಿದ್ದೆ ಕಣ್ಲ.. ಅಷ್ಟರಲ್ಲಿ ನೀ ಬಂದೆ... ಅಂತೇನೋ ಹೇಳೋದ್ರೊಳಗೆ ಗುಂಡನ ಮೈಯೆಲ್ಲಾ ಒದ್ದೆ ಆಯ್ತು.. ಇದೆಲ್ಲಿಂದ ನೀರು ಬಿತ್ತು ಅಂತ ಅರ್ಥ ಆಗ್ಲಿಲ್ಲ.. ತಲೆ ಹೊರಳಿಸಿ ನೋಡಿದ್ರೆ....ಏ ಹಾಳಾದೋನೆ, ಏಳೋ ಅಂದ್ರೆ ಅಂಚೆ, ಪಂಚೆ ಅಂತ ಏನೇನೋ ಬಡಬಡಾಯಿಸ್ತಾ ಇದೀಯ .. ಕಾಲೇಜಿಗೆ ಹೊತ್ತಾಗತ್ತೆ ಅಂತ ಎಬ್ಸಿ ಎಬ್ಸಿ ಸಾಕಾಯ್ತು ಅಂತ ಅಮ್ಮ ಇವನ ಮೇಲೆ ಖಾಲಿ ಮಾಡಿದ ಬಕೇಟು ಹಿಡಿದು ಸಹಸ್ರ ನಾಮ ಮಾಡ್ತಾ ಇದ್ರು..

ಚಿತ್ರಕೃಪೆ: Godharvest.blogspot.com

ಚಿಟ್ಟೆಯ ಹಾಡು

ಕಂಬಳಿಯ ಹುಳವೆಂದು ದೂರತಳ್ಳದಿರಿನ್ನು
ಮತ್ತೆ ಹುಟ್ಟಿರುವೆ ನಾ ಚಿಟ್ಟೆಯಾಗಿ
ಹಸಿರ ಕಾನನದಲ್ಲಿ ಮರೆಯಾಗೆ ಘಮಘಮಿಸೊ
ಪುಷ್ಪಗಳ ಸುಮ ಹೀರೋ ಚಿಟ್ಟೆಯಾಗಿ|1|
 

ಪ್ರಖರ ಭಾಸ್ಕರನಿಗೂ ಅಡ್ಡ ನಿಂತಿಹ ಗುಡ್ಡ
ಮೇಘಗಳ ತಡೆಹಿಡಿವೆ ಮಳೆಯ ಒಡ್ಡೊಂದು
ಮಂದಮಾರುತ ತಡೆವೆ ತಂಪನೀಯೆಂದು
ಅಲ್ಲೆ ಸುಳಿವೆನು ನಾನು ಚಿಟ್ಟೆಯಾಗಿ|2|

ಹೂವ ಕಂಪಿನ ಜೊತೆಗೆ
ಹಸಿರ ಹೊದಿಕೆಯ ತಂಪು
ಕಣ್ಮನವ ತಣಿಸುವ ಬಣ್ಣವಾಗಿ
ಪರಾಗ ರೇಣುಗಳ
ಹೊರುವುದೇ ಸಹಾಯ
ಹರ್ಷದೊಡೆ ಬಳಿಸಾರಿ ಮಿತ್ರನಾಗಿ|3|


ನಿಲುಕದಾಗಸ ಮರೆತು
ಭುವಿಯಲ್ಲೆ ಹಾರುವೆನು
ಬಣ್ಣ ರೆಕ್ಕೆಯ ಬಡಿದು ಹಕ್ಕಿಯಂತೆ
ನೋಡಿದರೆ ಮನಸರಳಿ ಹಾಯೆಂದು
ಸುಖವಾಗಿ ಹಾರಬಯಸುವೆ
ನೀನೂ ಚಿಟ್ಟೆಯಂತೆ
|4|

ಬಿಡಿ ಬಿಡಿ

.
ಬಾಯೆಲ್ಲ ಉರಿ ಕಣ್ಣ ಸೇರಿತೆ ಖಾರ
ಅಮ್ಮನ ನೆನಪಾಯ್ತು ಇದ್ದೆಯಾ ದೇವರೇ
ಮೂಗೆಲ್ಲ ಒದ್ದೆ ಹೊಟ್ಟೆ ತಲುಪಿದ ನೀರು
ನೆನಪಾಯ್ತು ತಿಂದಿದ್ದು ಪಾನೀಪುರಿ

.
ವಿಪರೀತ ನಾಜೂಕು ಪೂರಿ
ಯಾಕೋ ಹೆಚ್ಚಾಗಿ ನಟನಾ ಮಸಾಲೆ
ಮನೆಗೆ ತಂದರೆ ಕಣ್ಣ ತುಂಬೆಲ್ಲ ನೀರು
ನೀರಲ್ಲೂ,ಚಳಿಯಲ್ಲೂ ಮರೆಯದಂತಾ ಬಿಸಿ

.
ಹಾದಿ ಬದಿ ಹಲರೋಗ
ಕಾಲರಾ ಕಾಮಾಲೆ ಎಂದು
ಭಾಷಣ ಬಿಗಿದಂದೇ ವಿಪರೀತ
ಕೆಂಪಾಗಿ ಕರೆದಿಹುದೆ ಚೆಂದ ಗೋಭಿ

