Monday, December 5, 2011

ವೈಫಲ್ಯ

ಚೂರೇ ಬರೆದೆ ಹೊಳೆಯದಂತೆ
ಪ್ರೀತಿಯ ನೆನಪುಗಳು ಮತ್ತೆ
ಮನದ ಮರಳೊಳಗೆ ಇಳಿದು
ಕನಸಗೋಪುರ ಕೊಚ್ಚಿ ಓಡದಂತೆ
ಸುಂದರ ಇಂದಿನ ಮೇಲೆ
ನಿನ್ನೆಯ ನೆನಪಿನ ಬರೆ ಬೀಳದಂತೆ|೧|

ಮುಳುಗುತಿಹ ಶಶಿಯೊಡನೆ
ಚೆಲ್ಲಾಟವೇ ಪ್ರಿಯೇ ಯಾರು ಚಂದ?
ಕ್ಷಯ, ವೃದ್ಧಿಗಳೆ ಇರದ ದಂತದಂತೆ
ಕಬ್ಬಿಣವ ಬರಸೆಳೆವ ಕಾಂತದಂತೆ
ನಗುವೆ ಬೀರದ ನೀನು ವಕ್ರದಂತೆ ?!! |೨|

ನನಗೋ ಹಗಲಿಗಿದೆ ಕೆಲಸ,ಚಿಂತೆ
ನಿನ್ನಿಂದೆ ಮರುಳಾದೆ ಅಣ್ಣನಂತೆ !
ಅವನಿಗೂ ದ್ರೋಹ, ನನ್ಯಾಕೆ ಹಿಡಿದೆ?
ಓ ಚೆಲುವೆ, ನಗುಬೀರೋ ವೈಫಲ್ಯವೇ?
ಬೆನ್ನ ತಿರುಗಿಸಿ ನೋಡೆ ಮತ್ತೆ ನಗುವೆ|೩|

2 comments:

  1. ಕ್ಷಯ, ವೃದ್ಧಿಗಳೆ ಇರದ ದಂತದಂತೆ
    ಕಬ್ಬಿಣವ ಬರಸೆಳೆವ ಕಾಂತದಂತೆ
    what is the meaning ??

    ReplyDelete
  2. ನಾರಿಯ ಮುಖದ ಅಂದವನ್ನು ಚಂದಿರನ ಚೆಲುವಿಗೆ ಹೋಲಿಸುತ್ತಾರೆ. ಆದರೆ ಚಂದಿರನ ಕಾಂತಿ ಶುಕ್ಲಪಕ್ಷದಲ್ಲಿ ವೃದ್ಧಿಸುತ್ತಾ ಹೋಗುತ್ತದೆ , ಕೃಷ್ಣ ಪಕ್ಷದಲ್ಲಿ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ ದಂತದ ಬಿಳುಪು ಹಾಗಲ್ಲ. ಅದನ್ನೇ ಇಲ್ಲಿ "ಕ್ಷಯ ವೃದ್ಧಿಗಳಿಲ್ಲದ ದಂತದಂತೆ" ಬಿಳುಪು, ಹೊಳಪು ಎಂದು ಹೋಲಿಸಿಲಾಗಿದೆ ಅಷ್ಟೇ.. ಅದೇ ರೀತಿ ಕಬ್ಬಿಣವನ್ನು ಆಯಸ್ಕಾಂತವು ಹೇಗೆ ಬರಸೆಳೆಯುತ್ತದೆಯೋ ಅದೇ ರೀತಿ ತನ್ನ ಸೌಂದರ್ಯದಿಂದ ಪರರನ್ನು ಸೆಳೆದಳು ಎಂಬುದನ್ನು "ಕಬ್ಬಿಣವ ಬರಸೆಳೆವ ಕಾಂತದಂತೆ" ಎಂದು ಹಾಕಲಾಗಿದೆ ಅಷ್ಟೆ..

    ಮೊದಲೆಲ್ಲಾ ಮೂಡಿ ಬರುವ ನಾರಿಯ ವರ್ಣನೆ ಕೊನೆ ಕೊನೆಗೆ ವೈಫಲ್ಯದ ವರ್ಣನೆಯಂತೆ .. ಅಥವಾ ಅದುವೇ/ಅವಳೇ ವೈಫಲ್ಯ/ ವೈಫಲ್ಯವೊಂದರ ವರ್ಣನೆಯೆಂಬಂತೆ ಬದಲಾಗುತ್ತದೆ..ಮಾನ್ಯರೇ, ನನ್ನೀ ಉತ್ತರದಿಂದ ತಮ್ಮ ಸಂದೇಹ ಸ್ವಲ್ಪವಾದರೂ ಶಮನವಾಯಿತೇ?

    ReplyDelete