Saturday, December 3, 2011

ಜಂಗಮ ಜನರು

ನೂರೆಂಟು ನೆನಪೋಲೆ
ಆದರೂ ಮರೆತು ಜನ್ಮ
ಕೇಳಿದರೆ ಉಚಿತ ಉಪದೇಶ
ಸಿಡಿದು ಬೆಂಕಿ ಕಾರೋ ಮುನ್ನ
ತಣಿಸಿಬಿಡು ತಲೆ ಒಲೆಯ||

ಜಂಗಮದ ಒಳಪೆಟ್ಟಿಗೆಯಂತೆ ಜನರು?
ಓದುವ ಮೊದಲೇ ಸ್ಮೃತಿಯಿಂದ
ತೆಗೆದು ಆಮೇಲೆ ಪರಿತಾಪ
ಸತ್ತದ್ದು ದಕ್ಕುವುದೇ ಶಾಪಕೆ?||

ಒಂದೆಡೆಯಿಂದ ಕಿರುಚಿದರೆ
ಇನ್ನೊಬ್ಬನಿಗೆ ಮೌನವೇ
ಕೇಳುವವರೆಗೆ ಕೇಳಿ ಮುಂದೆ
ಹೊರಲೂ ಸಿಗದೆಂಟು ಕಾಲು||

ಜನರು ಅಂಕಿಗಳೇ ?
ಕೂಡಿ ಕಳೆಯುವುದಕ್ಕೆ
ವಿಶ್ವಾಸ ವ್ಯಾಪಾರವೇ
ಕೊಟ್ಟೆನೆಂದು ಬಯಕೆಗೆ?||

ಮುದ್ರಿತನಲ್ಲ ಗೆಳೆಯ
ಅಲ್ಲಿಲ್ಲಿಗೆ ಎಳೆದು ಮತ್ತದೇ
ಹಾಡಿಸಲಿಕ್ಕೆ, ಗೋಳ ಕೇಳಿಸಲಿಕ್ಕೆ
ಅರಿಯದೇ ಬದಲಾಗಿ
ಜಂಗಮದ ಬದುಕು||

2 comments:

  1. ನೂರೆಂಟು ನೆನಪೋಲೆ
    ಆದರೂ ಮರೆತು ಜನ್ಮ
    ಕೇಳಿದರೆ ಉಚಿತ ಉಪದೇಶ
    ಸಿಡಿದು ಬೆಂಕಿ ಕಾರೋ ಮುನ್ನ
    ತಣಿಸಿಬಿಡು ತಲೆ ಒಲೆಯ|೧|
    : ಸುಂದರ ಭಾವದ ಸಾಲು. " ತಲೆಯ ಒಲೆ" ಸೃಜನಶೀಲ ಪದಸೃಷ್ಠಿ. ಹೀಗೆ ಬರಬೇಕು ಪದಗಳ ಜನ್ಮ..

    ReplyDelete
  2. ತುಂಬಾ ಧನ್ಯವಾದಗಳು ಮೂರ್ನಾಡರೇ :-)

    ReplyDelete