Wednesday, November 30, 2011

ಲಂಚ

ಅಲ್ಲಿ ಲಂಚ ಇಲ್ಲಿ ಲಂಚ ಎಲ್ಲೆಲ್ಲಿಯೂ ಲಂಚವೋ
ಅವರಿಗೆಲ್ಲಾ ಸೊಪ್ಪು ಹಾಕಿ
ಪರರ ಮೇಲೆ ತಪ್ಪ ಹಾಕಿ
ಮತ್ತೆ ಮುಚ್ಚಿ ಕಾಸ ಸುರಿವ
ಸತ್ಯ ಮರಕೆ ಸೀಸ ಎರೆವ
ಮತ್ತೆ ಅದನೆ ಸಾರುವಂತ
ಜನರ ನಡೆಯು ಶಾಶ್ವತ ? |೧|

ನಮ್ಮ ವಾಹನವನೆ ನಡೆಸೆ
ಸುರಿಯಬೇಕೆ ಸುಮ್ಮನಾಗಿ
ಧೈರ್ಯವಿದ್ರೆ ಮುಂದೆ ನುಗ್ಗು,ಕಾರ್ಯಸಾಧನೆ
ಅಂಜಿ ನೀನು ಅಡಗಿ ಕೂತ್ರೆ ಅದೇ ರೋದನೆ
ಕುಳಿತಲ್ಲಿಯೆ ಎಲ್ಲ ಬೇಕು ,ಬಿಸಿಲು ಬೇಡ
ಶ್ರಮವು ಬೇಡ, ಫಲವು ಬೇಕು ಇದ್ರೂ ಕೊರತೆ
ಇಂಥ ಹೊಂಡ ಮುಚ್ಚಿ ತುಂಬೆ ಕಣ್ಣುಮುಚ್ಚಿ
ತೆರೆವದ್ರೊಳಗೆ ತುಂಬಬೇಕಲ್ಲೊ ಅಣ್ಣ ಜೇಬು ಝಣಝಣ|೨|

ಸರಿಯಿಲ್ಲವೊ ಇಂದು ಗಣಕ
ಸಹಿ ಹಾಕಲು ಸಾಹೇಬ್ರಿಲ್ಲ
ಬೆಳಿಗ್ಗೆ ಬಾ, ಸಂಜೆ ಬಾ, ನಾಳೆ ಬಾ ಇದೇ ಗೋಳು
ಕೇಳಿ ಸಾಕಾಗಿದೆಯೆ ಮಾಡು ಒಮ್ಮೆ ಬೆಚ್ಚಗೆ
ಜಡಗಟ್ಟಿದ ಕಡತವೆಲ್ಲ ಸಾಗುವಂತೆ ಸರ್ರನೆ|೩|

ತಡೆಯೊ ಮನವೆ ತಣ್ಣಗಾಗೋ
ಇರುವ ಸಭ್ಯ ಜನರ ತಡಕು
ಒಬ್ಬ ಪಾಪಿ ಕಂಡನೆಂದು
ಇರುವರೆಲ್ಲಾ ಪಾಪಿಯೆ?
ಎಷ್ಟು ದಿನವೋ ಇವನ ಗೋಳು
ಕಷ್ಟವೆಂದು ಕೆಡದೆ ತಾಳು
ಬರುವುದೆಂದೊ ನಿನ್ನ ದಿನ ಅರಿಯೆನಲ್ಲೋ ನಾನು
ನಂಬಿ ನಡೆದ ಮಾರ್ಗವನ್ನು ಬಿಡದಿರುವುದೆ ಬಾಳು ? |೪|

4 comments:

  1. ಉತ್ತರವನ್ನು ತನ್ನೊಳಗೇ ಹುದುಗಿಟ್ಟು ಮೇಲ್ನೋಟಕೆ ಪ್ರಶ್ನಾರ್ಥಕವಾಗಿ ಕಾಣುವ, ಕಾಡುವ ಬದುಕ ಚರ್ಮ ವಾಕ್ಯ, ಗೋಪಾಲಕೃಷ್ಣ ಅಡಿಗರ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?" ಎಂಬ ಸಾಲು ನೆನಪುಬಂತು.
    ಚೆಂದದ ಅರ್ಥಪೂರ್ಣ ಕವನ.
    ಬರೆಯುತ್ತಿರಿ. ಶುಭಾಶಯ.. :)

    ReplyDelete
  2. ಮೊದಲನೆಯದಾಗಿ ಬ್ಲಾಗಿಗೆ ಸ್ವಾಗತ ರಾಘವೇಂದ್ರ ಹೆಗಡೆ ಅವರೇ :-) ನಿಮ್ಮ ಪ್ರತಿಕ್ರಿಯೆಯನ್ನೋದಿ ತುಂಬಾ ಸಂತೋಷವಾಯಿತು. ನಿಮ್ಮಂತವರ ಇಂತ ಭೇಟಿ,ಪ್ರೋತ್ಸಾಹದ ನುಡಿಗಳೇ ಬರೆಯಲು ಪ್ರೋತ್ಸಾಹಕ.. ಮತ್ತೊಮ್ಮೆ ವಂದನೆಗಳು :-)

    ReplyDelete
  3. ಕವನ ಚೆನ್ನಾಗಿದೆ.
    ನಿಜ..ನ೦ಬಿ ನಡೆದ ಮಾರ್ಗವನ್ನು ಬಿಡದಿರುವುದೇ ಬಾಳು.

    ReplyDelete
  4. ನನಗೂ ಹೌದೆನಿಸುತ್ತದೆ.. ಧನ್ಯವಾದಗಳು ಮನಮುಕ್ತಾರವರೇ :-)

    ReplyDelete