ಜಂಗಮ ಜನರು

ನೂರೆಂಟು ನೆನಪೋಲೆ
ಆದರೂ ಮರೆತು ಜನ್ಮ
ಕೇಳಿದರೆ ಉಚಿತ ಉಪದೇಶ
ಸಿಡಿದು ಬೆಂಕಿ ಕಾರೋ ಮುನ್ನ
ತಣಿಸಿಬಿಡು ತಲೆ ಒಲೆಯ||

ಜಂಗಮದ ಒಳಪೆಟ್ಟಿಗೆಯಂತೆ ಜನರು?
ಓದುವ ಮೊದಲೇ ಸ್ಮೃತಿಯಿಂದ
ತೆಗೆದು ಆಮೇಲೆ ಪರಿತಾಪ
ಸತ್ತದ್ದು ದಕ್ಕುವುದೇ ಶಾಪಕೆ?||

ಒಂದೆಡೆಯಿಂದ ಕಿರುಚಿದರೆ
ಇನ್ನೊಬ್ಬನಿಗೆ ಮೌನವೇ
ಕೇಳುವವರೆಗೆ ಕೇಳಿ ಮುಂದೆ
ಹೊರಲೂ ಸಿಗದೆಂಟು ಕಾಲು||

ಜನರು ಅಂಕಿಗಳೇ ?
ಕೂಡಿ ಕಳೆಯುವುದಕ್ಕೆ
ವಿಶ್ವಾಸ ವ್ಯಾಪಾರವೇ
ಕೊಟ್ಟೆನೆಂದು ಬಯಕೆಗೆ?||

ಮುದ್ರಿತನಲ್ಲ ಗೆಳೆಯ
ಅಲ್ಲಿಲ್ಲಿಗೆ ಎಳೆದು ಮತ್ತದೇ
ಹಾಡಿಸಲಿಕ್ಕೆ, ಗೋಳ ಕೇಳಿಸಲಿಕ್ಕೆ
ಅರಿಯದೇ ಬದಲಾಗಿ
ಜಂಗಮದ ಬದುಕು||

Thursday, December 1, 2011

ಸ್ನೇಹ ಸೇತು ತುಂಡಾದಾಗ

ಮನಸುಗಳ ದಡ ನಡುವೆ
ಅಹಮಿಕೆಯ ಹೊಳೆ ತುಂಬಿ
ಇರುವೊಂದು ಸೇತುವೂ ತುಂಡಾಗಿದೆ
ಸ್ನೇಹಸೇತುವ ಮತ್ತೆ ಮೊದಲಿನಂತೆಯೆ ಇಡಲು
ವಿಶ್ವಾಸ ತಳಪಾಯ ತೊಳೆದೋಗಿದೆ||

ಕಾಣುವೆನು ದಿನ ನಾನು
ಮೋರೆ ತಿರುಗಿಸಿ ನೀನು
ಅಂತ್ಯವಿಲ್ಲವೇ ಗೆಳೆಯ ಈ ಗೋಳಿಗೆ?
ನಿನ್ನ ಜಾಗಕೆ ನೀನೆ ಈ ಬಾಳಿಗೆ||

ಆತ್ಮಸಾಕ್ಷಿಯ ಮರೆತು ಕ್ಷಮೆಯ ಕೇಳಿದೆನಲ್ಲೋ
ಇನ್ನೇನು ಬೇಕಿತ್ತೋ ಪರಮಾತ್ಮನೇ
ಒಡಹುಟ್ಟಿದವನಂತೆ ನನ್ನ ಸಮಯವನಿತ್ತೆ
ಆದರೂ ಮರೆತಿಹೆಯ ಜಂಭದವನೇ||

ಕಾಲೆಳೆದರೆಷ್ಟು ನೀ ತಣ್ಣಗಿದ್ದೆನು ನಾನು
ಅಂದಂದ ಮಾತೊಂದು ಹೆಚ್ಚಾಯಿತೆ
ಸೇತುವನೆ ತುಂಡರಿಸಿ ಹಾಕಾಯಿತೆ?
ಎಲ್ಲಾದರೂ ಇರು ನೀ, ಸುಖವಾಗಿರೆಲೊ ಗೆಳೆಯ
ಕಾಯುತಿಹೆ ನಾನು ಮತ್ತಿದೇ ದಡದಲ್ಲಿ
ಮನೆಗೆ ಮರಳದೇ ಮೂಕಗೋಳಿನಲ್ಲಿ||

ನದಿಯಲಿಹ ನೀರೆಲ್ಲಾ ಕಣ್ಣಿಂದೆ ಹರಿದಂತೆ
ಪ್ರತಿ ಹೆಜ್ಜೆ ಶಬ್ದವೂ ನಿನ್ನದಂತೆ
ಕಾಯುತಿಹೆನಲ್ಲೋ ನಾ ಕಾಲ ಮರೆತು
ಬದಲಾಗಿ ಬರುವನು ಪೊರೆಗಳನು ಕಳಚೊಬ್ಬ
ಮರಳುವನು ಇಂದು ಹಳೆ ಗೆಳೆಯನಾಗಿ
ಎಂಬ ನಿರೀಕ್ಷೆಯಲೆ ಶೋಕವಾಗಿ
ಇಂದಿಲ್ಲ ಎನದೇಹ ಅಸ್ಥಿಗಳೆ ಹುಡುಕುತಿವೆ
ಹೊಳೆದಾಟೋ ಪ್ರತಿ ಆತ್ಮ ಗೆಳೆಯ ನೀನಾ?
ಸತ್ತ ಮೇಲೂ ದ್ವೇಷ ಹಿಡಿವೆನೆ ನಾ ?||