Saturday, November 26, 2011

ಹೊದ್ದು ಮಲಗಿದ್ದೆನಾ

ಹೊದ್ದು ಮಲಗಿದ್ದೆನಾ ಎಂದಿನಂತೆ?
ಭದ್ರ ನನ್ನಯ ನಾಡು ಏಕೆ ಚಿಂತೆ
ಏನೋ ಸುರಿದಂತೆ ಸಪ್ಪಳಪು ಎಚ್ಚರಿಸಿ
ಹೊರಬಂದು ನೋಡಿದರೆ ಕಣ್ಣೀರಧಾರೆ
ಬಿಕ್ಕಿಹನೆ ವರುಣನೂ ಒಮ್ಮೆ ಮಿಡಿದು
ಮೂರು ವರ್ಷದ ಹಿಂದೆ ಸಾವ ನೆನೆದು|೧|

ಇಂದಿನಾ ದಿನದಲೇ ತಾಜನ್ನ ತೊಳೆದರು
ಗಾಜಂತೆ ಶುಭ್ರದ ಮನಗಳ ಒಡೆದರು
ಎಲ್ಲಿಂದ ತರಲಿ ನಾ ಆ ವೀರ ಯೋಧರ
ಬುದ್ಧಿಹೇಡಿಗಳೆದೆದುರು ಪ್ರಾಣ ತೆತ್ತವರ
ಅಂದಾದ್ರೂ ಸುರಿದಿದ್ರೆ ನನ್ನ ರೋಷವ ತೋರಿ
ಉಳಿಯುತಿತ್ತೇ ಪ್ರಾಣ , ಆ ಜೀವ ಹರಣ ? |೨|

ನಾನೆ ತೆಪ್ಪಗೆ ಇರುವೆ ನೀನಗೇಕೆ ಅಳು ಮಳೆಯೆ
ಸಾಯೊ ಜನರಿಹರೆಂದು ಪ್ರತಿನಿತ್ಯ ಅಳು ಸರಿಯೆ?
ಅಳು ಅವರಿಗಲ್ಲವೋ ನಾಳೆ ಕಾದಿಹ ನಿನಗೆ
ಪಕ್ಕದಲೆ ಹೊಕ್ಕಿರುವ ಹೊಂಚಿರುವ ಉಗ್ರರಿಗೆ
ಕಾಳೂ ಕಾಳಜಿಯಿಲ್ಲ ದೇಶಕ್ಕೆ ಜೀವ ನೀ
ಹೋಗಿರುವ ಅಣ್ಣನೇ ಮರೆತುಬಿಡೋ ಜನ್ಮ ನೀ|೩|

ಏಕೋ ನಿನಗೀ ಜನ್ಮ ಬಾಲ, ಅದು ಸಾಲ
ಇದು ಸಾಲ ಎಂದು ದೇಶವ ದೂರು
ಇಲ್ಲಿ ಸರಿಯಿಲ್ಲೆಂದು ಬೇರೆ ಕಡೆ ಹಾರು
ನಿನಗಾಗಿ ಸತ್ತವರು, ಸಾಯುತಿರುವರು ನೋಡ
ಗಡಿಯಲ್ಲಿ , ತಾಜಲ್ಲಿ, ಗುಂಡಿಗೆದೆಯೊಡ್ಡುತ್ತ
ಹಿಂದೆ ಹಾರುವ ಗುಂಡಿಗೂ ಗುಂಡಿಗೆಯ ಒಡ್ಡಿ
ಮೇಲೆತ್ತಿ ಹಿಡಿದಿಹರು ನಿನ್ನಂಥ ಬಂಡೆಗಳ
ದೇಶಪ್ರೇಮವೂ ಇಲ್ಲ, ಹನಿಯೂ ಕನಿಕರವಿಲ್ಲ
ನೆನೆಯೋ ಮತ್ತೊಮ್ಮೆ ಆ ಸೈನಿಕ
ಮರೆಯುದಿರು ರಕ್ಷಕನ ಕೊನೆಯ ತನಕ|೪|

3 comments:

  1. ಪ್ರಶಾಂತವನದಲ್ಲಿ ಮಡಿದ ಯೋಧರಿಗೆ ಮಿಡಿದ ನಮನ! ಚೆನ್ನಾಗಿದೆ ಕವನ :)

    ReplyDelete
  2. ಧನ್ಯವಾದಗಳು ಹೆಗ್ಡೇರೆ :-)

    ReplyDelete
  3. ಸ್ವಾಗತ ಪ್ರಶಾಂತವನಕ್ಕೆ :-)

    ReplyDelete