Monday, November 14, 2011

ನೆಲ ನೋಡೋ ನಾಯಕನೆ

ನೆಲ ನೋಡೋ ನಾಯಕನೆ ನಡೆಯುತಿರುವೆ
ನೆರವಿತ್ತ ಜನರನ್ನು ಮರೆಯುತಿರುವೆ
ಇಂದು ನೀ ಓಡಾಡಲೇ ಅಸಹ್ಯಿಸೊ ರಸ್ತೆ
-ಯಲ್ಲೆ ನಿನ್ನೆಳೆತನದ ಗೋಲಿಯಾಟ
ಮಣ್ಣು ಧೂಳಿನಲಂದು ಬುಗುರಿಯಾಟ|೧|

ಬೇಕಿಲ್ಲ ಇತಿಹಾಸವೆಂದದಕೆ ಅಪಹಾಸ್ಯ
ಕಾಸಿಲ್ದ ಗೆಳೆಯರು ಮರೆತೋದರೇ?
ವಾರಾನ್ನವಿತ್ತವರು ಎಲ್ಲೋ ದೊರೆ?
ಹಿಂತಿರುಗಿ ನೋಡೊಮ್ಮೆ ಅರ್ಧ ಚಾಚಿಹ ಹಸ್ತ
ನೀಡಲೋ ಬೇಡವೋ ಎಂಬ ಧೈನ್ಯದಲಿ
ಹರಸುತಿದೆ ಹೋದವರ ಚೆನ್ನಾಗಿರಿ|೨|

ಕುಟ್ಟಿಲ್ಲ ನಿನಗಂದು ಎದುರಿಂದ ಬಂದವರು
ಆಕಾಶ ನೋಡುತಿಹೆ ಕಂಡಿಲ್ಲ ಯಮಪಾಶ
ಎದುರು ನೋಡೆಲೊ ಮನುಜ ಅಡ್ಡಬರುವೆ
ದನ, ನಾಯಿ, ಕರುವಾಗಿ ಜೀವ ತೆಗೆವೆ
ದಿಣ್ಣೆ, ಹೊಂಡಗಳಾಗಿ ಮೂಳೆ ಮುರಿವೆ|೩|

No comments:

Post a Comment