Friday, November 4, 2011

ಹೊತ್ತೇರಿದಂತೆ ಮುಳುಗದಿರು ರವಿಯೆ

ಹೊತ್ತೇರಿದಂತೆ ಮುಳುಗದಿರು ರವಿಯೆ
ಹಟ್ಟಿಹಳ್ಳಿಗಳಿಗೊಮ್ಮೆ ಬಾ,ಬೆಳಗೋ ಪಟ್ಟಣ ಬಿಟ್ಟು ಬಾ
ಅಲ್ಲೇನಿದೆ ನಾ ನೋಡದಿರುವುದು?
ಜಗತೋರುವವಗೆ ಕಾಣದಿರುವುದು?||

 ಓದೋ ಕೂಸಿಗೆ ದೀಪವಿಲ್ಲದೆ
ಕನಸ ಕೊಂದಿಹನು ಅದರಪ್ಪ
ಎಂತ ಪತಿಯಪ್ಪ ಮನೆಗೆ ಬರದವನು
ಸಂಜೆಯಾಗುತಲೆ ಹುಡುಕುತ ರಶ್ಮಿ
ದಾರಿಯಳೆಯುತಿಹ ದುರ್ವ್ಯಸನಿ||

 ಕೆಲಸವಿಲ್ಲದೊಡೆ ಹಲವು ಹುಟ್ಟುಗಳು
ಕಳ್ಳನಾಟ,ಓಸಿ,ನೋಟ ದಂಧೆಗಳು
ಖಾಲಿ ಮನಸಲಿ ಕೂರೋ ದೆವ್ವ
ಹೀಗಾದರೆಂತ ಬೆಳೆಯುವುದವ್ವ? ||

ಸೀಮೆಯೆಣ್ಣೆ ಸರಿ ಸಿಗದೋ ಪುಟ್ಟ
ಲಗು ಊಟ ಮಾಡಿ ನೀ ಮಲಗಪ್ಪ
ಅನ್ನೋ ಉತ್ತರ ದಿನದ ಪ್ರಶ್ನೆಗೆ
ಸೂರ್ಯನೆಲ್ಲಿಹೆಯು ಬಾರಪ್ಪ
ಜಗವನೆಲ್ಲ ಎಚ್ಚರಿಸುವೆಯಂತೆ
ಸ್ವಲ್ಪವದ ನಮಗೂ ನೀಡಪ್ಪ||

No comments:

Post a Comment