Monday, December 19, 2011

ಶಂಭೋ ಶಿವಶಂಭೋ

ಅಂಗವ ತೆಗೆಯಲು ಬಾಂಬನು ಸಿಡಿಸಿ
ದೇಶವ ಒಡೆಯಲು ಧರ್ಮವ ಬೆಳೆಸಿ
ಮಹಾಪಾಪಿಗಳ ಗದ್ದುಗೆ ಏರಿಸಿ
ಸುಮ್ಮನೆ ಚೆಂದವ ನೋಡಿಹೆ ಸರಿಯೆ
ಶಂಭೋ , ಶಿವಶಂಭೋ..,ಶಿವಶಿವ ಶಂಭೋ|

ಬಾರೋ ಕಾಲದ  ಶೃಂಕಲೆ ಕಳೆದು
ಸೋಲನು ಸಾಯಿಸಿ ಜಯವನು ಸೆಳೆದು
ಆಗದು ಎನ್ನುವ ಭಾವವ ಬಡಿದು
ಶಂಭೋ, ಶಿವಶಂಭೋ|

ದಾಷ್ಟ್ರ್ಯದ ಬದಲಿಗೆ ಗೌರವ ತಂದು
ರಾಷ್ಟ್ರಕೆ ತುಡಿಯುವ ಭಾವವ ಇಂದು
ಬೆರೆಸೋ ರಕ್ತದಿ ಸ್ವಾರ್ಥವ ತೆಗೆದು
ಶಂಭೋ , ಶಿವಶಂಭೋ|

ಗಡಿಯಲಿ ಕಾದುವ ಸೈನಿಕನಂತೆ
ರೋಗವ ಕೊಲ್ಲುವ ವೈದ್ಯನ ಬಳಿಗೂ
ಮೌಡ್ಯವ ತೊಡೆಯುವ ಮಾಸ್ತರವರೆಗೂ
ಎಲ್ಲೆಡೆ ಮೂಡಲಿ ದೇಶಪ್ರೇಮವು
ಶಂಭೋ ಶಿವಶಂಭೋ..,ಶಿವಶಿವ ಶಂಭೋ|

No comments:

Post a Comment